ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ -10:ನಿಂತ ರೂಮು ನಿಧಾನವಾಗಿ ತಿರುಗುತ್ತಿದೆ ಅನಿಸಿತು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 10

ತುಕ್ಕೋಜಿ ಆ ಕೋಟನ್ನು ಗಮನಕ್ಕೆ ತಾರದೇ, ಅದನ್ನು ಒಂದಿಷ್ಟು ಅತ್ತ ಸರಿಸಿ ಹೊಲಿಗೆ ಯಜ್ಞಕ್ಕೆ ತಯಾರಾದ. ಹಳೇಬೀಡು ಸುಂದರರಾಯರು ಅದನ್ನು ಮತ್ತೆ ಅವನತ್ತ ತಳ್ಳಿದರು. ತುಕ್ಕೋಜಿ ಮತ್ತೆ ಅದನ್ನು ಹೊಲಿಗೆ ಯಂತ್ರದ ತುದಿಗೆ ತಳ್ಳಿ ತಯಾರಾದ. ಹಳೇಬೀಡು ಸುಂದರರಾಯರು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ಕೋಟನ್ನು ತಳ್ಳುತ್ತಾ ’ಯೇನರಾ ಮಾಡಬೇಕಪಾ’ ಅಂದರು.
ತುಕ್ಕೋಜಿ ಹೊಲೆಯುವ ತನ್ನ ಕಾಯಕವನ್ನು ನಿಲ್ಲಿಸಿ ದುರುಗುಟ್ಟಿ ನೋಡತ್ತಾ, ಸ್ವಲ್ಪ ದನಿಯೇರಿಸಿ ’ಯಿದುನ್ನ ಯತ್ಲಗಿಂದ ರಿಪೇರಿ ಮಾಡಬೇಕ್ರೀ. ಬಟ್ಟೆ ಗಟ್ಟಿಮುಟ್ಟಾಗಿದ್ರೆ ಯೇನರ ಹೊಲಿಗೇ ಅಂತ ಹಾಕಕ್ಕಾಗ್ತತೆ. ಯಿದ್ರಗೇನಿದೆ ಅಂತ ತ್ಯಾಪೆ ಹಾಕ್ಲೀ ನಾನು. ಯಿದುನ್ನ ಹಾಕ್ಕೆಂಡು ಗಾಳಿಗೆ ಅಡ್ಡಾಡಬೇಡ್ರಿ. ಹಾರ್‌ಗೀರೋದೀರಿ.’
ಅವನು ಅಂದಿದ್ದು ಒಂದು ದೊಡ್ಡ ತಮಾಷೆ ಎನ್ನುವಂತೆ ವಿಲಕ್ಷಣವಾಗಿ ನಕ್ಕು ಅಂದರು ’ಅದಕ್ಕೇ ಅಂದಿದ್ದು ಒಂದು ಪ್ಯಾಚ್ ಹಾಕಿದ್ರೆ ಸರಿ ಹೋಕ್ತತೆ ಅಂತ.’
’ಆಗಲ್ಲಾ-’ ತುಕ್ಕೋಜಿ ಇನ್ನೇನು ಕಿರಿಚುವ ಅಥವಾ ಅತ್ತೇ ಬಿಡುವ ಹಂತದಲ್ಲಿದ್ದ. ’ಯಿದುನ್ನು ಮುಟ್ಟಾಕಾಗಲ್ಲ. ರಿಪೇರಿ ಮಾಡಕ್ಕಾಗಲ್ಲ. ಯೇನೂ ಮಾಡಕ್ಕಾಗಲ್ಲ. ಬೇಕೂಂದ್ರೆ ಹೊಸಾ ಕೋಟು ಹೊಲ್ಕೊಡ್ತೀನಿ.’
’ಹೊಸಾ ಕೋ-’ ಹಳೇಬೀಡು ಸುಂದರರಾಯರಿಗೆ ಮುಂದೆ ಮಾತನಾಡಲು ಉಸಿರು ಸಿಗಲಿಲ್ಲ. ಕಣ್ಣ ಮುಂದೆ ಮತ್ತೆ ಮಂಜು ಕವಿಯಿತು. ನಿಧಾನವಾಗಿ ತಾವು ನಿಂತ ರೂಮು ತುಕ್ಕೋಜಿಯ ಸಮೇತ ನಿಧಾನವಾಗಿ ತಿರುಗುತ್ತಿದೆ ಅನಿಸಿತು. ನಿಂತ ಜಾಗದಲ್ಲೇ ಕುಕ್ಕುರುಗಾಲಿನಲ್ಲಿ ಕೂತು ತಲೆ ಮೇಲೆ ಕೈ ಹೊತ್ತರು.
ಯಾವುದೋ ಕೆಟ್ಟ ಕನಸಿನಲ್ಲಿ ಕುಕ್ಕುರಗಾಲಲ್ಲಿ ಕೂತಂತೆ ಭಾಸವಾಗುತ್ತಿತ್ತು. ಕನವರಿಸುವವರಂತೆ ಉಲಿದರು ’ಹೊಸಾ ಕೋಟಿಗೆ ದುಡ್ಡೆಲ್ಲಿದೆ ನನ್ನತ್ರ-’
ಅವರ ಪುಣ್ಯ ತುಕ್ಕೋಜಿಯ ಕಿವಿಗೆ ಅದು ಬೀಳಲಿಲ್ಲ. ಕೋಟನ್ನು ಅವರ ಭುಜದ ಮೇಲೆ ಹಾಕಿ ಮತ್ತೆ ಹೊಲಿಗೆಗೆ ತಯಾರಾದ.
’ಅಲ್ಲಾ ಹೊಸಾ ಕೋಟಿಗೆ ದುಡ್ಡೂ-’
’ದುಡ್ಡೆಷ್ಟಾಗ್ತತೆ ಅಂದ್ರೆ ಇನ್ನೂರವೈತ್ತಾಗ್ತತೆ.’
’ಇನ್ನೂರೈ-’ ಜೀವಮಾನದಲ್ಲೇ ಪಿಸುಗುಟ್ಟುವುದಕ್ಕಿಂತಾ ಒಂದು ಗೆರೆ ದಾಟದಂತೆ ಮಾತನಾಡುತ್ತಿದ್ದ ಹಳೇಬೀಡು ಸುಂದರರಾಯರು ಮೊದಲ ಸಾರಿ ಕಿರಿಚಿದರು. ಗಂಟಲು ಕೀಚಲಾಗಿತ್ತು. ತುಕ್ಕೋಜಿ ಒಮ್ಮೆ ತನ್ನ ಹೊಲಿಗೆ ಯಂತ್ರದ ಗಾಲಿಯನ್ನು ಕೈಯ್ಯಲ್ಲಿ ತಿರುವಿ ನೋಡಿದ. ಬಂದ ಸದ್ದು ಎಲ್ಲಿಂದ ಎನ್ನುವುದು ಅವನಿಗೆ ನಿಗೂಢವಾಗಿತ್ತು. ಹಳೇಬೀಡು ಸುಂದರರಾಯರು ಉಸಿರೆಳೆದು ಎದ್ದು ನಿಂತರು.ತುಕ್ಕೋಜಿಯ ಮುಂದೆ ಬಾಗಿ ನಿಂತರು.
’ಸ್ವಾಮಿ, ಹಂಗೆ ಒಂದೇ ಏಟಿಗೇ ಇನ್ನೂರೈವತ್ತು ಅಂದ್ರೆ ಯತ್ಲಗಿಂದ ತರಲಿ ನಾನು? ದಿಸಕ್ಕೆ ಐದು ಹುಟ್ಟಿದ್ರೆ ಹೆಚ್ಚು. ಯಿನ್ನು ಇನ್ನೂರೈವತ್ತು ಅಂದ್ರೆ ಹೆಂಗೆ. ದುಡ್ದುದ್ನೆಲ್ಲಾ ಕೋಟಿಗೇ ಅಂತ ಸುರುದ್ರೆ ಹೊಟ್ಟೆಗೇನು ತಿನ್ಲಿ ನಾನು? ಯೇನಾರಾ ಮಾಡಿ ಯಿದುನ್ನೇ ಒನ್ನಾಕು ತಿಂಗಳು ಬರಂಗೆ ಮಾಡಕ್ಕಾಗ್ತತಾ ನೋಡಿ. ಒನ್ಕೇಸು ಕೈಗೆ ಬರಂಗಿದೆ. ಕರೀಕೋಟು ಹಾಕ್ಕೆಳದೇ ಕೋರ್ಟಿಗೆ ಹೋಗಂಗಿಲ್ಲ.
ಹಂಗೇನರಾ ಈ ಕೇಸು ಗೆದ್ನೋ ಇನ್ನೊಂದಿಷ್ಟು ಕೇಸು ಸಿಗ್ತವೆ. ಒಂದು ಹೊಸಾ ಕೋಟೇ ಹೊಲುಸ್ಕೋತೀನಿ ಬಿಡಿ. ನಿಮ್ಮ ಬಾಯಿ ಹರಕೇನಿಂದಾನಾರಾ ಹಂಗಾಗ್ಲಿ. ನೋಡಿ ಯೇನರಾ ಮಾಡಿ. ನಂಗೆ ಊಟ ಹಾಕಿದ ಪುಣ್ಯ ನಿಮಗೆ ಸಿಗ್ತತೆ.’ ನಿಧಾನವಾಗಿ ಕೋಟನ್ನು ಮತ್ತೆ ತುಕ್ಕೋಜಿಯ ಹೊಲಿಗೆ ಯಂತ್ರದ ತುದಿಯಲ್ಲಿ ಇಟ್ಟು ಇಡೀ ಮೈಯನ್ನು ಇಂಗ್ಲೀಷ್ ಸಿ ಅಕ್ಷರದ ರೀತಿಯಲ್ಲಿ ಜೋಡಿಸಿ ನಿಂತರು.

ಮುಂದುವರೆಯುವುದು…

‍ಲೇಖಕರು avadhi

28 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading