ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಣ್ಣಿನ ವಾಸನೆ ಹೊತ್ತ ಗಾಳಿ ಹೊಳ್ಳೆಗಳನ್ನು ಸೋಕುವುದೇ ತಡ…

ಗೋಮುಖ

– ರೋಹಿಣಿ ಸತ್ಯ

ಧರಣಿಮಂಡಲ ಮಧ್ಯದೊಳಗೆ –
ಮೆರೆಯುತಿಹ ದೇಶದಲ್ಲಿ
ಒಂದಿಷ್ಟು ಗೋಮುಖಗಳು
ಸಾಧುಗುಣವೇ ಮೈವೆತ್ತ ಇವುಗಳು
ಸರಸ್ವತಿ ನಿಲಯಗಳು ರಸ್ತೆಗಳು
ಚಲಿಸುವ ವಾಹನಗಳು –
ಒಂದಿಷ್ಟು ಪ್ರತ್ಯೇಕ ಪ್ರದೇಶಗಳಲ್ಲಿ
ಮನೆಯೊಳಗೂ ಅಂಗಳದ ಹೊರಗೂ
ಅಡ್ಡಾಡುತ್ತಿರುತ್ತವೆ

ಹೆಣ್ಣಿನ ವಾಸನೆ ಹೊತ್ತಗಾಳಿ
ಹೊಳ್ಳೆಗಳನ್ನು ಸೋಕುವುದೇ ತಡ
ಜಾನಪದ ಚಿತ್ರಗಳಲ್ಲಿ ಮಂತ್ರ ಹಾಕಿದಂತೆ
ಗೋಮುಖಗಳು ಗೂಳಿಗಳಾಗಿ ಬಿಡುತ್ತವೆ
ಅಡ್ಡಾದಿಡ್ಡಿಯಾಗಿ ಓಡಿ
ಇವುಗಳ ತಿವಿತದಿಂದ ತಪ್ಪಿಸಿಕೊಂಡರೂ
ಮನೆಯೊಳಗೇ ಇರುವ ಗೋಮುಖಗಳ ಮಾತೇನು
ಮಾಂಸದ ಮುದ್ದೆ ಪಕ್ವವೋ ಅಪಕ್ವವೋ
ಕೈಗೆಟುಕುವ ಅಳತೆಯಲ್ಲಿ ಬೇಟೆಯಿರಲು
ಮುತ್ತುವ ನೊಣಗಳನ್ನು ಅತ್ತಿತ್ತ ಓಡಿಸುವ
ನಿರಪಾಯಕಾರಿ ಬಾಲವು, ಅಮಾಯಕ ನೋಟವು ಹೊತ್ತ
ಗೋಮುಖಗಳ ಗೊರಸುಗಳಿಗೆ ನಖಗಳು ಮೊಳೆಯುತ್ತವೆ
ದಾಳಿಮಾಡಿ ಉರುಳಿಸಿ ಸೀಳಿದಾಗಲೇ …
ಅರಿವಾಗುವುದು –
ಅವು ಗೋಮುಖಗಳಲ್ಲ!
ಗೋಮುಖ ವ್ಯಾಘ್ರಗಳೆಂದು!!
 

‍ಲೇಖಕರು G

22 April, 2015

5 Comments

  1. Nalina D

    Good poem

  2. mmshaik

    nice..

  3. Anil Talikoti

    ಚೆನ್ನಾಗಿದೆ

  4. RAGHAVENDRA HEGDEKAR

    ಇಂಥ ಮುಖ ಗಳಿಗೆ ಒಟ್ಟಿಗೆ ಹೇಳೋಣ GOಮುಖ .,.,ಸೆರಗಿನಲ್ಲಿ ಕಟ್ಟಿಕೊಂಡ ದುರಂತ ಆತಂಕಗಳ ಪರಿಣಾಮಕಾರಿ ಚಿತ್ರಣ,.,.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading