ಇದು ಪೆನ್ನು, ಆದರೆ ಪೆನ್ನಲ್ಲ, ಇದು ಬರೆಯುತ್ತೆ, ಆದರೂ ಪೆನ್ನಲ್ಲ, ರೀಫಿಲ್ ಇದೆ, ಉಹುಂ ಪೆನ್ನಲ್ಲ. ನೋಡಲು ಆಕಾರ ಅದೇ, ಜೋಬಲ್ಲಿ ಸಿಕ್ಕಿಸಿಕೊಳ್ಳಬಹುದು ಉಹುಂ, ಉಹುಂ ಖಂಡಿತಾ ಇದು ಪೆನ್ನಲ್ಲ, ಹಾಗಾದರೆ ನಾನು ಯಾರು? ಅಂತ ಒಗಟೇನಾದರೂ ಕೇಳಿದರೆ ನಾನು ಕೊಡುವ ಉತ್ತರ ’ಸ್ಪೈ ಕ್ಯಾಮರಾ!!’
ಇದು ಟೋಪಿ ಆದರೆ ಟೋಪಿಯಲ್ಲ. ಜೀನ್ಸ್ ಬಟ್ಟೆಯಿಂದ ಮಾಡಿದೆ, ಆದರೂ ಟೋಪಿಯಲ್ಲ, ತಲೆಯ ಮೇಲೆ ಏರಿಸಿಕೊಳ್ಳಬಹುದು ಉಹುಂ ಟೋಪಿಯಲ್ಲ, ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು ಆದರೂ ಟೋಪಿಯಲ್ಲ. ಹಾಗಾದರೆ ನಾನು ಯಾರು. ‘ಸ್ಪೈಕ್ಯಾಮರಾ!!’
ಇದು ಶರ್ಟ್ ನ ಗುಂಡಿ, ಆದರೆ ಗುಂಡಿಯಲ್ಲ. ಹೊಲಿಗೆ ಹಾರಬಹುದು, ಆದರೂ ಗುಂಡಿಯಲ್ಲ. ಇದು ಬೆಲ್ಟ್, ಆದರೆ ಬೆಲ್ಟ್ ಅಲ್ಲ. ಖಂಡಿತಾ ಪ್ಯಾಂಟಿಗೇರಿಸಬಹುದು ಆದರೂ ಬೆಲ್ಟ್ ಅಲ್ಲ, ಇದು ಟೈ, ಆದರೆ ಟೈ ಅಲ್ಲ. ಠಾಕುಠೀಕಾಗಿ ಕುತ್ತಿಗೆಗೆ ಬಿಗಿದುಕೊಳ್ಳಬಹುದು, ಆದರೂ ಟೈ ಅಲ್ಲ. ಇದು ವಾಚ್, ಉಹುಂ ವಾಚಲ್ಲ. ಸಮಯ ತೋರಿಸುತ್ತದೆ ಆದರೂ ವಾಚಲ್ಲ, ಕೈಗೆ ಕಟ್ಟಿಕೊಳ್ಳಬಹುದು ಆದರೂ ವಾಚಲ್ಲ ಹಾಗಾದರೆ ನಾನು ಯಾರು ಎಂಬ ಎಲ್ಲಾ ಪ್ರಶ್ನೆಗೂ ಒಂದೇ ಉತ್ತರ – ‘ಸ್ಪೈ ಕ್ಯಾಮರಾ’…
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು