ಸುಮಾ ಆನಂದರಾವ್‌ ಸರಣಿ ಆರಂಭ – ಪ್ರವಾಸದ ಮೊದಲನೆಯ ಹೆಜ್ಜೆ…

ಸುಮಾ ಆನಂದರಾವ್‌

1

ಜರ್ಮನಿಯ ಗಡಿಭಾಗದ ಐತಿಹಾಸಿಕ, ಶೈಕ್ಷಣಿಕ ನಗರ. ಒಂದೆಡೆ ಬೆಲ್ಜಿಯಂ ಮತ್ತೊಂದೆಡೆ ನೆದರ್ ಲ್ಯಾಂಡ್ ಗೆ ಹೊಂದಿಕೊಂಡಂತೆ ಇದೆ. ಚಳಿಗಾಲದ ಒಂದು ದಿನ ಅಳಿಯ ಮಗಳೊಡನೆ ನಮ್ಮಿಬ್ಬರ ಪಯಣ ಕೊಲೊನ್ ನಿಂದ ಆಖೇನ್ ಗೆ. ಇಕ್ಕೆಲಗಳಲ್ಲೂ ಮಂಜಿನ ಸ್ವಾಗತ 800 A.D ಯಲ್ಲಿ ಕಟ್ಟಿದಂತಹ ಸುಂದರವಾದ ಕೋಟೆ ಇದೆ.

ಬಹುಮುಖ್ಯವಾಗಿ ಅಲ್ಲಲ್ಲಿ ಗಂಧಕದ ಅಂಶ ಹೊಂದಿದ ನೀರಿನ ಬುಗ್ಗೆಗಳನ್ನು ಕಾಣಬಹುದು. ಅಲ್ಲಲ್ಲಿ ಮಂಜಿನ ಸಿಂಚನ. ಸುತ್ತಲು ಗಿಡಮರಗಳ ಮೇಲೆ ಟೊಪ್ಪಿಗೆ ಹಾಕಿದಂತೆ ಕಾಣುವ ಸುಂದರವಾದ ದೃಶ್ಯ. ಅಷ್ಟೊಂದು ಚಳಿಯಲಿ ಬಿಸಿಯಾದ ಬುಗ್ಗೆಗಳು ! Tourist office ಗೆ ಹೋಗಿ Travel map ತೆಗೆದುಕೊಂಡರೆ ಸರಿ ಅದು ತೋರಿಸಿದಂತೆ ಸಾಗಿ ಊರೆಲ್ಲಾ ನಡೆದೇ ಹೋಗಬಹುದು. ಹೋಗುವ ಹಾದಿಯಲ್ಲಿ ತುಸು ಅಂತರದಲ್ಲಿ ಕಾಲಿಗೆ ಸಿಗುವ ಲೋಹದ ಅಂಗೈ ಅಗಲದ ಮೇಲೆ ಸಂಖ್ಯೆ ಮುದ್ರಿಸಿದ Plate ಗಳೇ ನಮಗೆ ಮಾರ್ಗಸೂಚಿಗಳು. 

೮ನೇ ಶತಮಾನದಲ್ಲಿ ಚಾರ್ಲ್ಸ್ ಮ್ಯಾಗ್ನೆಯ ಹಿಡಿದಲ್ಲಿರುವುದಕ್ಕಿಂತ ಪೂರ್ವದಿಂದಲೇ ಐತಿಹಾಸಿಕ ಕತೆಯಿದೆ. ಯೂರೋಪಿನ ಅತ್ಯಂತ ಪುರಾತನ, ಏಳುಬೀಳುಗಳನ್ನು ಕಂಡು ಮತ್ತೆ ಮಿನುಗುತ್ತಿರುವ ನಗರ. ಮ್ಯೂಸಿಯಂ, ಕ್ಯಾಥೆಡ್ರಲ್, ಟೌನ್ ಹಾಲ್ ಹೀಗೆ ಹಲವಾರು ಸ್ಥಳಗಳು ರಮಣೀಯವಾಗಿವೆ. 

ಹಾಲಿ ಜರ್ಮನಿ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲೊಂದಾಗಿದೆ. ಅಂದಾಜು 40,000 ದೇಶ ವಿದೇಶದ ವಿದ್ಯಾರ್ಥಿಗಳನ್ನು ಒಳಗೊಂಡಂತಹ ಪ್ರದೇಶ. ಅದರಲ್ಲೂ ಭಾರತದ ವಿದ್ಯಾರ್ಥಿಗಳ ಬೆಚ್ಚನೆಯ ಗೂಡು. ಇನ್ನು ಕ್ರಿಸಮಸ್ ಮಾರ್ಕೇಟ್ ಬಹಳ ಸುಂದರವಾಗಿರುತ್ತದೆ. ಮೈ ನಡುಗಿಸುವ ಚಳಿಯಲ್ಲಿ ಚಕ್ಕೆ ಮಿಶ್ರಿತ Green Tea ಕುಡಿಯುವ ಮಜವೇ ಬೇರೆ.

ಕೃತಕ ಮಳಿಗೆಗಳಂತೆ ಕಾಣುವ ಸುಂದರ ಅಂಗಡಿಗಳು, ವಿವಿಧ ದೇಶದ ತಿನಿಸುಗಳು, ಬಗೆ ಬಗೆಯ ಪೇಯಗಳು, ಖರೀದಿಸಲು ಮನಮೋಹಕ ವಸ್ತುಗಳು, ಶ್ವೇತವರ್ಣದ ದಿರಿಸನ್ನು ತೊಟ್ಟು ಓಡಾಡುವ ಸುಂದರ ಲಲನೆಯರು, ಕಿನ್ನರ ಲೋಕವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. 

ಚಳಿಗಾಲದಲ್ಲಿ ಮಂಜಿನ ಹೊದಿಕೆಯಲ್ಲಿ ಹುದುಗಿ ಆಖೆನ್ ಎಷ್ಟೊಂದು ಐತಿಹಾಸಿಕ ಮಹತ್ವ ಹೊಂದಿದೆ ಎಂಬುದನ್ನು ತಿಳಿದಾಗ ರೋಮಾಂಚನವಾಗಿತ್ತದೆ. ಕಣ್ಣು ಹಾಯಿಸಿದೆಡೆಯೆಲ್ಲಾ ಮಂಜಿನದೇ ಸಾಮ್ರಾಜ್ಯ ನೂರಾರು ಟ್ಯೂಬ್ ಲೈಟ್ ಗಳ ಬೆಳಕು ಹೊಮ್ಮೆಲೆ ಪ್ರಜ್ವಲಿಸಿದಂತೆ ಕಣ್ಣು ಕೋರೈಸುತ್ತದೆ.

ಇದು ನನ್ನ ಪ್ರವಾಸದ ಮೊದಲನೆಯ ಹೆಜ್ಜೆ..

| ಇನ್ನು ನಾಳೆಗೆ |

‍ಲೇಖಕರು Admin

September 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: