ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .
ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.
ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ
ಬರೆದದ್ದು ಈಗ ಓದಿ
ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ ಮುಂದುವರೆಸಿ
–

ಗೀತಾ ಹೆಗ್ಡೆ ಕಲ್ಮನೆ
ಹೌದು
ನನಗೂ ಕೋಪ ಬರುತ್ತಿದೆ
ಹೆಣ್ಣಿನ ಅಂಗಾಂಗಳಿಗೆ
ಮೂರು ಕಾಸಿನ
ಬೆಲೆ ಕೊಡದೆ
ಮಾರಾಟದ ಸರಕಾಗಿ
ಪರಿಗಣಿಸುವ ಒಂದೊಂದು
ಗಂಡಿನ ಮನಸಿನ
ಕ್ಷುದ್ರ ದಾಹಕ್ಕೆ
ಹಡೆದವಳು ಹೆಣ್ಣು
ಎಂಬುದ ಮರೆತಂತೆ
ನಟಿಸುವ ನಟನಾ
ಚಾತುಯ೯ಕ್ಕೆ
ನುಣುಪಾದ ದೇಹದ ಮೇಲೆ
ಕೀಚಕನ ಅಟ್ಟಹಾಸ
ದಕ್ಕದೇ ಇರುವಾಗ
ರೊಚ್ಚಿಗೆದ್ದು ಶಪಿಸಿ
ಅಮಾಯಕಳ ಕೊಲೆಗೈವ
ಇಲ್ಲ
ಸಿಕ್ಕರೆ ಮಾನ ನುಂಗಿ
ಗೆದ್ದೆ ಎನ್ನುವ
ಗೆಲುವಿನ ತನ್ನೊಳಗೇ
ಗೋರಿ ಕಟ್ಟಿ ಬೀಗುವ
ಅಟ್ಟಹಾಸ ಸಾಕು
ಉಫ್ ಎಂದು
ಊದಿಬಿಟ್ಟಿದ್ದು ಸರಿ
ಮರೆಯಾಗಿ ನಶಿಸಿ ಹೋಗಲಿ
ಮುಖವಾಡ ಧರಿಸಿ
ಬದುಕು ನಡೆಸಬೇಕಾದ
ಹೆಣ್ಣಿನ ಅನಿವಾಯ೯ತೆ
ಕಣ್ಣಿಗೆ ಕಾಣದಿರಲಿ
ನಗ್ನತೆಯ ಚಿತ್ರ ವಿಚಿತ್ರ ಭಂಗಿ!





ಮರೆಯಾಗಿ ನಶಿಸಿ ಹೋಗಲಿ
ಮುಖವಾಡ ಧರಿಸಿ
ಬದುಕು ನಡೆಸಬೇಕಾದ
ಹೆಣ್ಣಿನ ಅನಿವಾಯ೯ತೆ