‘ಡ್ಯಾಡ್ , you Know i got him back’ ಅಂತ ಫೋನ್ ಮಾಡಿದ್ದ ನನ್ನ ಮಗಳು ಕಿನ್ನರಿ ಇನ್ನೂ ಹತ್ತನೇ ತರಗತಿಯನ್ನೂ ದಾಟಿಲ್ಲ. ಆದರೆ ಅವಳ ದನಿಯಲ್ಲಿ ಆಗಲೇ ಒಂದು ದೊಡ್ಡ ಚಾನಲ್ ನ ಕಿವಿ ಹಿಂಡಿದ ಉತ್ಸಾಹ ಇತ್ತು. .ಆಗಿದ್ದು ಇಷ್ಟು- ‘ದಿಲ್ ಮಿಲ್ ಗಯೇ’ ಅನ್ನುವ ಸೀರಿಯಲ್ ಇವತ್ತಿನ ಅತ್ಯಂತ ಪಾಪ್ಯುಲರ್ ಸೀರಿಯಲ್. ಅದರಲ್ಲೂ ‘ಮಿಲ್ಸ್ ಆನ್ಡ್ ಬೂನ್ಸ್’ ಓದುವ ವಯಸ್ಸಿಗೆ ಎಂಟರ್ ಆಗುತ್ತಿರುವವರಿಗೆ ಹೇಳಿ ಮಾಡಿಸಿದ ಷೋ. ಈ ಸೀರಿಯಲ್ ನ ಹೀರೋ ಕರಣ್ ಸಿಂಗ್ ಗ್ರೋವರ್. ಪಡ್ಡೆ ಹುಡುಗರ ಕನಸುಗಳಿಗೆ ಲಗ್ಗೆ ಇಟ್ಟಾತ. ಈ ಕರಣ್ ಸಿಂಗ್ ಗ್ರೋವರ್ ಹಾಗೂ ಜನ್ನಿಫರ್ ವಿಂಗೆಟ್ ನಡುವೆ ಪ್ರೇಮಾಂಕುರವಾಗುತ್ತದೆ. ಅದಕ್ಕೇ ಎಂದಿನಂತೆ ನೂರೆಂಟು ವಿಘ್ನ. ಅದನ್ನೆಲ್ಲಾ ಎದುರಿಸಿ ಇನ್ನೇನು ಮದುವೆ ಆಗಬೇಕು ಎನ್ನುವಾಗ ಕಥೆಗೊಂದು ಟ್ವಿಸ್ಟ್. ಗುಂಡಿನ ದಾಳಿಯಲ್ಲಿ ಇವರಿಬ್ಬರೂ ಕುಸಿದು ಬೀಳುತ್ತಾರೆ.
ಆದರೆ ಮುಂದಿನ ವಾರ ಈ ಸೀರಿಯಲ್ ನೋಡಿದವರಿಗೆ ಷಾಕ್ ಕಾದಿತ್ತು. ಪಡ್ಡೆ ಹೈದರ ಫೇವರೈಟ್ ಕರಣ್ ಸಿಂಗ್ ಗ್ರೋವರ್ ಆತನ ಲವರ್ ಜೆನಿಫರ್ ಇಬ್ಬರೂ ಸೀರಿಯಲ್ ನಿಂದ ಎತ್ತಂಗಡಿಯಾಗಿದ್ದರು. ಆ ಜಾಗಕ್ಕೆ ಹೊಸ ಮುಖಗಳು ಬಂದು ಕೂತಿದ್ದವು. ಕಥೆಯೂ ಸಹಾ ಲಂಗು ಲಗಾಮಿಲ್ಲದೆ ಸಿಕ್ಕ ಸಿಕ್ಕ ದಿಕ್ಕಿಗೆ ಓಡುತ್ತಿತ್ತು.
ಆ ಸೀರಿಯಲ್ ನಲ್ಲಿ ಹೀಗಂತೆ ಅಂತ ಗುಲ್ಲೋ ಗುಲ್ಲು.. ನಮ್ಮ ಮನೆಯಲ್ಲೂ ಶೋಕದ ವಾತಾವರಣ . ಕರಣ್ ಸಿಂಗ್ ಗ್ರೋವರ್ ಇಲ್ಲದ ದಿಲ್ ಮಿಲ್ ಗಯೇ ಓಡುತ್ತಾ .? ಅಥವಾ ಈ ಪಡ್ಡೆಗಳ ಭಾಷೆಯಲ್ಲೇ ಹೇಳಬೇಕೆಂದರೆ ‘can you imagine DMG without KSG’. ದಿನಗಟ್ಟಲೇ ಇದೇ ಚರ್ಚೆ. ಫೋನ್ ತಿರುಗಿಸಿ ದುಖ ತೋಡಿಕ್ಕೊಳ್ಳುವುದೇನು.. ಆ ಕಡೆಯಿಂದ ಫೋನ್ ಮಾಡಿದವರ ಆಕ್ರೋಶವೇನು.. ಕರಣ್ ಸಿಂಗ್ ಗ್ರೋವರ್ ಗೆ ಅನ್ಯಾಯ ಆಗಿ ಬಿಟ್ಟಿದೆ ಅಂತ ರಕ್ತ ಕುದಿಸಿಕೊಂಡವರೆಷ್ಟು..
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್






0 Comments