ಸಿ ಬಸವಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ’

ಸಿ. ಬಸವಲಿಂಗಯ್ಯ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರು, ಭಾರತೀಯ ರಂಗಭೂಮಿಯಲ್ಲಿ ಮುಖ್ಯವಾದ ಹೆಸರು ಮತ್ತು ಸಾಮಾಜಿಕ ಕಾರ್ಯಕರ್ತರು, ಕರ್ನಾಟಕ ಸರ್ಕಾರದ ರಂಗಾಯಣ ಮೈಸೂರು ರೆಪಟರಿ ಸಂಸ್ಥೆಗೆ ಎರಡು ಅವಧಿಗೆ ನಿರ್ದೇಶಕರಾಗಿದ್ದವರು, ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರು.

ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ರಂಗಭೂಮಿ ಯಾನ ಆರಂಭಿಸಿ ಅದರ ಅಧ್ಯಕ್ಷರೂ ಆಗಿ ಕರ್ನಾಟಕದಾದ್ಯಂತ ರಂಗಭೂಮಿಯನ್ನು ಕ್ರಿಯಾಶೀಲಗೊಳಿಸಿದವರು.

1984 ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ದೆಹಲಿಯಿಂದ ನಿರ್ದೇಶನ ವಿಷಯದಲ್ಲಿ ಪದವಿ ಪಡೆದರು, 2010 ರಲ್ಲಿ ಬಸವಲಿಂಗಯ್ಯನವರು ನಿರ್ದೇಶಿಸಿದ ರಾಷ್ಟ್ರಕವಿ ಕುವೆಂಪುರವರ ಮಹಾ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಅಹೋರಾತ್ರಿ 9 ಗಂಟೆಗಳ ರಂಗಪ್ರಯೋಗ ದೇಶದ ಗಮನ ಸೆಳೆದು ಹಲವು ಪ್ರದರ್ಶನಗಳನ್ನು ಕಂಡಿದೆ.

ಇವರು 2019 ರಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ನಿರ್ದೇಶಿಸಿದ “ಮನುಷ್ಯ ಜಾತಿ ತಾನೊಂದೇ ವಲಂ ದ್ವನಿ/ಬೆಳಕು/ದೃಶ್ಯ/ವೈಭವ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಮಾರು 300 ಕಲಾವಿದರನ್ನು ತರಬೇತಿಗೊಳಿಸಿ ಪ್ರಯೋಗಿಸಿದರು, ಕರ್ನಾಟಕದ ಲಕ್ಷಾಂತರ ಜನ ಈ ಪ್ರಯೋಗ ವೀಕ್ಷಿಸಿದರು.

ಬಸವಲಿಂಗಯ್ಯನವರು ನಿರ್ದೇಶಿಸಿರುವ ನಾಟಕಗಳಲ್ಲಿ – ಕುಸುಮಬಾಲೆ, ದಿ ರೋಡ್, ಗಾಂಧಿ V/S ಗಾಂಧಿ, ಶೂದ್ರ ತಪಸ್ವಿ, ಟಿಪ್ಪುವಿನ ಕನಸುಗಳು, ದೊರೆ ಈಡಿಪಸ್, ಮಾದಾರಿ ಮಾದಯ್ಯ, ಅಗ್ನಿ ಮತ್ತು ಮಳೆ, ಮಹಾಮಾಯಿ, ಜಂಗಮದಡೆಗೆ, ಕನ್ನಡ ಭಾಷೆಯಲ್ಲಿ ನಿರ್ದೇಶಿಸಿದ ನಾಟಕಗಳಾದರೆ; ಹಿಂದಿ, ತೆಲುಗು, ಮಲಯಾಳಂ, ಅಸ್ಸಾಮಿ ಭಾಷೆಗಳಲ್ಲೂ ಗಮನ ಸೆಳೆಯುವಂತ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಬಸವಲಿಂಗಯ್ಯನವರ ರಂಗ ಕಾಯಕಕ್ಕೆ ಗೌರವ/ಪ್ರಶಸ್ತಿ ಸಿಕ್ಕಿವೆ. ಈಗ ಅವರನ್ಪು ಅವರ ಆಶಯಗಳ ಹಿನ್ನಲೆಯಲ್ಲಿ ಅವರನ್ನು 2023ರ ಸಾಲಿನಲ್ಲಿ “ಪಂಚಪ್ಪ ಸಮುದಾಯ ಮಾರ್ಗಿ”ಯಾಗಿ ಗೌರವಿಸಲು ಆಯ್ದುಕೊಂಡಿದ್ದೇವೆ. ಈ ಪ್ರಶಸ್ತಿಯನ್ನು ದಾವಣಗೆರೆಯ ಕಲ್ಪಿತರಾಣಿ ಅವರು ತಮ್ಮ ತಂದೆಯ ಸಮುದಾಯಮುಖಿ ಚಿಂತನೆಯ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ಪ್ರಾಯೋಜಿಸಿದ್ದಾರೆ.

ಈ ಪ್ರಶಸ್ತಿಯು ಹತ್ತು ಸಾವಿರ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಮೇ 27 ಮತ್ತು 28 ರಂದು ವಿಜಯಪುರದಲ್ಲಿ ನಡೆವ 9ನೇ ಮೇ ಸಾಹಿತ್ಯ ಮೇಳದಲ್ಲಿ ಪ್ರದಾನ ಮಾಡಲಾಗುವುದು..

ಪ್ರಾಣಾಪಾಯ ಎದುರಿಗಿದ್ದರೂ ಕೋಮುವಾದ ಈ ದೇಶದ ಬಹುದೊಡ್ಡ ಅಪಾಯವೆಂದು ತಿಳಿದು ಆ ಕುರಿತು ಸಾಂಸ್ಕೃತಿಕವಾಗಿ ಚಳವಳಿ ರೂಪಿಸುತ್ತಿರುವ ಸಿ. ಬಸವಲಿಂಗಯ್ಯ ಮೇ ಸಾಹಿತ್ಯ ಮೇಳದ ಬಳಗ ಅಭಿನಂದಿಸುತ್ತದೆ.

‍ಲೇಖಕರು avadhi

May 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: