ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಠಮಾರಿ ಮನಸ್ಸು ಮಾತೇ ಕೇಳುತ್ತಿಲ್ಲ..

ಗೀರ್ವಾಣಿ

ಹೊಸ ಪೆನ್ನು ತಂದಿದ್ದೇನೆ
ಹಳೆ ಭಾವಗಳನ್ನು ತಿದ್ದಲು
ಹಠಮಾರಿ ಮನಸ್ಸು ಮಾತೇ ಕೇಳುತ್ತಿಲ್ಲ
ಬರೆದಷ್ಟೂ ಮುಗಿಯದು ಈ ಹಳವಂಡ !

ಹಳೆಯ ಗಾಯ ಮಾಯುತ್ತಿಲ್ಲ
ಯಾವ ಮುಲಾಮಿಗೂ
ಕೆರೆದಷ್ಟೂ ಇನ್ನಷ್ಟು
ಕೆರೆಯಬೇಕೆಂಬ ಸುಖ

pencil hands

ಬೆರಗಾದೆ ಒಳ ಗೋಡೆಯ ನೋಟಕ್ಕೆ
ಕೆಲವು ಮಾಸಿದ ಬರಹಗಳು
ಕೆಲವು ಬಣ್ಣದ ಬರಹ

ಅವು ಬರೀ ಅಕ್ಷರಗಳಲ್ಲ
ಇರಿದು, ತಿವಿದು ಎತ್ತಿ ಬಿಸಾಕಿದ
ನನ್ನದೇ ಗೀಟುಗಳು !
ಇದ್ದಷ್ಟು ದಿನವೂ ಬಣ್ಣ ಬದಲಿಸುವ
ಗೋಸುಂಬೆಯಂಥವು .

ನಾನು ಬರೆದೇ ಬರೆದೆ
ತಿದ್ದಿ ಬರೆದೆ,
ಹಳೆತನ್ನು ಅಳಿಸಿ ಬರೆದೆ
ಬರೆದಷ್ಟೂ ಕಲಸು ಮೇಲೋಗರ
ವರ್ಷಗಳಾಯಿತೀಗ

ಪಾಪ ! ಹೊಸ ಪೆನ್ನಿಗೆಲ್ಲಿ ಗೊತ್ತು
ತಾನಾಗಲೇ ಹಳೆತಾದೆನೆಂದು ?

‍ಲೇಖಕರು Admin

7 June, 2016

3 Comments

  1. Kusuma Patel

    Nimma Penn haleyadaagide. Nannadu kale de hoodie. Tumba chennagide.

  2. Vihi wadawadagi

    Nanna pennu ello ittu marete hogiddene bekantale …pennu kevala pannallavidu manasina kanasugala goodu hokku baresuva koosu ,pennina mele manasu manasina mele nannade munisu,bekende maretu bitte etti itte manasina pennu ,eega Ee kshana kondutaralu penny kuda illa pennu illa

  3. ನಾಗರಾಜ್ ಹರಪನಹಳ್ಳಿ

    ತುಂಬಾ ಅರ್ಥ ವ್ಯಾಪ್ತಿ ಹಿಗ್ಗಿಸುವ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading