ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗಲುಗನಸಿನ ಇರುಳ ಪದ್ಯ

ರಜನಿ ಗರುಡ  

 

ನಮ್ಮಿಬ್ಬರ ಸಹಪಯಣ

ಶುರುವಾಗಿದ್ದು

ಆ ರಸ್ತೆ ತಿರುವಿನಲ್ಲೆಲ್ಲೊ

ಈ ತಿರುವಿಗೆ ಬಂದು ನೋಡಿದರೂ

ಅಷ್ಟೇ ಅಂತರದ ಪಯಣ

she-summer-370x315

ಹರಿವ ನದಿಯೊಂದು

ಕೈಕಾಲು ಮೂಡದೆ

ಅಲ್ಲೇ ಗಕ್ಕನೆ ನಿಂತಿದೆ

ನಿನ್ನ ಪ್ರೀತಿಯದೆಲ್ಲವೂ

ಈ ಊರಲ್ಲಿ ಕೊನರದೆ

ಹಾಗೇ ಉಳಿದಿದೆ

 

ಸುರಿದಷ್ಟೂ ನೀರನ್ನು

ಹೀರುವ ನೆಲದಂತೆ

ಇದ್ದೆವಲ್ಲಾ….

ಇಬ್ಬರೂ ಸೇರಿ

ಹಾರಿಸಿದ ಗಾಳಿಪಟಕೆ

ದಾರದ ಹಂಗಿಲ್ಲ ಈಗ

 

ಕಂಡಾಗ ನಮ್ಮಿಬ್ಬರನು

ಕಳೆದುಕೊಳ್ಳುವ ನಾವು

ಕಾಣುವ ಹಂಬಲದಲೆ

ದಿನವ ದೂಡೋಣ

 

ನೀಬಂದು ಹೋಗುವಾಗ

ಅದುರಿದ್ದ ಕುಡಿದೀಪದ ಬಳಿ

ಪುರಾವೆ ಕೇಳು

ಈ ದೀಪಾವಳಿಗೂ

ನಿಂತಿಲ್ಲ ಅದು

 

ಒತ್ತರಿಸಿ ಬರುವ ನೆನಪಿಗೆ

ಗಂಟಲುಕಟ್ಟಿ ನೀರಿಳಿಯುತ್ತಿಲ್ಲ

ಹೊತ್ತುಹೊತ್ತಿನ ಬೇಕು

ಬೇಡಗಳ ಲೆಕ್ಕ ತಿಳಿಯಲೇ ಇಲ್ಲ

 

ಹೀರಲಿಟ್ಟ ಮದ್ಯದ

ಬಟ್ಟಲಿನಂತೆ

ನಾನು ತುಳುಕಿದ್ದು ಸುಳ್ಳಲ್ಲ

ಇಣುಕಿದರೆ ಅದರಾಳದಲ್ಲಿ

ನನ್ನದೇ ಹಗಲ ಬಿಂಬ

 

ಇತ್ತೀಚೆಗೆ ಮನೆಯಮುಂದೆ

ಅಂಬುಲೆನ್ಸ್ ಓಡಾಟ ಹೆಚ್ಚಾಗಿದೆ

‍ಲೇಖಕರು Admin

27 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading