ಏನಾಗಿ ಹೋಯ್ತು??? ನನ್ನೊಳಗಿನ ನಾನು ನಿನ್ನ ತೆಕ್ಕೆಗೆ..

ಶೋಭಾ ದಿನೇಶ್ 

 

ನನ್ನೊಳಗಿನ ಅವನಿಗೆ

 
ನನಗಿನ್ನೂ ನೆನಪಿದೆ…ಮೊಟ್ಟ ಮೊದಲು ನಿನ್ನ ನೋಡಿದ ಆ ದಿನ…

ಹಿಡಿತಕ್ಕೆ ಸಿಗದ ಜೋರು ಮಳೆ…

ಬೋಳು ಗುಡ್ಡದ ನೆತ್ತಿಯ ಮೇಲೆ..

he

 

ಎದುರಿಗೆ ಕುಳಿತವನ ಕಣ್ಣುಗಳಲ್ಲಿ ನನ್ನ ಚಿತ್ರ ಹುಡುಕಿ..

ಪುಳಕ ಕೊಂಡ ಅಸ್ಪಷ್ಟ ರಾಗ ನಾನು..

ಪ್ರೀತಿ ಪಲ್ಲವಿಯಲ್ಲೇ ಗಿರಕಿ ಹೊಡೆಯಲು ಬಿಡದ ಪೋರ..

ಒಬ್ಬರಿಗೊಬ್ಬರು ಇಷ್ಟವಾದ ಮೇಲೆ ಬದುಕು ಯುಗಳ ಗೀತೆ…

ನಿನ್ನ ತುಂಟತನ, ನವಿರು, ಹೊಳಪಿಗೆ ಸೋತೆನ ನಾನು?

 

ಚೆಲುವ ಅನ್ನಿಸಿದ್ದು ನಿಜ.. ಮೊದಲ ನೋಟಕ್ಕೆ..

ಆದರೆ ಹಟಕ್ಕೆ ಬಿದ್ದಂತೆ ಪ್ರೀತಿಸುತ್ತೇನೆಂದು ಕೊಂಡಿರಲಿಲ್ಲ ಆ ಕ್ಷಣಕ್ಕೆ..

ಏನಾಗಿ ಹೋಯ್ತು??? ನನ್ನೊಳಗಿನ ನಾನು ನಿನ್ನ ತೆಕ್ಕೆಗೆ..

 

ಹಸಿವು ತುಂಬಿದ ನಿನ್ನ ಕಣ್ಣ ಮುಂದೆ..

ಹುಲ್ಲೆಯಂತ ಹುಡುಗಿ ನಾನು….

ಪುಂಡ ಚಿರತೆಯಂತ ಹುಡುಗ ನೀನು..

 

ಬೆಂಕಿ ಬೆರೆತ ನಿನ್ನ ಉಸಿರಾಟಕ್ಕೆ.. ಕಿವಿ ಕೊರಳಲೆಲ್ಲ ಕೆಂಪು.. ಕೆಂಪು..

ತಂತಿ ಮೊಳೆತ ವೀಣೆ ಕಿಬ್ಬೊಟ್ಟೆಯಲ್ಲಿ

ಕೈ ಕಾಲು ಕೆಟ್ಟು ಕೆಡವಿದರು ಕಣ್ಣಲ್ಲೇ ದುಪ್ಪಟ್ಟ ಎಳೆಯುವ ಹಿಮ ಕರಡಿ..

ಎಲ್ಲಿ ಕಲಿತೆ ಕೋತಿ ಮರಿಯಾ ಈ ವಿದ್ಯೆ???

 

ಒರಟು ಮಂಡಿಯ  ಮೇಲಿನ ಜೀನ್ಸಿಗೆ ..

ಕಪ್ಪ ಕಟ್ಟಿ ಶರಣಾಗಿದೆ ಮೊಲದ ಬಿಳುಪಿನ ಚೂಡಿ..

ಶುದ್ದ ಒರಟ…

ಮೊಬೈಕಿನಲ್ಲಿ ನಿನ್ನ ಬೆನ್ನಿಗಂಟಿ ಊರು ಸುತ್ತುವ ಉಮ್ಮೇದಿ..

ಸವೆದಷ್ಟು ಮುಗಿಯದ  ಹಾದಿ.. ಬದುಕು ಶಿವ ನರ್ತನ.. ಮನಸು ನಿತ್ಯ ಕೀರ್ತನ..

shobha dinesh3

ಮತ್ತೆ ಬಂದ್ದಿದ್ದಾನವ…

hands

 

ಬರದ ಊರಿನಲ್ಲೂ ಜೀವ ಜಲ ಉಕ್ಕಿಸೋ ತಾಕತ್ತಿನವ…

ನೋಡಿದಾಕ್ಷಣದಿಂದ ಎದೆಯೊಳಗೆ ನೂರು ದೇವರ ಉತ್ಸವ…

 

ಮತ್ತೆ ಬಂದ್ದಿದ್ದಾನವ…

ಕಾರ್ಗತ್ತಲ ಕೋಟೆಯಲ್ಲಿ ಬೆಳಕ ಹುಟ್ಟಿಸಿದವ…

ಮೊನಚು ನೋಟಕ್ಕೆ ನರ ನಾಡಿಗಳೆಲ್ಲಾ ತಬ್ಬಿದಂತೆ ಹೆಬ್ಬಾವ…

 

ಮತ್ತೆ ಬಂದ್ದಿದ್ದಾನವ…

ನೆರಿಗೆ ಲಂಗವ ನೋಡಿ ಮೀಸೆಯಡಿ ನಕ್ಕವ

ನಗೆಯ ಅಲೆಗೆ ಬೆನ್ನಹುರಿಯಿಂದ ಕಾಲ್ಬೆರಳ ತನಕ ಕಲರವ..

 

ಮತ್ತೆ ಬಂದಿದ್ದಾನವ..

ತಡೆತಡೆದು ನಡೆದವ ನಡೆ ನಡೆದು ನುಡಿದವ

ದಿನವೂ ನೆನಪುಗಳ ನಿತ್ಯೋತ್ಸವ..

‍ಲೇಖಕರು admin

April 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anitha K M

    ಬಹಳ ಚೆನ್ನಾಗಿದೆ…….ಭಿನ್ನ ದಾಟಿ,ಭಾಷೆ,ಶೈಲಿ,…….ಮನಮುಟ್ಟುವಂತಿದೆ……ಮತ್ತೆ ಮತ್ತೆ ಓದಬೇಕೆನಿಸುತ್ತದೆ………hatsoff to u madam……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: