ಚಂದ್ರಶೇಖರ ಆಲೂರು ಕಾಲಂ: ಟ್ರಾಫಿಕ್ ಸಿಗ್ನಲ್‌ನ ಸೊಬಗು

‘ಅಯ್ಯೋ ಇನ್ನೂ ೧೯೪ ಸೆಕೆಂಡುಗಳು, ಮೂರು ನಿಮಿಷಕ್ಕಿಂತ ಹೆಚ್ಚು. ಛೆ’ ಎಂದುಕೊಂಡು ಕಾರಿನ ಎಂಜಿನ್ ಆಫ್ ಮಾಡಿದೆ. ಒಂದು ಬಗೆಯ ಅನ್ಯಮನಸ್ಕತೆಯಿಂದ ಅಕ್ಕ-ಪಕ್ಕ, ಮುಂದಿರುವ ಸಹಯಾತ್ರಿಗಳನ್ನು ನೋಡಿ, ಕನ್ನಡಿಯಲ್ಲಿ ಹಿಂದಿನ ವಾಹನಗಳವರನ್ನು ಗಮನಿಸಿದೆ. ಡ್ರೈವರ್ ಸೀಟ್‌ನಲ್ಲಿದ್ದ ಹೊಂಡಾ ಸಿವಿಕ್‌ನ ಹುಡುಗಿ, ಕೂಲಿಂಗ್ ಗ್ಲಾಸ್ ತೆಗೆದು ಗಾಜನ್ನು ಕರ್ಚೀಫ್‌ನಿಂದ ಉಜ್ಜುತ್ತಿದ್ದಳು. ಯಾವುದೋ ಎಫ್‌ಎಂನಲ್ಲಿ ಆರ್‌ಜೆಯೊಬ್ಬ ಕವಕವ ಎಂದು ಒಂದೇ ಸಮನೆ ಕೂಗಿಕೊಳ್ಳುತ್ತಿದ್ದ. ಮಾತಿಲ್ಲದ ಚಾನಲ್‌ಗಾಗಿ ಹುಡುಕುತ್ತಾ ಹೋದಾಗ ಒಂದು ಎಫ್‌ಎಂನಲ್ಲಿ ‘ನಿನ್ನಿಂದಲೇ…’ ಹಾಡು ಬರುತ್ತಿತ್ತು. ವಾಲ್ಯೂಮ್ ಕೊಂಚ ಜಾಸ್ತಿ ಮಾಡಿ, ಮನೋಮೂರ್ತಿಯವರ ಬೀಟ್ಸ್‌ಗೆ ಹಾಗೇ ಬೆರಳಿನಿಂದ ಕಾರನ್ನು ಟ್ಯಾಪ್ ಮಾಡುತ್ತಾ, ಟ್ರಾಫಿಕ್ ಸಿಗ್ನಲ್‌ಗಳ ಸೊಬಗಿನ ಬಗ್ಗೆ ಯೋಚಿಸುತ್ತಾ ನಿರುಮ್ಮಳವಾಗಿ ಕುಳಿತಿದ್ದೆ. ಯಾವುದೋ ಬೆಟ್ಟ-ಕಣಿವೆಗಳಲ್ಲಿ ಕುಳಿತವನಂತೆ.

ಯಾರೋ ನಾನು ಟ್ಯಾಪ್ ಮಾಡುತ್ತಿದ್ದ ಬೆರಳುಗಳನ್ನು ಹಿಡಿದುಕೊಂಡರು. ಯಾರಿದು ಎಂದು ಆಶ್ಚರ್ಯದಿಂದ ಕತ್ತು ಹೊರಳಿಸಿದರೆ ಗೆಳೆಯ ಜಯಂತ್ ಕಾಯ್ಕಿಣಿ. ‘ಅರೆ, ನಿಮ್ಮ ಹಾಡನ್ನೆ ಕೇಳುತ್ತಿದ್ದೆ’ ಎನ್ನುತ್ತಾ ವಾಲ್ಯೂಮ್ ಕೊಂಚ ತಗ್ಗಿಸಿದೆ. ಅವರನ್ನು ನೋಡಿ ಯಾವುದೋ ಕಾಲವಾಗಿತ್ತು. ಅಂತೆಯೇ ಈ ಅನಿರೀಕ್ಷಿತ ಭೆಟ್ಟಿಗೆ ಖುಷಿಯಾಯ್ತು. ರವಿಯಂತೆಯೇ ಜಯಂತ್ ಕೂಡಾ ಒಬ್ಬ ಅಪ್ರತಿಮ ಮಾತುಗಾರ. ಅವರ ಮಾತು ಕೇಳುವುದೇ ಒಂದು ಚೆಂದ. ಹೀಗಾಗಿ ಹಿಂದಿನ ವಾಹನಗಳು ಹಾರ್ನ್ ಮಾಡುವವರೆಗೂ ನಾವು ನಿಶ್ಚಿಂತೆಯಿಂದ ಹಾಯಾಗಿ ಮಾತಾಡಿದೆವು. ನಂತರ ಗಡಿಬಿಡಿಯಲ್ಲಿ ಪರಸ್ಪರ ವಿದಾಯ ಕೋರಿದೆವು.

ಅದು ಪದ್ಮನಾಭನಗರದ ದೇವೆಗೌಡ ಪೆಟ್ರೋಲ್ ಬಂಕ್‌ನ ಸಿಗ್ನಲ್. ನಾನು ಬ್ಯಾಂಕಿಗೆ ಹೊರಟಿದ್ದೆ. ಜಯಂತ್ ಅಲ್ಲಿಯೇ ಹತ್ತಿರ ಇರುವ ನಿರ್ದೇಶಕ ಯೋಗರಾಜ ಭಟ್ಟರ ಆಫೀಸಿಗೆ ಬಂದಿದ್ದರಂತೆ. ಡಿ.ಜಿ. ಕ್ಯಾಂಟೀನಿನಲ್ಲಿ ಟೀ ಕುಡಿಯಲೆಂದು ಬಂದವರು ರಸ್ತೆ ದಾಟುವಾಗ ನನ್ನನ್ನ ಕಂಡರು. ಹಲವು ಸೆಕೆಂಡುಗಳಲ್ಲಿಯೇ ಜಯಂತ್ ತಮ್ಮ ಸಿನೆಮಾ ಜಗತ್ತಿನ ಅನುಭವಗಳ ಬಗ್ಗೆ ಹೇಳಿದರು. ‘ಕಾಲಂಗೆ ಕೆಲವು ವಾರ ರೆಸ್ಟ್ ಕೊಟ್ಟು ಒಂದು ಕಾದಂಬರಿ ಬರೆಯಿರಿ’ ಎಂದು ಸೂಚಿಸಿದರು. ನಾನು ದೊಡ್ಡದಾಗಿ ನಗುತ್ತಾ ‘ಮೊದಲು ನೀವು ಬರೆಯಬೇಕು’ ಎಂದೆ. ಇಬ್ಬರೂ ಈ ವರ್ಷ ಒಂದೊಂದು ಕಾದಂಬರಿ ಬರೆಯೋಣ ಎಂದು ಹೊಸ ವರ್ಷಕ್ಕಾಗಿ ಡಿesoಟuಣioಟಿ ಮಾಡಿಕೊಂಡೆವು… ಹೀಗೆ ಏನೇನೋ ಮಾತು.

ಇಂಥ ಅನಿರೀಕ್ಷಿತ ಭೆಟ್ಟಿಗಳು ಅದರಲ್ಲಿಯೂ ಟ್ರಾಫಿಕ್ ಸಿಗ್ನಲ್‌ನಲ್ಲಿ ಹಲವು ಸೆಕೆಂಡುಗಳ ಮಾತು ಎಷ್ಟೊಂದು ಉಲ್ಲಾಸ ನೀಡುತ್ತದೆ ಎಂದು ಯೋಚಿಸುತ್ತಾ ಡ್ರೈವ್ ಮಾಡುತ್ತಿದ್ದೆ. ಅಷ್ಟರಲ್ಲಿ ಒಂದು ಮೆಸೇಜ್ ಬಂತು. ಮುಂದಿನ ಸಿಗ್ನಲ್‌ನಲ್ಲಿ ನಿಲ್ಲಿಸಿದಾಗ ನೋಡಿದೆ : ’ಖಿhough bಡಿieಜಿ suಛಿh meeಣiಟಿgs ಚಿಡಿe, so eಟಿಡಿiಛಿhiಟಿg ಚಿಟಿಜ so ಜeeಠಿಟಥಿ ಡಿeಚಿssuಡಿiಟಿg- ಜಯಂತರ ಮೆಸೇಜು.’

ನಾನು ಬೆಂಗಳೂರಿಗೆ ಬಂದಾಗಿನಿಂದ ಬಸ್ಸು, ಆಟೋ, ಟಿ.ವಿ.ಎಸ್, ಲೂನಾ, ಸ್ಕೂಟರು, ಬೈಕುಗಳಲ್ಲಿ ಓಡಾಡುತ್ತಿದ್ದ ಕಾಲದಿಂದಲೂ ಈ ಟ್ರಾಫಿಕ್ ಸಿಗ್ನಲ್‌ಗಳ ಸೊಬಗಿಗೆ ಮಾರು ಹೋಗಿದ್ದೇನೆ. ಈ ಸಿಗ್ನಲ್‌ಗಳಲ್ಲಿ ಸಾಮಾನ್ಯವಾಗಿ ನಾನು ಇರಿಟೇಟ್ ಆಗುವುದಿಲ್ಲ. ಸ್ಕೂಟರು-ಬೈಕಿನಲ್ಲಿ ಓಡಾಡುವಾಗ ಹೆಲ್ಮೆಟ್ ತೆಗೆದು ಕನ್ನಡಿಗೆ ಹಾಕಿ ಸಹಯಾತ್ರಿಗಳನ್ನ ಸುಮ್ಮನೆ ನೋಡುತ್ತಿದ್ದೆ. ನಾನು ಇಂಥ ಸಿಗ್ನಲ್‌ಗಳಲ್ಲಿ ಗಂಡ-ಹೆಂಡತಿಯರ ಅಥವಾ ನಲ್ಲನಲ್ಲೆಯರ ಜಗಳಗಳನ್ನು ನೋಡಿದ್ದೇನೆ. ಹೆಣ್ಣು ಮುನಿಸಿಕೊಂಡು ಕೆಳಗಿಳಿದು ಹೋದಾಗ ಆಕೆಯನ್ನು ಸಮಾಧಾನಿಸಿ ಕರೆತರಲೂ ಆಗದೆ, ವಾಹನವನ್ನು ಅಲ್ಲೇ ಬಿಟ್ಟು ಹೋಗಲೂ ಆಗದೆ ಮಂಗಗಳಾದ ಮಾನವರನ್ನು ಕಂಡಿದ್ದೇನೆ. ಯಾವುದೇ ಸಂಕೋಚವಿಲ್ಲದೆ ಅಂದಿನ ಅಡುಗೆಯ ಸಂಪೂರ್ಣ ವಿವರಗಳನ್ನು ಗಟ್ಟಿಯಾಗಿ ಮಾತಾಡುವ ಹೆಂಗಸರು; ಮೊಬೈಲ್‌ನಲ್ಲಿಯೇ ‘ಆಗಲ್ಲ, ಆಗಲ್ಲ ೨೫೦೦೦ಕ್ಕೆ ಕಡಿಮೆ ಆಗಲ್ಲ, ನಮ್ಮ ಸಾಹೇಬ ಒಪ್ಪಲ್ವಪ್ಪ, ಭಲ್ ಕಿರಿಕ್ ನನ್‌ಮಗ ಅವನು… ನೋಡು ಹಂಗಿದ್ರೆ ನೀನು ಬೇರೆಯವರತ್ರ ಮಾಡಿಸ್ಕೋ’ ಎಂದು ಸಿಗ್ನಲ್‌ನಲ್ಲಿ ನಿಂತವರಿಗೆಲ್ಲ ಕೇಳಿಸುವಂತೆ ಮಾತಾಡುವ ವಿಧಾನಸೌಧದ ನೌಕರರ; ‘ಸಾರ್ ಸಾರ್ ಓನರ್ ಹತ್ರಾನೆ ಇದೀನಿ ಒಂದು ಲಕ್ಷ, ಹತ್ತು ಸಾವಿರ ಫೈನಲ್ ಎನ್ನುವ ಬ್ರೋಕರ್‌ಗಳನ್ನ; ಸಿಗ್ನಲ್ ಇನ್ನೂ ಎಪ್ಪತ್ತು-ಎಂಬತ್ತು ಸೆಕೆಂಡುಗಳನ್ನ ತೋರುತ್ತಿದ್ದರೂ ಹಾರ್ನ್ ಮಾಡುವ ಸ್ಕೂಟರ್ ವಾಲಾಗಳನ್ನ; ತನ್ನ ಆಟೋ ಇರುವುದೇ ಸುತ್ತ ಮುತ್ತ ಇರುವವರಿಗೆ ಹಾಡು ಕೇಳಿಸಲು ಎಂಬಂತೆ ಎಫ್‌ಎಮ್ಮನ್ನೋ, ಟೇಪ್‌ರೆಕಾರ್ಡರನ್ನೋ ಹಾಕಿರುವ ಆಟೋವಾಲಾ; ಸ್ಕೂಟಿಯಲ್ಲಿ ಬೆನ್ನೆಲ್ಲ ತೋರುವ ರವಿಕೆ ತೊಟ್ಟಿರುವ ಯುವತಿ; ಕೈನೆಟಿಕ್‌ನಲ್ಲಿ ಕೂದಲು ಕಲರ್ ಮಾಡಿಸಿಕೊಂಡಿರುವ ಹುಡುಗಿ, ಬೈಕ್ ಹಿಂದೆ ಬೆನ್ನ ಕೆಳಗಿನ ಸೀಳೆಲ್ಲ ಕಾಣುವಂತೆ ಟಾಪ್ ಧರಿಸಿರುವ ಬಾಲೆ, ನಿಜ ಹೇಳಬೇಕೆಂದರೆ ಬೆಂಗಳೂರನ್ನ ಪ್ರವೇಶಿಸುವ ಹೊಸ ಹೊಸ ಫ್ಯಾಷನ್ನು ನನಗೆ ಪರಿಚಯವಾಗುವುದೇ ಈ ಸಿಗ್ನಲ್‌ಗಳಲ್ಲಿ.

ಅಷ್ಟೇ ಅಲ್ಲ, ಇಂಥ ಸಿಗ್ನಲ್‌ಗಳಲ್ಲಿ ಹಲವೊಮ್ಮೆ ದೇಶದ ರಾಜಕಾರಣದ ಬಗ್ಗೆ, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ, ಕ್ರಿಕೆಟ್ ಬಗ್ಗೆ ಸುತ್ತಳತೆಯಲ್ಲಿರುವ ನಾಲ್ಕಾರು ಜನರಲ್ಲಿಯೇ ಸಣ್ಣಪುಟ್ಟ ಚರ್ಚೆಗಳು ನಡೆಯುತ್ತವೆ. ಬೇಸಿಗೆಯಲ್ಲಿ ಹೆಲ್ಮೆಟ್ ತೆಗೆದು ಬೆವರು ಒರೆಸಿಕೊಳ್ಳುತ್ತಿರುವ ಮಧ್ಯವಯಸ್ಕನೊಬ್ಬ ‘ಬಡ್ಡೀ ಮಕ್ಳು ಅಲ್ಲಿ ಕೂತ್ಕೊಂಡು ಆರ್ಡರ್ ಮಾಡಿಬಿಡ್ತಾರೆ. ಇಲ್ಲಿ ಈ ಬೆಂಗಳೂರು ಟ್ರಾಫಿಕ್‌ನಲ್ಲಿ ಹೆಲ್ಮೆಟ್ ಹಾಕೋ ಕಷ್ಟ ಅವರಿಗೇನು ಗೊತ್ತಾಗಬೇಕು ಸಾರ್’ ಎನ್ನುತ್ತಾನೆ. ಪಕ್ಕದವನು ‘ಎಲ್ಲಾ ಚಿಜರಿusಣmeಟಿಣ ಸಾರ್ ಈ ಹೆಲ್ಮೆಟ್ ಕಂಪನಿಯವರು ಚೆನ್ನಾಗಿ ತಿನ್ನಿಸ್ತಾರೆ ಅದಕ್ಕೇ ಇದೆಲ್ಲ…’ ಬೈಕಿನಿಲ್ಲರುವ ಹುಡುಗನೂ ಬಾಯಿತೀಟೆ ತಡೆಯಲಾರದೆ ‘ಈ ಬೆಂಗಳೂರು ರಸ್ತೇಲಿ ಇನ್ಯಾವ ಸ್ಪೀಡ್ ಹೋಗೊಕ್ಕಾಗುತ್ತೆ ಹೇಳಿ…’- ಹೀಗೆ ಮಾತುಕತೆಗೆ ಇಂಥದೇ ಆಗಬೇಕು ಎಂದೇನಿಲ್ಲ.

ಇದೆಲ್ಲಾ ಗೌಜು-ಗದ್ದಲದ ನಡುವೆ ‘ನನ್ನ ಹಾಡು ನನ್ನದು’ ಎಂಬಂತೆ ಮೊಬೈಲ್ನಲ್ಲಿ ಹಾಡು ಕೇಳುತ್ತಾ ಹೆಲ್ಮೆಟ್ ಒಳಗೆ ವಿಶಲ್ ಹಾಕುತ್ತಿರುವ ಹುಡುಗಿ; ರಣಾಂಗಣಕ್ಕೆ ಹೋಗುವ ಮುನ್ನವೇ ಸೋತವರಂತೆ ಹ್ಯಾಪು ಮೋರೆ ಹಾಕಿಕೊಂಡು ಕಾರು-ಟ್ಯಾಕ್ಸಿಗಳಲ್ಲಿ ಕುಳಿತಿರುವ ಟೆಕ್ಕಿಗಳು; ಬೈಕ್‌ನಲ್ಲಿ ಕುಳಿತು ಕೈ ಬಾಯಿ ಆಡಿಸುತ್ತಾ ಹುಚ್ಚನಂತೆ ಒಬ್ಬನೇ ಮಾತಾಡಿಕೊಳ್ಳುತ್ತಿರುವ ಹುಡುಗ; ಹಿಂದಿನ ರಾತ್ರಿ ಸಂಪೂರ್ಣ ರಾಮಾಯಣ ಅಥವಾ ದಾನಶೂರ ಕರ್ಣ ನಾಟಕ ನೋಡಿದವರಂತೆ ಕ್ಯಾಬ್‌ನಲ್ಲಿ ತೂಕಡಿಸುತ್ತಿರುವ ಕಾಲ್‌ಸೆಂಟರ್ ಹುಡುಗ-ಹುಡುಗಿಯರು; ಅಪ್ಪ-ಅಮ್ಮನ ಬೈಕು ಸ್ಕೂಟರಿನ ಹಿಂದೆಯೇ ಕುಳಿತು ಪರೀಕ್ಷೆಗೋ, ಟೆಸ್ಟಿಗೋ ಓದಿಕೊಳ್ಳುತ್ತಿರುವ ಅಥವಾ ಮೊಬೈಲ್‌ನಲ್ಲಿ ಗೇಮ್ ಆಡುತ್ತಿರುವ ಮಕ್ಕಳು, ಶಾಲೆಯ ಬಸ್ಸು-ಆಟೋಗಳಲ್ಲಿ ತೂಕಡಿಸುತ್ತಿರುವ ಪುಟ್ಟ ಮಕ್ಕಳು-ಹೀಗೆ ಒಂದು ಮಿನಿ ಬೆಂಗಳೂರೇ ಟ್ರಾಫಿಕ್ ಸಿಗ್ನಲ್‌ನಲ್ಲಿರುತ್ತದೆ.

ಇಲ್ಲಿ ಸಣ್ಣ-ಪುಟ್ಟ ಜಗಳಗಳು-ಮೋಜು ಕೂಡಾ ಕಾಣಸಿಗುತ್ತದೆ. ಒಮ್ಮೆ ಯಾರೋ ಕಾರಿನವನು ಹತಾರು ಮೈಲಿಗೆ ಕೇಳುವವನಂತೆ ರೇಡಿಯೋ ಹಾಕಿಕೊಂಡಿದ್ದ. ಜಿಂಗ್ ಜಿಂಗ್ ಎಂದು ಭೀಕರ ಸದ್ದು ಬರುತ್ತಿತ್ತೇ ವಿನಾ ಹಾಡೇ ಇರಲಿಲ್ಲ. ಕಾರಿನ ಪಕ್ಕದಲ್ಲಿಯೇ ಇದ್ದ ಬೈಕಿಗನೊಬ್ಬ, ಕಾರಿನವನಿಗೆ “ಅಣ್ಣಾ ಕಾರಲ್ಲೇನು ಅಣ್ಣಮ್ಮನ್ನ ಕೂರಿಸ್ಕೊಂಡು ಹೋಯ್ತಿದೀಯ, ಅದ್ಯಾಕೆ ಹಂಗೆ ಗ್ರಾಮಾಫೋನು ಹಾಕ್ಕೊಂಡಿದೀಯ ಸ್ವಲ್ಪ souಟಿಜ ಕಡಿಮೆ ಮಾಡು” ಎಂದ. ಆತ “ನನ್ನ ಕಾರು ನನ್ನ ರೇಡಿಯೋ ನಿನಗೇನು” ಎಂದು ಗದರಿಸಿದ. ಈತ ಕೂಲಾಗಿಯೇ “ಹೌದಪ್ಪಾ ಆದರೆ ಇಲ್ಲಿರೋರ ಕಿವಿಗಳು ನಿಮ್ಮಪ್ಪಂದು, ತಾತಂದೂ ಅಲ್ಲವಲ್ಲ” ಎಂದು ಅಕ್ಕಪಕ್ಕ ಇದ್ದವರನ್ನು ನೋಡಿದ. ಅವರೆಲ್ಲ ಹೌದೆನ್ನುವಂತೆ ತಲೆ ಆಡಿಸಿದರು. ಅವರೆಲ್ಲರ ಃoಜಥಿ ಟಚಿಟಿguಚಿge ಗಮನಿಸಿದ ಡ್ರೈವರ್ ರೇಡಿಯೋ ಆಫ್ ಮಾಡಿ ಚಕ್ಕಂತ ಕಿಟಕಿ ಗಾಜುಗಳನ್ನು ಏರಿಸಿಬಿಟ್ಟ. ನಂತರ souಟಿಜ ಠಿಡಿobಟem ಬಗ್ಗೆ ಅಲ್ಲಿ ಹಲವು ಸೆಕೆಂಡುಗಳ ಚರ್ಚೆ ನಡೆಯಿತು. ಬೆಂಗಳೂರು ಸಿಗ್ನಲ್‌ಗಳಲ್ಲಿ ಹೀಗೇ ಮೂರು ನಿಮಿಷ, ಐದು ನಿಮಿಷ, ಅರ್ಧ ಗಂಟೆ ಕಾಯುವಂತಾದರೆ ಡಿoಚಿಜ-ಡಿಚಿge ಹೆಚ್ಚಾಗಿ ವಿನಾ ಕಾರಣ ಜಗಳಗಳು ಶುರುವಾಗಿ ಬಿಡಬಹುದು.

ನಾನು ಮೇಲೆ ವಿವರಿಸಿದಂಥ ಮತ್ತೊಂದು ಸಾತ್ವಿಕ ಪ್ರತಿಭಟನೆಯ ಬಗ್ಗೆ ಹೇಳಲೇಬೇಕು. ಒಮ್ಮೆ ಆಫೀಸಿನಿಂದ ಮನೆಗೆ ಹೋಗುತ್ತಿದ್ದಾಗ, ಡಿ.ಜಿ. ಸಿಗ್ನಲ್‌ನಲ್ಲಿ : ನನ್ನ ಮುಂದೆ ಭವ್ಯವಾದ ಕಪ್ಪು ಕರೋಲ ಕಾರು. ಅದರ ಡ್ರೈವರ್ ತನ್ನ ಕಿಟಕಿ ಇಳಿಸಿ ದೊಡ್ಡ ಪೆಪ್ಸಿ ಬಾಟಲಿಯ ಕಡೆಯ ಗುಟುಕನ್ನು ಹೀರಿ ಬಾಟಲನ್ನು ಹಾಗೇ ರಸ್ತೆಯ ಮೇಲೆ ಎಸೆದ. ನನಗೆ ಮೈ ಉರಿದು ಹೋಯ್ತು. ಅಷ್ಟರಲ್ಲಿ ಪಲ್ಸರ್ ಬೈಕಿನಲ್ಲಿದ್ದ ಹುಡುಗನೊಬ್ಬ ಬೈಕ್‌ನ ಸ್ಟ್ಯಾಂಡ್ ಹಾಕಿ ಅವನ ಬಳಿ ಹೋದ. “ಅಲ್ರೀ ಅಮೆರಿಕಾ, ಇಂಗ್ಲಂಡ್‌ಗೆ ಹೋದರೆ ನಾಯಿಕುನ್ನಿಗಳ ಥರ ಬಾಲ ಮುದುರಿಕೊಂಡು ಇರ‍್ತೀರಿ. ಅಗಿದಿದ್ದ ಚ್ಯೂಯಿಂಗ್ ಗಮ್‌ನ ಕಾಗದದಲ್ಲಿ ಸುತ್ತಿ ಮತ್ತೆ ಜೇಬಿನಲ್ಲಿ ಹಾಕ್ಕೋತೀರಾ… ಇಲ್ಲಿ ರಸ್ತೇಲೆ ಬಾಟಲ್ ಎಸೀತೀರಾ, ನಾಚಿಕೆ ಆಗಲ್ವಾ ನಿಮಗೆ” ಎಂದು ಹೀನಾಮಾನ ಬೈದ. ಅದನ್ನು ಕೇಳಿಯೇ ಬೆಚ್ಚಿಬಿದ್ದ ಕಾರಿನವ ‘ಸಾರಿ ಸರ್’ ಎಂದು ಕೆಳಗಿಳಿದು ಬಂದ, ಎತ್ತರಕ್ಕೆ ಬೆಳ್ಳಗೆ ಉತ್ತರಭಾರತದವನಂತೆ ಕಾಣುತ್ತಿದ್ದ ಯುವಕ ಕೆಳಗೆ ಎಸೆದಿದ್ದ ಬಾಟಲನ್ನು ತೆಗೆದು ಕಾರಿನಲ್ಲಿ ಹಾಕಿ ಥಿou heಟಠಿeಜ me ಣo ಛಿoಡಿಡಿeಛಿಣ mಥಿseಟಜಿ, ಖಿhಚಿಟಿಞs ಎನ್ನುತ್ತಾ ಕೈ ಚಾಚಿದ. ನನಗೆ ಆ ಇಬ್ಬರು ಯುವಕರ ಬಗ್ಗೆಯೂ ಪ್ರೀತಿ ಮೂಡಿತು. ಆದರೆ ಇಂಥ ಘಟನೆಗಳು ವಿರಳ.

ಹೀಗೆ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳದ್ದೊಂದು ವರ್ಣರಂಜಿತ ಲೋಕ. ಇಲ್ಲಿ ನಡೆಯುವ ಸೊಪ್ಪು-ತರಕಾರಿ ಮಾರಾಟ; ಪೇಪರ್, ಮ್ಯಾಗಜಿನ್; ಫಾರಿನ್ ವಾಚು-ಕೂಲಿಂಗ್ ಗ್ಲಾಸುಗಳ ಮಾರಾಟ; ಕಾರು ಒರೆಸುವ ಬಟ್ಟೆಯಿಂದ eಚಿಡಿbuಜವರೆಗೆ ಸಕಲೆಂಟು ವಸ್ತುಗಳನ್ನು ಮಾರುವವರನ್ನು ಇಲ್ಲಿ ಕಾಣಬಹುದು. ಎಲ್ಲ ಸಿಗ್ನಲ್‌ಗಳಲ್ಲಿ ಸಾಮಾನ್ಯವಾಗಿ ಎಳೆಯ ಮಗುವನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡ ಒಂದು ಹೆಂಗಸನ್ನು ಹಾಗೂ ನಾಲ್ಕಾರು ಪುಟ್ಟ ಹುಡುಗ ಹುಡುಗಿಯರು ಭಿಕ್ಷೆ ಬೇಡುವುದನ್ನು ಖಾಯಂ ಆಗಿ ನೋಡಬಹುದು. ಇಲ್ಲಿ ಮಾರಾಟ ಮಾಡುವವರಿಗೆ ವಿಶೇಷ ಪರಿಣತಿ ಬೇಕಾಗುತ್ತದೆ. ಇದೊಂದು ರೀತಿಯ ಟ್ವೆಂಟಿ ಟ್ವೆಂಟಿ ಪಂದ್ಯದಂತೆ, ಕ್ಷಣ ಮಾತ್ರದಲ್ಲಿ ಎಲ್ಲ ಆಗಿ ಬಿಡಬೇಕು. ಅಂತೆಯೇ ಇಲ್ಲಿ ಮಾರುವ ಸೊಪ್ಪು-ತರಕಾರಿ; ಹೂವು-ಹಣ್ಣು ಹಳ್ಳಿಯಿಂದ ಬಂದದ್ದು – ಜಿಡಿesh ಸೊಪ್ಪು ಅನ್ನಬೇಕು. ನಿಮ್ಮ ವಸ್ತುಗಳನ್ನು ಬಿಕರಿ ಮಾಡಲು ಅಪಾರ ಜಾಣ್ಮೆ ಬೇಕು. ಸಂಜೆ ಹೊತ್ತು ಇಂಥ ಸಿಗ್ನಲ್‌ಗಳಲ್ಲಿ ಮಾರುವ ಸೊಪ್ಪು-ತರಕಾರಿಗಳಲ್ಲಿ ವೃಷಭಾವತಿಯ ವಾಸನೆ ಹೊಡೆಯುತ್ತಿದ್ದರೂ ಎಲ್ಲೋ ಒಮ್ಮೊಮ್ಮೆ ಇದನ್ನೆಲ್ಲ ಮರೆಮಾಚುವಂಥ ಮಲ್ಲಿಗೆಯ ಗಂಧ ಕಮ್ಮನೆ ಬಡಿಯುತ್ತದೆ.

ಈ ಮಲ್ಲಿಗೆಯ ಪರಿಮಳದಂತೆ, ಇಂದಿಗೂ ಸಿಗ್ನಲ್‌ಗಳಲ್ಲಿ ಒಮ್ಮೆ ಮಾತ್ರ ಕಂಡ ಎಷ್ಟೋ ಮುಖಗಳು ನನ್ನನ್ನು ಹಾಡುಗಳಾಗಿ ಕಾಡುತ್ತವೆ. ಇನ್ನೇನು ಸಿಗ್ನಲ್ ಸಿಕ್ಕೇ ಬಿಡುತ್ತದೆ ಎಂಬ ಧಾವಂತದಲ್ಲಿ ಕಣ್ಣೆಂಬ ಕ್ಯಾಮರಾದಲ್ಲಿ ಚಕಚಕನೆ ಸೆರೆ ಹಿಡಿದ ಚಿತ್ರಗಳು ಅವು. ಹೀಗಾಗಿ ಸಿಗ್ನಲ್‌ಗಳೆಂದರೆ ಕೇವಲ ಕರ್ಕಶ ಹಾರ್ನ್‌ಗಳು, ಕೋಳಿ ಜಗಳಗಳಷ್ಟೇ ಅಲ್ಲ. ಹಲವಾರು ಗೆಳೆತನ, ಪ್ರೇಮ, ಅಫೇರುಗಳು ಅರಳುವ ಜಾಗ ಕೂಡಾ. ನೀವು ಹತ್ತು ವರ್ಷದ ಹಿಂದೆ ಮೆಜೆಸ್ಟಿಕ್‌ನಲ್ಲಿಯೋ, ಎಂ.ಜಿ.ರಸ್ತೆಯಲ್ಲಿಯೋ ನೋಡಿ, ನಿಮ್ಮ ಎದೆಯೊಳಗೆ ಇಳಿದಿದ್ದ ಹುಡುಗಿ ಇದ್ದಕ್ಕಿದ್ದಂತೆ ಬಸವನಗುಡಿ ಸಿಗ್ನಲ್‌ನಲ್ಲಿ ಪ್ರತ್ಯಕ್ಷವಾಗುತ್ತಾಳೆ. ಯೂನಿಫಾರ್ಮ್‌ನಲ್ಲಿರುವ ಮಗನನ್ನೋ, ಮಗಳನ್ನೋ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಳೆ. ನೀವು ಮಹದಚ್ಚರಿಯಿಂದ ಅವಳನ್ನು ನೋಡುತ್ತಿರುವಾಗಲೇ ಆಕೆಯೂ ನಿಮ್ಮನ್ನು ಆಶ್ಚರ್ಯದಿಂದ, ಕುತೂಹಲದಿಂದ ಪರಿಚಿತ ಎಂಬಂತೆ ನೋಡಿದಾಗ ನಿಮ್ಮ ಹೃದಯ ನಚ್ಚಗಾಗುತ್ತದೆ. ಅಂದು ಛೇಡಿಸಿದ್ದು ಇನ್ನೂ ನೆನಪಿನಲ್ಲಿರಬಹುದೇ ಎಂದು ನೀವು ತಳಮಳಗೊಳ್ಳುವಷ್ಟರಲ್ಲಿ ಹಸಿರು ನಿಶಾನೆ ಆಕೆಯನ್ನು ಮಾಯ ಮಾಡಿ ಬಿಡುತ್ತದೆ. ಸಿಗ್ನಲ್‌ಗಳೇ ಹಾಗೆ, ಮಿಂಚಿನಂತೆ! ಅವು ನಿಮಗೆ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣಗಳು ಕೊಡುವಷ್ಟು ನಿರಾಳವಾದ ಸಮಯವನ್ನು ಕೊಡುವುದಿಲ್ಲ. ಆದರೂ ವೇಗಕ್ಕೆ, ಅತಿವೇಗಕ್ಕೆ ಹೊಂದಿಕೊಂಡ ನಮ್ಮ ಜನ ಈ ಹಲವಾರು ಸೆಕೆಂಡುಗಳಲ್ಲಿಯೇ iಟಿsಣಚಿಟಿಣ ವ್ಯಾಪಾರಕ್ಕೆ ಇಳಿಯುವುದನ್ನು ನಾವು ಕಾಣುತ್ತಿದ್ದೇವೆ. ಅಂದರೆ ಕೆಲವು ಸಿಗ್ನಲ್‌ಗಳಲ್ಲಿ ಎಲ್ಲಿಂದಲೋ ಬಂದಂತೆ ಕಾಣುವ ಬೆಡಗಿಯರು ಬೈಕಿನ ಹಿಂದೆ ಕೂರುವುದನ್ನು, ಕಾರು ಸೇರಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಅದೆಲ್ಲ ವಿವರ ಇಲ್ಲಿ ಬೇಡ!

?

ಇಷ್ಟು ವರ್ಷ ಬೆಂಗಳೂರು ಸಿಗ್ನಲ್‌ಗಳಲ್ಲಿ ಇವರ ಹಾವಳಿ ಇರಲಿಲ್ಲ. ಹಿಂದಿ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿದ್ದ ಈ ಹಿಜಡಾಗಳು ಈಗ ಬೆಂಗಳೂರಿಗೆ ಹಿಂಡು ಹಿಂಡಾಗಿ ಲಗ್ಗೆ ಹಾಕಿದ್ದಾರೆ. ‘ಏಯ್ ಕೊಡು ಅಂಕಲ್’, ‘ಕೊಡು ಸಾರ್ ಒಳ್ಳೇದಾಗುತ್ತೆ’ ‘ಕೊಡ್ರೀ’ ಮುಂತಾಗಿ ಭಿಕ್ಷೆ ಬೇಡುವ ಇವರನ್ನು ಕಂಡಾಗಲೆಲ್ಲ ನನ್ನ ಮನ ಅರೆ ಕ್ಷಣ ಖಿನ್ನವಾಗುತ್ತದೆ. ಕೆಲವರಂತೂ ಅವರದ್ದೇ ಶೈಲಿಯ ಚಪ್ಪಾಳೆ ತಟ್ಟದಿದ್ದರೆ ಅವರು ಹಿಜಡಾಗಳೆಂದು ತಿಳಿಯುವುದೇ ಇಲ್ಲ. ಅಂಥ ಸ್ಫುರದ್ರೂಪಿ, ಅಪ್ಪಟ ಅಸಲೀ ಹೆಣ್ಣುಗಳಂತೆ ಕಾಣುತ್ತಾರೆ. ಹಾಗೆಯೇ ಕೆಲವರು ಹಳ್ಳಿ ನಾಟಕದಲ್ಲಿ ಸ್ತ್ರೀ ವೇಷ ಧರಿಸಿದ ಪುರುಷನಂತೆ ಕಾಣುತ್ತಾರೆ. ಪ್ರಕೃತಿಯಲ್ಲಿ ಯಾಕಿಂಥ ವೈಚಿತ್ರ್ಯ ಅನ್ನಿಸಿ ಬಿಡುತ್ತದೆ. ಇಡೀ ಜೀವ ಜಗತ್ತು ಹೆಣ್ಣು ಗಂಡಿಂದ ಕೂಡಿರುವಾಗ ಮನುಷ್ಯ ವರ್ಗದಲ್ಲಿ ಮಾತ್ರ ಯಾಕೆ ಹೀಗೆ. ನನಗಂತೂ ಅದೇಕೋ ಬಾಲ್ಯ ಕಾಲದಿಂದಲೂ ಇವರನ್ನು ಕಂಡರೆ ವಿನಾಕಾರಣ ಭಯವಿತ್ತು. ಈಚೆಗೆ ಭಯದ ಬದಲು ಸಹಾನುಭೂತಿ.

ಆದರೂ ಭಿಕ್ಷೆ ಬೇಡುವ ಇವರನ್ನು ಕಂಡಾಗ ಅಸಹನೆ. ಮೂಢನಂಬಿಕೆಯ ಈ ಸಮಾಜದಲ್ಲಿ ಇವರಿಗೆ ಭಿಕ್ಷೆ ಹಾಕಿದರೆ ಒಳ್ಳೆಯದಾಗುತ್ತೆ, ಇವರನ್ನು ನೋಡಿದರೆ ಶುಭಶಕುನ ಎಂಬ ನಂಬಿಕೆ ಬೇರೆ ಇರುವುದರಿಂದ ಸಿಗ್ನಲ್‌ಗಳಲ್ಲಿ ಇವರ ಸಂತತಿ ಹೆಚುತ್ತಿದೆ “ಅಯ್ಯಯ್ಯೋ ಮಾಮ ಚೇಂಜ್‌ಇದ್ದರೆ ಕೊಡಿ ಅವರಿಗೆ ಇಲ್ಲ ಅನ್ನಬಾರದು” ಎಂದು ಇಂಜನಿಯಿರಿಂಗ್ ಓದುತ್ತಿರುವ ನನ್ನ ತಂಗಿಯ ಮಗಳು ಆಕಾಂಕ್ಷ ಹೇಳುವವರೆಗೆ ನನಗೆ ಈ ವಿಷಯ ತಿಳಿದೇ ಇರಲಿಲ್ಲ. ಹಿಂದಿ ಸಿನಿಮಾಗಳಲ್ಲಿ ಮದುವೆಗೆ ಮುಂಚೆ ಇವರು ನೆರೆಯವುದು ಕೂಡಾ ಶುಭಶಕುನ ಎಂಬ ಕಾರಣಕ್ಕಂತೆ!

?

ಡಿಸೆಂಬರ್ ೩೧ರ ಸಂಜೆ ಆಫೀಸಿನಿಂದ ಬರುವಾಗ ಮಕ್ಕಳ ಕೂಟ ಸಿಗ್ನಲ್‌ನಲ್ಲಿ ಕಾಯುತ್ತಿದ್ದೆ. ಕಾರಿನ ಕಿಟಕಿಯ ಬಳಿ ಕಾಣಿಸಿಕೊಂಡ ತೆಳ್ಳನೆಯ ವ್ಯಕ್ತಿಯೊಬ್ಬರು “ಸಾರ್ ನಾನು ಬಂಗಾರಪ್ಪ” ಎಂದು ಹೊಸ ವರ್ಷದ ಶುಭಾಶಯ ಕೋರಿ, “ನಿಮ್ಮ ಪುಸ್ತಕಗಳನ್ನ ಓದಿದೆ” ಎಂದು ಅಭಿನಂದನೆ ಹೇಳಿದರು. ಹಾಯ್‌ನ ಅಭಿಮಾನಿಯಾದ ಬಂಗಾರಪ್ಪನವರನ್ನು ಹಿಂದೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭೆಟ್ಟಿಯಾಗಿದ್ದೆ. ಅವರು ಬಿಎಂಟಿಸಿ ಬಸ್ ಕಂಡ್ಟರ್. ಅವರಿಗೆ ವಂದನೆ ತಿಳಿಸುತ್ತಾ ಈಗ ಎಲ್ಲಿದ್ದೀರಿ ಬಂಗಾರಪ್ಪ ಎಂದೆ. “೪೩ಎ ಬಸ್ ಸರ್. ಡ್ಯೂಟಿಯಲ್ಲಿಯೇ ಇದ್ದೇನೆ. ನಿಮ್ಮ ಕಾರಿನ ಹಿಂದೆ ಬಸ್ ನಿಂತಿದೆ. ನೀವು ಕಾರು ಟರ್ನ್ ಮಾಡಿದಾಗ ನೋಡಿದೆ. ನೀವೇ ಇರಬೇಕು ಅನ್ನಿಸಿತು ಇಳಿದು ಬಂದೆ” ಎಂದರು.

ನಾನು ಅವರಿಗೆ ಹೊಸ ವರ್ಷಕ್ಕೆ ಶುಭ ಕೋರುತ್ತಾ “ನೀವು ಹೊರಡಿ ಬಂಗಾರಪ್ಪ, ಟ್ರಾಫಿಕ್ ಜಾಸ್ತಿ ಇದೆ, ಗ್ರೀನ್ ಬರ‍್ತಾ ಇದೆ” ಎಂದು ಕೈಕುಲುಕಿ ಬೀಳ್ಕೊಟ್ಟೆ.

ಇಂಥ ಹೃದಯಸ್ಪರ್ಶಿ ಭೆಟ್ಟಿಗಳೇ ಟ್ರಾಫಿಕ್ ಸಿಗ್ನಲ್‌ನ ವೈಶಿಷ್ಟ್ಯ. ಜಯಂತ್ ಹೇಳಿದಂತೆ ಇಂಥ ಕ್ಷಣಗಳು So eಟಿಡಿiಛಿhiಟಿg ಚಿಟಿಜ so ಜeeಠಿಟಥಿ ಡಿeಚಿssuಡಿiಟಿg!

?

 

 

‍ಲೇಖಕರು G

July 14, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Sukhesh M.G.

    ಹತ್ತು ವರ್ಷ ಹಿಂದೆ ನೋಡಿದ ಹುಡುಗಿ ನಿಜವಾಗಲೂ ನೆನಪಿರ್ತಾಳ ಸರ್ 🙂

    ಪ್ರತಿಕ್ರಿಯೆ
  2. balakrishna

    shri. alurara lekhana hainalli oduttidde. traffic signal bahala aparupada sangatigalu manasige mudakoduttve.
    avarige thanks.
    baalu

    ಪ್ರತಿಕ್ರಿಯೆ
  3. ರಾಘವೇಂದ್ರ ಜೋಶಿ

    ಒಂದು ಅದ್ಭುತ ಕಾಲಂ ಅನ್ನು ಅಲ್ಲಲ್ಲಿ ಬರುವ ಬಹುಮುಖ್ಯ ಇಂಗ್ಲೀಶ್ ವಾಕ್ಯಗಳು,ಪದಗಳು ಇಲ್ಲಿ junk ಕ್ಯಾರಕ್ಟರ್ ಗಳಾಗಿ ಇಡೀ ಲೇಖನಕ್ಕೆ ದೃಷ್ಟಿ ಬೊಟ್ಟುಗಳಂತೆ
    ಕಂಗೊಳಿಸಿವೆ! 🙂

    ಪ್ರತಿಕ್ರಿಯೆ
  4. ಹೇಮಾ

    ಆಲೂರ್ ಸರ್ ನಿಮ್ಮ ಕಾಲಂ ಬರವಣಿಗೆಗೆ ಒಂದು ಸೊಗಸಿದೆ. ಈ ಲೇಖನ ಕೂಡ ಒಂದು ಅಂತರಂಗದ ಅನುಭವದ. ಈಗ ನಾನು ಅವಧಿಯಲ್ಲಿ ನಿಮ್ಮ ಕಾಲಂನ ಖಾಯಂ ಓದುಗಳು. ನಿಮ್ಮದು ಆಪ್ತ ಬರಹ ಸರ್. ಆದರೆ ಈ ಬರಹಗಳಲ್ಲಿ ಯಾಕೆ ಸರ್ ಇದ್ದಕ್ಕಿದ್ದಂತೆ ” ಃoಜಥಿ ಟಚಿಟಿguಚಿge” ಈ ತರದ ಅಕ್ಷರಗಳು ಪ್ರತಿ ಬಾರಿ ನುಸುಳಿಕೊಂಡು ಬಿಡುತ್ತವೆ. ಸರ್ ಇದನ್ನು ತೆಗೆಯಲು ಸಾಧ್ಯವೆ ನೋಡಿ.

    ಪ್ರತಿಕ್ರಿಯೆ
  5. chandrashekhara alur

    dear joshi and hema.you are obsolutely right.nijakku Rasabhanga aagide.jayanth’s message was:though brief such meetings are so enriching and so deeply reassuring.in addition to this resolution and other english words are spoiled.Sorry.i am not aqvainted wid computer kannada writing.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: