ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯದಲ್ಲಿ ಕವಿತೆಯಿದೆ..!

ಈ ಹೊತ್ತಿನ ಕವಿತೆ

~ದರ್ಶನ್ ಎಸ್ ಆರ್

ಕವಿತೆಯನ್ನು ಹುಡುಕುತ್ತಾ ಹೊರಟ ಅವನು ಕೇಳಿದ
ಕವಿತೆ ಎಂಂದರೇ ಏನು ?
ಕವಿತೆ ಎಲ್ಲಿದೆ? ಅದೀಗ ಏನು ಮಾಡುತ್ತಿದೆ ?

ತನ್ನೆಲ್ಲಾ ಆಸೆ-ಕನಸುಗಳ ಮೂಲೆಗಿರಿಸಿ
ಮನೆಯ ಒಳಗು ಹೊರಗು
ಬಿಡುವಿಲ್ಲದೆ ದುಡಿವ ಅಮ್ಮನ ಸೆರಗಿನಲ್ಲಿ
ನಾಳೆಗಳಿಗಾಗಿ ಜವಾಬ್ದಾರಿಯ ನೊಗ ಹೊತ್ತು ಉಳುವ ಅಪ್ಪನ ಒಡೆದ ಹಿಮ್ಮಡಿಯಲ್ಲಿ ಕವಿತೆಯಿದೆ..!

ರಸ್ತೆಬದಿಯಲ್ಲಿ ಹೂ-ಮಾರುವ ಹೆಣ್ಣುಮಗಳ ಕಣ್ಣುಗಳಲ್ಲಿ
ತುತ್ತು ಅನ್ನಕ್ಕಾಗಿ ಸಾಲುಗಟ್ಟಿ
ನಿಂತ ಮಕ್ಕಳ ಹಸಿವಿನಲ್ಲಿ
ಮಕ್ಕಳು ಮೊಮ್ಮಕ್ಕಳ ಬರುವಿಕೆಗಾಗಿ ಕಾಯುವ ಸುಕ್ಕುಗಟ್ಟಿದ ವೃದ್ಧಾಪ್ಯರ ಹೃದಯದಲ್ಲಿ ಕವಿತೆಯಿದೆ..!

ಬಂಡೆಗಳ ನಡುವೆ ಚಿಗಿಯುವ ಅಂತಃಕರಣದಲ್ಲಿ
ಬಾನು-ಭುವಿಯ ನಿಸ್ವಾರ್ಥ ಪ್ರೀತಿಯಲ್ಲಿ
ಬಯಲಿನ ಅಗಾಧ ಪ್ರಶಾಂತತೆಯಲ್ಲಿ
ಮಾತುಗಳಾಚೆಗಿನ ಮೌನದಲ್ಲಿ ಕವಿತೆಯಿದೆ

ಕವಿತೆ ಎಂಬುದು ನೋಟಕ್ಕೆ ಕಾಣುವಂತದಲ್ಲ
ನಮ್ಮ ನೋಟದೊಳಗಿನ ಕಾಣ್ಕೆಗೆ ದಕ್ಕುವಂತದ್ದು

ಮತ್ತೇನಿಲ್ಲ
ಜಗತ್ತು ರೊಟ್ಟಿಗಿಂತಾ ಪ್ರೀತಿಗಾಗಿ ಹಸಿದಿರುವಾಗ
ಈ ಹೊತ್ತಿಗೆ ಕವಿತೆ ಎಂದರೇ
ಅಂತಃಕರಣ ತುಂಬಿದ ಹೃದಯ ಆರ್ದ್ರತೆಯ ಕಣ್ಣು

‍ಲೇಖಕರು Admin

17 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading