ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋತ ಮನಸುಗಳ ಸಂತೈಸುತ…

ಒಲವೆಂದರೆ ಕನ್ನಡಿ ಮೇಲಿನ ಚಿತ್ರ

ಬಿದಲೋಟಿ ರಂಗನಾಥ್

ಒಡಲ ಕನಸು
ಆತ್ಮಸ್ಥೈರ್ಯದ ತುಣುಕು,
ಗೋಜಲು ಬಿಡಿಸುವ
ಕರದ ಮಲ್ಲಿಗೆಯಲಿ,
ಸಾವಿರ ಬರಹಗಳ ರೂಪಿಸುವ ಹೆಜ್ಜೆ,

ನಡೆವ ದಾರಿ ಸವೆಯುವಾಗ
ಇನ್ನೂ ನಡೆವ ಹುಮ್ಮಸ್ಸು
ಗುರಿ ನೋಡಿ ಕಣ್ಣಳತೆಗೂ ಮೀರಿ ನೋಡುವ
ಮನೆ ಬೆಳಕು
ಮೃದು ಮಾತಿನ ಸೆಳೆತ
ಬುದ್ಧಿಯಲಿ ನಾದಿದ ಮನಸಲಿ
ಘಮಿಸುವ ಭಾವದುವಿನ ನಡೆತ…

ಕಲೆತ ಮನಸುಗಳ
ಅಂಗೈಕನ್ನಡಿಯಲಿ ನೋಡುವ ಚಾಲಾಕಿ
ಮೊಗದ ದಾರಿ ಮೇಲೆ ಗೆಲುವಿನ ಗೆರೆಗಳು
ನಗುತ ನಲಿಯುತ್ತಿವೆ
ಸೋತ ಮನಸುಗಳ ಸಂತೈಸುತ.

ಕಾಳುಗಳ ಕೂಡಿಟ್ಟು
ಮಣ್ಣಿನಲಿ ಬಿತ್ತು
ರಾಶಿ ಮಾಡುವ ಕನಸು
ಗರಿಗೆದರುತ್ತ ಬದುಕಿನ ದಾರಿಯ ಮೇಲೆ ನಡೆವ ನಿನ್ನೂರಿನ ಬೆಡಗು
ರವಿತೇಜಸ್ಸಿನ ನಿತ್ಯ ಬೆಳಗು
ಒಲವೆಂದರೆ ಕನ್ನಡಿಯ ಮೇಲಿನ ಚಿತ್ರ

‍ಲೇಖಕರು avadhi

26 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading