15 th Biffes: ಗೊಂದಲಗಳಿಲ್ಲದಿರುವುದೇ ಮೊದಲ ಗೆಲುವು

ಜಯರಾಮಾಚಾರಿ

**

15th ಬಿಫ್ಫೇಸ್~

ಈ ಸಲದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೊತ್ಸವ ಅತ್ಯಂತ ಅಚ್ಚುಕಟ್ಟಾಗಿ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಈ ಸಲ ಎಲ್ಲವೂ ವ್ಯವಸ್ಥಿತವಾಗಿ ಯಾವ ಗೊಂದಲವಿಲ್ಲದೇ ಗಲಾಟೆಯಿಲ್ಲದೇ ಡೇಟ್ ಅನೌನ್ಸ್, ಚಿತ್ರಗಳ ಅನೌನ್ಸ್, ಸ್ಕೆಡ್ಯೂಲು, ಪಾಸ್ ರಿಜಿಸ್ಟ್ರೇಷನ್, ಪಾಸ್ ವಿತರಣೆ, ವಾಹನದ ಪಾಸ್ ವಿತರಣೆ, ಬ್ಯಾಗು, ಕ್ಯಾಟಲ್ಯಾಗ್ ವಿತರಣೆ ಎಲ್ಲವೂ ಯಾವ ಅಡೆತಡೆಯಿಲ್ಲದೇ ಗೊಂದಲಗಳಿಲ್ಲದೇ ಸಿಕ್ಕಿರುವುದೇ ಮೊದಲ ಗೆಲುವು.

ಹೋದ ಸಲ ಎಲ್ಲವೂ ರಾದ್ದಾಂತವಾಗಿತ್ತು.

ಈ ಸಲದ ಬಿಫ್ಫೇಸ್ ಆರಂಭದ ಕ್ಲಿಪ್ ಜಾನಪದೀಯವಾಗಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ಕೆ ಶಿವರುದ್ರಯ್ಯ ನಿರ್ದೇಶಿಸಿದ್ದಾರೆ. ಕನ್ನಡದ ಬಹುಮುಖ್ಯ, ಜನಪರ ಹಾಡುಗಾರರ ದಂಡು ಅಲ್ಲಿದೆ.

ಪಾಸ್ ಗೆ ಆಧುನಿಕ ಸ್ಪರ್ಶದ ಕ್ಯೂ ಆರ್ ಕೋಡ್ ಇರೋದರಿಂದ ಮುಖ ನೋಡಿ ಮೊಳಹಾಕುವ ಪದ್ದತಿಯಿಂದ ಪಾರು.

ಅಂದ ಹಾಗೇ ಈ ಸಲವೂ ‘ಅವನು’ ಅಲ್ಲಿದ್ದ.

ಕಳೆದ ಅಷ್ಟು ಸಂಚಿಕೆಗಳಲ್ಲೂ ಅವನಿದ್ದ. ಅವನೆಂಥ ಖದೀಮನೆಂದರೆ ಆರಾಮಾಗಿ ಅಲ್ಲೆಲ್ಲೊ ಲಲ್ಲೆ ಹೊಡೆಯುತ್ತ ಇರೋನು, ದೊಡ್ಡ ಕ್ಯೂನಲ್ಲಿ ನಿಂತ ನಮ್ಮ ಬಳಿ ಬಂದ.

ಹಾಯ್ ಹೇಗಿದ್ದೀರಿ ಏನ್ ಮಾಡ್ತಾ ಇದ್ದೀರಿ ಎಂದು ನಯವಾಗಿ ಮಾತಾಡುತ್ತ ನಮ್ಮ ಜೊತೆಯೆ ಸೇರಿಕೊಂಡ. ಲೈನ್ ಮೂವ್ ಆದ ಕೂಡಲೇ ಮಾತು ನಿಲ್ಲಿಸಿ ಅಪರಿಚಿತನಂತೆ ನಿಂತ

ಇನ್ನೂ ಆರು ದಿನ ಅವನ ಕಾಟ ತಡೆದುಕೊಳ್ಳಲೇಬೇಕು.

90 ವರ್ಷದ ಕನ್ನಡ ಚಿತ್ರರಂಗದ ಸಂಭ್ರಮಕ್ಕಾಗಿ ಮೈಲಿಗಲ್ಲು ಚಿತ್ರ, ಅಬ್ಬಾಸ್ ಕಿರೋಸ್ತಮಿ, ಮೃಣಾಲ್ ಸೇನ್ ಸ್ಮರಣಾರ್ಥ ಚಿತ್ರಗಳು ಈ ಸಲದ ಬೋನಸ್, ಜರ್ಮನ್ ದೇಶ & ಮಹಿಳಾ ನಿರ್ದೇಶಕಿಯರ ಸ್ಪೆಷಲ್ ಈ ಸಲದ ಹೈಲೈಟು

ಲಿಸ್ಟ್ ನಲ್ಲಿದ್ದ Monster ಚಿತ್ರ ಸ್ಕೆಡ್ಯೂಲಲ್ಲಿ ಮಾಯ. ಚಿತ್ರಪ್ರೇಮಿಗಳಿಗೆ ಗಾಯ. ಕನ್ನಡದ ಶಿವಮ್ಮ ಮತ್ತು ಧೂಪದ ಮಕ್ಕಳು ಲಿಸ್ಟಲ್ಲಿ ಇರಲಿಲ್ಲ ಆಮೇಲೆ ಸೋಶಿಯಲ್ ಮೀಡಿಯದಲ್ಲಿ ದೊಡ್ಡ ಚರ್ಚೆ ಆದಮೇಲೆ ಎರಡೂ ಚಿತ್ರಗಳು ಸೇರಿಸಿರುವುದು ಸ್ವಾಗತಾರ್ಹ.

‍ಲೇಖಕರು avadhi

March 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: