ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸತನ ಬಯಸುವಾಗ..

ಮೂಲ

ಮೆಹಬೂಬ ಮುಲ್ತಾನಿ

ಹಾದು ಹೋಗುವ ಹಳೆದಾರಿಯೂ
ಹೊಸತನ ಬಯಸುವಾಗ
ಹಳೆ ಕವಿತೆಗಳು
ಹೊಸ ರೂಪ ಪಡೆಯಬೇಕು
ಮನಸ್ಸುಗಳೂ ಹೊರತಲ್ಲ

ಸುಮ್ಮನೆ ಒಮ್ಮೆ ನನ್ನ ಮನ ಹೊಕ್ಕು ನೋಡಿ
ನನ್ನ ನಾಟಕದ ಬಣ್ಣ ಮಾಸಿದ ಕವಲುಗಳು
ಧುತ್ತನೆ ನಿಮ್ಮ ಮುಂದೆ ನಿಲ್ಲುತ್ತವೆ

ಸಂಭಾಳಿಸಬೇಕು ಇಲ್ಲವೆಂದರೆ
ಜನ‌ ಮಾತನಾಡಿಕೊಳ್ಳುತ್ತಾರೆ
ನಮಗಲ್ಲ ಜನರಿಗಾದರೂ
ನಾವು ಮೂಲದಲ್ಲೇ ಉಳಿಯಬೇಕು..

ಎದೆ ಬಗೆದು ನೋಡುವ ಅವಕಾಶ ಸಿಕ್ಕಿದ್ದೆಯಾದಲ್ಲಿ
ಎಲ್ಲರೂ ಒಂದಿಲ್ಲ ಒಂದು ಭಾಷೆಗೆ ಅನುವಾದಗೊಂಡವರೆ
ಯಾರೂ ಮೂಲಕ್ಕೆ ನಿಷ್ಟರಾಗಿಲ್ಲ…

‍ಲೇಖಕರು avadhi

7 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading