ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಕಿಗೆ ಯಾಕೋ ನಾಚಿಕೆ..

ನಾಗರಾಜ್ ಹರಪನಹಳ್ಳಿ 

-1-
ಇರುಳಲ್ಲಿ ಕನಸು
ಕಟ್ಟುವ ಮನಸು
ಪಕ್ಕದಲ್ಲಿ ಅಣಕಿಸುವ ಬೆಕ್ಕು
ಕೇವಲ ಶಬ್ದಧ್ಯಾನ ಸ್ವಪ್ನದಲಿ
ಬೆಳಗಾಗುತ್ತಲೆ
ಮುಸಿ ಮುಸಿ ನಗುವ ಗುಬ್ಬಚ್ಚಿಗಳು

-2-

ಮೌನವೆಂಬ ಆಗಸವ
ಅಪ್ಪಿದ್ದ ಮೋಡ ಕವುಚಿ ಬಿತ್ತು
ವಿರಹಿ ಭೂಮಿ
ಕಚಗುಳಿಯಲಿ ಒದ್ದೆಯಾಯಿತು

-3-

ರಸ್ತೆಯಲಿ ನಡೆದಳು
ಪಕ್ಕದ ಗಿಡಬಳ್ಳಿಗಳು
ಕಣ್ಣುಮಿಟುಕಿಸದೆ ನಿಂತವು
ಬೆಳಕಿಗೆ
ಯಾಕೋ ನಾಚಿಕೆ

-4-
ಯಾಕೋ ಈಚೆಗೆ
ಹಗಲಿಗೆ ಬೇಸರ
ಇರುಳಿಗೆ ಆಕಳಿಕೆ
ನೀನಿಲ್ಲದ ಹಗಲಿರುಳು
ಬೆತ್ತಲು ಆಕಾಶದಲಿ
ಸೂರ್ಯ ಒಬ್ಬಂಟಿ

‍ಲೇಖಕರು avadhi

17 July, 2019

2 Comments

  1. ಸುಧಾರಾಣಿ. ನಾಯ್ಕ,ಸಿದ್ದಾಪುರ

    ಪುಳಕಗೊಳ್ಳುವ ಹಾಯ್ಕುಗಳು,ಪ್ರಕೃತಿಯ ತಾಜಾತನ ಹಿಡಿದಿಟ್ಟಿದೆ.ಸುಂದರವಾಗಿದೆ.ಅಭಿನಂದನೆಗಳು.

    • Nagraj Harapanahalli.karwar

      ಥ್ಯಾಂಕ್ಯೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading