ಮೂಲ – ಅಮ್ಮಂಗಿ ವೇಣುಗೋಪಾಲ್
ಕನ್ನಡಕ್ಕೆ – ರೋಹಿಣಿ ಸತ್ಯ
ಆಶಾ ಭೋಸ್ಲೆ
ಆಶಾಜೀ !
ಸುಮಧುರ ಗೀತೆಗಳ ನಮಗೆ ಬಿಟ್ಟು
ಅಮರ ಸಂಗೀತ ಲೋಕಗಳಿಗೆ ಹೊರಟುಹೋಗಿದಿರ
ಇಲ್ಲಿ ಉದಯಾಸ್ತಮಾನಗಳಲ್ಲಿ
ಗಾಳಿಯ ಅಲೆಗಳು ಅಶಾಂತಿಯಿಂದ ನಿಮ್ಮ ವಿಷಾದ ಗೀತೆಗಳನ್ನು ಕನವರಿಸುತ್ತಿವೆ
ಅಭೀನ ಜಾವೋ ಚೋಡ್ ಕರ್ ಹಾಡು ಒಂದು ವ್ಯಂಗ್ಯ ಅಲಗಿನ ಇರಿತ
ಸಂಗೀತ ಉದ್ಯಾನವನದಲ್ಲಿ ಎಂಟು ದಶಾಬ್ದಗಳಿಂದ ನೀವು ಹರಡಿದ ಹಾಡಿನ ಸಾಲುಗಳು
ಬಳ್ಳಿಗಳಾಗಿ ಸಾಗಿ ಹೃದಯ ತಂತಿಗಳನ್ನು ಮೀಟಿವೆ
“ಧಮ್ ಮಾರೋ ಧಮ್” ಹಾಡಿನಲ್ಲಿ ನಿಮ್ಮೊಂದಿಗೆ ದನಿ ಬೆರೆಸಿದ ಶಿಧಿಲ ರಾತ್ರಿಗಳ ಕೋರಸ್ ಅನ್ನು ಕೇಳಿದ್ದೇವೆ
ಕಣ್ಣೀರಿನಿಂದ ತೆಗೆದ ಗಂಧದಂತೆ
ಬೆಳದಿಂಗಳಲ್ಲಿ ಹೂವಿನ ದೋಣಿಯಂತೆ
ಹಿತಮಿತ ಬಿಸಿ ತಂಗಾಳಿಗಳ ಬೆಸುಗೆಯಂತೆ
ದೇವಳದ ಗಂಟೆಯಂತೆ ಧಗಧಗಿಸುವ ಉರಿಯಂತೆ
ನಿಮ್ಮ ಹಾಡು ನುಡಿಸಿದ ಸಂದರ್ಭಗಳು ಸಾವಿರಾರು
ನಿಮ್ಮನ್ನು ಕೇಳುತ್ತ ಬೆಳೆದ ನಮಗೆ
ನಿಮ್ಮ ಹಾಡಿನಲ್ಲಿನ ಉಸಿರು
ಸಪ್ತಸ್ವರಗಳಲ್ಲಿ ಸೇರಿಹೋಗಿದೆಯೆನ್ನುವ ವಿಷಯ ನಂಬಲಾಗುತ್ತಿಲ್ಲ
ಒಮ್ಮೊಮ್ಮೆ ಸತ್ಯವೂ ಸಹ ಸಮಯಕ್ಕೆ ಸವಾಲು ಹಾಕುತ್ತಾ?






0 Comments