ಸೆನ್ಸಾರ್ ಮಂಡಳಿಗೆ ಕಲ್ಲು ಹೊಡೆಯುವ ಮುಂಚೆ..

ಸೆನ್ಸಾರ್ ಮಂಡಳಿಗೆ ಸೆನ್ಸಿಬಿಲಿಟಿ ಇಲ್ವೆ..?

c s dvarakanath

ಸಿ ಎಸ್ ದ್ವಾರಕಾನಾಥ್

“ಕಿರುಗೂರಿನ ಗಯ್ಯಾಳಿಗಳು” ಕತೆಯನ್ನು ನಮಗೆ ಬೇಸರವಾದಾಗೆಲ್ಲ ಓದಿ ಮನಸಾರೆ ನಕ್ಕು ಹಗುರವಾಗುತಿದ್ದೆವು..

ಇಂದು ಸುಮನಾ ಕಿತ್ತೂರ್ ನಿರ್ದೇಶಿಸಿ ಗೆಳೆಯ ಅಗ್ನಿ ಶ್ರೀಧರ್ ಸ್ರ್ಕಿಪ್ಟ್ ಬರೆದ ಈ ಚಿತ್ರವನ್ನು ನೋಡಿದೆ..

kiragooru2ತೇಜಸ್ವಿಯವರ ಮೂಲಕ್ಕೆ ಎಲ್ಲೂ ಧಕ್ಕೆ ಬಾರದಂತೆ ಸಿನಿಮಾ ಮೂಡಿಬಂದಿದೆ. ಆದರೆ ಒಳ್ಳೆ ಡೈಲಾಗ್ ಬರುವ ಸಂದರ್ಭದಲ್ಲಿ mute ಮಾಡುವುದರ ಮೂಲಕ ಇಡೀ ಚಿತ್ರವನ್ನೇ ನಾಶಪಡಿಸಲು ಹೊರಟಂತಿದೆ!

ನನಗೆ ಸಿಟ್ಟು ಬಂದು “ಯಾಕ್ರಿ.. ಒಳ್ಳೆ ಸಿನಿಮಾನ ಈ ರೀತಿ ಕೊಲ್ತೀರಿ..” ಅಂದೆ.

“ಇಲ್ಲ ಸಾರ್ ಇದು ಸೆನ್ಸಾರ್ ನವರ ಕೆಲಸ..” ಅಂದರು. ನನಗೆಮೈಯೆಲ್ಲ ಉರಿದುಹೋಯಿತು.

ಈ ಸೆನ್ಸಾರ್ ಬೋರ್ಡ್ ನವರಿಗೆ ಕೊಂಚವಾದರೂ ಸೆನ್ಸಿಬಿಲಿಟಿ ಇದ್ದಿದ್ದರೆ ಇಷ್ಟು ಇನ್ಸೆಸಿಬಲ್ ಆಗಿ ಡೈಲಾಗ್ ಗಳನ್ನು mute ಮಾಡ್ತಿರಲಿಲ್ಲ.. ತೇಜಸ್ವಿ,ಲಂಕೇಶ್,ಆಲನಹಳ್ಳಿ,ಬೆಸಗರಹಳ್ಳಿ ಭಾಷೆಯಲ್ಲಿ ಇಂಗು ವಾಸನೆ ಇರಬೇಕೆಂದು ನಿರೀಕ್ಷಿಸುವ ಇವರಿಗೆ ಇಲ್ಲಿನ ಬೈಗುಳ,ಒರಟುತನಗಳು ಇಲ್ಲಿನ ತಳಸಮುದಾಯಗಳ ಸಹಜ ಪ್ರಕ್ರಿಯೆಗಳು ಎಂಬುದು ಅರ್ಥವಾಗಬೇಕಾದರೆ ಕನ್ನಡ ಸಾಹಿತ್ಯದ ಓನಾಮಗಳನ್ನಾದರೂ ಅರಿತಿರಬೇಕು.

ಕಿರುಗೂರಿನ ಜೀವಾಳವೇ ಅದರ ಬಾಷೆ.. ಅದನ್ನೇ ಇಲ್ಲವಾಗಿಸಿದರೆ ಕಿರಗೂರು ಜೀವರಹಿತವಾಗುತ್ತದೆ.. ಆದ್ದರಿಂದ ಕನ್ನಡಿಗರು ಸೆನ್ಸಾರ್ ಮಂಡಳಿಗೆ ಕಲ್ಲು ಹೊಡೆಯುವ ಮುಂಚೆ ಕಿರಗೂರಿನ ಗಯ್ಯಾಳಿಗಳಿಗೆ ಅವರ ಭಾಷೆಯನ್ನು ದಕ್ಕಿಸುವುದು ಆರೋಗ್ಯಕರ..

amith mrugavadhe Amith Mrugavadhe

ಸೆನ್ಸಾರ್ ಮಂಡಳಿ ಹೆಸರನ್ನು ‘ಮ್ಯೂಟ್ ಮಂಡಳಿ’ ಎಂದು ಬದಲಿಸುವುದೊಳಿತು.
ಸಿನಿಮಾಗೆ ಪ್ರಮಾಣಪತ್ರ ಕೊಡುವ ಕೆಲಸಕ್ಕಷ್ಟೇ ಅದು ಸೀಮಿತವಾಗಬೇಕೆ ಹೊರತು, ಸೃಜನಶೀಲ ಕಲೆಗೆ ಮನಬಂದಂತೆ ಕತ್ತರಿ ಹಾಕಿಸುವ ಮೂರ್ಖತನದ ಕೆಲಸಕ್ಕಲ್ಲ.

‍ಲೇಖಕರು admin

March 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Manjula gh

    ನಿಜ ನೈಜತೆಯ ಭಾಷೆ ಹೋಗಿ ಶಿಷ್ಟ ಕನ್ನಡ ಆಗುತ್ತೆ ,ಸರ್ ಕಥೆಯ ಜೀವಾಳವೇ ಅದರ ಭಾಷೆ ಕಾವ್ಯವಾಗಲಿ, ಕೃತಿಯಾಗಲಿ,

    ಪ್ರತಿಕ್ರಿಯೆ
  2. ಟಿ.ಕೆ.ಗಂಗಾಧರ ಪತ್ತಾರ

    ಸೂಪರ್ ಡೂಪರ್, ವಿಚಿತ್ರ ನಾಮಧೇಯದ “ಸ್ಟಾರ್”ಗಳ ಡಬಲ್ ಮೀನಿಂಗ್ ಸಂಭಾಷಣೆಗಳನ್ನು, ಇತ್ತೀಚಿನ ಹಲವು ಚಿತ್ರಗಳಲ್ಲಿ ಬರುವ ಶ್ರುತಿದುಷ್ಟ, ಶ್ರುತಿಕಷ್ಟ ವಿಚಿತ್ರ ಮಾತುಗಳನ್ನು ಅಸಹ್ಯಕ್ಕಿಂತಲೂ ಅತ್ಯಂತ ಅಸಹ್ಯವಾದ ಯಾವ ಸೆಕ್ಸ್ ಫಿಲ್ಮ್ ದೃಶ್ಶಗಳಿಗೂ ಕಡಿಮೆಯಲ್ಲದ ವಿಚಿತ್ರಗೀತೆಗಳನ್ನು ಕಟ್ ಮಾಡದ ಸೆನ್ಸಾರ್ ಮಂಡಳಿ (‘ಮ್ಯೂಟ್ ಮಂಡಳಿ!’) ಸೃಜನಶೀಲ ಕಲಾತ್ಮಕ ಸಂಭಾಷಣೆಗಳನ್ನು ಮನಬಂದಂತೆ ಕತ್ತರಿ ಪ್ರಯೋಗಿಸುವುದು ಯಾವ ಪುರುಷಾರ್ಥಕ್ಕೋ?. ಹಿಂದೆ ಚಿತ್ರ ಶೀರ್ಷಿಕೆಗಳಲ್ಲಿ ಒಂದೋ ಎರಡೋ ಆಂಗ್ಲ ಅಕ್ಷರಗಳಿದ್ದರೆ ಸೆನ್ಸಾರ್ ಮಂಡಳಿ ಅದನ್ನು ಆಕ್ಷೇಪಿಸುತ್ತಿತ್ತು. ಈಗ ಸಂಪೂರ್ಣ ಆಂಗ್ಲಮಯ ಶೀರ್ಷಿಕೆಯಿದ್ದರೂ ಸೆನ್ಸಾರ್ ಚಕಾರವೆತ್ತದೇ “ಸರ್ಟಿಫೈ” ಮಾಡುತ್ತದೆ. ಸೆನ್ಸಾರ್ ಧೋರಣೆಯೇ ಬದಲಾಗಿದೆಯೇ? ಅಥವಾ ಅದನ್ನು ಎದುರಿಸಲಾಗದ ಹೆದರಿಕೆಯೇ?

    ಪ್ರತಿಕ್ರಿಯೆ
  3. Gubbachchi Sathish

    ಕಲ್ಲಿನ ಜೊತೆ ಕೊಳೆತ ಟಮ್ಯಾಟೋ, ಮೊಟ್ಟೆ ತೆಗೆದುಕೊಂಡು ಹೋಗ್ಬೇಕು. ಒಳ್ಳೋಳ್ಳೆ ಡೈಲಾಗ್ ಮಿಸ್ ಆದ್ವು. ಸೆನ್ಸಾರ್ ಮಿಸ್ಟೇಕ್ ನಿಂದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: