ಸೂರ್ಯಕೀರ್ತಿ ಓದಿದ ‘ಅವಳ ಅರಿವು’

ಸೂರ್ಯಕೀರ್ತಿ

ಸ್ತ್ರೀವಾದವೂ ನಿಸ್ಸಂಶಯವಾಗಿ ಸಮಾಜದಲ್ಲಿ ಮಹಿಳೆಯರ ಶೋಷಣೆ ಹಾಗೂ ನಿಗ್ರಹದ ವಿರುದ್ಧ ಹೋರಾಡುವವರ ಅಸ್ತ್ರವಾಗಿದೆ. ಒಂದು ನಿರ್ದಿಷ್ಟ ಕೃತಿಯು ಪುರುಷರು ಮತ್ತು ಮಹಿಳೆಯರನ್ನು ಹೇಗೆ ಚಿತ್ರಿಸುತ್ತದೆ ಎಂಬುದನ್ನು ನಿರ್ಧರಿಸಲು ಹಾಗೂ ವಿಶ್ಲೇಷಣೆ ಮಾಡಲು ಸ್ತ್ರೀವಾದಿ ತತ್ವಶಾಸ್ತ್ರ ಬಳಕೆಯಲ್ಲಿದೆ. ಅಂತಹ ವಿಮರ್ಶಾತ್ಮಕ ದೃಷ್ಟಿಕೋನದ ಅಸ್ತಿತ್ವವು ಕನ್ನಡ ಸಾಹಿತ್ಯದ ಸ್ವರೂಪವನ್ನು ಇತ್ತೀಚೆಗೆ ಪ್ರಬಲೀಕರಿಸುವುದರ ಜೊತೆಗೆ ಸ್ತ್ರೀ ಸಾಹಿತ್ಯವನ್ನು ಚರ್ಚೆಗೆ , ಅಧ್ಯಯನಕ್ಕೆ ಒಳಪಡಿಸುತ್ತಿರುವುದು ಶ್ಲಾಘನೀಯವೆನಿಸುತ್ತದೆ. ಈ ನಿಟ್ಟಿನಲ್ಲಿ ಡಾ. ಗೀತಾ ವಸಂತವರು ಬರೆದಿರುವ ‘ಅವಳ ಅರಿವು’ ಎಂಬ ಪುಸ್ತಕದಲ್ಲಿ ಹಲವಾರು ಸ್ತ್ರೀ-ವಾದಿ ಚಿಂತನೆಗಳನ್ನು ಪ್ರಖರಗೊಳಿಸಿದ್ದಾರೆ. 

ಸ್ತ್ರೀ ಮೀಮಾಂಸೆ ಸಾಮಾಜಿಕ ಮಾನಸಿಕ ರಾಜಕೀಯ ಮತ್ತು ಆರ್ಥಿಕ  ಪ್ರಭಾವಗಳ ಮೇಲೆ ಅಧ್ಯಯನ ಮಾಡುವುದು ಸೂಕ್ತವೆನಿಸಿದರು,  ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಪಾತ್ರಧಾರಿಗಳ ಚಿತ್ರಣವನ್ನು ಯಾವ ಸಿದ್ದಾಂತದ ಮೇಲೆ ಸುಧಾರಣೆಗೊಂಡಿದೆ ಎಂಬುದನ್ನು ಯೋಚಿಸುವುದು ಕೂಡ ಸೂಕ್ತವೆನಿಸುತ್ತದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಹಲವಾರು ಲೇಖಕರು ಸ್ತ್ರೀವಾದವನ್ನು ಬರವಣಿಗೆ ಮತ್ತು ಚಳುವಳಿಯ ಮೂಲಕ ಕಟ್ಟಿ ಗುರುತಿಸಿಕೊಂಡಿದ್ದಾರೆ.

ಜಗತ್ತಿನಲ್ಲಿ ಸ್ತ್ರೀವಾದದ ಬಗ್ಗೆ ಆಲೋಚಿಸುವ ಕ್ರಮ ಇಂದು ಬೇರೆ ರೀತಿಯಲ್ಲಿಯೇ ಇದ್ದರು ಅದನ್ನು ಅಸ್ತಿತ್ವಕ್ಕೆ ತರುವುದು ನೈಸರ್ಗಿಕವೆಂದು ಅನಿಸಿಲ್ಲವಾದರೂ, ಸಾಮಾಜಿಕವಾಗಿ ನಿಶಿದ್ಧವಾಗಿಯೂ ಲಿಂಗ ಅಸಮಾನತೆಗಳ ಬಿಂಬಿಸುವ ನೆಲೆಗಳನ್ನು ಮುಖ್ಯವಾಗಿ ಗಮನಿಸಬಹುದು. ಪ್ರಮುಖವಾಗಿ ಸ್ತ್ರೀ ವಾದದ ಬಗ್ಗೆ ಮೇರಿ ವೋಲ್ ಸ್ಟೋನ್ ಕ್ರಾಫ್ಟ್ ಅವರು  ತಮ್ಮ ‘ A vidindication of the Rights of women ‘ ಎಂಬ ಪುಸ್ತಕದಲ್ಲಿ ‘ ಮಹಿಳೆಯರನ್ನು ಪುರುಷರಂತೆ ಸಮಾನವಾಗಿ ಪರಿಗಣಿಸಬೇಕು, ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಬೆಳೆಸುವಲ್ಲಿ ನಿರ್ಣಾಯಕ ಮತ್ತು ಪ್ರಮುಖ ಪಾತ್ರ ವಹಿಸಿಕೊಳ್ಳಬೇಕೆಂದು’ ಪ್ರತಿಪಾದಿಸಿದ್ದಾರೆ. 

 20ನೇಯ ಶತಮಾನದಲ್ಲಿ ಆಧುನಿಕವಾದಿ ಮತ್ತು ಸ್ತ್ರೀವಾದಿ ಲೇಖಕಿ ವರ್ಜಿನಿಯ ವೋಲ್ಫ್ ಅವರು ತಮ್ಮ ‘A room of one’s own’ ಎಂಬ ಪುಸ್ತಕದಲ್ಲಿ ಕಾಲ್ಪನಿಕ ಕಥೆ ಬರೆಯಬೇಕಾದರೆ ಮಹಿಳೆಗೆ ಹಣ ಮತ್ತು ಸ್ವಂತ ಕೋಣೆ ಇರಬೇಕೆಂದು ಹೇಳಿರುವುದು ಗಮನಾರ್ಹವಾಗಿದೆ ‘. ಮಹಿಳೆಯರ ವಿಮೋಚನೆ ಆರ್ಥಿಕ ಸ್ವಾತಂತ್ರ್ಯ ಮತ್ತು ಭಾವನೆಗಳನ್ನು,  ಪದಗಳ ಮೂಲಕ ಬಹಿರಂಗಪಡಿಸುವ ಹಕ್ಕನ್ನು ಮಹಿಳೆಯರು ಹೊಂದಬೇಕೆಂದು ಪ್ರತಿಪಾದಿಸುತ್ತಾರೆ. ಆದರೆ ಸಿಮೋನ್ ಡಿ ಬಿವೋಯಿರ್  ತನ್ನ ಸ್ತ್ರೀವಾದದ ಪ್ರಣಾಳಿಕೆಯಲ್ಲಿ ಹೇಳುವ ಪ್ರಕಾರ ‘ ಮಹಿಳೆಯರನ್ನು ಪುರುಷರಿಂದಲೇ ನಿರ್ಮಿಸಲಾಗಿದೆ ಎಂದು ಒಲವು ತೋರುವುದರ ಜೊತೆಗೆ ಒಬ್ಬ ಮಹಿಳೆ ಮಹಿಳೆಯಾಗಿ ಹುಟ್ಟುವುದಿಲ್ಲ ಆದರೆ ಎಲ್ಲರೊಂದಿಗೆ ಒಂದಾಗುತ್ತಾಳೆ’ ಎಂದು ‘ದಿ ಸೆಕೆಂಡ್ ಸೆಕ್ಸ್’ ಪುಸ್ತಕದಲ್ಲಿ ಹೇಳಿರುವುದನ್ನು ಗಮನಿಸಬಹುದು.

ಇಪ್ಪತ್ತೊಂದನೆಯ ಶತಮಾನದ ಸ್ತ್ರೀವಾದ ಚಿಂತನೆಯ ಆಯಾಮಗಳನ್ನು ವಿವರಿಸುವ ‘ಅವಳ ಅರಿವು’ ಪುಸ್ತಕದಲ್ಲಿ ಗೀತಾ ವಸಂತ ಅವರು ಹೆಣ್ಣಿನ  ತಾತ್ವಿಕ ನೆಲೆಗಳನ್ನು ವಿಶಿಷ್ಟವಾಗಿ ಗುರುತಿಸಿರುವುದನ್ನು ಗಮನಿಸಬಹುದು. ಗಂಡಿನ ಯಜಮಾನಿಕೆಯಲ್ಲಿ  ಹೆಣ್ಣು ಹೇಗೆ ಎಲ್ಲ ಕ್ಷೇತ್ರಗಳಲ್ಲಿ ವಿಫಲಳಾಗಿದ್ದಾಳೆ ಎಂಬುವುದನ್ನು ಗೀತಾ ವಸಂತ ಅವರು ಸ್ಪಷ್ಟವಾಗಿ ತಿಳಿಸುತ್ತಾರೆ, ಹೆಣ್ಣಿನ ಅರಿವು ಎಂಬುದು ಲೋಕಾಂತ ಮತ್ತು ಏಕಾಂತಕ್ಕೆ  ಹೇಗೆ ಆವರಿಸಿಕೊಂಡಿದೆ ಎಂಬುವುದನ್ನು ತಾರ್ಕಿಕವಾಗಿ ವಿವರಿಸುತ್ತಾರೆ. ಪುರುಷ ಸಮಾಜದಲ್ಲಿ ಹೆಣ್ಣನ್ನು ನೋಡುವ, ಕಾಣುವ, ಗ್ರಹಿಸುವ ನೋಟವೇ ಬೇರೆ, ಅದರಲ್ಲೂ ಭಾರತೀಯ ಸಮಾಜದಲ್ಲಿ ಹೆಣ್ಣನ್ನು ಭೋಗಿಸುವ ವಸ್ತುವಾಗಿ ವರ್ಣಿಸಿರುವ ಸಾಹಿತ್ಯ ಬೇಕಾದಷ್ಟು ಇವೆ.  ಆದರೆ ಈ ಪುಸ್ತಕದಲ್ಲಿ ಗೀತಾ ವಸಂತ ಅವರು ವಾದಿಸುವ ಹೆಣ್ತನದ ವಾದವೇ ವಿಭಿನ್ನವಾಗಿದೆ. ಅವಳು ಎಂದರೆ  ಒಂದು ಪದವಲ್ಲ ಅದರಲ್ಲಿನ ಸವಾಲುಗಳನ್ನು, ಕಂಡಂತಹ ಕಾಣದಂತಹ ಧುರೀಣ ಸಂಗತಿಗಳು ವ್ಯಕ್ತವಾಗಿವೆ.

ಇಂಗ್ಲಿಷ್ ಸಾಹಿತ್ಯದಲ್ಲೂ ಹೆಣ್ಣನ್ನು ನೋಡುವ ದೃಷ್ಟಿಯೇ ಬೇರೆಯಾಗಿತ್ತು, ಇಂಗ್ಲಿಷ್ ವ್ಯಾಕರಣದಲ್ಲಿ He ಅನ್ನು she ಎಂದೇ ಗುರುತಿಸಲಾಗುತ್ತದೆ, ಆದರೆ ಅಲ್ಲಿ ಅವಳಿಗೆ ಅವಳು ಯಾವ ಲಿಂಗ ಎಂಬ ಹೇಳುವುದೇ ಆದರೆ ಪುರುಷರ ಯಜಮಾನಿಕೆಯಲ್ಲಿ ಅವಳಿಗೆ ಯಾವ ಸ್ಥಾನವನ್ನು ಜಗತ್ತು ಕೊಟ್ಟಿಲ್ಲ ಅದರ ಬಗ್ಗೆ ಗೀತಾ ವಸಂತ ಅವರು ಸ್ಪಷ್ಟವಾಗಿ ತಿಳಿಸುತ್ತಾರೆ. ಇನ್ನು ಭಾರತೀಯ ಸಾಹಿತ್ಯದಲ್ಲಿ ಹೆಣ್ಣನ್ನು ಕಾಣುವ ದೃಷ್ಟಿಯೇ ಬದಲಾಗುತ್ತದೆ. ಇನ್ನು ಕವಿಗಳು ಹೆಣ್ಣನ್ನು ವರ್ಣಿಸುವ ಸರಕನ್ನಾಗಿ ಮಾರ್ಪಾಡಿಸುತ್ತಾರೆ. ಅಷ್ಟಾದಶ ವರ್ಣನೆಗಳಲ್ಲಿ ಹೆಣ್ಣನ್ನು ವರ್ಣಿಸುವ ಕಥೆಗಳೇ ಮನರಂಜನೆಗಾಗಿ, ಅಂಗಾಂಗಗಳ ವರ್ಣಿಸುವ ಕಥೆಗಳೇ ಹೆಚ್ಚು. ಅಕ್ಕ ಮಹಾದೇವಿ ಮೊದಲ ಕನ್ನಡದ ಫೆಮಿನಿಸ್ಟ್ ಆಗಿ ಹೇಳಿದಂತಹ ವಚನಗಳನ್ನು ಗಮನಿಸಬಹುದು. ‘ಈ ಸಾವ ಕೊಡುವ ಗಂಡರ ಒಯ್ದು ಒಲೆಯೊಳಗಿಕ್ಕಿ’ ಎನ್ನುವ ಹೆಣ್ತನದ ವಾದಗಳನ್ನು ಗಮನಿಸಬಹುದು. 

ಹೆಣ್ಣಿನ ಅರಿವು ಎನ್ನುವುದು ಒಂದು ಅನುಭೂತಿ, ಇಲ್ಲಿ ಹೆಣ್ಣಿನ ಚರಿತ್ರೆಯಿದೆ, ಅವಳ ಬದುಕಿನ ಬಾಹ್ಯ ಕೊಂಡಿಗಳನ್ನು ಅಡಗಿಸಿಕೊಂಡಿದ್ದಾಳೆ. ಎಲ್ಲೂ ಹೇಳಿಕೊಳ್ಳದ, ಹೇಳಿಕೊಳ್ಳಲು ಆಗದ ಬೆಂಕಿಯಂತೆ ಸದಾ ಉರಿಯುವ ಕೊಳ್ಳಿಯಾಗಿ ಭಾರತೀಯ ಸಮಾಜದಲ್ಲಿ ಕಾಣಿಸುತ್ತಾಳೆ. ಹೆಣ್ಣಿನ ಅಂತರ್ ಶಕ್ತಿಯನ್ನು ಗಂಡು ಕುಗ್ಗಿಸುತ್ತಾನೆ. ಅವಳಿಗೆ ಅವಳ ಭಾಷೆಯ ಹುಡುಕಾಟದಲ್ಲಿ ಜೀವನವನ್ನೇ ಕಳೆದುಬಿಡುತ್ತಾಳೆ. ಗಂಡು ಹೆಣ್ಣನ್ನು ಕಟ್ಟಲೆಗಳಲ್ಲಿ ಕಟ್ಟಿ ಹಾಕಿ ಗಂಡಿನ ವ್ಯಕ್ತಿತ್ವವನ್ನು ಹೆಣ್ಣು ಸ್ವೀಕರಿಸುವಂತೆ ಬಲವಾಗಿ ಹೇರುತ್ತಾನೆ.

ಹೆಣ್ಣು ಈ ನೆಲದ ನದಿ, ನಾಡು, ದೇವತೆಯೆಂದು ಪೂಜಿಸುವ ಗಂಡಿನ ದುರಂತವನ್ನು ಹೆಣ್ಣು ಕೂಡಾ ಒಪ್ಪಿಕೊಳ್ಳುವಂತೆ ಗಂಡು ಅವಳನ್ನು ತಯಾರಿಸುತ್ತಾನೆ. ಅವಳು ಮಕ್ಕಳ ಹಡೆಯುವ ಕಾರ್ಖಾನೆ ಮತ್ತು ಶೀಲವಂತೆಯಾಗಿ  ಉಳಿಯುವಂತೆ ಗಂಡು ಬಯಸುತ್ತಾನೆ. ಗಂಡು ಹೆಣ್ಣು ಇಬ್ಬರು ಸಮಾನ ಎಂಬ ಭಾವನೆ ಎಲ್ಲರಲ್ಲಿಯೂ ಬರಬೇಕಿದೆ. ಅವಳಿಗೂ ಮನಸ್ಸಿದೆ, ಅವಳಿಗೂ ಅರಿವಿದೆ, ಅವಳಿಗೂ ಸ್ಪಂದಿಸುವ ಸ್ಪಂದನೆ ಬೇಕು ಎನ್ನುವ ಮನೋಧರ್ಮ ಕಡಿಮೆಯಾಗಿರುವ ಹೊತ್ತಿನಲ್ಲಿ ಗೀತಾ ವಸಂತ ಅವರ ಹೇಳಿಕೆಗಳು ಎಷ್ಟೋ ಸತ್ಯಗಳನ್ನು ಬಯಲಿಗೆ ಎಳೆಯುತ್ತವೆ. ಸ್ತ್ರೀ- ತತ್ವವೇ ಕಾಣದ ಗಂಡಿಗೆ ಈ ಪುಸ್ತಕ ಅವಳ ಅರಿವಿನೊಂದಿಗೆ, ಅವಳ ಬದುಕಿನ ಭಾಷೆಯನ್ನು ಪರಿಚಯಿಸುತ್ತದೆ.

‍ಲೇಖಕರು avadhi

March 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: