ಸೂರ್ಯ ಕೀರ್ತಿ ಅನುವಾದಿತ ಕವಿತೆ – ತೊಟ್ಟಿಲು ಮತ್ತು ಸಮಾಧಿ…

ಮೂಲ (ಮಲಯಾಳಂ) : ಆದಿಲ್ ಮದತಿಲ್
ಕನ್ನಡಕ್ಕೆ : ಸೂರ್ಯ ಕೀರ್ತಿ 

ಆದಿಲ್ ಮದತಿಲ್ ನ ಯುವ ಕವಿ. ಇವರ ಮೊದಲ ಕವನ ಸಂಕಲನ  ‘ವಲಿಯಪಲ್ಲಿ ರಸ್ತೆ'(ದೊಡ್ಡ ಮಸೀದಿ ರಸ್ತೆ)ಆಧ್ಯಾತ್ಮಿಕತೆಯ ಭೂಪ್ರದೇಶಗಳನ್ನು ಅನ್ವೇಷಿಸುವಾಗ ಬಾಲ್ಯದ ಮೂಲಕ ಇವರ ಅನುಭವಗಳನ್ನು ಚಿತ್ರಿಸುತ್ತದೆ, ಈ ಸಂಕಲನದಲ್ಲಿ ಸ್ತ್ರೀತ್ವ, ಪ್ರಕೃತಿ ಮತ್ತು ಸಾಂಸ್ಕೃತಿಕ ಮಾತೃತ್ವಗಳು ಜೊತೆಗೆ ಮುಸ್ಲಿಂ ಜೀವನದ ಬಗ್ಗೆ ಬರೆದ ಹೊಸ ರೀತಿಯ  ಕೇರಳ ಕವನಗಳ ಸಂಕಲನವಾಗಿದೆ. ಇವರ ಹೊಸ ಸಂಕಲನವಾದ  ಬಾಲನ್ (ದಿ ಹೆವೆನ್ಲಿ ಬಾಯ್) ಶೀಘ್ರದಲ್ಲೇ ಹೊರಬರಲಿದೆ.

1. ತೊಟ್ಟಿಲು ಮತ್ತು ಸಮಾಧಿ

ಅವಳ ತಾಯಿ ಮತ್ತು ತಂದೆ ಸತ್ತ ನಂತರವೂ ನನ್ನ ಅಜ್ಜ ಅವಳನ್ನು ತೊರೆದ ನಂತರವೂ,
ನನ್ನ ಅಜ್ಜಿ ಎಂದಿಗೂ ಸಾವಿಗಾಗಿ ಪ್ರಾರ್ಥಿಸಲಿಲ್ಲ.

ಅಜ್ಜಿ ಚಿಕ್ಕಮ್ಮನ ನಾಲ್ಕು ಮಕ್ಕಳನ್ನು ಜೊತೆಗೆ ,
ನಾವು ಇಬ್ಬರು, ನಾವು ಹುಟ್ಟಿದ ತಕ್ಷಣ ನಮ್ಮನ್ನು ಬೆಳೆಸಿದರು
ಮತ್ತು ಈಗ ಅವಳು ತನ್ನ ಮೊಮ್ಮಕ್ಕಳ ಮಕ್ಕಳನ್ನು ತೊಟ್ಟಿಲಿಗೆ ಹಾಕುತ್ತಾಳೆ.

ಅವಳು ದೀರ್ಘಾಯುಷ್ಯಕ್ಕಾಗಿ ತನ್ನ ದೈನಂದಿನ ಪ್ರಾರ್ಥನೆಗಳನ್ನು ಮಾಡುತ್ತಾಳೆ,
ಕುರ್ಚಿಯ ಮೇಲೆ ಕುಳಿತು,
ಒಮ್ಮೆ ನಾನು ಅವಳನ್ನು ತಮಾಷೆಯಾಗಿ ಕೇಳಿದೆ;
ಅಜ್ಜನನ್ನು ಭೇಟಿಯಾಗಲು ಹೋಗಬೇಕೆಂದು ನಿಮಗೆ ಎಂದಾದರೂ ಅನಿಸುವುದಿಲ್ಲವೇ? ಅವಳು ತಕ್ಷಣ ಪ್ರತಿಯಾಗಿ ನನ್ನನ್ನು ಕೇಳಿದಳು
ಭಾರವಾದ ಮುಖದಿಂದ,
ನಾನು ಸಮಾಧಿಯಲ್ಲಿ ಸಿಲುಕಿಕೊಂಡರೆ ? ನೀನು ಏನು ಮಾಡುವೆ? ಎಂದಳು.

2. ಪರ್ಸ್

ಅವರು ಕೊಡುಗೆಗಳನ್ನು ಕೊಡಲು
ಅರೇಬಿಕ್ ಕಾಲೇಜ್ ಅನಾಥಾಶ್ರಮದಿಂದ ಬಂದಾಗ
ಮಗು ಧಾವಿಸಿ ನೋಡುತ್ತದೆ.
ಆಶ್ರಮದ
ಡೋರ್ ಬೆಲ್ ಕೇಳಿದ ಮೇಲೆ ತನ್ನ ತಾಯಿಯನ್ನು ಹುಡುಕುತ್ತಿರುತ್ತದೆ.
ಯಾರಾದರೂ 10 ರೂಪಾಯಿ ಕೊಟ್ಟಾಗ
ತಾಯಿಯ ಸ್ವರ್ಗಕ್ಕೆ
ಟಿಕೆಟ್‌ಗಳನ್ನು ಸಂಗ್ರಹಿಸಿ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತದೆ.

3. ಪ್ರೀತಿ

ನಾನು ಬೆಕ್ಕುಗಳು ಅಥವಾ ನಾಯಿಗಳನ್ನು ಪ್ರೀತಿಸುವುದಿಲ್ಲ,
ಅವರು ಪ್ರೀತಿಯನ್ನು ತೋರಿಸಲು ಬಂದಾಗ
ನಾನು ಅವುಗಳನ್ನು ಸನ್ನೆಗಳ ಮೂಲಕ ಓಡಿಸುತ್ತೇನೆ
ಆದ್ರೂ ಅವುಗಳ ಬಗ್ಗೆ ನನಗಿಷ್ಟವಿಲ್ಲ.

ನಾನು ಪಕ್ಷಿಗಳು ಮತ್ತು ಕೋಳಿಗಳನ್ನು ಪ್ರೀತಿಸುತ್ತೇನೆ,
ನಾನು ಅವುಗಳ ಬಳಿಗೆ ಹೋದಾಗ
ಹೂಂ ಹಾಕುತ್ತಾ ಶಿಳ್ಳೆ ಹೊಡೆಯುತ್ತಾ,
ಅವುಗಳು ಮತ್ತಷ್ಟು ದೂರ ಸರಿಯುತ್ತವೆ
ನನ್ನ ಕಡೆಗೆ ತಿರುಗು ನೋಡುವುದಿಲ್ಲ
ಅವರಿಗೂ ನಾನು ಇಷ್ಟವಿಲ್ಲ.

4. ಪ್ರಾರ್ಥನೆ

ಬಾಲ್ಯದಲ್ಲಿ ಪ್ರಾರ್ಥಿಸುತ್ತಿದ್ದೆ,
ನನ್ನ ನಂತರವೇ ತಾಯಿ ಮತ್ತು ತಂದೆ ಸಾಯಬೇಕು.
ನಾನು ಇಲ್ಲಿ ಇಲ್ಲದಿರುವಾಗ,
ಯಾರಾದರೂ ಅವರಿಗಾಗಿ ಪ್ರಾರ್ಥಿಸುವರೇ?

5. ಸ್ವರ್ಗದ ಹುಡುಗ

ನಾನು ಹತ್ತು ವರ್ಷಕ್ಕಿಂತ ಮುಂಚೆಯೇ
ಸಾಯುವಂತೆ ಮಂದ ಧ್ವನಿಯಲ್ಲಿ ಪ್ರಾರ್ಥಿಸಿದ ನಂತರವೂ
ಮಕ್ಕಳ ಹಂಬಲಕ್ಕೆ ತ್ವರಿತ ಫಲಿತಾಂಶವನ್ನು ನೀಡುವ ಅಲ್ಲಾ,
ನನ್ನನ್ನು ತ್ಯಜಿಸಿದ!

ಸ್ವರ್ಗೀಯ ದೇವತೆಗಳು ನನ್ನ ಆತ್ಮವನ್ನು
ಸ್ವರ್ಗದ ಉದ್ಯಾನಕ್ಕೆ ಕೊಂಡೊಯ್ಯಲು ಇಳಿದರು.
ಅಲ್ಲಿ ಹಾಲಿನ ನದಿಯ ಸುತ್ತಲೂ ತಾಯಿ ಮತ್ತು ತಂದೆ ಸೇರುವುದನ್ನು ಕಾಯುತ್ತಿದೆ.

ನಾನು ಎಂದಿಗೂ ಸ್ವರ್ಗೀಯ ಹುಡುಗನಾಗಲಿಲ್ಲ.
ಅಲ್ಲಾಹನ ಮಡಿಲಲ್ಲಿ ಲಾಲಿ ಹಾಡುಗಳನ್ನು ಕೇಳದೆ ನಾನು ಎಂದಿಗೂ ನಿದ್ರಿಸುವುದಿಲ್ಲ.

ನಾನು ಈಗ ಶಿಕ್ಷೆಗಾಗಿ ಕಾಯುತ್ತಿರುವವನಾದೆ,
ಆದರೂ,
ನನ್ನ ತಾಯಿಗೆ ನಾನು ಯಾವಾಗಲೂ ಬೆಲ್ಲದ ತುಂಡನ್ನು ಚಪ್ಪರಿಸುವ ಮಗುವಾಗಿಯೇ ಇರುತ್ತೇನೆ.
ಅವಳ ಕಾಲುಗಳ ಕೆಳಗೆ ಸ್ವರ್ಗವನ್ನು ಕಂಡ ಮೇಲೆ
ನಾನು ಯಾವಾಗಲೂ ಸ್ವರ್ಗೀಯ ಹುಡುಗನಾಗಿರುತ್ತೇನೆ.

‍ಲೇಖಕರು Admin

January 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: