ಹೀಗೊಬ್ಬ ಹಗಲು ವೇಷದ ಕಲಾವಿದ

100_3382

ರಮೇಶ ಗಬ್ಬೂರು

ತಾಯಿಯನ್ನು ಗುರುವಾಗಿಸಿಕೊಂಡ ಅಲೆಮಾರಿ ಲೋಕದ ‘ಅಪರೂಪ’………… ಎಮ್. ಶಿವಲಿಂಗಪ್ಪ. ಹಗಲುವೇಷ ಕಲಾವಿದ.
ಊರಿಂದ ಊರಿಗೆ ಸೂರಿಂದ ಸೂರಿಗೆ, ಗುಡಿ ಕಟ್ಟೆಯಿಂದ ಅಂಗಳಕ್ಕೆ, ಮಸೀದಿ ಗೋಡೆಯಿಂದ ಗಿಡದ ನೆರಳಿಗೆ, ಇದಾವುದು ಇರದಿದ್ದರೆ ಬಯಲಿನಲ್ಲಿ ಬಯಲಾಗಲು ಕೌದಿಯ ಟೆಂಟುಗಳಲ್ಲಿ ಜೀವನ ಸಾಗಿಸುವ ಹಣೆ ಬರಹ ಬರೆದುಕೊಂಡು ಬಂದವರಾಗಿದ್ದೇವೆ ಎಂದುಕೊಂಡು ಬಾಳಿ ಬದುಕುವ ಜನಾಂಗ ‘ಬಹುರೂಪಿಗಳು’. ಈ ಹೆಸರಿನ ಜೊತೆಗೆ ‘ಹಗಲು ವೇಷಗಾರರು’ ಎಂದು ಕರೆಯಿಸಿಕೊಂಡು ಅಂದಿನ ದಿನಮಾನಗಳಲ್ಲಿ ಸಾಮಾಜಿಕ ಸ್ತರ ರಚನೆಗೆ ಸಿಗದೆ ಚಲಿಸುವ ಅಲೆಮಾರಿ ಕಲಾವಿದರಾಗಿ ಊರಿಂದ ಊರಿಗೆ ಅಲೆಯುತ್ತಾ ಸಾಗುವ ‘ಬುಡಗ ಜಂಗಮರು’ ಈ ನಾಡು ಕಂಡ ಅದ್ಭುತ ಕಲಾ ಪರಂಪರೆ ಉಳ್ಳವರು. ಈ ಕಲಾವಿದರ ಮನೆತನದಲ್ಲಿ ಹುಟ್ಟಿ ಕಲೆಯ ರೆಕ್ಕೆಗಳನ್ನು ಬಾನೆತ್ತರಕ್ಕೆ ಹಾರಿಸಿದ, ಕಲೆಯನ್ನು ಮೈಗೂಡಿಸಿಕೊಂಡು ಬಾಲ್ಯದಿಂದಲೇ ಅರವತ್ತು ವಸಂತಗಳನ್ನು ಬಣ್ಣದಿಂದ ತುಂಬಿಸಿಕೊಂಡು ಸಿಗುವ ನೆರಳುಗಳಲ್ಲಿ ಮಲಗಿ, ಸಿಕ್ಕ ಕಠಾಲಿ ಮುದ್ದೆಯ ತಿಂದು ಕನಸುಗಳನ್ನು ಕೌದಿಯ ಟೆಂಟುಗಳಲ್ಲಿ ಹಾಸಿ ಮಲಗಿದ ಅಪರೂಪದ ಕಲಾವಿದ ಮಿರ್ಯಾಲಿ ಶಿವಲಿಂಗಪ್ಪ ಸಿದ್ದಾಪುರ.
ಬದುಕಿನ ತಲ್ಲಣಗಳನ್ನು ಚರಿತ್ರೆಯ ಸಾಂಸ್ಕೃತಿಕ ರೂಪಕಗಳನ್ನಾಗಿಸಿ ಅವುಗಳಿಗೆ ಬಣ್ಣ ಹಚ್ಚಿಕೊಂಡು ಕುಣಿದವರು. ಮನೆಮನೆಯನು ರಂಜಿಸಿದವರು. ಕಲೆಯ ಮೂಲಕ ಹೊಟ್ಟೆ ಹೊರೆಯಲು ಅಂಬಲಿಯ ಕುಡಿದು ಸಾಂಬನ ನೆನೆಯುತ್ತಾ ‘ನೀನಿತ್ತ ವರವಲ್ಲವೇ ದೇವಾ ಈ ಬದುಕು’ ಎಂದು ಹಾಡುತ್ತಾ ಊರೂರಿನ ಹೊಲಗದ್ದೆ ಮೇರೆಯ ಮುಳ್ಳುಗಳನ್ನು ತುಳಿಯುತ್ತಾ ಸಾಗಿದವರು. ಹಗಲು ವೇಶದ ಎಮ್. ಶಿವಲಿಂಗಪ್ಪನವರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಪ್ರೇರಣೆಯಿಂದ ಆಕೆಯನ್ನೇ ಗುರುವಾಗಿಸಿಕೊಂಡು ಆರಾಧಿಸುವ ಮಾರ್ಗ ಹಿಡಿದು ಬದುಕನ್ನು ಕಪ್ಪು ಬಿಳುಪಾಗಿಸಿ ಕಲೆಯ ಮೆರೆಸಲು ಬಣ್ಣ ಹಚ್ಚಿಕೊಂಡವರು. ನಾಡಿನಲ್ಲಿದ್ದರೂ ಕಾಡಿನ ಜೀವನ ಅನುಭವಿಸುತ್ತಿರುವ ಇವರ ಬದುಕುಗಳಿಗೆ ನೆರವಾಗುವ ಸರಕಾರಗಳು ಕಣ್ಣು ತೆರೆಯಬೇಕು. ಕಲೆಯನ್ನು ಹೊದ್ದು ಮಲಗಿದ ಕುಟುಂಬಕ್ಕೆ ಸೂರೊಂದು ಬೇಕು. ಸಾಂತ್ವನದದ ನುಡಿ ಸಾಕಾಗದು ಎಂಬುದ ಅರಿಯಬೇಕು. ಹೊದಿಸುವ ಶಾಲು ಊಟ ತರಲಾರದು ಗೌರವಕ್ಕಿಂತಲೂ ಬದುಕಿನ ನೆಲೆ ಒಪ್ಪತ್ತಿನೂಟ ಬಹಳ ಮುಖ್ಯ ಎಂದು ತಿಳಿಯಬೇಕು.
ತಾಯಿಯೇ ಗುರುವಾಗಿ ನಿಂತಾಗ
ಬುಡ್ಗಜಂಗಮ ಕಲಾವಿದರು ಬಹುರೂಪಿಗಳಾಗಿದ್ದರಿಂದ ಅವರಿಗೆ ಕಲ್ಯಾಣದ ಬಹುರೂಪಿ ಚೌಢಯ್ಯ ಆರಾಧ್ಯ ಹಾಗು ಆದ್ಯ. ಅಷ್ಟೇ ಅಲ್ಲ ಆತ ಜನಾಂಗದ ಪ್ರೇರಣೆ ಎನ್ನುವ ಶಿವಲಿಂಗಪ್ಪನೊಳಗೆ ಬಹುದೊಡ್ಡ ಕಲಾವಿದ ಅಡಗಿ ಕುಳಿತಿದ್ದಾನೆ. ಅರವತ್ತರ ವಸಂತದಲ್ಲೂ ಹನುಮನ ಪಾತ್ರ ಹಾಕಿ ಲಂಕೆಯ ಹಾರುವ ಚತುರನಂತೆ ಕಾಣುತ್ತಾನೆ. ಹಾಡುತ್ತಿದ್ದರೆ ಧ್ವನಿ ಕೋಮಲವಾಗಿ ಮತ್ತು ಪಾತ್ರವಾಗಿ ಮಾತಾಡುತ್ತಿದ್ದರೆ ಧ್ವನಿ ಗಡುಸಾಗುವ ಅವರ ಕಂಠಸಿರಿಗೆ ತಲೆದೂಗದವರಾರೂ ಇಲ್ಲ. ಗಂಗಾವತಿ ತಾಲ್ಲೂಕಿನ ಬಸಾಪಟ್ಟಣದ ಹಗಲು ವೇಶ ಕಲಾವಿದ ಮಿರ್ಯಾಲಿ ರಾಮಣ್ಣನ ಮಗ ಈ ಶಿವಲಿಂಗಪ್ಪ. ಈತನ ತಾತ ಮಿರ್ಯಾಲಿ ಸಾಯಪ್ಪ ಈ ಭಾಗದ ಹೆಸರಾಂತ ಬಹುರೂಪಿ. ಆ ಕಾಲದಲ್ಲಿ ಬಹುರೂಪಿ ಕಲೆಯ ಮೂಲಕ ಜನರ ಪ್ರೀತಿಗಳಿಸಿ ಅಲ್ಲಿಯೇ ಬಹಳದಿನಗಳ ಕಾಲ ನೆಲಸಿ ಹೊಲ ಮನೆ ಮಾಡಿಕೊಂಡು ಕಲೆಯನ್ನು ಬೆಳೆಸುತ್ತಿದ್ದನು. ಈ ಸಾಯಣ್ಣನಿಗೆ ಮೂರುಜನ ಗಂಡು ಹಾಗು ಎರಡು ಹೆಣ್ಣು. ಮೊದಲ ಮಗನೇ ರಾಮಣ್ಣ ಈತ ಶಿವಲಿಂಗಪ್ಪನ ಹಿರಿಯ ಮಗ. ಬಾಲ್ಯದಲ್ಲಿರುವಾಗ ತಂದೆ ರಾಮಣ್ಣ ತೀರಿದಾಗ 7-8ನೇ ವಯಸ್ಸಿನಲ್ಲಿದ್ದ ಶಿವಲಿಂಗಪ್ಪನವರು ತಾತ ಸಾಯಪ್ಪನ ಹತ್ತಿರ ಬೆಳೆಯುತ್ತಿರುವಾಗಲೇ ಒಂದು ವರ್ಷದ ನಂತರ ತಾತನೂ ತೀರಿಕೊಳ್ಳಲು ತಾಯಿಯೇ ಗುರು ತಂದೆ ಎಲ್ಲವಾದಳು. ಅಭಿನಯದ ಎಲ್ಲಾ ಪಟ್ಟುಗಳನ್ನು ಕಲಿಸಿದಳು. ಸೋದರಮಾವ ಶಂಕ್ರಪ್ಪ ಹಾರ್ಮೋನಿಯಂ ಬಾರಿಸುವುದನ್ನು ಒಂದೆರಡು ವರ್ಷ ತೋರಿಸಿದ. ನಂತರ ‘ನೋಡಿಕಲಿ-ಕೇಳಿಕಲಿ’ ಸಿದ್ಧಾಂತ ಇವರ ತಪಸ್ಸಾಯಿತು. ಡಿಮಿಕಿ ಹೊಡೆಯುತ್ತಾ ರಾಗಮಾಲಿಕೆ ಹಾಕುವ ತಾಯಿ ಈರಮ್ಮ ಶಿವಲಿಂಗಪ್ಪನ ಹೆಜ್ಜೆಗೆ ಗೆಜ್ಜೆ ಕಟ್ಟಿದಳು. ಅಂದು ಮಗನಿಗೆ ಗುರುವಾದ ಈರಮ್ಮ 103 ವಸಂತಗಳನ್ನೂ ಪೂರೈಸಿದ್ದರೂ, ಇಂದಿಗೂ ಮಗನಿಗೆ ಗುರುವಾಗಿ ಅವನ ಬಾಳಿಗೆ ಬೆಂಬಲವಾಗಿ ಗಟ್ಟಿಯಾಗಿ ಜೀವಿಸುತ್ತಿದ್ದಾಳೆ.
shivalingappa (2)
ಬಣ್ಣಹಚ್ಚಿದ ಪಾತ್ರಗಳು
ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಿ ಪೌರಾಣಿಕ ಪಾತ್ರಗಳ ಮೂಲಕ ಬದುಕಿಗೆ ಹತ್ತಿರವಾಗುತ್ತಾ ಜಾನಪದ ಕಲೆಯ ಮೂಲಕ ಹಾಡು ಅಭಿನಯ ಮನೋರಂಜನೆಯ ಮೂಲಕ ಜನಮನಕ್ಕೆ ಮುಟ್ಟುವ ಶಿವಲಿಂಗಪ್ಪ ಬಾಲ್ಯದಿಂದ ಬಣ್ಣ ಹಚ್ಚಿಕೊಂಡು ಅಭಿನಯಿಸದ ಪಾತ್ರಗಳಿಲ್ಲ. ಮೇನಕೆ, ವಿಶ್ವಾಮಿತ್ರ, ಮೋಹಿನಿ, ಭಸ್ಮಾಸುರ, ಸುಂದ, ಉಪಸುಂದ, ಆಂಜನೇಯ, ಅಜರ್ುನ, ಕಿರಾತ, ಲಂಬಾಣಿ, ಜಂಗಮ, ಹಾಗು ಕುರುಡು ದಾಸಪ್ಪ ಮತ್ತಿತರೆ ಪಾತ್ರಗಳಾಗಿ ಅಭಿನಯಿಸುವಾಗಲೆಲ್ಲಾ ಸರಸ್ವತಿಯೆ ನಾಲಿಗೆಯ ಮೇಲೆ ಕುಳಿತು ಆಡಿಸುತ್ತಿದ್ದಾಳೇನೋ ಎಂದು ಅವರ ಅಭಿನಯವನ್ನು ನೋಡಿದವರಿಗೆ ಅನಿಸದಿರದು.
ಪೋಲೀಸ್ ಪಾತ್ರದ ಮೂಲಕ ಹಾಸ್ಯ ಮಾಡುತ್ತಾ ಜನರನ್ನು ರಂಜಿಸುತ್ತಾ ಹಗಲು ವೇಷ ಆರಂಭಿಸುವ ಸೂಚನೆ ನೀಡುತ್ತಿದ್ದರು. ಕಬೀರದಾಸನ ಪಾತ್ರದ ಮೂಲಕ ಬ್ರಹ್ಮಪದವಿ ಪಡೆವ ಬಗೆಗಿನ ಮೇನಕೆ ವಿಶ್ವಾಮಿತ್ರನನ ಕಥೆಯಲ್ಲಿ ಕೆಲವು ಸಲ ಮೇನಕೆಯಾಗಿ ಮತ್ತೆ ಕೆಲವುಸಲ ವಿಶ್ವಾಮಿತ್ರನಾಗಿ ನಟಿಸುತ್ತಿದ್ದರು. ಜಂಗಮರ ವೇಶ ಹಾಕಿ 12ನೇ ಶತಮಾನದ ಶಿವಶರಣರ ಕಥೆಗಳನ್ನು ಪರಿಚಯಿಸುವ ಇವರ ಪರಿ ಈಗಲೂ ರೋಮಾಂಚನ. ಮೊದಮೊದಲು ಏಕಪಾತ್ರಾಭಿನಯದ ಮೂಲಕ ಕಥಾ ಪ್ರಸ್ತಾರ ಮಾಡುತ್ತಿದ್ದ ಶಿವಲಿಂಗಪ್ಪ ಅವರ ಅಕ್ಕನ ಮಕ್ಕಳ ಜೊತೆ ಸೋದರಮಾವನ ಜೊತೆ ಸೇರಿ ಕಥೆಯ ಪಾತ್ರಗಳನ್ನು ಹಂಚಿಕೊಂಡು ಅಭಿನಯಿಸುತ್ತಿದ್ದರು. ಲಂಕಾದಹನದಲ್ಲಿ ಒಮ್ಮೆ ರಾವಣನಾಗಿ ಮತ್ತೊಮ್ಮೆ ಆಂಜನೇಯನಾಗಿ ಘಜರ್ಿಸುವ ಮತ್ತು ಜಿಗಿಯುವ ಮೂಲಕ ಎರಡೆರಡು ವಿರೋಧ ಲಕ್ಷಣಗಳುಳ್ಳ ಪಾತ್ರಗಳನ್ನು ಅಭಿನಯಿಸುವಾಗ ಪಾತ್ರವನ್ನು ಆವಾಹಿಸಿಕೊಳ್ಳುವ ಶಿಸ್ತಿನಿಂದಾಗಿ ಅಚ್ಚುಕಟ್ಟಾಗಿ ನಿರ್ವಹಿಸುವ ರೀತಿಯಿಂದಾಗಿ ನಮಗೆ ಆಪ್ತರಾಗುತ್ತಾರೆ.
ಕಲೆಯನ್ನು ಗೌರವಿಸುವ ರೀತಿ
ಅತಿ ಎತ್ತರದ ಸಧೃಢ ಮೈಕಟ್ಟು ಬಣ್ಣ ಹಚ್ಚಿಕೊಂಡು ರಾಮನಾಗಿ, ಕೃಷ್ಣನಾಗಿ ಅಭಿನಯಿಸುವಾಗ ಆ ಕೋಮಲ ಭಾವಗಳಿಗೆ ಧಕ್ಕೆಯಾಗದಂತೆ ಭಾವನೆಗಳನ್ನು ಹೊಸೆಯುವ ನಟನಾ ಚತುರನಾಗಿ ಶಿವಲಿಂಗಪ್ಪ ಎಲ್ಲರ ಮನ ಸೆಳೆಯುತ್ತಾರೆ. ಭೀಮನಾಗಿ, ಧುಯರ್ೋಧನನಾಗಿ, ಜಟಾಯುವಾಗಿ, ವಾಯುಪುತ್ರನಾಗಿ ಅಭಿನಯಿಸುವ ಆ ಭಾವಕ್ಕೆ ಒಗ್ಗುವ ಸುಂದರ ಮೈಕಟ್ಟು ಈಗಲೂ ಅಷ್ಟೇ ಮಾತಾಡುತ್ತಿದ್ದರೆ ಪಾತ್ರವನ್ನು ಮೈಮೇಲೆ ತಂದುಕೊಳ್ಳುತ್ತಾರೆ. ಮಿರ್ಯಾಲಿ ಶಿವಲಿಂಗಪ್ಪನವರ ಪಾತ್ರ ಮೆಚ್ಚಿದ ಆಗಿನ ಜನರು ಬಹಳ ಉದಾರಿಗಳಾಗಿ ಅಕ್ಕಿ, ಜೋಳ, ಧವಸ, ದಾನ್ಯ, ಬಟ್ಟೆ, ಆಡು, ಕುರಿ, ಆಕಳು, ಕರು, ಅಷ್ಟೇ ಅಲ್ಲ ಭೂಮಿಯನ್ನು ದಾನವಾಗಿ ಕೊಟ್ಟುದನ್ನು ಈಗಲೂ ನೆನೆಯುತ್ತಾರೆ. ಅಲ್ಲದೆ ಈಗಿನ ಕಲೆಯ ಮತ್ತು ಕಲಾವಿದನ ಬಿಕ್ಕಟ್ಟನ್ನು ಕಂಡು ಮರುಕಪಡುತ್ತಾರೆ.
ಆಡಿದ ಹಗಲು ವೇಷದ ಕಥೆಗಳು
ಶಿವಲಿಂಗಪ್ಪ ಮಾಡಿದ ನಾಟಕಗಳನ್ನು ಆತನ ಪಾತ್ರದ ಅಭಿನಯವನ್ನು ಕಂಡು ಎಷ್ಟೋ ಮನೆಗಳು ಮತ್ತೆ ಮತ್ತೆ ಆಡಿಸಿದ ಉದಾಹರಣೆಗಳೂ ಇವೆ. ‘ನರವೀರ ಪಾರ್ಥ’ ‘ಜಟಾಸುರ ವಧೆ’ ‘ಮೋಹಿನಿ ಭಸ್ಮಾಸುರ’ ‘ಸುಂದ ಉಪಸುಂದ’ ‘ಕಿರಾತಾಜರ್ುನೀಯ’ ‘ಲಂಕಾದಹನ’ ‘ಭೀಮಾಂಜನೇಯ ಯುದ್ಧ’ ಹೀಗೆ ಇನ್ನೂ ಹಲವಾರು ಹಗಲು ವéೇಷಗಳನ್ನು ಅಂದಿನ ಅಗತ್ಯೆಗಳಿಗೆ ತಕ್ಕಂತೆ ಸ್ಥಳೀಯ ಕವಿಗಳಿಂದ ಸಂಗ್ರಹಿಸಿ ಕಥೆ ಕಟ್ಟಿ ಆಡುತ್ತಿದ್ದರು. ಶಾಲಾ ಕಾಲೇಜು ಮೆಟ್ಟಿಲು ತುಳಿಯದ ಒಬ್ಬ ಮಹಾನ್ ಕಲಾವಿದ ರಂಗಭೂಮಿಗೆ ಯಾಕೆ ಬರಲಿಲ್ಲ ಎಂದು ಕೇಳಿದರೆ ನಾವು ಹಗಲು ವೇಷ ಮಾಡುವವರು, ರಾತ್ರಿ ವೇಳೆಯಲ್ಲಿ ಕಲಾ ಪ್ರದರ್ಶನ ನಮ್ಮ ಬಹುರೂಪಿ ಪರಂಪರೆಯಲ್ಲಿಲ್ಲ ಎನ್ನುವ ಅವರು ತಮ್ಮ ಅಲೆಮಾರಿ ಬಂಧುಗಳಾದ ದಾಸರನ್ನು ನೆನೆಯುತ್ತಾ ನಾವು ಭಸ್ಮಧಾರಿಗಳು, ದಾಸರು ನಾಮಧಾರಿಗಳು. ಅವರು ನಮ್ಮಂತಹುದೇ ಕಥೆಗಳನ್ನು ರಾತ್ರಿವೇಳೆ ಆಡುತ್ತಾರೆ. ಅವರು ಹಗಲಿನಲ್ಲಿ ಬಯಲಾಟ ಆಡಿಸುವುದಿಲ್ಲ. ಹಾಗಾಗಿ ಪರಂಪರೆಯಿಂದ ನಮಗೆ ಹಗಲು ವೇಶ ಹಾಕುವುದಾಗಿದೆ.
ಭಾಗವಹಿಸಿದ ಕಾರ್ಯಕ್ರಮಗಳು
ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಲವು ಮೆರವಣಿಗೆ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶಿವಲಿಂಗಪ್ಪನವರು ತಾಲ್ಲೂಕು ಜಿಲ್ಲೆ ರಾಜ್ಯವನ್ನು ಸುತ್ತುತ್ತಾ ತಮಿಳುನಾಡು ಆಂದ್ರಪ್ರದೇಶದ ಕೆಲವು ಕಡೆ ಕಾರ್ಯಕ್ರಮ ನೀಡಿದ್ದಾರೆ. ನಾಡಿನೊಳಗಿನ ಸಂಭ್ರಮಗಳಲ್ಲಿ, ಉತ್ಸವಗಳಲ್ಲಿ, ಭಾಗವಹಿಸಿದ ಕೀರ್ತಿ ಗಳಿಸಿದ್ದಾರೆ. ‘ಆನೆಗುಂದಿ ಉತ್ಸವ’ ‘ಹಂಪಿ ಉತ್ಸವ’ ‘ಕನಕಗಿರಿ ಉತ್ಸವ’ ‘ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನ’ ‘ಕರ್ನಾಟಕ ಜನಪದ ಉತ್ಸವ’ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಹಾಗು ತಾಲ್ಲೂಕು ಕಾರ್ಯಕ್ರಮ’ ‘ಸುವರ್ಣ ಸಂಸ್ಕೃತಿ ದಿಬ್ಬಣ’ ‘ಕನರ್ಾಟಕ ಸುಗಮ ಸಂಗೀತ ಪರಿಷತ್’ ಹಾಗೂ ‘ಮೈಸೂರು ದಸರಾ’ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದಶರ್ಿಸಿದ ಖ್ಯಾತಿ ಪಡೆದಿದ್ದಾರೆ. ಬೀದರನಿಂದ ಮೈಸೂರು ವರೆಗಿನ ಹಲವಾರು ಕಾರ್ಯಕ್ರಮಗಳಲ್ಲಿ ನಾಡನ್ನು ಸುತ್ತಿದ ಅದ್ಭುತ ಕಲಾಕುಸುಮ ಎಂಬುದರಲ್ಲಿ ಎರಡು ಮಾತಿಲ್ಲ.
ಯಾವುದೇ ಜಾತ್ರೆ, ಮೆರವಣಿಗೆ, ಉತ್ಸವ, ಮೇಳಗಳಿಗೆ ಹಗಲುವೇಷ ಕಲಾವಿದರನ್ನು ಬೀದಿಕಲಾವಿದರಂತೆ ಬಳಸಿಕೊಳ್ಳುತ್ತಿರುವ ದುರಂತವನ್ನು ನೆನೆದು ನಮ್ಮಂತಹ ಕಲಾವಿದರಿಗೆ ಈ ಕಷ್ಟ ಬಂತಲ್ಲ ಎಂದು ಮರುಕ ಪಡುತ್ತಾರೆ. ಬಹುರೂಪಿಯ ಕಲೆಯನ್ನು ವೇದಿಕೆಯ ಕಲೆಯನ್ನಾಗಿಸದೆ ಕಲೆ ಮತ್ತು ಕಲಾವಿದರನ್ನು ಮೂಲೆಗುಂಪಾಗಿಸುವ ಈ ಆಧುನಿಕ ವಿದ್ಯಾಮಾನಗಳಿಂದಾಗಿ ಕಲೆಯನ್ನು ಪ್ರೋತ್ಸಾಹಿಸಲಾಗುತ್ತಿಲ್ಲ. ಸಕರ್ಾರದ ಯಾವುದೇ ತರಹದ ಸೌಲಭ್ಯಗಳನ್ನು ಪಡೆಯದೆ ಬದುಕುತ್ತಿರುವ, ಹಾಗು ಮೂಲ ಸೌಲಭ್ಯಗಳಿಂದ ವಂಚಿತವಾದ ಇಂತಹ ಕಲಾವಿದರನ್ನು ಈ ನಾಡು ಗೌರವಿಸಬೇಕಾದ ಸಂದರ್ಭ ಅಂತ ಅನಿಸುತ್ತದೆ.

‍ಲೇಖಕರು avadhi-sandhyarani

September 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

… ಆಮೆನ್! 

… ಆಮೆನ್! 

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: