ಜೆ ಎಂ ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿ’

ನಾಡಿನ ನೆಲಜಲಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡ ಜೆ ಎಂ ವೀರಸಂಗಯ್ಯ ಅವರು ಬಳ್ಳಾರಿ ಜೆಲ್ಲೆಯನ್ನೊಳಗೊಂಡು ಇಡೀ ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ರೈತ ಪರವಾದ ಹೋರಾಟಗಳನ್ನು ಕಟ್ಟಿ ಮುನ್ನೆಡೆಸಿದವರು.

ನಾಡಿನಲ್ಲಿ ನಡೆವ ಇತರ ಅನೇಕ ಪ್ರಗತಿಪರ ಹೋರಾಟದಲ್ಲಿ ಧುಮುಕಿದರೂ ಅವರ ಕೇಂದ್ರ ಕಾಳಜಿ ಮಾತ್ರ ಕೃಷಿಸಂಬಂಧಿತ ವಿಷಯಗಳೇ ಆಗಿದ್ದವು. ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ರೈತರ ಜೀವನಾಡಿಯಾಗಿ ಕೆಲಸ ಮಾಡಿ ಬಡ ರೈತರ ಕಣ್ಮಣಿಯಾದವರು.

ಕಾರ್ಯಕರ್ತನಾಗಿ ರೈತ ಸಂಘ ಸೇರಿ ರೈತರಿಗಾಗಿ ಕೆಲಸ ಮಾಡುತ್ತ ಬಂದ ಅವರು ಈಗ ರೈತ ಸಂಘದ ರಾಜ್ಯದ ಕಾರ್ಯಾಧ್ಯಕ್ಷರಾಗಿ ಈಗ ಕಾರ್ಯ ಮಾಡುತ್ತಿದ್ದಾರೆ.

2003ರಲ್ಲಿ ಸಮಾನ ವಿದ್ಯುತ್ ನೀತಿಗಾಗಿ ಹೋರಾಟ ನಡೆಸುತ್ತಿರುವಾಗ ಪೊಲೀಸ್ ಲಾಠಿ ಏಟಿನಿಂದ ಮೂತ್ರ ಪಿಂಡ (ಕಿಡ್ನಿ) ವೈಫಲ್ಯವಾಗಿ ಆರು ವರ್ಷಗಳ ಕಾಲ ಡಯಾಲಿಸಿಸ್‌ಗೆ ಒಳಪಟ್ಟಿದ್ದರು. ಆರ್ಥಿಕವಾಗಿ ಮತ್ತು ದೈಹಿಕವಾಗಿ ತುಂಬಾ ಕಷ್ಟದ ದಿನಗಳನ್ನು ಎದುರಿಸಿದರೂ ರೈತ ಹೋರಾಟಗಳನ್ನು ಕೈಬಿಡಲಿಲ್ಲ.

ಅವರ ರೈತಪರ ಹೋರಾಟ ಮತ್ತು ಕಾಳಜಿ ಅನನ್ಯವಾದುದು. ಅವರ ಈ ಅಪಾರ ಶ್ರದ್ಧೆಯನ್ನು ಗಮನಿಸಿಕೊಂಡು ಅವರನ್ನು 2023ರ ಸಾಲಿನ ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿಗೆ ಆಯ್ದುಕೊಅಂಡಿದ್ದೇವೆ.

ಈ ಪ್ರಶಸ್ತಿಯನ್ನು ನ್ಯಾಯವಾದಿಗಳಾದ ಬಸವರಾಜ ಸಂಶಿ ಅವರ ತಂದೆಯ ನೆನಪಿನಲ್ಲಿ ಪ್ರಾಯೋಜಿಸಿದ್ದಾರೆ. ಪ್ರಶಸ್ತಿಯು ರೂ ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಮೇ 27 ಮತ್ತು 28 ರಂದು ವಿಜಯಪುರದಲ್ಲಿ ಮೇ ಸಾಹಿತ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

‍ಲೇಖಕರು avadhi

May 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: