ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರ್ಯಕೀರ್ತಿ ಹೊಸ ಕವಿತೆ- ‘ಮಳೆ ಹುಡುಗಿ’

ಸೂರ್ಯಕೀರ್ತಿ

ಸಂಜೆ ನೋಡಲು ಬರುವನೆಂದು
ಬೀಸುವ ಗಾಳಿಗೆ ಹೇಳಿ ಕಳುಹಿಸಿದಳು,
ಮೋಡ ಕವಿಯುತಲೇ ಅವಳ ‌ಆಹ್ವಾನದ
ಗುಡುಗು ಎದೆಯೊಳಗೆ ಬಡಿಯುತಲೇ ಇತ್ತು!

ಆಗಾಗ ಅವಳ ಕಣ್ಣುಗಳು ಆಕಾಶದಲ್ಲಿ
ಮಿಂಚಿ, ಮಿರುಗಿ ಅಸಹನೆಯ ನಡುವೆ
ನನ್ನ‌ ತಬ್ಬುವ‌ ತವಕದಿ ನೋಡುತ್ತಲೇ ಇದ್ದಳು!
ಸಾಗುವ ಕಪ್ಪು ಪರ್ವತದ ಮೋಡಗಳ‌
ಸಂಕೋಲೆಗಳ‌ ನಡುವೆ‌ ಇಣಕುತ್ತಾ
ಕೂಗುತ್ತಾ ಕಣ್ಣೀರಿನ ಸರೋವರವೇ ಆದಳು!

ಅವಳ‌ ತುಟಿಗಳ‌ ಬಿರಿಯೂ‌‌‌ ಒಮ್ಮೊಮ್ಮೆ
ಸಿಡಿಸಿ ತನ್ನ‌ ಹಲ್ಲುದಾಡೆಗಳ‌ ಅಗಲಿಸಿ‌
ನಕ್ಕಳು.
ನೀಳವಾದ ಜಡೆಗಳ‌ ಹೆಣೆದುಕೊಂಡಿರುವ
ಸುಂದರಿಗೆ ಪ್ರಿಯಕರ ಸ್ಪರ್ಶಿಸಿ‌ ನೆವೆದುಕೊಳ್ಳುವ
ಮುಗುಳು!

ಹಣ್ಣಾದ ಎಲೆಗಳ‌ ಮೇಲೆ ಏನೇನೋ‌
ಚಿತ್ರ ವಿಚಿತ್ರಗಳ‌ ಬಿಡಿಸಿ ಪ್ರೇಮಪತ್ರವ
ಬರೆದು‌ ತೋರಿಸುತ್ತಿದ್ದಳು!
ಸಮುದ್ರದ ಕಡಲನೀರಿಗೆ ನನ್ನ‌ ಹೆಸರಿನೊಂದಿಗೆ
ಮುತ್ತಿನ ‌ಕಣಿವೆಗಳ ಜೋಡಿಸಿ
ಬರೆದು ತೇಲಿಸುತ್ತಿದ್ದಳು!

ಈ ಪ್ರೇಮವೆಂದರೆ ಇದೆ;
ಮಳೆಯಾಗುವ ಸಂಜೆ ಎಂದಳು
ತೋಳ‌ ತೆಕ್ಕೆಗಳ‌ ಹಿಡಿದು ತಬ್ಬಿದಳು
ಪ್ರೀತಿ ನೆನಿಯುವ ತನಕ!

‍ಲೇಖಕರು Admin

1 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading