ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹೇಳತೇವ ಕೇಳ…’ – ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಅವಧಿ ಹೊರತಂದ ಲೇಖನಗಳ ಸರಣಿ ಹೇಳತೇವ ಕೇಳ.

“ದೆಹಲಿಯಲ್ಲಿ ನಡೆದ ಘಟನೆ ಕೇವಲ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ: ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ. ನಾನಿದನ್ನು ವಿರೋಧಿಸುತ್ತೇನೆ” ಎಂದ ಆ ಎಲ್ಲರಿಗೆ ಕೃತಿ ಅರ್ಪಣೆ ಎಂದು ಹೇಳುವ  ‘ಹೇಳತೇವ ಕೇಳ…’ ಕೃತಿ ನೆನ್ನೆ ಬಿಡುಗಡೆಗೊಂಡಿತು.

ಜಯಂತ ಕಾಯ್ಕಿಣಿ,  ಜಿ ಎನ್ ಮೋಹನ್, ವಿಶೇಷ ಸಂಚಿಕೆ ಸಂಪಾದಕಿ ಜಯಲಕ್ಷ್ಮಿ ಪಾಟೀಲ್, ಅಭಿನವ ಪ್ರಕಾಶನದ ಪಿ ಚಂದ್ರಿಕಾ, ನ ರವಿಕುಮಾರ್, ಅಪಾರ, ಬಿ ವಿ ಭಾರತಿ, ಸೌಮ್ಯ ಕಲ್ಯಾಣ್ ಕರ್ ಅವರು ಕೃತಿ ಬಿಡುಗಡೆ ಸಭೆಗೆ ಸಾಕ್ಷಿಯಾದರು.

ಸಮಾಜದಲ್ಲಿ, ನಮ್ಮಗಳ ಅಕ್ಕ ಪಕ್ಕ ನಡೆವ ನೂರಾರು ಲೈಂಗಿಕ ದೌರ್ಜನ್ಯಗಳ ಕಹಿ ನೆನಪುಗಳು ಕಪ್ಪು ರಾಚಿದ ಘಟನೆಗಳಿಗೆ ಇದೆ ನಮ್ಮ ಮೊದಲ ದಿಕ್ಕಾರ ಎಂಬ ದೃಢ ನಿಲುವುಗಳು ಪ್ರತಿಧ್ವನಿಸಿದ ಸಭೆಯಲ್ಲಿ ಸಾಂಕೇತಿಕವಾಗಿ ಕಲಾವಿದ ಅಪಾರ ಅವರ ಕಲಾಕೃತಿಯನ್ನು ಬಿಡುಗಡೆ ಮಾಡಲಾಯಿತು. ಅರ್ಥಗರ್ಭಿತವಾಗಿ ನಡೆದ ಸಭೆಯ ಕೆಲವು ಮರೆಯದ ಕ್ಷಣಗಳು ನಮ್ಮ ನಲ್ಮೆಯ ಓದುಗರಿಗಾಗಿ…

ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

ಫೋಟೊ : ಮುರಳಿ ಮೋಹನ ಕಾಟಿ

‍ಲೇಖಕರು avadhi

1 May, 2013

9 Comments

  1. ರೂಪ ಹಾಸನ

    ಗುಟ್ಟು ಬಿಚ್ಚಿ ಬಯಲಿಗಿಟ್ಟ ಗೆಳತಿಯರಿಗೆಲ್ಲ ಅಭಿನಂದನೆಗಳು. ಎದೆಯಾಳದಲ್ಲಿ ಹುಗಿದ ಸಂಕಟದ ಸ್ಪೋಟಕಗಳು ಕೊನೆಗೊಮ್ಮೆಯಾದರೂ ಸಿಡಿಯಲೇಬೇಕಾದ ಹೊತ್ತು ಈಗ ಬಂದಿದೆ………

  2. ಆಸು ಹೆಗ್ಡೆ

    ಸುಂದರ ಚಿತ್ರಗಳು ನಮ್ಮನ್ನೂ ಸಭೆಯಲ್ಲಿ ಕೂಡಿಸಿಕೊಂಡವು!

  3. bharathi

    tumba preethiya kaaryakrama …

  4. sunil rao

    aatmeeya sabhaa

  5. murali kati

    ಈ ಕಾಯಱಕ್ರಮದ ಪೋಟೋ ತೆಗೆಯುತ್ತಿದ್ದಾಗ ನನ್ನ ಕಾಲುಗಳು ಅಕ್ಷ:ರಶ: ನಡುಗಿದವು. ಇಂಥ ಸಂದರ್ಭ ಮತ್ತೆ ಬರದಿರಲಿ.
    ಆ ಪುಸ್ಸತಕದಲ್ಲಿ ಬರೆದವರಿಗೆ ಈ ಪದ್ಯದ ಸಲಾಮು.
    ನಾನು ಅಕ್ಕನಾಗುತ್ತೇನೆ
    ಬೆತ್ತಲಾಗುತ್ತೇನೆ
    ಚೌಕಟ್ಟುಗಳಾಚೆ ಮೈ ಚಾಚಿ
    ಅಪ್ಪುತ್ತೇನೆ
    ಬಯಲ ಭಾವಗಳೆಡೆಗೆ
    ಪ್ರವಹಿಸುತ್ತೇನೆ
    ಪ್ರಸವಿಸುತ್ತೇನೆ ನನ್ನ ಭಿತ್ತಿಯನು
    ನಿಮ್ಮ ಕೂದಲಿನ ಬಾರಕ್ಕೆ
    ಕುಗ್ಗದೆ ಬಗ್ಗದೆ ಬೆತ್ತಲಾಗುತ್ತೇನೆ.

  6. ದಿವಾಕರ ನಾ

    ದೆಹಲಿಯಲ್ಲಿ ನಡೆದ ಘಟನೆ ಕೇವಲ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ: ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ. ಇದು ನನ್ನ ಲೇಖನದ ಒಂದು ಸಾಲು ಎಂದು ಹೇಳಲು ಹೆಮ್ಮೆಯಾಗುತ್ತದೆ. ಈ ಸಾಲನ್ನು ಸ್ವೀಕರಿಸಿ, ಬಳಸಿ, ಸಾರ್ಥಕತೆ ನೀಡಿದ ಎಲ್ಲ ಬರಹಗಾರರಿಗೆ ಮತ್ತು ಓದುಗರಿಗೆ ಧನ್ಯವಾದಗಳು. ಈ ಸಮಾರಂಭಕ್ಕೆ ನನ್ನ ವೈಯ್ಯಕ್ತಿಕ ಕಾರಣಗಳಿಗಾಗಿ ಬರಲಾಗಲಿಲ್ಲ. ಕೃತಿಯ ಲೇಖಕರಲ್ಲಿ ಒಬ್ಬನಾಗಿ ಪುಸ್ತಕವನ್ನು ಪ್ರಕಟಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

  7. anupama prasad

    ಪುಸ್ತಕದೊಳಗಿನ ಬರಹಗಾರ್ತಿಯರಲ್ಲಿ ಒಬ್ಬಳಾಗಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ ಕೊರತೆಯನ್ನು ತಕ್ಕಮಟ್ಟಿಗೆ ಈ ಭಾವಚಿತ್ರಗಳು ತುಂಬಿಕೊಟ್ಟವು. ಜೊತೆಗೆ ಇನ್ನೂ ಇನ್ನೂ ಜಿದ್ದಿನಿಂದೆಂಬಂತೆ ನಡೆಯುತ್ತಿರುವ ಬಾಲೆಯರ ಮೇಲಿನ ಭೀಭತ್ಸ ದೌರ್ಜನ್ಯದ ಸುದ್ದಿಗಳನ್ನು ಓದುತ್ತಿರುವುದರಿಂದ ೋ ದೇವರೆ! ಮಾನವೀಯತೆಗಾಗುತ್ತಿರುವ ಹೇಯ ಅವಮಾನಕ್ಕೆ ಕೊನೆ ಹಾಡುವ ದಾರಿ ಯಾವುದು ಅನಿಸಿತು.
    ಅನುಪಮಾ ಪ್ರಸಾದ್.

  8. ಸುಧಾ ಚಿದಾನಂದಗೌಡ

    ತುಂಬ ಒಳ್ಳೆಯ ಕಾರ್ಯಕ್ರಮವೆಂದು ಗೊತ್ತಾಗುತ್ತಿದೆ.
    ಸಮಾರಂಭಕ್ಕೆ ಬರಲಾಗದಿದ್ದುದಕ್ಕೆ ತುಂಬ ಬೇಸರವೆನಿಸುತ್ತಿದೆ.
    ಬರೆದ, ಭಾಗವಹಿಸಿದ ಎಲ್ಲ ಸಖಿಯರಿಗೆ, ಅವಧಿಗೆ,ಅಭಿನವಕ್ಕೆ
    ಅಭಿನಂದನೆಗಳು.

  9. Anjali Ramanna

    anivaaryateyinda kaaryakramakke baralaagalilla…..adara bagge nOvide. aadare baraha roopadalli hELidannu kELiddEne. hELaddakke miDididdEne. Thank you GN Mohan, Sandhya Rani and Jayalakshmi Patil.
    Anjali Ramanna

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading