ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕಿನೆಡೆಗೆ ಸಾಗುವ ಪತಂಗಕ್ಕೂ..

ಚಿಂದಿ ಚಿಂದಿ ಆಯುವವರು

Chalapathi v

ವಿ ಚಲಪತಿ 


ರಾಜಹಂಸ, ಜೀವನ ಪ್ರಕಾಶನ

ರಾಜಹಂಸ, ಜೀವನ ಪ್ರಕಾಶನ

ಜೀವನ್ ಪ್ರಕಾಶನದ ರಾಜ್ಯಮಟ್ಟದ

ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ


 

ಮುಂಜಾವಿನಲಿ

ಜೀವದ ಅನ್ವೇಷಣೆಗೆ

ಪ್ಯೂಪದಿಂದ ಹೊರ ಇಣುಕಿ

ರೆಕ್ಕೆಬಿಚ್ಚಿ ಭಗವಂತನ ಸ್ಮರಿಸಿ

ಬದುಕಿನೆಡೆಗೆ ಸಾಗುವ ಪತಂಗಕ್ಕೂ

ಇವರಿಗೂ ಬಹಳವೇನು ಭೇದವಿಲ್ಲ

chindi

 

ಕಳೆದ ಕಾಲದಲಿ ಮಿಂದು

ನಾಳೆಗಳೆಣಿಕೆಯನು ಮೀರಿ

ಇವತ್ತೆಂಬ ಜತನದಲಿ ಬದುಕುವ

ಮುಂಗುರುಳು ಗುಂಗಿನ

ರೂಪಾಯಿ ಲಗೋರಿಯ ಆಟದಲಿ

ದೂರದ ಬೆಟ್ಟಕೆ ಕಲ್ಲು ಬೀಸುತಾ

ಹರಿದ ಬಟ್ಟೆಗಳ ಮಂಚದಲಿ

ರಾತ್ರಿಯ ಸ್ವಪ್ನ ಕಾಣುವ

ಇವರಿಗೆ ಕಸದ ಬುಟ್ಟಿಯ

ಕನಸೇ ಹೊರತು ಬೇರೆ ಲೋಕವಿಲ್ಲ

 

ಇರುವರ ಜಗತ್ತಿನಲಿ

ಇವರ ಬದುಕು ಹೇಳತೀರದು ಗೌಣ

ಯಾರದೋ ಚಪ್ಪಲಿಗೆ ಪಾದ

ಬಟ್ಟೆಗೆ ದೇಹ, ಎಂಜಲಿಗೆ ಮೃಷ್ಟಾನ್ನ

ತಾರೆಗಳ ಒಯ್ಯಾರದಲಿ ಮಿನುಗುವ

ಗಗನವೇ ಮಹಲು, ಚಂದ್ರನೇ

ನಾಳೆಯ ಬದುಕಿಗೊಂದು ಆಶಾದೀಪ

ಅಮೂರ್ತ ರೂಪದಲಿ ಸಾಗುವ

ಮೇಘ ಸರಮಾಲೆಯೇ ತಣ್ಣೀರ

ಬಟ್ಟೆಯ ಬದುಕಿನ ದಾರಿಗೆ ಭರವಸೆ

 

ಇವೆಲ್ಲವುಗಳ ನಡುವೆ

ಭಗವಂತನ ಬದುಕಿನಾಟ’ಕ’ಕೆ ಮನ್ನಿಸಿ

ಬದುಕಿದಷ್ಟೂ, ಬದುಕಿನುದ್ದಕ್ಕೂ

ಬದುಕು ಸವೆಸುತ್ತಿರುವರು ತೀರುವುದೆಂಬ

ಹಂಬಲದ ದಾರಿಯೆಡೆಗಿನ ಕೊನರಿಗೆ

‍ಲೇಖಕರು admin

7 April, 2016

6 Comments

  1. Bidaloti Ranganath

    ಕವಿತೆ ಚನ್ನಾಗಿದೆ

    • Chalapathi Gowda

      ಈ ಬಾರಿ ನಿಮ್ಮ ಕವನ ಮೆಚ್ಚುಗೆ ಪಡೆದಿದೆ ಅಲ್ಲವಾ ಸರ್-ಜೀವನ ಪ್ರಕಾಶನ

  2. Anonymous

    Danyavadagalu

  3. Vihi wadawadagi

    Naanantu Ee kaviteya huttige beragaagiddene nanna sampoorna sharanaagati nimma kavitege allade nimage

    • Anonymous

      ಧನ್ಯವಾದಗಳು

    • Chalapathi Gowda

      ಧನ್ಯವಾದಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading