ಒಂದು ಖತರ್ನಾಕ್ ಯೋಚ್ನೆ ಬಂತು..

b v bharati

ಭಾರತಿ ಬಿ ವಿ 

ಈ ಹಿಂದೆ ಬರ್ದಿದ್ದೆ ಇದರ ಬಗ್ಗೆ .. ಈಗ ಮತ್ತೊಂದು ಸಲ ಬರೀಲೇ ಬೇಕಾದ ಸ್ಥಿತಿ ಯಾಕೆ ಬಂತು ಅಂದರೆ ಈಗ ಆ ಕಥೆಗೆ ಪಾರ್ಟ್ 2 ಸೇರ್ಪಡೆ ಆಗ್ತಿದೆ …

ಈಗ ಒಂದಿಷ್ಟು ವರ್ಷಗಳ ಕೆಳಗೆ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಎಂ ವ್ಯಾಸ ಅವರ ಒಂದು ಬುಕ್ಕು ಸಿಕ್ತು ‘ಕೃತ’ ಅಂತ. ಬುಕ್ ಅದುವರೆಗೂ ಒಬ್ಬರೇ ಒಬ್ಬರೂ ಓದಿರಲಿಲ್ಲ. ವ್ಯಾಸ ಅವರ ಕಥೆಗಳ ಹುಚ್ಚಿಯಾದ ನಾನು ಅದನ್ನ ತಗೊಂಡು ಬಂದೆ. ಓದಿದೆ … ಓದಿದೆ … ಓದಿದೆ …. ಆದ್ರೂ ಅದರ ಮೇಲಿನ ಮೋಹ ಕಡಿಮೆ ಆಗ್ಲೇ ಇಲ್ಲ.

ಅಷ್ಟರಲ್ಲಿ ಇನ್ನೊಂದು ಖತರ್‌ನಾಕ್ ಯೋಚನೆ ಬಂತು … ಯಾರೂ ಓದದ ಮತ್ತು ಎಲ್ಲೂ ಸಿಗದ ಮತ್ತು ನಾನು ಅಷ್ಟು ಮೋಹಿಸುವ ಬುಕ್ ನನ್ನ ಹತ್ತಿರವೇ ಉಳಿದರೆ ಹೇಗೆ ಅಂತ! ಐಡಿಯ ಬಂದಿದ್ದೇ ತಡ ರೋಮಾಂಚನವಾಗೋಯ್ತು … ಮೊದಲ ಬಾರಿಗೆ ಜೀವನದಲ್ಲಿ ಕಳ್ಳತನಕ್ಕೆ ಮುಂದಾಗಿದ್ದೆ! ಐಡಿಯ ಬಂದಿದ್ದೇ ತಡ ಲೈಬ್ರರಿಗೆ ಹೋಗಿ ಪುಸ್ತಕ ಕಳೆದು ಹೋಯ್ತು ಅಂದೆ. ಡಬ್ಬಲ್ ಪೆನಾಲ್ಟಿ ಕಟ್ಟಬೇಕು ಅಂದ್ರು. ಸರಿ ಅಂದೆ, ಕಟ್ಟಿದೆ ಮತ್ತು ಪುಸ್ತಕ ನನ್ನಲ್ಲೇ ಉಳೀತು. ನನ್ನ ದೃಷ್ಟಿಯಲ್ಲಿ ಅದು ನ್ಯಾಯವೇ ಆಗಿತ್ತು ….

m vyasa kruta

ಈಗ ಪಾರ್ಟ್ 2:
ನನ್ನಷ್ಟೇ ವ್ಯಾಸ ಹುಚ್ಚರಾದ ಗೆಳೆಯ ಶಿವಶಂಕರ್ ಜೊತೆ ಯಾವತ್ತೋ ಮಾತಾಡುವಾಗ ನನ್ನಲ್ಲಿ ಈ ಪುಸ್ತಕ ಇದೆ ಅಂದೆ ಮತ್ತು ತುಂಬ ಪ್ರಾಮಾಣಿಕವಾಗಿ ಅದು ಕದ್ದಿದ್ದು ಅಂತಲೂ ಹೇಳಿದೆ. ಅವರು ಅದನ್ನು ಓದಿ ಕೊಡ್ತೀನಿ ಅಂದರು. ಸರಿ ತಗೊಂಡು ಹೋಗಿ, ಓದಿ, ಜೋಪಾನವಾಗಿ ವಾಪಸ್ ಕೊಡಿ ಅಂದೆ. ಹೂಂ ಅಂತ ಒಪ್ಪಿದರಾ!

ಈಗ ಸಂಜೆ ಇದ್ದಕ್ಕಿದ್ದ ಹಾಗೆ ನಿಮ್ಮನೆ ಹತ್ರಾನೇ ಇದೀನಿ, ಬುಕ್ ತಗೊಂಡು ಹೋಗ್ತೀನಿ ಅಂದರು. ಹೊರಗೆ ಹೊರಟಿದ್ದವಳು ತ್ಯಾಗ ಮಾಡಿ ಬನ್ನಿ ಅಂದೆ. ಅರ್ಜೆಂಟ್ ಅರ್ಜೆಂಟಲ್ಲಿ ಬಂದು ಬುಕ್ ಎತ್ಕೊಂಡು ಹೋದ್ರು. ಮಡಿಕೇರಿಯಿಂದ ಬಂದ ಕೂಡಲೇ ವಾಪಸ್ ಕೊಡಿ ಅಂದರೆ ‘ಅದೇನು ಹೋಗ್ತೀನೋ ಇಲ್ವೋ ಗೊತ್ತಿಲ್ಲ ….’ ಅಂತ ರಾಗ ಎಳೆದ್ರು. ನಾನು ತಲೆ ಕೆಡಿಸಿಕೊಳ್ಳದೇ ಬುಕ್ ಕೊಟ್ಟೆ.

ಅವರು ಹೊರಟು ಹೋದ ಹೊಳೀತು – ಅಲ್ಲ ಇವ್ರು ಮಡಿಕೇರಿಗೆ ಹೋಗೋದೇ ಕ್ಯಾನ್ಸಲ್ ಆದ್ರೆ ನನ್ನ ಬುಕ್ ಗತಿ!!! ಅಂತ. ಕೇಳೇ ಬಿಡೋಣ ಅಂತ ‘ಹುಷಾರಾಗಿ ನೋಡ್ಕೊಳಿ, ಅದು ನನ್ನ ಪ್ರಿಯತಮನ ಥರ’ ಅಂದರೆ ‘ಕೊಟ್ಟಿದ್ದು, ಇಸ್ಕೊಂಡಿದ್ದು ಯಾರ್ ನೋಡವ್ರೆ’ ಅಂತಾರೆ!!
ಭಯವಾದ್ರೂ ತೋರಿಸಿಕೊಳ್ಳದೇ ‘ನಾವು CCTV ಮಡ್ಗಿದೀವಿ’ ಅಂದೆ
‘ನಾವು ತಂತ್ರ ಕಲ್ತಿದೀವಿ’ ಅಂದರು
‘ನಾವು ಕೊಳ್ಳೆಗಾಲದೋರು’ ಅಂದೆ
‘ಅದ್ಕೇಯಾ ನಾವು ನಿಂಬೆಹಣ್ಣು ಇಡ್ಕೊಂಡೇ ಬಂದಿದ್ವಿ’ ಅಂತಾರೆ!

ಇಷ್ಟೆಲ್ಲಾ ಅಂದಾದ್ಮೇಲೆ ಫ಼ೇಸ್‌ಬುಕ್ ತೆಗೆದ್ರೆ
ಸ್ವಂತದ್ದನ್ನು
ಕಳೆದುಕೊಳ್ಳುವುದಕ್ಕಿಂತ
ಕದ್ದಿದ್ದು
ಕೈತಪ್ಪಿ ಹೋಗುವ ಕಲ್ಪನೆಯೇ
ಭಯಾನಕ …!!
ಅಂತ ಸ್ಟೇಟಸ್ ಬೇರೆ ಹಾಕಿದಾರೆ ….

ನಾಳೆ ನಾನೇನಾರ ಹಾರ್ಟ್ ಅಟ್ಯಾಕ್ ಆಗಿ ಗೊಟಕ್ ಅಂದ್ರೆ ಕಾರಣ ಇದೇ ಅಂತ ನಿಮಗೂ ತಿಳಿದಿರಲಿ …. ಆಯ್ತಾ?

‍ಲೇಖಕರು admin

April 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. savitri.V.Hatti

    ಆಹಾ, ಸುಮಧುರ ಅನ್ನುವ ಪದವನ್ನು ಇಂಥದ್ದಕ್ಕೂ ಅನ್ವಯಿಸಬಹುದು ಅನ್ನಿಸುತ್ತಿದೆ ಅಕ್ಕ… ಆದರೆ ಪುಸ್ತಕ ತೆಗೆದುಕೊಂಡು ಹೋದವರು ಅಷ್ಟು ಚೆಂದನ್ನ ಪುಸ್ತಕ ಓದಿ ಅದರ ಬಗ್ಗೆ ಸ್ಟೆಟಸ್ ಹಾಕ್ಬಹುದಿತ್ತು…

    ಪ್ರತಿಕ್ರಿಯೆ
  2. ಅನುಪಮಾ ಪ್ರಸಾದ್

    ಇದೀಗ ಕಂಪ್ಯೂಟರಿಗೆ ಬಂದು ಕುಳಿತು ಅವಧಿಗೆ ಬಂದವಳಿಗೆ ಖತರ್ನಾಕ್ ಯೋಚ್ನೆ ಏನಪ್ಪ ಅಂದುಕೊಂಡು ಅದನ್ನೇ ಮೊದಲೋದಿದೆ. ಎಮ್. ವ್ಯಾಸರ ಕೃತ ನೋಡಿದ್ದೇ ರೋಮಾಂಚನ!. ವ್ಯಾಸ ಕಥೆಗಳ ತೀರದ ಮೋಹವನ್ನ ಅವರು ತೀರಿಕೊಂಡ ನಂತರ ಬಂದ ಕೆಲವು ಸಂಕಲನಗಳು ತಣಿಸಬಹುದೇನೊ. ವ್ಯಾಸರ ಕಥೆಗಳ ತೀವ್ರತೆ ಅವರ ಬದುಕಿನಲ್ಲು ಇದೆ. ಸಾಧ್ಯವಾದರೆ `ಅರ್ಧ ಕಥಾನಕ’ ಓದಿ. ಯಾವುದೇ ಸದ್ದಿಲ್ಲದೆ ಬರೆದು ಎದ್ದು ಹೋದವರ ಬರಹಗಳು ಮತ್ತೆ ಮತ್ತೆ ಕಾಡುವುದೆಂದರೆ ಆ ಬರಹದ ತೀವ್ರತೆ ಹಾಗಿರಬೇಕಲ್ಲವೆ? ಹೀಗೆ ಹೇಳುವ ಹೊತ್ತಲ್ಲಿ ಖಾಸನೀಸರೂ ನೆನಪಾಗುತ್ತಾರೆ.

    ಪ್ರತಿಕ್ರಿಯೆ
  3. Varadaraja Chandragiri

    M Vyasa avara Krutha eega reprint aagide. bekadavaru samparkisiri.
    Varadaraja Chandragiri 9448887348

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: