ಸಿ ಡಿ ಯಲ್ಲಿ ‘ಕುಮಾರವ್ಯಾಸ ಭಾರತ’

ಇದೊಂದು ಮನದುಂಬಿ ಬಂದಿರುವ ಕ್ಷಣ.

ತಂತ್ರಜ್ಞಾನದ ಸಾಮರ್ಥ್ಯವನ್ನು ಭಾಷೆಗೆ ನೀಡುವ ಮತ್ತೊಂದು ಕೊಡುಗೆ ಇದೀಗ ಸಿದ್ಧವಾಗಿದೆ. ವಿವರಗಳು ಹೀಗಿವೆ:

ಅದೇ, ಬಹುಜನ ರಂಜಕ ಕುಮಾರವ್ಯಾಸ ಭಾರತದ ಅಡಕಮುದ್ರಿಕೆ ಆವೃತ್ತಿ. ಇದು ಒಂದು ಬಹುಮಾಧ್ಯಮದ ಅಡಕಮುದ್ರಿಕೆ.

ಇದರಲ್ಲಿನ ಸೌಲಭ್ಯಗಳಲ್ಲಿ ಬಹಳ ಮುಖ್ಯವಾದದ್ದು ಶೋಧನೆ. ಕುಮಾರವ್ಯಾಸ ಒಂದು ಪದವನ್ನು ಎಲ್ಲೆಲ್ಲಿ ಬಳಸಿದ್ದಾನೆ ಎಂಬುದನ್ನು ಸುಲಭವಾಗಿ ಹುಡಕಬಹದು.

ಇತರೆ ಸೌಲಭ್ಯಗಳು:

ಎಲ್ಲ ಪದ್ಯಗಳ ಗದ್ಯಾನುವಾದ

ಪಾಠಾಂತರಗಳು.

ಟಿಪ್ಪಣಿಗಳು

ಲೇಖನ ಸೂಚಿ

ಪರಾಮರ್ಶನ ಗ್ರಂಥ ಸೂಚಿ

ಕುಮಾರವ್ಯಾಸ ಕಾವ್ಯದಲ್ಲಿ ಬಳಕೆಯಾಗಿರುವ ಗಾದೆಗಳ ಸಂಗ್ರಹ

ಗದುಗಿನ ವಿಡಿಯೋ

ಚಿತ್ರ ಸಂಪುಟ

ಕಠಿಣ ಪದಗಳ ಅರ್ಥ (ಸುಮಾರು 18000 ಪದಗಳಿಗೆ)

ಪ್ರಧಾನ ಸಂಪಾದಕರು ಪ್ರೊ ಟಿ ವಿ ವೆಂಕಟಾಚಲ ಶಾಸ್ತ್ರೀಗಳು.

ಇದರೊಂದಿಗೆ ಸುಮಾರು 800 ಪದ್ಯಗಳಿಗೆ ಗಮಕ ವಾಚನವನ್ನು ನೀಡಲಾಗಿದೆ. ಇದುವರೆಗೆ ಪಾಠನಿರ್ಣಯದಲ್ಲಿ ಇದ್ದ ಅನೇಕ ದೋಷಗಳನ್ನು ನಿವಾರಣೆ ಮಾಡಲಾಗಿದೆ. ಪಾಠ ನಿರ್ಣಯದಲ್ಲಿ ಸಾಹಿತ್ಯ ಮಾತ್ರವಲ್ಲದೆ ಅನೇಕ ಇತರ ವಿಭಾಗದ ವಿದ್ವಾಂಸರು ಸಹಾಯ ಮಾಡಿದ್ದಾರೆ (ಆ ಪಟ್ಟಿಯಲ್ಲಿ ನಮ್ಮ ಶ್ರೀ ಟಿ ಆರ್ ಅನಂತರಾಮು ಅವರ ಹೆಸರೂ ಇದೆ!) ಹೀಗಾಗಿ ಇದೊಂದು ಅನನ್ಯ ಅಡಕ ಮುದ್ರಿಕೆಯಾಗಿ ಹೊಮ್ಮಿದೆ.

ನಾವು ಅಭಿವೃದ್ಧಿಪಡಿಸಿದ ಪಂಪನ ಮಹಾಕಾವ್ಯಗಳು ಅಡಮಮುದ್ರಿಕೆ ಹೊಂದಿರುವವರು ಎರಡೂ ಕಾವ್ಯಗಳಲ್ಲಿನ ಪ್ರಸಂಗಗಳನ್ನು ತೌಲನಿಕವಾಗಿ ಅಧ್ಯಯನ ಮಾಡಲು ಇದು ತುಂಬಾ ಸಹಕಾರಿ.

ಸಮಾರಂಭದಂದು ರೂ ಸಾವಿರದ ಅಡಕಮುದ್ರಿಕೆಯನ್ನು ಶೇ50ರ ರಿಯಾಯಿತಿಯಲ್ಲಿ ನೀಡಲಾಗುವುದು.

-ಕೆ. ಎಸ್. ನವೀನ್

 

K.S. Naveen, 5/1, S.N. Lane, Upparahalli, Chikka Mavalli Post, Bengaluru – 560 004.

080-2661 5972(O) 080-2657 7902  Mobile: 094489-05214 098458-48822

www.kagapa.org

‍ಲೇಖಕರು G

July 14, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಶೋಕವರ್ಧನ ಜಿ.ಎನ್

    ಈ ರಿಯಾಯ್ತಿ ದರದ ಮಾರಾಟ ಯಾವುದೇ `ಮಾಲಿಗೂ’ ಗಾಂಭೀರ್ಯ ತರುವುದಿಲ್ಲ. ಅದಕ್ಕೂ ಹೆಚ್ಚಿಗೆ ಅದಕ್ಕೆ ಮಾರುಕಟ್ಟೆಯ ಸ್ಥಿರತೆ ಖಂಡಿತಾ ಉಳಿಸುವುದಿಲ್ಲ. ನಾಳೆ ನೀವು ಇನ್ನೂ ಇಳಿಸಬಹುದು ಎಂಬ ನಿರೀಕ್ಷೆ ಜನರಲ್ಲಿ ಬಂದರೆ ತಪ್ಪಿಲ್ಲ. ಅನಧಿಕೃತ ಪ್ರತಿ ಮಾಡುವವರನ್ನಂತೂ ನೀವು ದೂರುವಂತೆಯೇ ಇಲ್ಲ. ಅವೆಲ್ಲಕ್ಕೂ ಹೆಚ್ಚಾಗಿ, ೫೦% ಕೊಟ್ಟೂ ನಷ್ಟವಾಗುವುದಿಲ್ಲ ಅಥವಾ ತಾಳಿಕೊಳ್ಳಬಲ್ಲಿರಿ ಎನ್ನುವ ಸ್ಥಿತಿ ಇದ್ದರೆ ಕುಮಾರವ್ಯಾಸ ಭಾರತ ಪುಸ್ತಕ ಮೂವತ್ತು ರೂಪಾಯಿಗೆ ಸಿಕ್ಕಂತೆ ಇದನ್ನೂ ಕಡಿಮೆ ಬೆಲೆಗೇ ಮಾರಾಟಕ್ಕಿಳಿಸಬಹುದಲ್ಲ. ಹೂರಣ ತುಂಬಾ ಆಕರ್ಷಕವಾಗಿದೆ. ಅದಕ್ಕೆ ನಿಮಗೆಲ್ಲರಿಗೂ ಕೃತಜ್ಞ, ಅಭಿನಂದನೆಗಳು.
    ಅಶೋಕವರ್ಧನ

    ಪ್ರತಿಕ್ರಿಯೆ
  2. ಕೆ ಎಸ್ ನವೀನ್

    ನಮಸ್ಕಾರ ಸರ್. ತಾವು ಹೇಳಿದ್ದನ್ನು ಒಪ್ಪಿದ್ದೇವೆ. ಬೆಲೆಯೀಗ ರೂ 800. ಲೋಕಾರ್ಪಣೆಯ ದಿನ ತುಸು ರಿಯಾಯಿತಿ ಕೊಡಲಾಗುವುದು. ಉಳಿದಂತೆ. ಇಷ್ಟೇ ಇರುತ್ತದೆ. ಮಾರಾಟಗಾರರಿಗೆ ಶೇ 33.33. ಎಂದು ನಿಗದಿಮಾಡಿದ್ದೇವೆ.

    ತಮ್ಮ ಸಕಾಲಿಕೆ ಸಲಹೆಗೆ ಧನ್ಯವಾದಗಳು
    ಆದರಗಳೊಂದಿಗೆ

    ಕೆ ಎಸ್ ನವೀನ್

    ಪ್ರತಿಕ್ರಿಯೆ
  3. hsv

    ಹೀಗೆ ಕುಮಾರವ್ಯಾಸನ ಕೃತಿ ಶ್ರುತಿ ರೂಪದಲ್ಲಿ ಬರುತ್ತಿರುವುದು ತುಂಬ ಹರ್ಷ ನೀಡಿದೆ. ಇದನ್ನು ಆಗು ಮಾಡಿರುವ ತಮಗೆಲ್ಲಾ ಅತ್ಯಂತ ಪ್ರೀತಿಯ ಶುಭಾಶಯಗಳು. ಇದು ಎಲ್ಲಿ ಖರೀದಿಗೆ ದೊರೆಯುವುದು ತಿಳಿಸಿರಿ. ನಾನಿದನ್ನು ಕೊಳ್ಳಲು ತುಂಬ ಉತ್ಸಾಹಿಯಾಗಿದ್ದೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: