ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಣತೆ…

ಸರೋಜ ಪ್ರಶಾಂತಸ್ವಾಮಿ

ಹಚ್ಚುವ ಹಣತೆಯದು ಕಿಚ್ಚಿಗಲ್ಲ
ಮೆಚ್ಚುಗೆಗೂ ಅಲ್ಲ…
ಕದಲಿದ ಮನಗಳ ಬೆಳಕಲಿ
ಒಂದುಗೂಡಿಸಿರೆಲ್ಲ…

ತೈಲವ ಕುಡಿದು,
ಬತ್ತಿಯ ಸೆಳೆದು
ಬೆಳಗಿದೆ ಜ್ಯೋತಿ
ಬದುಕುವ ರೀತಿ…

ಆತ್ಮವು ಹಡೆದು,
ದೇಹವ ನೊಣೆದು
ಬೆಳೆಯುವ ಕಾಂತಿ
ಜೀವನ್ಮುಕ್ತಿ…

ಸಂಧಿಸೋ ಅಂಧತೆಯ
ಹಿಂದಕೆ ಎಳೆದು,
ಬಂಧಿಸು ಬದುಕನು
ದೀಪವ ಹಿಡಿದು…
ಓ ಹಣತೆಯೇ‌….
ಜೀವ ಜ್ಯೋತಿಯ ಬೆಳಗು….

‍ಲೇಖಕರು Avadhi

24 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading