ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ

ಮತ್ತೆ ಮಳೆ ಹೊಯ್ಯುತಿದೆ…

ಜಯಲಕ್ಷ್ಮಿ ಪಾಟೀಲ್


ಮೂಕವಾಗ ಬಯಸಿದಾಗಲೆಲ್ಲ
ಗುದ್ದಿಕೊಂಡು ಬರುವ ಮಾತುಗಳು
ಥೇಟ್ ಮುಚ್ಚಳ ಬಿಗಿದ ಪಾತ್ರೆ
ಯಲ್ಲಿನ ಹಾಲು
ಬುಸ ಬುಸ ಉಕ್ಕಿದಂತೆ….
ಹಾಲೂ, ಕುದಿಯೂ ಎರಡೂ
ನೆಲಕ್ಕೆ ಚೆಲ್ಲಿ ವ್ಯರ್ಥ…..
*
ನನ್ನ ಶವವನ್ನು
ಹೊತ್ತು ಸಾಗುತ್ತಿದ್ದೇನೆ
ಸವಿಸಬೇಕಾದ ಹಾದಿ
ಅದೆಷ್ಟು ದೂರವೋ
ಶವದ ವಾಸನೆಗೆ ಈಗ
ಹತ್ತಿರದವರೆಲ್ಲ ನಡೆವ
ದಾರಿಗಿಂತ ದೂರ
ಸೋತ ಹೆಗಲು ಉಸುಗುಡುತ್ತಿದೆ
ಈ ಹೆಣ ಬಲು ಭಾರ…
*
ನಿಂತು ನೋಡುತ್ತಿರುವೆ
ನನ್ನ ಶವಯಾತ್ರೆಯನ್ನು
ಮೌನ ಧರಿಸಿ
ಮೆರವಣಿಗೆಯಲ್ಲಿ ಸಾಗುತ್ತಿರುವ
ಅವರ ಮನದಲ್ಲಿ
ಮಂಗಳವಾದ್ಯಗಳು !!

‍ಲೇಖಕರು G

4 January, 2013

10 Comments

  1. Badarinath Palavalli

    ಅತ್ಯುತ್ತಮ ಭಾಷಾ ಬಳಕೆಯ ಉದಾಹರಣೆ ಇಲ್ಲಿನ ಸಾಲುಗಳು.

  2. vinaya

    ಅಬ್ಬ ಶವ ಸಂಸ್ಕಾರವಾಯಿತು ಈಗ 🙂

  3. chalam

    ನೋವೆ ಅದ್ಬುತ ಕವನವಾಗುವ ಸೋಜಿಗದೊಂದಿಗೆ ಧನ್ಯವಾದಗಳು.

  4. Gopaal Wajapeyi

    ಮತ್ತೆ ಮಳೆ ಹೊಯ್ಯುತಿದೆ… ಎಲ್ಲೆಲ್ಲೊ ಒಯ್ಯುತಿದೆ…
    ಜಯಕ್ಕಾ, ಇಂಥ ಕಾವ್ಯದ ಮಳೆಯನ್ನು ನೀವು ಎಷ್ಟು ಸುರಿಸಿದರೂ ನಮಗೆ ಮತ್ತೆ ಮತ್ತೆ ಬೇಕು…

  5. samyuktha

    tumba ishtavaytu!

  6. umesh desai

    madam, sixer hodadeeri

  7. sunil rao

    fabulous
    ಸೋತ ಹೆಗಲು ಉಸುಗುಡುತ್ತಿದೆ
    ಈ ಹೆಣ ಬಲು ಭಾರ…
    these lines are enough to articulate ur emotions

  8. Ahalya Ballal

    ಸ್ಫುಟ. ಸ್ಫಟಿಕ. ಸ್ಫೋಟಕ.

  9. ಆಸು ಹೆಗ್ಡೆ

    ಜೀವನದ ಕೆಲವು ಘಟ್ಟಗಳಲ್ಲೆಮಗೆ ಭಾಸವಾಗುವುದೇ ಹೀಗೆ
    ನಮ್ಮ ಜೀವನವೇ ಇಲ್ಲೆಮಗೆ ಭಾರವಾಗಿಬಿಡುತ್ತಿರುವ ಹಾಗೆ
    ನಮಗೇನು ಬೇಕು, ಏತಕ್ಕಾಗಿ ನಮ್ಮೀ ಬಾಳು ಅನ್ನುವುದು
    ನಮ್ಮ ಅರಿವಿನಿಂದ ದೂರವಾದಾಗ ವಿರಕ್ತ ಭಾವ ಕಾಡುವುದು
    ಎಲ್ಲವೂ ತಾತ್ಕಾಲಿಕ ನಮ್ಮ ಭಾವನೆಯೂ ಅಲ್ಲ ಶಾಶ್ವತವಂತೆ
    ಇಂದು ಶವವಾದರೆ ನಾಳೆ ಪುಟಿಯುತ್ತೇವೆ ಹಸುಗರುವಿನಂಥೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading