ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ’ಯುದ್ಧದಲ್ಲಿನ ಸಾವು ಸಾವಲ್ಲವೇ?’

ಇದು ಇಸ್ರೇಲ್- ಪಾಲೆಸ್ತಿನ್ , ರಶಿಯಾ- ಉಕ್ರೇನ್ ಯುದ್ಧಗಳನ್ನು ನೋಡಿ ಬೇಸತ್ತು ಬರೆದಿರುವ ಕವನ

ನಾನು ಮನುಷ್ಯನನ್ನು ಕೇಳುತ್ತಿರುವೆ ನಿನ್ನ ಗೆಲುವು ಇದೇನಾ ಎಂದು

ಗೆಲುವು?

ಪ್ರತೀಕ್ ದೇಶಪಾಂಡೆ

ಅಮೇರಿಕಾ

ಯುದ್ಧದಲ್ಲಿನ ಸಾವು ಸಾವಲ್ಲವೇ?
ಸಾವಲ್ಲಿ ಕಾಣುವ ಖುಷಿ ಪ್ರೀತಿಯಲ್ಲಿಲ್ಲವೇ?
ಸಮರದೋಳ್ ಹೊಡೆದಾಡಿ ಮೆರೆದಾಡುವ ಮಾನವನೆ
ಪ್ರೀತಿಯಲಿ ಜಗ್ಗಾಡಿ ಲೋಕವನು ಗೆಲ್ಲಬಾರದೆ?

ತಾಯಿಯ ಹಾಲಿಗಾಗಿ ಅಳಬೇಕಾದ ಕೂಸುಗಳು
ತಾಯಿಯನ್ನೇ ಕಳೆದುಕೊಂಡು ಅಲೆದಾಡುತ್ತಿವೆ ಪಾಪಿಗಳು
ಕಂಡು ಕಾಣದಂತೆ ನಟಿಸುವ ಕ್ರೂರಿ ಮಾನವನು
ಕರುಣೆ ಇಲ್ಲದ ಕಣ್ಣಲ್ಲಿ ಕಾಣುತ್ತಿರುವೆಯಾದರು ಏನು?
 

‍ಲೇಖಕರು G

2 August, 2014

1 Comment

  1. mmshaik

    heart touching..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading