ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಜ್ಜೆಗುರುತು ಮಾತಾಡುತ್ತಿರುತ್ತವೆ ಸದಾ..

ಬಿದಲೋಟಿ ರಂಗನಾಥ್

ನಿನ್ನ ನಗು ಮೊಗದ ಮೇಲೆ
ಓಡಿದ ಜಿಂಕೆಗಳ ಭಾವ ಸೋತು ನಿಲ್ಲಲಿಲ್ಲ
ಮೌನದ ದಾರಿಯಲ್ಲು
ಗೆಲುವಿನ ಪತಾಕೆಗಳು ಹಾರುತ್ತವೆ
ನಿನ್ನಂತವರ ಹೆಸರು ಬೆಳ್ಳಿಚುಕ್ಕಿಯ ಮುಟ್ಟುತ್ತವೆ

ಚಿತ್ರಗಳಲ್ಲಿ ನಟಿಸಿ
ಚಿತ್ರವಾಗುವುದೆಂದರೆ ಬೆಳಕಿನ ಸೂರ್ಯ
ಮಂಕಾಗುವುದೆಂದರ್ಥವೇ ಹೊರತು
ಶಾಶ್ವತ ನಿರ್ಗಮನವಲ್ಲ

ಜೀವ ತುಂಬಿದ ನಟನೆಯಲ್ಲಿ
ರೆಕ್ಕೆ ಬಿಚ್ಚಿದ ಚಲನ ಚಿತ್ರಗಳು
ದರ್ಶನವಾಗುತ್ತಲೇ
ತುಂಬುತ್ತವೆ ಮೈ ಮನ
ನಿನ್ನ ಇರುವಿಕೆಯ ಸಾಭೀತು ಮಾಡುತ್ತವೆ ಅಪ್ಪು

ಬೆಳ್ಳಿ ತೊರೆಯೊಂದು
ಎಲ್ಲೋ ಹುಟ್ಟಿ ಇನ್ನೆಲ್ಲೋ ಸೇರುವ ಹಾಗೆ
ನಮ್ಮೀ ಬದುಕು

ಹಚ್ಚಿದ ಬಣ್ಣ ಕರಗಬಹುದು
ನಟಿಸಿದ ಭಾವ ತುಂಬಿದ ನಟನೆ
ಎಂತವರ ಬದುಕನ್ನೋ ಬದಲಿಸಬಹುದು
ನಡೆವ ಹಾದಿಗೆ ತಿರುವಾಗಲೂ ಬಹುದು

ಮಾನವೀಯ ಅಂತಃಕರಣದ ಬತ್ತಿಗೆ
ಎಣ್ಣೆಯಾದ ನಿನ್ನದು
ಎಂದೂ ನೆವೆಯದ ಮನಸು
ಒಡೆದ ಕನ್ನಡಿಗೆ ಎದುರಾದ ಮುಖ
ನಕ್ಕಾಗ ಕನ್ನಡಿಯ ಮುಖವೂ ಕಳೆಗಟ್ಟುತ್ತದೆ

ಸಾಧನೆಯ ಶಿಖರದ ಮೇಲೆ ನಿಂತವನು
ಎಂದಿಗೂ ಸತ್ತಿರುವುದಿಲ್ಲ
ಅವನ ಹೆಜ್ಜೆಗುರುತು ಮಾತಾಡುತ್ತಿರುತ್ತವೆ ಸದಾ..

‍ಲೇಖಕರು Admin

30 October, 2021

1 Comment

  1. ಎಂ.ಜವರಾಜ್

    ಒಪ್ಪುವ ಕವಿತೆ;ಅಳಿದ ಮೇಲಾಡಿದ ಕವಿತೆ; ಧ್ಯಾನಸ್ಥವಾಗಿ ಅಪ್ಪುವ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading