ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸೂಫಿ-ಲೋಹಿಯಾ’ ಬೆಸುಗೆಯ ರಹಮತ್..

-ಬಿ ಎ ವಿವೇಕ ರೈ

ತುಂಬಾ ಒಳ್ಳೆಯ ಸುದ್ದಿ.ಬಿಳಿಮಲೆ ಸರಿಯಾಗಿ ಹೇಳಿದ್ದಾರೆ.ಕನ್ನಡ ವಿವಿ,ಹಂಪಿಯಲ್ಲಿ ಮೂರು ವರ್ಷ ಬಹಳ ಹತ್ತಿರದಿಂದ ರಹಮತ್ ರನ್ನು ಕಂಡಿದ್ದೇನೆ.ಸೂಫಿ ,ಅವಧೂತರ ಬಗ್ಗೆ ಅಪಾರ ತಿಳುವಳಿಕೆ ,ಅಧ್ಯಯನ ಇದ್ದ ರಹಮತ್ ನಿಜ ಬದುಕಿನಲ್ಲೂ ಸೂಫಿ-ಅವಧೂತ ಪರಂಪರೆಯ ಶ್ರೇಷ್ಠ ಪ್ರತಿನಿಧಿ ಆಗಿದ್ದಾರೆ .

ನಾನು ಹಂಪಿಯಲ್ಲಿ ಕುಲಪತಿ ಆಗಿದ್ದಾಗ ಅವರು ಯಾವುದೇ ಸಭೆಯಲ್ಲಿ ತಾವಾಗಿ ಮೇಲೆ ಬಿದ್ದು ಮಾತಾಡಿದವರಲ್ಲ.’ರಹಮತ್ , ಏನು ಹೇಳುತ್ತೀರಿ ?’ ಎಂದು ನಾನಾಗಿಯೇ ಒತ್ತಾಯಿಸಿ ಕೇಳಿದಾಗ, ಅಪೂರ್ವ ಒಳನೋಟಗಳ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಲೋಹಿಯಾ ಪೀಠದ .ಸಂಚಾಲಕರಾಗಿ ಎಂದಾಗ ,ಸಂಕೋಚದಿಂದ ಬೇಡ ಎಂದವರು ,ನನ್ನ ಒತ್ತಾಯಕ್ಕೆ ಒಪ್ಪಿಕೊಂಡು ,ಅದ್ಭುತ ಯೋಜನೆಗಳನ್ನು ಕಾರ್ಯಗತಗೊಳಿಸಿ ,ಮೂರು ವಿಶಿಷ್ಟ ಗ್ರಂಥಗಳನ್ನು ಹೊರತಂದರು.’ಸಮಾಜವಾದಿ ಹೋರಾಟಗಾರರ ಸಂದರ್ಶನ ‘(ಪೀರ್ ಭಾಷ ),’ಸೊಂಡೂರು ಭೂಹೋರಾಟ’( ಅರುಣ್ ಜೋಳದ ಕೂಡ್ಲಿಗಿ ),ಹೆಬ್ಬಳ್ಳಿ ಭೂ ಹೋರಾಟ ‘(ಸತೀಶ್ ಪಾಟೀಲ್ )-ಇವು ಮೂರು-ಅಪಾರ ಶ್ರಮ ,ಕ್ಷೇತ್ರ ಅಧ್ಯಯನ ಇರುವ ಪುಸ್ತಕಗಳು ಲೋಹಿಯಾ ನೆನಪಿಗೆ ಮಹತ್ವದ ಕೊಡುಗೆಗಳು.

‘ಸಾಂಸ್ಕೃತಿಕ ಮುಖಾಮುಖಿ’ವಿಚಾರ ಸಂಕಿರಣ ಚರ್ಚೆಗಳ ಪೂರ್ವಭಾವಿ ಸಭೆಗಳು ,ಸಿದ್ಧತೆಗಳು ನಡೆದಾಗ -ರಹಮತ್ ಅವರ ಶೈಕ್ಷಣಿಕ ಶಿಸ್ತು ಕಾಳಜಿಗಳನ್ನು ನಾನು ನೇರವಾಗಿ ಗಮನಿಸಿದ್ದೆ.

ಸಾಂಸ್ಕೃತಿಕ ಕ್ಷೇತ್ರಕಾರ್ಯ ,ಅಧ್ಯಯನ ಮತ್ತು ಪ್ರಮಾಣಬದ್ಧ ಪ್ರಕಟಣೆಗಳ ಪರ್ಯಾಯ ದಾರಿಯ ಮೂಲಕವೇ ಎಲ್ಲ ಬಗೆಯ ಅತಿರೇಕಗಳನ್ನು ,ಮೂಲಭೂತವಾದಗಳನ್ನು ನಿರಾಕರಿಸಬೇಕು ಎನ್ನುವ ‘ಸೂಫಿ-ಲೋಹಿಯಾ ‘ಬೆಸುಗೆಯ ರಹಮತ್ ಗೆ ಪ್ರೀತಿಯ ಅಭಿನಂದನೆಗಳು.

ವಿವೇಕ ರೈ

‍ಲೇಖಕರು avadhi

22 December, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading