ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸುತ್ತ ಮುತ್ತ ಕಳ್ಳ ಚಿತ್ತ ಇತ್ತ ಬಂದರಾರು?’ – ಜ್ಯೋತಿ ಮಹಾದೇವ್ ಕವಿತೆ

ಬೆಣ್ಣೆ ಕಳ್ಳ

ಜ್ಯೋತಿ ಮಹಾದೇವ್

ನೆಲುವಿನಲ್ಲಿ ಹಾಲು ಮೊಸರು
ನೆಲದ ಮೇಲೆ ಗೊಲ್ಲ
ಮೆಲ್ಲಬೇಕು ಅಚ್ಚ ಬೆಣ್ಣೆ
ಕೈಗೆ ನಿಲುಕದಲ್ಲ
 
ಹಾರಿ ಕುಣಿದು ಕಪ್ಪೆ ಜಿಗಿದು
ತೂರಿ ನೋಟದೇಣಿ
ಭಾರಿ ಕಷ್ಟ ಪಟ್ಟರೇನು
ಕೈಗೆ ಸಿಗದು ಭರಣಿ
 
ಸುತ್ತ ಮುತ್ತ ಕಳ್ಳ ಚಿತ್ತ
ಇತ್ತ ಬಂದರಾರು?
ಮೆತ್ತಗೊಮ್ಮೆ ಇಣುಕಿ ನೋಡೆ
ಕೈಗೆ ಹೆಗಲ ಊರು
 
ಅಣ್ಣ ಬಂದ ಜೊತೆಗೆ ತಂದ
ತನ್ನ ಭಂಡ ಜೋಡಿ
ಬಣ್ಣವೇರಿ ಬಾನಿನತ್ತ
ಕೈಗೆ ಬಂತು ಜಾಡಿ
 
ಕಿಲಕಿಲಕಿಲ ಬಳೆಯ ಸದ್ದು
ಚಲನೆ ಪಡೆದ ಕೂಟ
ನೆಲದ ಮೇಲೆ ಹಾಲು ಮೊಸರು
ಕೈಗೆ ಬೆಣ್ಣೆಯೂಟ
 

‍ಲೇಖಕರು avadhi

28 August, 2013

3 Comments

  1. Ishwara Bhat K

    ಆಹಾ .. ಚೆನ್ನಾಗಿದೆ ಜ್ಯೋತಿ ಅಕ್ಕ.. ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙂 🙂

  2. Tejaswini Hegde

    ಆಹಾ. ಕವಿತೆ ಬೆಣ್ಣೆಯಷ್ಟೇ ರುಚಿಯಾಗಿದೆ ಜ್ಯೋತಿಯಕ್ಕ 🙂

    • ameen

      kavithe channagide…nimma kavana samkalana galidre heli pa……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading