ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೀಟನ್ನುಕಾಯ್ದಿರಿಸಲಾಗಿದೆ…

ಜಿ ಲೋಕೇಶ

ಇಳಿಯುವಾಗ
ಡೋರಿನಂಚಿಗೆ
ಉಳಿದ ವೇಲಿನ
ಅಂಚು
ಪ್ರತಿನಿತ್ಯ ಹೆಸರು
ಹೇಳುತ್ತಿದೆ.

ದಿನವು ಮುಡಿದ
ಹೂಗಳಲ್ಲಿ
ನಮ್ಮ ಬದುಕಿನ
ಸಂಸಾರದ ದಿನಗಳು
ಕನಸು ಕಟ್ಟಿವೆ

ಗಂಟಲಿನ
ಕಿರಿಕಿರಿಗಿಲ್ಲಿ
ವಿಕ್ಸ್ ಪೆಪ್ಪರುಮೆಂಟು
ಹೂಡಿದೆ ಸಹಕಾರದ
ಕಂಜೂಸುತನ

ನೋಡಿಯು
ನಿಲ್ಲದಂತೆ
ಉಳಿದಿರುವ ಹೆಜ್ಜೆಗಳಿಗೆ
ಗಂಟು ಕರಗಿಕೊಳ್ಳುವ
ಭಯವಿದ್ದಂತೆ

ದಿನವು ಹತ್ತಿ ಇಳಿದು
ತಲೆ ತಗ್ಗಿಸಿ
ಕಂಗಳು ಮಾತನ್ನೇ
ಹೋದವು ಉಳಿಸಿ

ಪ್ರಯಾಣ ಕರಗಿಯೇ
ಹೋಯಿತು.
ಜಲ್ಲಿ ರಸ್ತೆಯಿಲ್ಲಿ
ಡಾಂಬಾರು
ಬಳೆಸಿಕೊಂಡು
ಸಿಂಗರಿಸಿಕೊಂಡಿತು.

ವಿರಹದ ಪೋಸ್ಟರ್ ಗಳನ್ನು
ಹಚ್ಚಿಕೊಂಡು ನಿಂತ
ಎದೆಯ ನಿಲ್ದಾಣ
ಸರ್ವಕಾಲಕ್ಕೂ
ಸೀಟನ್ನು
ಕಾಯ್ದಿರಿಸಿಕೊಂಡಿದೆ.

‍ಲೇಖಕರು Admin

23 May, 2022

1 Comment

  1. Sadashiv soratur

    ಕಾಯ್ದಿರಿಸಿದ ಸೀಟನ್ನು
    ರದ್ದುಗೊಳಿಸುವುದು
    ಪ್ರಯಾಣಕ್ಕಿಂತಲೂ
    ಸುಲಭ
    ಒಂದು ತೋರ್ಬೇರಳ‌ ಅಂಚಲ್ಲಿದೆಯಷ್ಟೆ..

    ಇಳಿಯುವಾಗಲಾದರೂ
    ಆ ಲಟಕಾಸಿ ಡೋರ್
    ನಿನ್ನ ವೇಲಿನ ನಾಲ್ಕು ದಾರದ
    ತುಂಡುಗಳನ್ನಾದರು ತನ್ನ ಬಾಯಲ್ಲಿ
    ಹಿಡಿದಿಟ್ಟುಕೊಂಡು ನನ್ನ
    ಕೈಗಿಡಲಿ ಎಂದು ಕಾದೆ..

    ಗಂಟಲಿನ ಕಿರಿಕಿರಿಗೆ
    ವಿಕ್ಸ್ ಪೆಪ್ಪರುಮೆಂಟು
    ಧಾರಾಳಿ
    ಪ್ರಯಾಣ ಮುಗಿಸುವವರೆಗೂ
    ತುಟಿ‌ ಸವರಿಕೊಂಡೆ,
    ನಿನ್ನ ತುಟಿಯಷ್ಟು
    ಕಂಜೂಸುತನವಿಲ್ಲ..

    ನೋಡಿ‌ಯೂ ನೀ ಹೊರಟಿದ್ದು
    ನಿಜ
    ಆದರೆ ಹೆಜ್ಜೆಗಳು ಇಲ್ಲೇ
    ಉಳಿದವಲ್ಲ
    ಕರಗುವ ಭಯ ನನಗೊ
    ನಿನಗೊ

    ಕಾಲ ನನ್ನ ಪ್ರಯಾಣವನ್ನು
    ತಿಂದು ತಿಂದೇ
    ಕಳೆದದ್ದು ನಿಜ
    ಆದರೆ ಪ್ರಯಾಣ ಮುಗಿದಿಲ್ಲ
    ನೀ ನಡೆಯುವವರೆಗೂ‌
    ನಾನು ಓಡುವ ಚಕ್ರ

    ವಿರಹದ ಗುರುತು ಬೇಕಿಲ್ಲ
    ನಿನ್ನ ಕಣ್ಣುಗಳನ್ನು
    ತೋರಿಸಿದರೆ ಸಾಕು
    ಕಾಯ್ದಿರಿಸಿದ ತಿಕೇಟು
    ತನ್ನಿಂದ ತಾನೇ ರದ್ದಾಗುತ್ತದೆ..
    ಕಾಯ್ದು ಕೂಡುತ್ತದೆ ನಿಮ್ಮ ಹೆಜ್ಜೆ
    ಸಪ್ಪಳಕೆ..

    ಸದಾಶಿವ್ ಸೊರಟೂರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading