ಕೆ ರಾಮಯ್ಯ ಗುಡುಗು: ಕಾವು ಪಡೆದುಕೊಂಡ ಚರ್ಚೆ

‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು.

‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ.

ರಾಮಯ್ಯ ಅವರ ನೋಟವನ್ನು ಈಗ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗಿಟ್ಟಿದ್ದೇವೆ. ನೇರ ನೋಟಕ್ಕೆ ಹೆಸರಾದ ನಾ ದಿವಾಕರ್ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಈ ಚರ್ಚೆ ಮುಂದುವರಿದಿದ್ದು ಸಿ ಎಸ್ ಎಲ್ ಸಿ ಯ ಶಂಕರಪ್ಪ ಹಾಗೂ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ನಡುವಣ ಚರ್ಚೆಯನ್ನು ಇಲ್ಲಿ ಮಂಡಿಸುತ್ತಿದ್ದೇವೆ.

ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ-

 

ರಾಮಯ್ಯನವರಿಗೆ ಒಂದೇ ಒಂದು ಪ್ರಶ್ನೆ,

ರಾಮಯ್ಯರೊಂದಿಗೆ ಮಾಡಿದ ಸಂದರ್ಶನದ ವರದಿಯಲ್ಲಿ ಒಟ್ಟು ಒಂಭತ್ತು ಪ್ರಶ್ನೆಗಳಿವೆ. ಈ ಒಂಭತ್ತು ಪ್ರಶ್ನೆಗಳು ಒಂಭತ್ತು ಕ್ಷೇತ್ರಗಳಿಗೆ ಮತ್ತು ಆಯಾಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಸಂಬಂಧಿಸಿದವುಗಳಾಗಿವೆ. ಈ ಕ್ಷೇತ್ರಗಳ ಬಗ್ಗೆ ಕೇವಲ ಟೀಕೆ ಅಥವಾ ವಿಮರ್ಶೆ ಮಾಡಿದರೆ ಈ ವರದಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಈ ವರದಿಯಲ್ಲಿ ರಾಮಯ್ಯನವರು ಈ ಒಂಭತ್ತು ಕ್ಷೇತ್ರಗಳ ಬಗ್ಗೆ ಒಂದು ರೀತಿಯ ಹಗೆತನದ ಮಾತುಗಳನ್ನು ಆಡಿರಿವುದು ಇಲ್ಲಿನ ಸಮಸ್ಯೆಯಾಗಿದೆ. ಇದರಿಂದ ಸಮಾಜಕ್ಕೆ ಉಪಯೋಗವಾಗುವುದರ ಬದಲು ಅಪಾಯಗಳೇ ಹೆಚ್ಚು.

ಆದರೆ ಈ ಸಂಗತಿಯನ್ನು ಅರಿತಿಲ್ಲದಿರುವುದು ಈ ವರದಿಯನ್ನು ನೋಡಿದರೆ ತಿಳಿಯುತದೆ. ಉದಾಹರಣೆಗೆ ಹೇಳಬೇಕೆಂದರೆ, “ಎನ್‌ಎಸ್‌ಡಿ, ನೀನಾಸಂ ಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಆಷಾಢಭೂತಿತನ” ಮತ್ತು “ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ” ಎಂದು ಹೇಳುತಿರುವುದು. ಹೀಗೆ ಒಂದು ಸಂಸ್ಥೆ ಅಥವಾ ಕ್ಷೇತ್ರದ ಬಗ್ಗೆ ದ್ವೇಷಿಸುವ ಮಾತುಗಳನ್ನಡುವುದೇ ಬೌದ್ಧಿಕತೆ ಎಂದುಕೊಂಡರೆ ಯಾರ ತಪ್ಪು ಹೇಳಿ?

ಉತ್ತರಕ್ಕಾಗಿ ಕಾಯುವವ,

ಶಂಕರಪ್ಪ

++

ಶಂಕರಪ್ಪನವರು ತಮ್ಮ ಪ್ರಶ್ನೆಯನ್ನು ರಾಮಯ್ಯನವರಿಗೇ ಕೇಳಬೇಕಿಲ್ಲ; ಮಾನವಪ್ರೀತಿಯಿರುವ ಸಮಕಾಲೀನ ಸಾಮಾಜಿಕ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಯಾರಿಗಾದರೂ ಕೇಳಬಹುದು. ಅವರು ರಾಮಯ್ಯನವರ ಸಂದರ್ಶನವನ್ನು ಇನ್ನೂ ಒಂದುಬಾರಿ, ಪೂರ್ವಗ್ರಹೀತ ಭಾವನೆಯನ್ನು ಹೊರತುಪಡಿಸಿ ಓದಿದರೆ ಅದರಲ್ಲಿ ಹಗೆತನದ ಮಾತುಗಳಿಲ್ಲದಿರುವುದನ್ನು ಕಾಣಬಹುದು. ಕೈಗಾರಿಕಾ ಕ್ರಾಂತಿಯ ಬಗ್ಗೆ ಈಗಾಗಲೇ ಎಡಪಂಥೀಯ ವಿಚಾರಧಾರೆ ಸಾಕಷ್ಟು ಬೆಳಕು ಚೆಲ್ಲಿದೆ. ರಾಮಯ್ಯನವರು ಆ ಬೆಳಕಿನಲ್ಲಿ ಕಂಡಿದ್ದನ್ನು ಮಾನವೀಯ ಕಾಳಜಿ ಮತ್ತು ತತ್ಕಾಲದ ದರ್ದಿನಿಂದ ಹೇಳುತ್ತಿದ್ದಾರೆ.

ಅವರಿಗೆ ಕಾಣುವುದೆಲ್ಲಾ ನಮಗೂ ಕಾಣಬೇಕೆನ್ನುವುದು ಅಸಾಧ್ಯವಾದ ಮಾತಾದರೂ, ಭಾರತದಂತಹ ದೇಶದಲ್ಲಿ ಚರಿತ್ರಯಿಂದ ನಾವು ಪಾಠ ಕಲಿಯದಿದ್ದರೆ ಹೀಗೆ ಪ್ರತಿಕ್ರಿಯಿಸುವ ಅಪಾಯ ಒದಗುತ್ತದೆ. ಇನ್ನು ‘ನೀನಾಸಂ, ಎನ್ಎಸ್ಡಿ’ ಗಳ ಬೌದ್ಧಿಕತೆಯ ಬಗ್ಗೆ ರಾಮಯ್ಯನವರು ಇವತ್ತು ಮಾತಾಡುತ್ತಿಲ್ಲ. ಅವುಗಳ ಬೌದ್ಧಿಕ ಸಾಮರ್ಥ್ಯವನ್ನು ಅವರು ಎಂದೋ ‘ಹೊಗಳಿದ್ದಾಗಿದೆ’ ಹಾಗೂ ಈ ವಿಷಯ ಕುರಿತು ರಾಮಯ್ಯನವರ ಮಾತುಗಳು ಬಹುಸಂಖ್ಯಾತ ಕನ್ನಡ ಮನಸ್ಸುಗಳ ಪ್ರಾತಿನಿಧಿಕ ಅಭಿಪ್ರಾಯಗಳೆಂಬುದು ನೆನಪಿರಬೇಕು.

ತಮ್ಮ ಯಾವುದರ ಬಗ್ಗೆಯೂ ಪ್ರಶ್ನೆಗಳಿರಬಾರದು ಎಂಬ ಶಂಕರಪ್ಪನವರ ‘ಸೇಫರ್ ಝೋನ್’ ಪ್ರಜ್ಞೆ ನಲವತ್ತು ವರುಷಗಳು ದಮನಿತರ ಬದುಕುವ ಹಕ್ಕಿಗಾಗಿ ಕಾತರಿಸಿ, ನಮ್ಮೆಲ್ಲರ ಹೆಜ್ಜೆಗಳಿಗೆ ದಾರಿದೀಪವಾಗಿರುವ ರಾಮಯ್ಯನವರನ್ನು ‘ಈ ರೇಂಜಿನಲ್ಲಿ’ ಪ್ರಶ್ನಿಸಬಾರದಿತ್ತು. ಹಾಗೇನಾದರೂ ಅವರಿಗೆ ಇಷ್ಟವಾಗದ ಅಂಶಗಳು ಈ ಸಂದರ್ಶನದಲ್ಲಿದ್ದರೆ, ಅಥವಾ ಅವರು ಮಾತಾಡಿರುವ ಕ್ಷೇತ್ರಗಳ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ತಿಳಿವಳಿಕೆಯಿದ್ದರೆ ಅವರು ಈ ನಾಡಿನ ಜನಕ್ಕೆ ದಯಮಾಡಿ ತಿಳಿಸಿಕೊಡಬೇಕು.

-ಹುಲಿಕುಂಟೆ ಮೂರ್ತಿ

++

ಹುಲಿಕುಂಟೆ ಮೂರ್ತಿಯವರಿಗೆ,

ನನ್ನ ಪ್ರಶ್ನೆಯು ಪುರ್ವಗ್ರಹಿತವಾದರೆ ರಾಮಯ್ಯರವರ ಮುಂದಿನ ಹೇಳಿಕೆಗಳ ಬಗ್ಗೆ ಸ್ವಲ್ಪ ತಿಳಿಸಿಕೊಡಿ:

1. “ಎಪ್ಪತ್ತರ ದಶಕದಲ್ಲಿ ಅಂತಹ ಒಂದು ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು”. ಈ ಹೇಳಿಕೆಯ ಹಿನ್ನಲೆಯನ್ನು ಸ್ವಲ್ಪ ಬಿಡಿಸಿ ಹೇಳಿ.

2. “ನಮ್ಮ ಸಾಂಸ್ಕೃತಿಕ, ಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನಮಗಿರುವ ಪ್ರಮುಖ ಆಕರಗಳು ಇವೇ(ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪಗಳಂಥ ನಾಡಿನ ಮೌಖಿಕ ಕಾವ್ಯಗಳ)”. ರಾಮಯ್ಯನವರು ಈ ಆಕರಗಳನ್ನು ಪ್ರತಿರೋದದ ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕೆಂದು ಏಕೆ ಹೇಳುತ್ತಾರೆ? ಒಂದು ವೇಳೆ, ಈ ಪ್ರಶ್ನೆಗೆ ಉತ್ತರ ಭಾರತೀಯ ಸಮಾಜದಲ್ಲಿ ಜನರು ಶೋಷಿತರಾಗಿದ್ದಾರೆ ಎನ್ನುವುದಾರೆ, ಆ ಶೋಷಕರನ್ನು ಶೋಷಿತರು ಪ್ರೀತಿಸಲು ಸಾಧ್ಯವೇ?

ಶೋಷಿತರು ಶೋಷಕರನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ರಾಮಯ್ಯನವರ ಮುಂದಿನ ಹೇಳಿಕೆಯನ್ನು ಗಮನಿಸಿ: “ಈ ಮಠಾಧೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಅವರು ಸಣ್ಣವರಿರಲೀ, ದೊಡ್ಡವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ”.

ಇಂತಹ ಹೇಳಿಕೆಗಳು ಯಾವ ಮಟ್ಟಕ್ಕೆ ತಲುಪಿವೆ ಎನ್ನುವುದನ್ನು ತಿಳಿಯಲು ಮುಂದಿನ ಹೇಳಿಕೆಯನ್ನು ಗಮನಿಸಿ: “ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿತರ ತಂಡ. ಇವರು ದುಡ್ಡು ವಸೂಲಿಗೆ ಇಳಿದಿರುವಂತವರು”. ಅಂದರೆ ಇಂದು ದಲಿತರು ತಮ್ಮಲ್ಲಿರುವವರ ಬಗ್ಗೆಯೇ ನಿಂದಿಸುವ ಮಟ್ಟಕ್ಕೆ ತಲುಪಿರುವುದು. ಹೀಗೆ ದೂಷಿಸುವುದರಿಂದ ಶೋಷಿತರಿಗೆನದರು ಉಪಯೋಗವಾದುತದೆಯೇ?

“ನಾವು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿ, ಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಚೈತನ್ಯ ನೀಡುತ್ತಿತ್ತು”. ಈ ವಿಚಾರವು ನಿಜವೆಂದು ಒಪ್ಪಿಕೊಳ್ಳುವ, ಆದರೆ, ಆ ಕಾಲದಲ್ಲಿ ಈ ಪತ್ರಿಕೆಗಳಲ್ಲಿದ್ದ ಮಾನವ ಕಾಳಜಿ ಮತ್ತು ಆದರ್ಶಗಳು ಎಂಬ ಶಿರ್ಶಿಕೆಗಳಡಿಯಲ್ಲಿದ್ದ ವಿಚಾರಗಳು ಮತ್ತು ಚೈತನ್ಯಗಳ ಬಗ್ಗೆ ಸ್ವಲ್ಪ ಬಿಡಿಸಿ ಹೇಳಿ.

ನಿಮ್ಮ ಉತ್ತಗಲಿಗಾಗಿ ಕಾಯವವ,
ಶಂಕರಪ್ಪ

++

ಮಾನ್ಯ ಶಂಕರಪ್ಪನವರೇ..

ನೀವು ರಾಮಯ್ಯನವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೋ ಇಲ್ಲವೋ.. ಈಗ ಮತ್ತೆ ತಮ್ಮ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಿ. ಹೀಗೆ ನೀವು ಕೇಳುತ್ತಿರುವ ಪ್ರಶ್ಬೆಗಳು ಉತ್ತರಗಳನ್ನು ನಿರೀಕ್ಷಿಸಿ ಹುಟ್ಟಿದವುಗಳಲ್ಲ ಎಂಬುದನ್ನು ಅರಿತು ಈ ಮುಂದಿನ ಮಾತುಗಳಿಗೆ ತೊಡಗುತ್ತಿದ್ದೇನೆ. ತಾವು ರಾಮಯ್ಯನವರಿಂದ ನನಗೆ ಪ್ರಶ್ನೆಗಳನ್ನು ವರ್ಗಾಯಿಸಿರುವುದು ನನಗೆ ಖುಷಿ ತಂದಿದೆ. ಯಾಕೆಂದರೆ ತಾವು ರಾಮಯ್ಯನವರಿಗಾಗಿ ಸಿದ್ಧಪಡಿಸಿದ ಪ್ರಶ್ನೆಗಳನ್ನು ನನ್ನ ಕಡೆಗೆ ಎಸೆದಿದ್ದೀರಿ. ಸಮಸ್ಯೆಯೆಂದರೆ, ನಾನೂ ರಾಮಯ್ಯನವರ ಮಗ್ಗುಲಲ್ಲೇ ನಿಂತು ಲೋಕವನ್ನು ಕಾಣಲು ಹವಣಿಸುತ್ತಿರುವವ.

ಇರಲಿ..
ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ಮೂರುಕಾಲು ದಶಕಗಳ ಕರ್ನಾಟಕದ ಚರಿತ್ರೆಯಲ್ಲಿಯೇ ಇದೆ. ಐದು ಸಾವಿರ ವರ್ಷಗಳ ಶೋಷಣೆಯ ಹೊಡೆತದಿಂದ ಬಸವಳಿದುಹೋಗಿದ್ದ ದಲಿತರು ಒಂದೇ ನೆಗೆತಕ್ಕೆ ಆಕಾಶಕ್ಕೆ ಎಗರಿನಿಂತು ಸಾಹಿತ್ಯ-ಸಂಸ್ಕೃತಿಯಲ್ಲಿ ನಭವಿಷ್ಯ ಗುರುತು ಮಾಡಿದ್ದು ತಮ್ಮ ಅರಿವಿಗೆ ಬಂದಿಲ್ಲದ್ದರ ಬಗ್ಗೆ ನನಗೆ ವಿಷಾದವಿದೆ. ದಸಂಸಂ ದ ಹುಟ್ಟು ಮತ್ತು ಅದು ಹೊತ್ತಿಸಿದ ಬೆಳಕಿನ ದೊಂದಿಗಳು ನಾಡಿನ ಶೋಷಿತರ ಅಸ್ಥಿಪಂಜರಗಳಲ್ಲಿ ಬೆಳಕು ಮೂಡಿಸಿ ಶೋಷಣೆಯ ವಿರುದ್ಧ ಸಿಡಿದೆದ್ದು ನಿಲ್ಲಲು ತ್ರಾಣ ಒದಗಿಸಿದ್ದನ್ನು ದೇಶ ಮರೆತುಬಿಟ್ಟಿತೇ..? ದಯಮಾಡಿ ಅಂದು ಸೃಷ್ಟಿಯಾದ ದಲಿತ-ಬಂಡಾಯ ಸಾಹಿತ್ಯವನ್ನು ಹೊಂದಿಸಿಕೊಂಡು ಓದಿ. ರಾಮಯ್ಯನವರು ಬರೆದ ಹಾಡುಗಳು ರಾಜ್ಯದ ಮೂಲೆಮೂಲೆಗಳಲ್ಲಿ ಜನಪದವೇ ಆಗಿಹೋಗಿರುವುದನ್ನು ನಿಮ್ಮ ವಾದ ಅಳಿಸಬಲ್ಲುದೇ..?

ಸಿದ್ಧಲಿಂಗಯ್ಯನವರು ಅಂದು ಬರೆದ ಪದ್ಯಗಳು, ಸುದ್ದಿಸಂಗಾತಿ, ಪಂಚಮ ಪತ್ರಿಕೆಗಳು ಹಚ್ಚಿದ ವೈಚಾರಿಕತೆಯ ಕಿಡಿ ನಮ್ಮಂಥ ಯುವಜನರ ಎದೆಗಳಲ್ಲಿ ಇಂದಿಗೂ ಉಳಿದಿರುವುದನ್ನು ಕಾಣಲು ತಮ್ಮಂಥವರಿಗೆ ಕನ್ನಡಕದ ಅಗತ್ಯವಿದೆಯೇ..? ದೇವನೂರು ಮಹಾದೇವರ ಕತೆಗಳು ಕನ್ನಡ ಸಾಹಿತ್ಯದ ಸ್ಪೋಟಕಗಳಂತೆ ಕಂಡು ಇಡೀ ಸಾಹಿತ್ಯ ವಿಮರ್ಶೆ ತನ್ನ ಪರಿಕರಗಳನ್ನು ಬದಲಿಸಿಕೊಂಡದ್ದು ಸುಳ್ಳೇ..? ರಾಮಯ್ಯನವರು “ಎಪ್ಪತ್ತರ ದಶಕದಲ್ಲಿ ಅಂತಹ ಒಂದು ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು” ಎಂದಿರುವುದನ್ನು ನಾನೇ ಯಾಕೆ, ಕನ್ನಡ ಸಾಹಿತ್ಯ-ಸಂಸ್ಕೃತಿಯ ನೈಜ ಅಧ್ಯಯನದಲ್ಲಿ ತೊಡಗಿರುವ ಯಾರಾದರೂ ಒಪ್ಪಿಯೇ ಒಪ್ಪುತ್ತಾರೆ.

ಇನ್ನು ನಮ್ಮ ಸಾಂಸ್ಕೃತಿಕ ಪರಂಪರೆಗಳ ಪ್ರತಿರೋಧದ ನೆಲೆಗಳ ಬಗ್ಗೆ ರಾಮಯ್ಯನವರ ಅಭಿಪ್ರಾಯ ಕುರಿತು ತಮ್ಮ ಪ್ರಶ್ನೆಯೇ ವಿಚಿತ್ರವಾಗಿದೆ. ‘ರಾಮಯ್ಯನವರು ಈ ಆಕರಗಳನ್ನು ಪ್ರತಿರೋದದ ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕೆಂದು ಏಕೆ ಹೇಳುತ್ತಾರೆ?’ ಎಂಬ ನಿಮ್ಮ ಪ್ರಶ್ನೆಯಲ್ಲಿ ಗರ್ಭಗುಡಿಯ ವಾಸನೆ ಇದೆ ಎಂಬುದು ತಮ್ಮ ಪ್ರಶ್ನೆಯನ್ನು ಕೇಳಿದ ಯಾರಿಗಾದರೂ ಅರ್ಥವಾಗುತ್ತದೆ. ಆ ಪ್ರಶ್ನೆಗೆ ತಾವೇ ‘ರಾಮಯ್ಯನವರು ಹೀಗೆ ಹೇಳಿದರೆ..’ ಎಂದು ಕೊಟ್ಟುಕೊಂಡಿರುವ ಉತ್ತರ ನಗು ತರಿಸುತ್ತದೆ. ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಕರಿಬಂಟದಂತ ಜನಪದರ ಮಹಾಕಲಾವ್ಯಗಳು ಶಿಷ್ಟ ಸಂಸ್ಕೃತಿಯ ಅಮಾನವೀಯ ಮೌಲ್ಯಗಳೆದುರು ಪ್ರತಿರೋಧವನ್ನು ದಾಖಲಿಸಲೆಂದೇ ಹುಟ್ಟಿಕೊಂಡವು ಎಂಬುದನ್ನು ಅವುಗಳನ್ನು ಒಂದೇ ಒಂದು ಬಾರಿ ಓದಿದರೂ ಅರ್ಥ ಮಾಡಿಕೊಳ್ಳಬಹುದು.

ಇನ್ನು ತಮ್ಮ ಮುಂದಿನ ಶೋಷಿತ-ಶೋಷಕರ ಪ್ರಶ್ನೆಗಳಲ್ಲಿ ರಾಮಯ್ಯನಂಥವರು “ಈ ಮಠಾಧೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಅವರು ಸಣ್ಣವರಿರಲೀ, ದೊಡ್ಡವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ” ಎಂದು ಹೇಳುತ್ತಿರುವ ಕಾರಣಕ್ಕೆ ಆ ಮಠಾಧೀಶರು ಪ್ರತಿನಿಧಿಸುತ್ತಿರುವ ಸಮುದಾಯಗಳು ರಾಮಯ್ಯ ಪ್ರತಿನಿಧಿಸುವ ಸಮುದಾಯಗಳನ್ನು ಶೋಷಸುವ ಅಧಿಕಾರ ಪಡೆದಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದೀರಿ. ಈ ಬಗ್ಗೆ ನಿಮ್ಮಲ್ಲಿಯೇ ಉತ್ತರವಿದೆ.

ಮುಂದುವರಿದು “ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿತರ ತಂಡ. ಇವರು ದುಡ್ಡು ವಸೂಲಿಗೆ ಇಳಿದಿರುವಂತವರು” ಎಂಬ ರಾಮಯ್ಯನವರ ಗುಡುಗಿನ ಬಗ್ಗೆ ತೀರಾ ತೆಳುವಾದ ಗ್ರಹಿಕೆಯಿಂದ ಪ್ರಶ್ನಿಸಿದ್ದೀರಿ. ಅವರು ಹೇಳಿದ ಮಾತು ಸುಳ್ಳೇ..? ಅವರನ್ನು ಡಕಾಯಿತರು ಎಂದು ಬೈಯದೆ ಇದ್ದರೆ ಅವರಿಂದ ಶೋಷಿತರಿಗೆ ಅನುಕೂಲವಾಗಿಬಿಡುತ್ತದೆಯೇ..? ನಮ್ಮೊಳಗಿನ ಗಾಯ ನಮಗೇ ತಾನೇ ನೋವುಂಟು ಮಾಡುವುದು..? ನಾವೇ ತಾನೇ ಅದಕ್ಕೆ ಮುಲಾಮು ಹಚ್ಚಿಕೊಲ್ಳಬೇಕು..? ‘ನಮ್ಮ ಕಾಲೊಳಗಣ ಮುಳ್ಳ ನಾನೇ ತೆಗೆಯಬೇಕು’ ಎಂದು ಅಮುಗೆ ರಾಯಮ್ಮ ಹೇಳಿದ ಅರ್ಥದಲ್ಲಿ ರಾಮಯ್ಯನವರ ಮಾತುಗಳಿಲ್ಲವೇ…? ರಾಮಯ್ಯನವರು ನಾವು ನೋಡಿಕೊಳ್ಳಲಾಗದ ಅಂಗೈ ಹುಣ್ಣುಗಳನ್ನು ನಮಗೆ ಕಾಣಿಸಿದ್ದಾರೆ ಎಂದು ಯಾಕೆ ನೀವು ಅರ್ಥ ಮಾಡಿಕೊಲ್ಳಲಾರಿರಿ…? ಇನ್ನು ದಯಮಾಡಿ
ಸುದ್ದಿಸಂಗಾತಿ, ಮುಂಗಾರು, ಲಂಕೇಶ್ ಪತ್ರಿಕೆಗಳನ್ನು ಹುಡುಕಿ ಓದದಿದ್ದರೆ ತಮ್ಮ ಕೊನೆಯ ಪ್ರಶ್ನೆಗೆ ಅರ್ಥವಿಲ್ಲ ಎಂಬ ವಿನಮ್ರ ನಂಬಿಕೆ ನನ್ನದು.

-ಹುಲಿಕುಂಟೆ ಮೂರ್ತಿ

‍ಲೇಖಕರು G

July 13, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

27 ಪ್ರತಿಕ್ರಿಯೆಗಳು

  1. sandhya

    ೮೦ ರ ದಶಕ… ಅಪ್ಪ ಕೊಡುತ್ತಿದ್ದ ೨೫ ರು ಪಾಕೆಟ್ ಮನಿಯಲ್ಲಿ ವಾರ ವಾರ ಅ೦ಗಡಿ ಅ೦ಗಡಿ ಅಲೆದು ಕೊ೦ಡು ಓದುತ್ತಿದ್ದ ಲ೦ಕೇಶ್ ಪತ್ರಿಕೆ, ಆ ಮೂಲಕ ಹುಟ್ಟುತ್ತಿದ್ದ ಧೈರ್ಯ, ಪ್ರಶ್ನೆಗಳು, ಕನ್ನಡ ಕ್ಲಾಸ್ ನಲ್ಲಿ ಜೀವ ಪಡೆದುಕೊ೦ಡ ಸಿದ್ದಲಿ೦ಗಯ್ಯನವರ ಕವನಗಳು… ಆಗ ಹರ್ಷದ್ ಮೆಹ್ತಾ ನಮಗೆ ಹೀರೋ ತರಹ ಕಾಣುತ್ತಿರಲಿಲ್ಲ, ಮೊನ್ನೆ ಪತ್ರಿಕೆ ಒ೦ದರಲ್ಲಿ ಸಿ.ಎ೦ ಗೆ ಪತ್ರ ಬರೆದ ಒ೦ದು ಮಗು ‘ದೊಡ್ಡವಳಾದ ಮೇಲೆ ನಾನು ಸಿ.ಎ೦ ಆಗಬೇಕು, ನನಗು ಒ೦ದಿಷ್ಟು ಉಳಿಸಿ’ ಎ೦ದು ಬರೆವ೦ತಹ, ಅದನ್ನು ಪ್ರಕಟಿಸುವ೦ತಹ, ಓದಿ ಮೆಚ್ಚುವ೦ತಹ ಮನೋಭಾವ ಆಗ ಖ೦ಡಿತ ಇರಲಿಲ್ಲ…

    ಪ್ರತಿಕ್ರಿಯೆ
  2. ಮಂಜು

    ಜಲಸಂಸ್ಕೃತಿಯಿಂದ ರೂಪುಗೊಂಡಿರುವ ದಲಿತ ಸಂವೇದನೆಯ ಬೇರುಗಳಿಗೆ ಬೀಳುತ್ತಿರುವ ಕೊಡಲಿ ಪೆಟ್ಟುಗಳನ್ನು, ಅಗ್ನಿಯುಂಡೆಗಳನ್ನು ತಡೆಯಲು ಕೊಂಬೆ ಕೈಗಳನ್ನು ಮುಂದೆ ಚಾಚುವ ತುರ್ತು ಮೊದಲಾಗಿರುವುದೋ ಅಥವಾ ಪಟ್ಟುಗಳು, ಬೆಂಕಿಯುಂಡೆಗಳನ್ನು ಯಾರು ಎಸೆಯುತ್ತಿದ್ದಾರೆಂದು ಪೊಟರೆಗಳಲ್ಲಿ ಅಡಗಿ ನೋಡುವುದು ಮೊದಲಿಗಿರುವುದೋ ಎಂಬುದೇ ಇತ್ತೀಚಿನ ದಲಿತ ಯುವಕರಿಗೆ ಗೊಂದಲದಂತಿದೆ. ರಾಮಯ್ಯನಂಥವರು ಎರಡೂ ಕಾರ್ಯಗಳನ್ನು ಒಟ್ಟೊಟ್ಟಿಗೆ ನಿಭಾಯಿಸುತ್ತಾ ತಮ್ಮ ‘ಕೊಂಬೆ ಕೈಗಳಿಗೆ ಪೆಟ್ಟು ಬೀಳಿಸಿಕೊಳ್ಳುತ್ತಲೇ ಬೆಂಕಿಯುಂಡೆಗಳನ್ನು ಯಾರು ಎಸೆಯುತ್ತಿದ್ದಾರೆ ಎಂಬುದನ್ನೂ ಸಹ ತಮ್ಮ ಸೂಕ್ಷ್ಮನೋಟದಿಂದ ಕಂಡುಕೊಂಡವರು’ ಎಂದು ನನಗನ್ನಿಸುತ್ತದೆ. ಇಂದು ನಾವು ದಲಿತ ನಾಯಕತ್ವದ ಅನುಭಾವಿಕ ದೃಷ್ಟಿಯನ್ನಷ್ಟೇ ಮುಂದಿಟ್ಟುಕೊಂಡು ನಮ್ಮ ದಾರಿಗಳನ್ನು ರೂಪಿಸಿಕೊಳ್ಳುತ್ತಿದ್ದೇವೆಯೇ ಹೊರತು ‘ನಿಜ ಅನುಭವ’ವನ್ನು ಕಂಡುಕೊಂಡಿಲ್ಲವೆಂದೇ ನನಗನ್ನಿಸುತ್ತದೆ. ಕೈಗಾರಿಕರಣ, ಜಾಗತಿಕರಣ, ಭೂ ಕಬಳಿಕೆ, ಶೇಖರಣೆ, ಕೇಂದ್ರೀಕರಣ, ಭ್ರಷ್ಟಾಚಾರ ಹೀಗೆ ಹಲವಾರು ಗಾಲಿಗಳು ‘ಕೊಡಲಿ’ಗಳಿಗೆ ‘ಸಾಣೆ’ ಹಿಡಿಯುತ್ತಾ, ತಾರತಮ್ಯದ ಬೆಂಕಿಗೆ ತುಪ್ಪ ಸುರಿಯುತ್ತಿರುವಾಗ… ನಾವು ಬುದ್ದ ಅಂಬೇಡ್ಕರರ ಜೀವದ್ರವ್ಯದಿಂದ ನೆಟ್ಟ ಸಂವೇದನೆ ಮರದ ಕೊಂಬೆಗಳಿಗೆ ಹತ್ತಿರುವ ರೋಗಕ್ಕೆ ಮುಲಾಮು ಹಾಕುವುದೋ ಅಥವಾ ಆ ಕೊಂಬೆಗಳನ್ನು ಕಡಿದುಕೊಳ್ಳುವುದೋ ತಿಳಿಯುತ್ತಿಲ್ಲ. ನಿಜಕ್ಕೂ ಇಡೀ ಮರಕ್ಕೆ ರೋಗ ಹತ್ತಿದೆಯೇ? ಹಾಗೆ ಯೋಚಿಸಲು ಸಹ ಹಿಂಜರಿಕೆಯಿದೆ. ‘ಲೋಕದೆದುರು ನೀರನೆರೆದು ಒಳಗೆ ಬೇರ ಕುಯ್ಯುವರು’ ಎಂಬಂತೆ ನಾವು ದಲಿತ ಸಂವೇದನೆಗೆ ನೀರು ಎರೆಯುವವರ ಬಗ್ಗೆಯೇ ಎಚ್ಚರಗೊಳ್ಳುವಂತೆ ಮಾಡಿರುವುದು ಗಾಬರಿ ಹುಟ್ಟಿಸುತ್ತದೆ. ರಾಮಯ್ಯನವರ ಮಾತುಗಳಲ್ಲಿ ಎಚ್ಚರದ ಪ್ರತಿಭಟನೆಯಿದೆ ಎಂದು ನನಗನ್ನಿಸುತ್ತೆ. ‘ತಿಳಿದು’ ತಿಳಿಯಾಗಬೇಕೆ ಹೊರತು ರಾಡಿ ತುಂಬಿಕೊಳ್ಳಬಾರದು. ದಲಿತ ಸಂವೇದನೆಯೇ ಜೀವಪರವಾಗಿರುವಾಗಿ ರಾಮಯ್ಯನವರ ಮಾತುಗಳಲ್ಲಿ ಬೇರೆ ಅರ್ಥಗಳನ್ನು ಹುಡುಕಲು ಹೇಗೆ ಸಾಧ್ಯ…

    -ಮಂಜು

    ಪ್ರತಿಕ್ರಿಯೆ
    • Shankarappa

      ಮಂಜು ಅವರಿಗೆ,

      “ದಲಿತ ಸಂವೇದನೆ” ಎಂಬ ಪರಿಕಲ್ಪನೆಯು “ದಲಿತ ಪ್ರಜ್ಜೆ”, “ಮಾನವ ಪ್ರಜ್ಜೆ” ಎಂಬ ಪರಿಕಲ್ಪನೆಗಳ ಜೊತೆಗೆ ಬಳಸುತ್ತಾರೆ. ಈ ದಲಿತ ಪ್ರಜ್ಜೆಯ ಬಗ್ಗೆ ಅರವಿಂದ ಮಾಲಗತ್ತಿಯವರು ಮುಂದಿನಂತೆ ಹೇಳುತ್ತಾರೆ: “ಕಲ್ಲು ಹೃದಯವನ್ನೂ ಕರಗಿಸುವ, ಮಾನವೀಯತೆಯನ್ನು ಮೊಳಕೆಯೊಡೆಸುವ ಕ್ರಿಯಾ ವಿಧಾನವೆಂದೂ ಹೇಳಬಹುದು” (ಆರವಿಂದ ಮಾಲಗತ್ತಿ. ೨೦೦೨. ದಲಿತ ಸಾಹಿತ್ಯದ ತಾತ್ವಿಕ ನೆಲೆ-ನಿಲುವುಗಳು” ದಲಿತ ಮಾರ್ಗ ದಲ್ಲಿ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ. ಪುಟ ೨೨). ಈ ಹೇಳಿಕೆಯು ಹೇಗಿದೆ ಎಂದರೆ ಕೆಲವೆ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ನಟಿ ಶೃತಿಯವರ ಕರುಣಾತ್ಮಕ ಚಿತ್ರಗಳಲ್ಲಿ ಬರುವ ಸನ್ನಿವೇಶಗಳಂತಿದೆ. ಇವರ ಇಂತಹ ಚಲನಚಿತ್ರಗಳನ್ನು ನೋಡಿದ ಎಂತಹವರಿಗೂ ದುಃಖ ಉಕ್ಕಿಬರಬೇಕು. ದಲಿತರ ಕುರಿತ ಬರವಣಿಗಳನ್ನು ನೋಡಿದರು ಸಹ ಮೇಲ್ನೋಟಕ್ಕೆ ಹೀಗೆ ಅನ್ನಿಸುತ್ತದೆ. ಆದರೆ ದಲಿತ ಸಂವೇದನೆ ಎಂಬ ಪರಿಕಲ್ಪನೆಯನ್ನು ಪರೀಕ್ಷಿಸಿ ನೋಡಿದರೆ ನಿಜರೂಪ ತಿಳಿಯುವುದು. ಇದನ್ನು ತಿಳಿದುಕೊಳ್ಳಲು ಅರವಿಂದ ಮಾಲಗತ್ತಿಯವರ ಮೇಲಿನ ಲೇಖನದಲ್ಲಿರುವ ದಲಿತ ಪ್ರಜ್ಜೆ ಬಗೆಗಿನ ವ್ಯಾಖ್ಯೆಯನ್ನೇ ತೆಗೆದುಕೊಳ್ಳುವ: “ದಲಿತ ವಿರೋಧಿ ಅಸ್ತಿತ್ವದ ವಿಚಾರಗಳನ್ನು ಭೂತ-ವರ್ತಮಾನ-ಭವಿಷತ್ಕಾಲಗಳನ್ನೊಳಗೊಂಡಂತೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಬೌದ್ಧಿಕ ಹಾಗೂ ಸಾಂಸ್ಕೃತಿಕ ಹೀಗೆ ಎಲ್ಲ ರಂಗದಲ್ಲಿ ದಲಿತರ ಮೇಲೆ ಹೇರಿರುವ ಮತ್ತು ಶೋಷಿಸುವ ವಿಚಾರದ ನೆಲೆಯ ಬಗೆಗೆ ಮೂಡುವ ಅರಿವು ಮತ್ತು ಆ ಶೋಷಣೆಯ ಮೂಲ ಸ್ಥಿತಿಯಿಂದ ವಿಮೋಚನೆ ಹೊಂದಲು ಮಾಡುತ್ತಿರುವ ಪ್ರಯತ್ನ ಹಾಗೂ ಕ್ರಿಯಾತ್ಮಕವಾಗಿ ಹೊಂದುವ ಬೆಳವಣಿಗೆಯಲ್ಲಿ ನಂಬಿಕೆ ಇದ್ದು, ಹೊಸ ಚರ್ಚೆಗೆ ಹೊಸ ದಿಕ್ಕಿಗೆ ಸಾಗುತ್ತೇವೆಂಬ ಆಶಯ ಹೊಂದಿರುವಂತಹದ್ದು” (ಅದೇ. ಪುಟ ೨೨).

      ಈ ವ್ಯಾಖ್ಯೆಯು ದಲಿತ ಜಾತಿಗಳ ಜನರ ಮತ್ತು ಭಾರತೀಯ ಸಮಾಜದ ಮೇಲೆ ಯಾವ ಪರಿಣಾಮ ಬೀರಿದೆ ನೋಡುವ.

      ಮೊದಲಿಗೆ ದಲಿತ ಜಾತಿಗಳ ಜನರ ಮೇಲಾಗಿರುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವ: “ಹೊಲೆಯ”, “ಮಾದಿಗ” ಎಂಬ ದಲಿತ ಜಾತಿಗಳ ಹೆಸರುಗಳೇ ಅವಮಾನವನ್ನು ಸೂಚಿಸುವ ಹೆಸರುಗಳಾದವು, ದಲಿತರ ಶ್ರಮಿಕ, ಸ್ವಚ್ಚತೆ ಮಾಡುವ ಮತ್ತು ಮನರಂಜನೆ ನೀಡುವ ವೃತ್ತಿಗಳು, ಆಹಾರ ಪದ್ಧತಿಗಳು, ಒಟ್ಟಾರೆ ದಲಿತರ ಜೀವನ ಶೈಲಿಯೇ ಕೀಳು ಎನಿಸಿದವು. ಇಂತಹ ಪರಿಣಾಮಗಳನ್ನು ಹೋಗಲಾಡಿಸಲು ದೇವನೂರು ಮಹಾದೇವ ಅವರು ಪ್ರಯತ್ನಿಸಿದಾರೂ ಇಂದು ಬಹುತೇಕ ಶಿಕ್ಷಿತ ದಲಿತರು ತಮ್ಮ ಜಾತಿ, ವೃತ್ತಿಗಳು, ಆಹಾರದ ಬಗ್ಗೆ ಹೇಳಿಕೊಳ್ಳಲು ಇಚ್ಚಿಸುವುದಿಲ್ಲ. ಇದು ಎಷ್ಟರ ಮಟ್ಟಕ್ಕೆ ಹೋಗಿದೆ ಎಂದರೆ ದಲಿತರ ಸಾಂಪ್ರದಾಯಿಕ ಸಂಸ್ಕೃತಿಯೇ ನಾಶದ ಹಂಚಿಗೆ ತಲುಪಿದೆ. ಡಾ. ಬಿ. ಆರ್. ಅಂಬೇಡ್ಕರ್ ರವರು ಬಯಸಿದ್ದು ಇದನ್ನೆ ತಾನೆ? (ಭಾರತದ ಸಾಂಪ್ರದಾಯಿಕ ಸಮಾಜ ಸಂಪೂರ್ಣವಾಗಿ ಬದಲಾಗದ ಹೊರತು ದಲಿತರ ಮುಕ್ತಿ ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ರವರ ಹೇಳಿಕೆ). ಇಂತಹ ವಿಚಾರಗಳ ಪ್ರತಿನಿಧಿಗಳು ಇಂದಿನ ದಲಿತ ಚಿಂತಕರು ಮತ್ತು ಚಳುವಳಿಕಾರುರು!

      ಇನ್ನೊಂದು ಪರಿಣಾಮವೆಂದರೆ: ದಲಿತ ವಿರೋಧಿ ನೆಲೆಗಳು: ಬ್ರಾಹ್ಮಣಶಾಹಿ ವರ್ಗ, ಬಂಡವಾಳಶಾಹಿ ವರ್ಗ, ಮೇಲ್ಜಾತಿಗಳು. ಇಂತಹ ವರ್ಗಗಳು ಮತ್ತು ಜಾತಿಗಳಾವುವು? ಎಂಬುದು ನಿರ್ದಿಷ್ಟವಾಗಿ ತಿಳಿಸದಿದ್ದರು ಸಹ ಬ್ರಾಹ್ಮಣ, ಬನಿಯಾ, ಲಿಂಗಾಯಿತ, ಗೌಡ ಜಾತಿಗಳ ವಿರುದ್ಧ ಸಲ್ಲದ ವಿರೋಧದ ಮಾತುಗಳನ್ನು ಆಡುವುದು:

      O you damned bhats, you lied to me about Shani and Satyanarayan, and extracted meals and money from me! O you cunning brahmans, from the very birth of my dear child you have threatened me with ill favoured stars and taken money from me. Where is all the virtue that you collected? O, you have cheated me so much in the name of dharma that with that money I could have saved my child’s neck! (G. P. Deshpande, ed. 2002. Selected Writings of Jotirao Phule. New Delhi: Leftword. Page. 161-62)

      ಈ ಹೇಳಿಕೆಯನ್ನು ನೀಡಿದವರು ಜ್ಯೋತಿಫುಲೆಯವರು. ಇವರ ಈ ಹೇಳಿಕೆಯನ್ನು ಓದಿಕೊಂಡವರು ಬ್ರಾಹ್ಮಣರ ಬಗ್ಗೆ ಯಾವ ನಿಲುವು ತಾಳುತ್ತಾರೆ ಒಮ್ಮೆ ಯೋಚಿಸಿ.

      ಧನ್ಯವಾದಗಳೊಂದಿಗೆ

      ಶಂಕರಪ್ಪ

      ಪ್ರತಿಕ್ರಿಯೆ
  3. Shankarappa

    ಹುಲಿಕುಂಟೆ ಮೂರ್ತಿಯವರಿಗೆ,

    ನಿಮ್ಮ ಬರವಣಿಗೆಯ ದಾಟಿ ನೋಡಿದರೆ, ನನಗೆ ದಲಿತ ಚಿಂತನೆಯ ಬಗ್ಗೆ ಏನು ತಿಳಿದಿಲ್ಲ ಸ್ವಲ್ಪ ತಿಳಿದುಕೊಂಡು ಮಾತಾನಾಡಿ ಎನ್ನುವ ಧೋರಣೆ ಇರುವುದು ಕಾಣುತದೆ. ಇನ್ ಫ್ಯಾಕ್ಟ್ ನಾನು ದಲಿತರ ಬಗ್ಗೆಯೆ ಸಂಶೋಧನೆ ಮಾಡುತಿರುವುದು. ಆದ್ದರಿಂದ ನೀವು ಸೂಚಿಸಿದ ಪುಸ್ತಕಗಳಲ್ಲಿ ಕೆಲವನ್ನು ನಾನು ಸಹ ಓದಿದ್ದೇನೆ. ಇದು ಬೇರೆಯದೇ ವಿಷಯ.

    ನನ್ನ ಮೊದಲ ಪ್ರಶ್ನೆಗೆ ನಿಮ್ಮದು ಭಾಗಶಃ ಉತ್ತರವಾಗಿದೆ. ಏಕೆಂದರೆ, ಕೇವಲ ಪುಸ್ತಕಗಳ ಹೆಸರು ಮತ್ತು ಲೇಖಕರ ಬಗ್ಗೆ ಮಾಹಿತಿ ನೀಡಿದರೆ, ರಾಮಯ್ಯರವರು ತಮ್ಮ ಸಂದರ್ಶನದ ವರದಿಯಲ್ಲಿ (೭೦ ಮತ್ತು ೮೦ರ ದಶಕಗಳಲ್ಲಿ ರಚನೆಗೊಂಡ ಪುಸ್ತಕಗಳಲ್ಲಿ) ಈ ಕ್ಷೇತ್ರಗಳ ಬಗ್ಗೆ ಹಗೆತನ/ದ್ವೇಷದ ಮಾತುಗಳನ್ನು ಆಡಿದ್ದಾರೆ ಎಂಬ ನನ್ನ ವಾದವನ್ನು ಅಲ್ಲಗೆಳೆದಂತಾಗುವುದಿಲ್ಲ. ನೀವು ಸೂಚಿಸಿದ ಪುಸ್ತಕಗಳಲ್ಲಿ ದಲಿತ ಕವಿಗಳು ಮತ್ತು ಚಿಂತಕರು ಭಾರತೀಯ ಸಮಾಜ ಮತ್ತು ದಲಿತೇತರ ಜಾತಿಗಳ ಬಗ್ಗೆ ಆಡಿರುವ ಮಾತುಗಳನ್ನು ಇಟ್ಟುಕೊಂಡು ನೋಡಿದರೆ ಸಾಕು ಇವರು (ಬಂಡಾಯ-ದಲಿತ ಕವಿಗಳು) ಏನು ಹೇಳುತ್ತಿದ್ದಾರೆಂಬುದು ತಿಳಿಯುತದೆ. ಉದಾಹರಣೆಗೆ: “ಇಕ್ರಲಾ ವದಿರ್ಲಾ ಈ ನನ್ ಮಕ್ಕಳ್ಳ ಚರ್ಮ ಎಬ್ರಲಾ ದೇವ್ರು ಒಬ್ನೇ ಅಂತಾರೆ ಓಣಿಗೊಂದೊಂದು ತರಾ ಗುಡಿ ಕಟ್ಸವ್ರೆ ಎಲ್ಲಾರು ದೇವ್ರ ಮಕ್ಳು ಅಂತಾರೆ ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ್ಸಲ್ವಲ್ರೋ…” (ಸಿದ್ಧಲಿಂಗಯ್ಯ, ೨೦೦೭. “ಒಂದು ಪದ” ಮೆರವಣಿಗೆ ಯಲ್ಲಿ. ಬೆಂಗಳೂರು: ಅಂಕಿತ ಪುಸ್ತಕ. ಪುಟ ೫೯). ಈ ರೀತಿಯ ಮಾತುಗಳನ್ನು ಇನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಲು ಗಾಂಧೀಜಿಯರ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ್ ರವರ ಮುಂದಿನ ಹೇಳಿಕೆಗಳನ್ನು ನೋಡಿ: “ಗಾಂಧಿ ಒಬ್ಬ ಯಶಸ್ವಿ ನಯವಂಚಕ”, “ನನ್ನ ನಿಜವೈರಿ ತೊಲಗಿದ (ಮರಣಿಸಿದ). ಗ್ರಹಕಾಟ ಕಳೆಯಿತು. ಈ ಸುಸಮಯಕ್ಕೆ ವಂದನೆಗಳು” (ಉದ್ರುತ: ಭಗವಾನ್ ದಾಸ್. ೨೦೧೦. “ಸಂಘರ್ಷದ ಎರಡು ಮಾರ್ಗ ಅಂಬೇಡ್ಕರ್ ಮತ್ತು ಗಾಂಧೀಜಿ”. ಅನುವಾದ ಮ. ನ. ಜವರಯ್ಯ. ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು ದಲ್ಲಿ ಎನ್. ಚಿನ್ನಸ್ವಾಮಿ ಸೋಸಲೆ (ಸಂ). ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಪುಟ ೧೧೮ ಮತ್ತು ೧೧೯) ಇಂತಹ ಹೇಳಿಕೆಗಳ ಬಗ್ಗೆ ಏನು ಹೇಳುವಿರಿ.

    ನನ್ನ ಎರಡನೆಯ ಪ್ರಶ್ನೆಗೆ ಇರುವ ನಿಮ್ಮ ಉತ್ತರಕ್ಕೆ ಬರೋಣ: ಇಂದು ಸಮಾಜಶಾಸ್ತ್ರಗಳು ಹಲವು ದೃಷ್ಟಿಕೋನಗಳನ್ನು ಇಟ್ಟುಕೊಂಡು ಸಮಾಜದ ಬಗ್ಗೆ ಮಾತಾನಾಡಿದಂತೆ ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪಗಳಂಥ ನಾಡಿನ ಮೌಖಿಕ ಕಾವ್ಯಗಳು ಯಾವುದೇ ದೃಷ್ಟಿಕೋನಗಳನ್ನು ಇಟ್ಟುಕೊಂಡು ರಚನೆಗೊಂಡಿಲ್ಲ, ಅವುಗಳ ಹಿನ್ನಲೆಯೇ ಬೇರೆ ಇದೆ (ಈ ವಿಚಾರದ ಬಗ್ಗೆ ಸಂಶೋಧನೆಯಾಗಬೇಕಿದೆ). ಆದರೆ ಇಂದಿನ ಚಿಂತಕರು ಮತ್ತು ಕವಿಗಳು ಈ ಮಹಾಕಾವ್ಯಗಳನ್ನು ಸಮಾಜಶಾಸ್ತ್ರಗಳಲ್ಲಿರುವ ಸಮಂಜಸ/ಅಸಮಂಜಸ ಸಿದ್ಧಾಂತಗಳಂತೆ ಬಳಸುವುದರುವ ಪ್ರಕ್ರಿಯೆಯ ಬಗ್ಗೆ ಏನು ಹೇಳಬೇಕೆಂಬುದು ಅರ್ಥವಾಗುತ್ತಿಲ್ಲ. ಹೆಚ್ಚೆಂದರೆ ಮುಂದಿನಂತೆ ಹೇಳಬಹುದು: ಈ ಬಂಡಾಯ-ದಲಿತ ಕವಿಗಳು ಪ್ರಸ್ತುತವಾಗಿ ಸಮಾಜಶಾಸ್ತ್ರಗಳಲ್ಲಿರುವ ಸಿದ್ಧಾಂತಗಳಿಗೆ ಪೂರಕವಾಗಿ ಈ ಮೌಖಿಕ ಕಾವ್ಯಗಳನ್ನು ಬಳಸಿಕೊಳ್ಳುತಿದ್ದಾರೆ ಎಂದು ಹೇಳಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ “ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಕರಿಬಂಟದಂತ ಜನಪದರ ಮಹಾಕಲಾವ್ಯಗಳು ಶಿಷ್ಟ ಸಂಸ್ಕೃತಿಯ ಅಮಾನವೀಯ ಮೌಲ್ಯಗಳೆದುರು ಪ್ರತಿರೋಧವನ್ನು ದಾಖಲಿಸಲೆಂದೇ ಹುಟ್ಟಿಕೊಂಡವು ಎಂಬ” ನಿಮ್ಮ ವಾದವು ಪ್ರಸ್ತುತ ಕಾಲದ ಕೆಲವು ಚಿಂತಕರ ವಾದವಾಗಿದೆ ಹೊರತು ಈ ಮಹಾಕಾವ್ಯಗಳದ್ದಲ್ಲ.

    ಮೂರನೆಯ ವಿಚಾರಕ್ಕೆ ಬರೋಣ: “ಅವರು (ಶಂಕರಪ್ಪ) ರಾಮಯ್ಯನವರ ಸಂದರ್ಶನವನ್ನು ಇನ್ನೂ ಒಂದುಬಾರಿ, ಪೂರ್ವಗ್ರಹೀತ ಭಾವನೆಯನ್ನು ಹೊರತುಪಡಿಸಿ ಓದಿದರೆ ಅದರಲ್ಲಿ ಹಗೆತನದ ಮಾತುಗಳಿಲ್ಲದಿರುವುದನ್ನು ಕಾಣಬಹುದು” ಎಂಬ ನಿಮ್ಮ ಹೇಳಿಕೆಯು ಅಷ್ಟೊಂದು ಸಮಂಜಸವಾದುದಲ್ಲವೆಂದು ಹೇಳುವಾದಕ್ಕಾಗಿ ಮಾತ್ರ “ಈ ಮಠಾಧೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಅವರು ಸಣ್ಣವರಿರಲೀ, ದೊಡ್ಡವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ” ಎಂಬ ರಾಮಯ್ಯನವರ ಹೇಳಿಕೆಯನ್ನು ನೀಡಿದ್ದು. ಹಾಗೆಂದ ಮಾತ್ರಕ್ಕೆ ಭಾರತೀಯ ಸಮಾಜದಲ್ಲಿ ಶೋಷಿತರು ಮತ್ತು ಶೋಷಿತರು ಇಲ್ಲವೆಂದರ್ಥವಲ್ಲ. ಆದರೆ, ದಲಿತ ಜಾತಿಗಳ ಎಲ್ಲಾ ಜನರು ಶೋಷಿತರು ಮತ್ತು “ಮೇಲ್ಜಾತಿಗಳು” ಶೋಷಕರು ಎಂಬ ಸಿದ್ಧಾಂತಗಳಲ್ಲಿರುವ ವಿಚಾರಗಳನ್ನು ಇಂದು ಪುನರ್ ಪರಿಶೀಲನೆಗೆ ಒಳಗಾಗಬೇಕಾದ ಅವಶ್ಯಕತೆಯನ್ನು ಮರೆಯುವಂತಿಲ್ಲ. ಏಕೆಂದರೆ ಈ ಸಿದ್ಧಾಂತಗಳು ನಿಜವಾದ ಶೋಷಿತ ಮತ್ತು ಶೋಷಕರನ್ನು ಮರೆ ಮಾಚಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಇಂದಿನ ಪರಿಶಿಷ್ಟರಿಗಿರುವ ಮೀಸಲಾತಿಯ ಸೌಲಭ್ಯಗಳ ಭಾಗಶಃ ಯಶಸ್ಸು ಮತ್ತು ಈ ಮೀಸಲಾತಿ ಸೌಲಭ್ಯ ಪಡೆಯಲು ಇಂದು ಹಲವು ಜಾತಿಗಳು ಮುಂದಾಗುತ್ತಿರುವುದು.

    ನಾಲ್ಕನೇಯ ಪ್ರಶ್ನೆಗೆ ಮರಳೋಣ: ದಲಿತರ ಹೆಸರನ್ನು ಹೇಳಿಕೊಂಡು ಹೊಟ್ಟೆಹೊರೆಯುವ ದಲಿತ ನಾಯಕರ ನಡವಳಿಕೆಗಳನ್ನು ಸಮರ್ಥಿಸಿಕೊಳ್ಳುವುದು ನನ್ನ ಉದ್ದೇಶವಲ್ಲ. ಬದಲಿಗೆ ಒಬ್ಬ ಸಮರ್ಥ ದಲಿತ ನಾಯಕನನ್ನು ಸೃಷ್ಟಿಸಲು ಈಗಿರುವ ಸಿದ್ಧಾಂತಗಳಿಗೆ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿಕೊಂಡು ಉತ್ತರ ಕಂಡುಕೊಳ್ಳುವ ಜರೂರು ಇದೆಯೇ ಹೊರತು ಕೇವಲ ನಿಂದಿಸುವ/ದ್ವೇಷಿಸುವ ಮಾತುಗಳನ್ನಾಡಿದರೆ ಉಪಯೋಗವಾಗುವುದರ ಬದಲು ಆಪಾಯಗಳೇ ಹೆಚ್ಚು ಎಂದು ಹೇಳುತ್ತಿದ್ದೇನೆ.

    ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಹಲವು ದಿನ ಪತ್ರಿಕೆಗಳು ಮತ್ತು ಮ್ಯಾಗ್ಜೇನ್ ಗಳು “ಮೇಲ್ಜಾತಿಗಳ” ಬಗ್ಗೆ ಇಟ್ಟುಕೊಂಡ ಧೋರಣೆಗಳನ್ನು ತಿಳಿದುಕೊಳ್ಳಲು ಮುಂದಿನ ದೇವನೂರು ಮಹಾದೇವರವರ ಹೇಳಿಕೆಯನ್ನು ಗಮನಿಸಿ: ಬ್ರಿಟಿಷರು ಹೋದ ಮೇಲೆ ಸ್ಥೂಲವಾಗಿ ಬ್ರಾಹ್ಮಣ, ಲಿಂಗಾಯಿತ, ಗೌಡ ಇಂಥ ಜಾತಿಗಳು ಸಾಧಾರಣವಾಗಿ ಸುಲಿಗೆ ಮಾಡುವಂತ ಜಾತಿಗಳು ಆಗಿವೆ (ದೇವನೂರು ಮಹಾದೇವ. ೧೯೮೮. “ಕರ್ನಾಟಕ ದಲಿತ ಸಂಘರ್ಷ ಸಮಿತಿ: ದಕ್ಷಿಣ ಕನ್ನಡ ಜಿಲ್ಲೆ”. ಪಂಚಮ ದಲ್ಲಿ. ಪುಟ ೧೯). ಇಂತಹ ಹೇಳಿಕೆಗಳು ಕೇವಲ ದೇವನೂರು ಮಹಾದೇವರವರವರು ಮಾತ್ರ ಹೇಳಿಲ್ಲ, ಆ ಕಾಲದ ಹಲವು ಪತ್ರಿಕೆಗಳು ಮತ್ತು ಪುಸ್ತಕಗಳಲ್ಲಿ ಕಾಣಬಹುದು. ಶೋಷಕರೆನಿಸಿಕೊಂಡವರು ಒಂದು ಜಾತಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದೆರಡು ಕುಟುಂಬಗಳಿರಬಹುದು. ಅಂದಮಾತ್ರಕ್ಕೆ ಇಡೀ ಜಾತಿಗಳನ್ನೆ ದೂಷಣೆ ಮಾಡುವುದರಿಂದ ಏನು ಪ್ರಯೋಜನ?
    (ದೇವಸ್ಥಾನಗಳಿಗೆ ದಲಿತ ಜಾತಿಯವರನ್ನು ಬಿಟ್ಟುಕೊಳ್ಳದಿರುವಂತ ಘಟನೆಗಳನ್ನು ಇಟ್ಟುಕೊಂಡು ದಲಿತರ ಶೋಷಣೆಯ ಬಗ್ಗೆ ಇರುವ ಚರ್ಚೆಯು ಹಲವು ಸಮಸ್ಯೆಗಳಿಂದ ಕೂಡಿದೆ)

    (ರಾಮಯ್ಯರವರು ತಮ್ಮ ಸಂದರ್ಶನದ ವರದಿಯಲ್ಲಿ (೭೦ ಮತ್ತು ೮೦ರ ದಶಕಗಳಲ್ಲಿ ರಚನೆಗೊಂಡ ಪುಸ್ತಕಗಳಲ್ಲಿ) ಈ ಕ್ಷೇತ್ರಗಳ ಬಗ್ಗೆ ಹಗೆತನ/ದ್ವೇಷದ ಮಾತುಗಳನ್ನು ಆಡಿದ್ದಾರೆ ಎಂಬ ನನ್ನ ವಾದವು ತಪ್ಪು ಎಂದು ತೋರಿಸು ಸುತ್ತ ಚರ್ಚೆ ಬೆಳೆದರೆ ಸೂಕ್ತವೆನಿಸುತ್ತದೆ)

    ನಿಮ್ಮ ಉತ್ತರಕ್ಕಾಗಿ ಕಾಯುವವ,

    ಶಂಕರಪ್ಪ

    ಪ್ರತಿಕ್ರಿಯೆ
  4. GN NAGARAJ

    sittu, dvesha bandayada chinthaneya mukhya bhaga.ghora anyaya nadeyuththiruvaga sittu baradiddare adu amanaveeya varthane.anyayakkolagadavaralli mathravalla adara bagge gottadavarigella sittu mooduvudillave?

    prathibhatane,chaluvaliyembude sittina abhivyakti.sahithyadalli sittina abhivyakthi anadikaladindaloo ide. adu 70ra sahityada hosa anveshaneyenoo alla.
    ramayyanavara sittoo sakaranavadadde. chaluvaliya bagge kooda avara kopakke karanavide.innu mathadipathigala bagge kopakke karanavillave?
    innu meljathiya ellarannu onde thakkadige haki ellara baggeyoo sittaguvudara bagge:
    shankarappanavaru baredanthe avarellaroo shoshakaralla hageye kevala obba vyakthi, ondu kutumba mathrave shoshakaru embudoo sariyalla.
    halavu asthivantha kutumbagalu shoshaneya nethruthva vahisuththave.

    adare ade samayadalli namma samajada jathibaddathe ulidavarannu mooka bembaligarannagi athava prekshakarannagisuttade.
    innu asprushyatheya amanaveeya acharaneyalli meljathiya ellara apragnavantha paludarikeyannu kanda dalitharige adaralliyoo dourjanyagala sandharbhadalli, meljathiyavarella onde enisidare enascharya?
    addarinda meljathigala pragnvantharu thamma jathiya samanya janarige thammade jathiya shoshakara virudhdha nillalu, asprushyatheyannu acharisadiralu bhodisi saphalaradagale, dalitharige ellara meloo sittagadiruvanthe bhodisalu sadhyavaguvudu.

    ಪ್ರತಿಕ್ರಿಯೆ
    • Shankarappa

      ಜಿ. ಎನ್. ನಾಗರಾಜ್ ರವರಿಗೆ,

      ಸಿಟ್ಟು, ದ್ವೇಷ ಬಂಡಾಯ ಚಳುವಳಿಯ ಮುಖ್ಯ ಭಾಗ ಎನ್ನುವ ಮೂಲಕ “ರಾಮಯ್ಯರವರು ತಮ್ಮ ಸಂದರ್ಶನದ ವರದಿಯಲ್ಲಿ (೭೦ ಮತ್ತು ೮೦ರ ದಶಕಗಳಲ್ಲಿ ರಚನೆಗೊಂಡ ಪುಸ್ತಕಗಳಲ್ಲಿ) ಈ ಕ್ಷೇತ್ರಗಳ ಬಗ್ಗೆ ಹಗೆತನ/ದ್ವೇಷದ ಮಾತುಗಳನ್ನು ಆಡಿದ್ದಾರೆ” ಎಂಬ ನನ್ನ ವಾದವನ್ನು ನೀವು ಒಪ್ಪಿಕೊಂಡಿದ್ದೀರೆಂದು ನಾನು ಭಾವಿಸುತ್ತೇನೆ.

      ದಲಿತರಲ್ಲಿರುವ ಈ ಸಿಟ್ಟು, ದ್ವೇಷಕ್ಕೆ ಮೇಲ್ಜಾತಿಗಳ್ಳಲ್ಲಿರುವ ಅಸ್ಪೃಶ್ಯತಾಚರಣೆ ಕಾರಣವೆಂದು ನೀವು ಹೇಳುತಿದ್ದೀರಿ. ಇದರ ಬಗ್ಗೆ ಸ್ವಲ್ಪ ಚರ್ಚಿಸುವ:

      ಒಬ್ಬರಿಗೊಬ್ಬರು ಮುಟ್ಟದೆ ಇರುವುದನ್ನು ಅಸ್ಪೃಶ್ಯತಾಚರಣೆ ಎಂದರೆ ಪ್ರಪಂಚದಲ್ಲಿ ಎದೆಷ್ಟೋ ಜನ ಅದಿನೆಷ್ಟೋ ಜನರನ್ನ ಮುಟ್ಟುವುದಿಲ್ಲ ಅದೆನ್ನೆಲ್ಲ ಅಸ್ಪೃಶ್ಯತಾಚರಣೆ ಎಂದು ಏಕೆ ಕರೆಯುವುದಿಲ್ಲ? ಎಂಬ ಪ್ರಶ್ನೆಯು ಎದುರಾಗುತ್ತದೆ. ಆದರೆ ಇದನ್ನು ಅಸ್ಪೃಶ್ಯತಾಚರಣೆ ಎಂದು ಕರೆಯುವುದಿಲ್ಲ. ಏಕೆಂದರೆ ಈ ಅಸ್ಪೃಶ್ಯತಾಚರಣೆಯ ಬಗ್ಗೆ ಚರ್ಚಿಸುವವರು ಕೇವಲ ಮುಟ್ಟದಿರುವ ಕ್ರಿಯೆಯನ್ನು ಮಾತ್ರ ಇಟ್ಟುಕೊಂಡು ಚರ್ಚಿಸುವುದಿಲ್ಲ. ಬದಲಿಗೆ ಈ ಅಸ್ಪೃಶ್ಯತಾಚರಣೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾದದ್ದು ಎಂದು ಹೇಳುವುದಕ್ಕೆ ಕೆಲವು ನಿರ್ದಿಷ್ಟ ಆಚರಣೆಗಳನ್ನು ಸೂಚಿಸುತ್ತಾರೆ. ಅಂತಹ ಆಚರಣೆಗಳೆಂದರೆ: ದೇವಸ್ಥಾನಗಳ ಒಳಗೆ ಬಿಟ್ಟುಕೊಳ್ಳದಿರುವುದು, ಪಾತ್ರೆಗಳನ್ನು ಮುಟ್ಟಿಸಿಕೊಳ್ಳದಿರುವುದು, ಮನೆಗಳ ಒಳಗೆ ಬಿಟ್ಟುಕೊಳ್ಳದಿರುವುದು, ಮೇಲಿನಿಂದ ಕುಡಿಯುವ ನೀರನ್ನು ಬೊಗಸೆಗೆ ಹಾಕುವುದು ಇತ್ಯಾದಿ. ಈ ಆಚರಣೆಗಳನ್ನು ಅಸ್ಪೃಶ್ಯತಾಚರಣೆಯ ಎಂದು ಕರೆಯುತ್ತಾರೆ. ಇದನ್ನು ನೀವು ಪ್ರಜ್ಜವಂತರನ್ನೂ ಒಳಗೊಂಡಂತೆ ಎಲ್ಲಾ ಮೇಲ್ಜಾತಿಯವರು ಆಚರಿಸುತ್ತಾರೆಂದು ಹೇಳುತ್ತೀರಿ. ಇಲ್ಲಿ ನನಗೆ, ಮೇಲೆ ಸೂಚಿಸಿದ ಆಚರಣೆಗಳನ್ನು ಕೇವಲ ಮೇಲ್ಜಾತಿಗಳು ಮಾತ್ರ ಆಚರಿಸುತ್ತಾರೆಯೇ? ಎಂಬ ಪ್ರಶ್ನೆಯು ಎದುರಾಗುತ್ತದೆ. ಈ ಆಚರಗಳನ್ನು “ಕೆಳ ಜಾತಿಯವರು” ಆಚರಿಸುತ್ತಾರೆ ಎಂಬುದಕ್ಕೆ ಮುಂದಿನ ಘಟನೆ ಪೂರಕವಾಗಿದೆ:

      ಯಾವ ಹೊಡೆತವನ್ನೂ ತಿನ್ನದೆ ಹೊಲಗೇರಿಯ ಮುಖಾಂತರ ಹಾದುಹೋಗಲು ಸಾಧ್ಯವಾಗುವುದಾದರೆ ಅದರಿಂದ ತಮಗೆ ಭಾರಿ ಅದೃಷ್ಟದ ಪ್ರಾಪ್ತಿಯಾಗುತ್ತದೆಂದು ಬ್ರಾಹ್ಮಣರು ಭಾವಿಸುತ್ತಾರೆ. ಆದರೆ ಇದಕ್ಕೆ ಹೊಲೆಯರ ತೀವ್ರ ಆಕ್ಷೇಪವಿದೆ. ಬ್ರಾಹ್ಮಣನೇನಾದರೂ ಅವರ ವಸತಿಸ್ಥಾನಕ್ಕೆ ಪ್ರವೇಶಿಲು ಪ್ರಯತ್ನಿಸಿದರೆ ಹೊಲೆಯವರೆಲ್ಲಾ ಇಡಿಯಾಗಿ ಹೊರಬಂದು ಅವನನ್ನು ಚಚ್ಚಿಹಾಕುತ್ತಾರೆ. ಹಿಂದಿನ ಕಾಲದಲ್ಲಿ ಅಂತಹವರನ್ನು ಹೊಡೆದು ಸಾಯಿಸುತ್ತಿದ್ದರೆಂದೂ ಹೇಳಲಾಗಿದೆ. ಬೇರೆ ಜಾತಿಗಳವರು ಹೊಲೆಯರ ಗುಡಿಸಲ ಬಾಗಿಲವರೆಗೂ ಬರಬಹುದು; ಆದರೆ ಗುಡಿಸಲೊಳಕ್ಕೆ ಪ್ರವೇಶಿಸುವಂತಿಲ್ಲ. ಏಕೆಂದರೆ ಅದರಿಂದ ಹೊಲೆಯರವನಿಗೆ ಹೀನ ಅದೃಷ್ಟ ಪ್ರಾಪ್ತಿಯಾಗುತ್ತದೆಂತೆ. ಹಾಗೇನಾದರೂ ಅಕಸ್ಮಾತ್ತಾಗಿ ಯಾರಾದರೂ ಒಳಗೆ ಪ್ರವೇಶಿಸಿದರೆ ಗುಡಿಸಲ ಯಜಮಾನನು ಆ ಆಗಂತುಕನ ಬಟ್ಟೆ ಹರಿದು ಅದರ ಒಂದು ಮೂಲೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ಅವನನ್ನು ಹೊರದೂಡಲು ಮರೆಯುವುದಿಲ್ಲ. [ಬಿ. ಆರ್. ಅಂಬೇಡ್ಕರ್. (೧೯೪೮) ೧೯೯೮. ಅಸ್ಪೃಶ್ಯರು: ಅವರು ಯಾರು ಮತ್ತು ಅವರು ಏಕೆ ಅಸ್ಪೃಶ್ಯರಾದರು? (ಕನ್ನಡ ಅನುವಾದ). ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ. ಪುಟ ೪೩೭).

      (“ಕೆಳ ಜಾತಿ”ಗಳೆಂದು ತಿಳಿದ ಜನರು ಸಹ ಇಂತಹ ಆಚರಣೆಗಳನ್ನು ಮಾಡುತ್ತಾರೆಂದು ಹೇಳುವ ಹಲವು ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಮೈಕಲ್ ಮಾಫೆಟ್ ರವರ ಬರವಣಿಯಲ್ಲಿ ನೋಡಬಹುದು)

      ಈ ಮೇಲಿನ ಘಟನೆಯನ್ನು ಗಮನಿಸಿದ ಅಂಬೇಡ್ಕರ್ ರವರು “ವಿಚಿತ್ರ” ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಇದರಿಂದ ಈ ಘಟನೆಯ ಬಗ್ಗೆ ಅಂಬೇಡ್ಕರ್ ರವರು ಏಕೆ ಈ ನಿಲುವನ್ನು ತೆಗೆದುಕೊಳ್ಳುತ್ತಾರೆ? ಎಂಬ ಪ್ರಶ್ನೆಯು ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆ ಮುಂದಿನ ಒಂದು ಉತ್ತರವನ್ನು ಊಹಿಸಬಹುದು: “ಮೇಲ್ಜಾತಿಗಳ ಜನರು” “ಕೆಳಜಾತಿಗಳ” ಜನರನ್ನು ಶೋಷಿಸುತ್ತಾರೆ ಎಂಬ ಆಗಾಗಲೆ ತೆಗೆದುಕೊಂಡ ಏಕಮುಖದ ನಿರ್ಧಾರ. ಹೀಗೆ ಏಕಮುಖವಾಗಿ ಒಪ್ಪಿತವಾದ ನಂಬಿಕೆಯು ಸುಳ್ಳದರೆ, ಈ ಮೇಲಿನ ಘಟನೆಗಳನ್ನು ಇಟ್ಟುಕೊಂಡು “ಮೇಲ್ಜಾತಿಗಳ” ಜನರು ಸಹ ತಮ್ಮನ್ನು “ಕೆಳ ಜಾತಿಗಳ” ಜನರು ಶೋಷಿಸುತ್ತಾರೆಂದು ಹೇಳಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಸ್ಪೃಶ್ಯಾಚಾರಣೆಗೆ ಪೂರಕವಾಗಿ ಬಳಸಿದ ಇದೇ ಘಟನೆಗಳನ್ನು ಇಟ್ಟುಕೊಂಡು ಎಲ್ಲಾ ಜಾತಿಗಳ ಜನರು ಪರಸ್ಪರ ದೂಷಿಸಿಕೊಳ್ಳಬಹುದು ಅಥವಾ ಭಾರತೀಯ ಸಮಾಜ ಬಹಳ ಸಂಕೀರ್ಣ, ಅದನ್ನು ಅರ್ಥಮಾಡಿಕೊಳ್ಳುದು ಕಷ್ಟವೆಂದು ವಾದಿಸಬಹುದು. ಒಂದು ಸಮಾಜವು ಸಂಕೀರ್ಣವಾಗಿರಲು ಸಾಧ್ಯವೆ? ಸಾಧ್ಯವಿಲ್ಲ. ಏಕೆಂದರೆ ಒಬ್ಬ ವ್ಯಕ್ತಿಯು ಒಂದು ಸಮಾಜವನ್ನು ಗ್ರಹಿಸುವಲ್ಲಿ ಸಂಕೀರ್ಣತೆ ಇರಬಹುದೆ ಹೊರತು ಸಮಾಜವೇ ಸಂಕೀರ್ಣವಾಗಿರಲು ಸಾಧ್ಯವಿಲ್ಲ. ಉದಾಹರಣೆಗೆ ಕಂಪ್ಯೂಟರನ್ನು ಅರ್ಥಮಾಡಿಕೊಳ್ಳಲು ಕಂಪ್ಯೂಟರ್ ವಿಜ್ಜಾನ ತನಗೆ ಗೊತ್ತಿಲ್ಲವೆಂದು ಒಬ್ಬ ವ್ಯಕ್ತಿ ಹೇಳಬೇಕೆ ಹೊರತು ಕಂಪ್ಯೂಟರ್ ತುಂಬ ಸಂಕೀರ್ಣಾವಾಗಿದೆ ಎಂದು ಹೇಳಿದರೆ ಅರ್ಥವಿರುವುದಿಲ್ಲ.

      ಹಾಗಾಗಿ ಅಸ್ಪೃಶ್ಯತಾಚರಣೆ ಎಂಬ ವಿದ್ಯಮಾನದ ಬಗ್ಗೆ ಇಷ್ಟೊಂದು ಸಮಸ್ಯೆಗಳು ಇರುವಾಗ ಮೇಲ್ಜಾತಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ಅಮಾನವೀಯ ಆಚರಣೆ ಎನ್ನುವುದರಲ್ಲಿ ಯಾವ ಅರ್ಥವಿದೆ. ಒಂದು ವೇಳೆ ಈ ಆಚರಣೆಗಳನ್ನು ಮಾಡುವವರು ಅಸ್ಪೃಶ್ಯತಾಚರಣೆಯನ್ನು ಆಚರಿಸುತ್ತಾರೆಂದಾರೆ, ಭಾರತದಲ್ಲಿರುವ ಎಲ್ಲಾ ಜಾತಿಗಳ ಬಹುತೇಕ ಜನರನ್ನು ಮನುಷ್ಯರಲ್ಲವೆನ್ನಬೇಕಾಗುತ್ತದೆ. ಹೀಗೆ ವಾದಿಸುವುದರಿಂದ ಏನು ಪ್ರಯೋಜನ?

      ಧನ್ಯವಾದಗಳೊಂದಿಗೆ

      ಶಂಕರಪ್ಪ

      ಪ್ರತಿಕ್ರಿಯೆ
  5. ಸಂತೋಷ್ ಕುಮಾರ‍್ ಪಿ.ಕೆ

    ನಾಗರಾಜ್ ರವರೆ

    ನಿಮ್ಮ ಪ್ರಕಾರ ಶೋಷಣೆ ಎಂಬುದು ಸಂಘಟಿತ ಕೃತ್ಯವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾದರೆ ಖೈರ್ಲಾಂಜಿ ಘಟನೆಯನ್ನು ಹೇಗೆ ವಿವರಿಸುತ್ತೀರಿ? ನಿಮ್ಮ ವಿವರಣೆಗಳು ಸಮಾಜದಲ್ಲಿ ದ್ವೇಷ ಬಿತ್ತುತ್ತವೆಯೇ ಹೊರತು ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಯಾರಿಗೋ ಸಿಟ್ಟು ಬಂದ ಮಾತ್ರಕ್ಕೆ ಸಮಸ್ಯೆಗಳು ತನ್ನಿಂತಾನೇ ಪರಿಹಾರವಾಗುವುದಿಲ್ಲ. ಇವುಗಳಿಂದಾಚೆಗೆ ಅದರ ಕುರಿತು ಅಧ್ಯಯನ ನಡೆಸಿದರೆ ಉತ್ತಮವಾಗಬಹುದು.

    ಪ್ರತಿಕ್ರಿಯೆ
  6. ಹುಲಿಕುಂಟೆ ಮೂರ್ತಿ

    ಶಂಕರಪ್ಪನವರಿಗೆ..

    ನಿಮ್ಮ ವಿದ್ವತ್ತಿನ ಪರಿಚಯವಾದಮೇಲೆ ನನಗೆ ನಿಮ್ಮೊಂದಿಗೆ ಚರ್ಚೆ ಮುಮದುವರೆಸಲು ಕಷ್ಟವಾಗುತ್ತಿದೆ. ಇಷ್ಟೋಂದು ಓದಿಕೊಂಡಿರುವವರಿಗೆ ನನ್ನ ಮತ್ತು ಮಂಜು ಅವರ ಪ್ರತಿಕ್ರಿಯೆಗಳೇ ಎಲ್ಲಾ ಉತ್ತರಗಳನ್ನು ಹೇಳುತ್ತವೆ ಎಂಬುದು ಅರ್ಥವಾಗದಿರುವುದು ಸೋಜಿಗ. ಕಮ್ಯುನಿಷ್ಟರಾದ ನಾಗರಾಜರೇ ಜಾತಿ ನಿರ್ಮಿತಿಯಿಂದ ಭಾರತ ಸಮಾಜ ಅನುಭವಿಸುತ್ತಿರುವ ಸಂಕಟಗಳನ್ನು ಅರ್ಥ ಮಾಡಿಕೊಂಡಿದ್ದಾರೆಂದಮೇಲೆ ‘ಜಾತಿ’ ಇಂದಿಗೂ ಹಬ್ಬಿ ಬೆಳೆಯುತ್ತಿರುವ ಅಪಾಯವನ್ನು ನಾವು ಊಹಿಸದಿದ್ದರೆ ನಮಗೆ ಉಳಿಗಾಲವಿಲ್ಲ. ರಾಮಯ್ಯನವರ ಹೇಳಿಕೆಗಳಲ್ಲಿ ಹಗೆತನವಿದೆ ಎಂದು ನೀವು ಪಟ್ಟು ಹಿಡಿದು ಸಾಧಿಸಲೊರಟಿರುವುದನ್ನು ಕಂಡು ಇದು ಕೇವಲ ಚರ್ಚೆಯ ವಿಷಯವಲ್ಲ ಎಂದು ನನಗನ್ನಿಸಿದೆ. ನೀವು ಕೊಡುತ್ತಿರುವ ಎಲ್ಲಾ ಉದಾಹರಣೆಗಳೂ ನಿಮ್ಮ ಪ್ರಶ್ನೆಗಳೊಳಗೆ ಸಿಕ್ಕಿಹಾಕಿಕೊಂಡು ಒಂದೇ ಉತ್ತರವನ್ನು ಹೊರಡಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ ಅದು: ‘ಬಾರತದಂಥ ಸಮಾಜದಲ್ಲಿ ಜಾತಿ ಉಂಟುಮಾಡಿರುವ ಸಂಕಷ್ಟಗಳನ್ನು ನಿವಾರಿಸಬೇಕಾದರೆ ಇಲ್ಲಿ ಬದುಕುತ್ತಿರುವ ಮನಸ್ಸುಗಳೆಲ್ಲವೂ ಕೆಲಕಾಲ ಸಹಿಸಿಕೊಂಡೋ, ಕೆಲಕಾಲ ಕೆರಳಿಯೋ ಹಾಗೂ ಇನ್ನೂ ಕೆಲಕಾಲ ಸೋತು- ಗೆಲ್ಲಲು ಅವಕಾಶ ಕೊಟ್ಟು ಸಾಗಬೇಕು..’ ಎಂಬುದು. ಈ ಅರ್ಥದಲ್ಲಿ ಜಿ.ಎನ್.ನಾಗರಾಜ್ ಬಹುಮುಖ್ಯವಾದ ಮಾತೊಂದನ್ನು ಹೇಳಿದ್ದಾರೆ. ‘meljathigala pragnvantharu thamma jathiya samanya janarige thammade jathiya shoshakara virudhdha nillalu, asprushyatheyannu acharisadiralu bhodisi saphalaradagale, dalitharige ellara meloo sittagadiruvanthe bhodisalu sadhyavaguvudu’, ಇದು ಸುಳ್ಳಲ್ಲ. ನಮ್ಮಲ್ಲಿ ಕುವೆಂಪು, ನಂಜುಂಡಸ್ವಾಮಿ, ಡಿ.ಆರ್.ಎನ್ ಎಲ್ಲರೂ ಮಾಡಿದ್ದು ಇದನ್ನೇ ಅಲ್ವೇ..? ಇನ್ನು ರಾಮಯ್ಯನವರ ಸಿಟ್ಟಿನಲ್ಲಿ ನಮ್ಮ ಭವಿಷ್ಯವೇ ಅಡಗಿದೆ. ಅವರ ಸಿಟ್ಟು ನಮ್ಮಂಥವರಿಗೆ ರೂಪಕ. ಅವರೊಂದಿಗೆ ಒಡನಾಡಿ ಅವರ ಕಣ್ಣ ಬೆಂಕಿಯನ್ನು ನಾನೂ ಹಚ್ಚಿಕೊಂಡು ಲೋಕದೆದುರು ಎಲ್ಲರಂತೆ ಬದುಕಲು ಹವಣಿಸುತ್ತಿರುವ ನನ್ನಂಥವನೊಬ್ಬ ನಿಮ್ಮ ಹಾಗೆ ಹಗುರವಾಗಿ ಮಾತನಾಡಲಾರೆ ಹಾಗೂ ನಿಮ್ಮಂಥವರು ಹೀಗೆ ಹಗುರವಾಗಿ ಮಾತನಾಡಿದಾಗ ಸಹಿಸಲಾರೆ. ಖಂಡಿತಾ ನಮ್ಮ ನಡುವಿನ ಅಸ್ಪೃಶ್ಯತೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಹಾಗೆ ಪುಸ್ತಕಗಳ ರಾಶಿಯ ನಡುವೆ ಕುಳಿತುಕೊಳ್ಳುವ ಪುರುಸೊತ್ತಿಲ್ಲ ನನಗೆ; ಹಾಗೆ ಮಾಡಿದರೆ ಅಸ್ಪೃಶ್ಯತೆ ಅರ್ಥವಾಗಿಬಿಡುತ್ತದೆ ಎಂಬುದನ್ನು ನಾನು ವಿರೋಧಿಸುತ್ತೇನೆ ಕೂಡಾ.. ಯಾಕೆಂದರೆ, ಅಸ್ಪೃಶ್ಯತೆಯ ನರಕದಲ್ಲಿ ರಾಮಯ್ಯ, ಮಾದೇವರಂತೆ ನಾನೂ ನರಳಿ-ನರಳುತ್ತಿರುವವನು. ನನ್ನದು ‘ಅಂಗೈ ಹುಣ್ಣು’; ನವ ಆರ್ಥಿಕತೆಯ ಹೊಳಪಿನಲ್ಲಿ ಆ ಹುಣ್ಣು ಕಾಣದಾದಾಗ ರಾಮಯ್ಯನವರ ಕನ್ನಡಕದ ಮೊರೆ ಹೋಗುವವನು ನಾನು. ಹಾಗೂ ನನ್ನಂಥ ಯುವಜನರು ಸಾವಿರದ ಸಂಖ್ಯೆಯಲ್ಲಿದ್ದಾರೆ. ನಾನು ಕಲಿತಿರುವ ವಿದ್ವತ್ತನ್ನೆಲ್ಲಾ ಬಳಸಿ ನೀವು ಕಾಯುತ್ತಿರುವ ಉತ್ತರಗಳನ್ನು ‘ಕಂಡುಹಿಡಿಯಲಾರೆ’ ಯಾಕೆಂದರೆ, ನಾನು ಮೇಲೆ ಹೇಳಿದಂತೆ ನನಗದಕ್ಕೆ ಪುರುಸೊತ್ತಿಲ್ಲ; ನಾನೂ ರಾಮಯ್ಯನವರೊಂದಿಗೆ ‘ಗಾಯಗಳನ್ನು ವಾಸಿಮಾಡಿಕೊಳ್ಳುವಲ್ಲಿ’ ಬ್ಯುಸಿಯಾಗಿದ್ದೇನೆ. ಇನ್ನೊಮ್ಮೆ ರಾಮಯ್ಯನವರ ಸಂದರ್ಶನವನ್ನೂ, ನಿಮ್ಮ ಪ್ರಶ್ನೆಗಳು ಹಾಗೂ ಇತರ ಪ್ರತಿಕ್ರಿಯೆಗಳನ್ನೂ ಓದಿ. ಅಥವಾ ದಲಿತರ ಬಗ್ಗೆ ಸಂಶೋಧನೆ ಮಾಡಿ ನಮಗೆ ಅಪಮಾನ ಮಾಡುವುದನ್ನು ದಯಮಾಡಿ ನಿಲ್ಲಿಸಿ ಎಂದಷ್ಟೇ ಕೇಳಿಕೊಳ್ಳುತ್ತೇನೆ.

    ಪ್ರತಿಕ್ರಿಯೆ
    • Shankarappa

      ಹುಲಿಕುಂಟೆ ಮೂರ್ತಿಯವರೆ,

      ಸಿದ್ಧಾಂತಗಳ ಹೇಳಿಕೆಗಳನ್ನು ಐಡಿಯಲಜಿಯಾಗಿ ಮಾಡಿಕೊಂಡು ಆ ಹೇಳಿಕೆಗಳೇ ಪರಮ ಸತ್ಯವೆಂದು ನಂಬಿ ಚಳುವಳಿ ಮಾಡುತ್ತಿರುವವರು ನೀವು. ಆ ಸಿದ್ಧಾಂತಗಳು ಕೇವಲ ಸಿದ್ಧಾಂತಗಳಷ್ಟೆ ಎಂದು, ಅಂದರೆ ಹೊಸ ಅವಿಷ್ಕಾರಗಳು ಅಥವಾ ಸಂಶೋಧನೆಗಳಿಂದ ಇರುವ ಸಿದ್ಧಾಂತಗಳು ಸುಳ್ಳಾಗಬಹುದು ಅಥವಾ ಇರುವ ಸಿದ್ಧಾಂತಗಳನ್ನು ಬಲಪಡಿಸಬಹುದು ಎಂದು ತಿಳಿದುಕೊಂಡಂತಹನು ನಾನು. ಆದರೆ ಇತ್ತೀಚೆಗೆ ಬಂದಿರುವ ಹೊಸ ಸಂಶೋಧನೆಗಳು ದಲಿತರ ಬಗ್ಗೆ ಪ್ರಸ್ತುತ ಸಿದ್ಧಾಂತಗಳಲ್ಲಿರುವ ಕೆಲವು ಲೋಪಗಳನ್ನು ತೋರಿಸಿವೆ. ಅಂದಮಾತ್ರಕ್ಕೆ ಈ ಹೊಸ ಸಂಶೋಧನೆಗಳನ್ನು ಕೇವಲ ವಿರೋಧಿಸುವುದರಿಂದ ಅರ್ಥಮಾಡಿಕೊಂಡಂತಾಗುವುದಿಲ್ಲ. ಬದಲಿಗೆ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕಾಗಿದೆ. ಜೊತೆಗೆ ದಲಿತ ಜಾತಿಗಳ ಜನರ ಕುರಿತ ಈಗಿರುವ ಸಿದ್ಧಾಂತಗಳು ಒಂದು ಕಡೆ ದಲಿತರ – ನೆಮ್ಮದಿಯನ್ನು, ಜಾತಿಗಳ ಮತ್ತು ವ್ಯಕ್ತಿಗಳ ಹೆಸರುಗಳನ್ನು, ವೃತ್ತಿಗಳನ್ನು, ಆಹಾರಗಳನ್ನು, ಸಂಸ್ಕೃತಿಯನ್ನು, ಇಡೀ ಜೀವನವನ್ನು, “ಕೀಳು” ಮತ್ತು “ಅವಮಾನ” ಎಂಬ ಶಿರ್ಷಿಕೆಗಳಡಿಯಲ್ಲಿ, ಕಿತ್ತುಕೊಂಡವು. ಇನ್ನೊಂದು ಕಡೆ ದಲಿತರಲ್ಲಿ ಮೇಲ್ಜಾತಿಗಳ ವಿರುದ್ಧ ಸಲ್ಲದ ಹಗೆತನವನ್ನು ಬೆಳಸಿದವು. ಇದೆಲ್ಲದಕ್ಕು ಮಿಗಿಲಾಗಿ, ಈ ಸಿದ್ಧಾಂತಗಳು ಭಾರತದಲ್ಲಿದ್ದ ಹಲವು ಐಡೆಂಟಿಗಳನ್ನು ಅಳಸಿಹಾಕಿ ಕೇವಲ ಜಾತಿ ಐಡೆಂಟಿಟಿಗೆ ಹೆಚ್ಚು ಒತ್ತು ಕೊಟ್ಟು ಭಾರತದ ಜನರು (ಮೇಲ್ಜಾತಿಗಳಿರಬಹುದು/ಕೆಳಜಾತಿಗಳಿರಬಹುದು) ಏನೆ ಮಾಡಿದರು ಅವರ ಜಾತಿ ಹಿನ್ನಲೆಯಲ್ಲಿಯೇ ಅರ್ಥೈಸಲು ಕಾರಣವಾದವು. ಈ ಸಿದ್ಧಾಂತಗಳಿಂದ ಭಾರತದ ಜನರ (ಮೇಲ್ಜಾತಿಗಳಿರಬಹುದು ಅಥವಾ ಕೆಳಜಾತಿಗಳಿರಬಹುದು) ಮೇಲೆ ಇಷ್ಟೆಲ್ಲಾ ಅಪಾಯಗಳನ್ನು ಮಾಡಿರುವ ಈ ಸಿದ್ಧಾಂತಗಳ ಮೇಲೆ ನಿಮಗೇಕೆ ವ್ಯಾಮೋಹ ಎಂಬುದು ನನಗೂ ಅರ್ಥವಾಗುತ್ತಿಲ್ಲ. (ದಲಿತರ ಕುರಿತ ಈಗಿರುವ ಸಿದ್ಧಾಂತಗಳಿಂದ ಮೇಲೆನ ಅಪಾಯಗಳು ದಲಿತರಿಗೆ ಆಗಿಲ್ಲವೆಂದು ತಿಳಿಸಿಕೊಟ್ಟರೆ ಇಂತಹ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಕ್ಕೆ ನನಗೇನು ಅಪಮಾನವೆನಿಸುವುದಿಲ್ಲ.)

      ಸಂಶೋಧನೆಯ ಬಗ್ಗೆ ಇಷ್ಟೊಂದು ಹಗುರವಾಗಿ ಮಾತಾನಾಡುತ್ತಿರಲ್ಲ, ಭಾರತದ ಜನರ ಮೇಲೆ ಇಷ್ಟೆಲ್ಲಾ ಆಪಾಯಗಳಾಗುತ್ತಿವೆ ಎಂದು ತೋರಿಸಿಕೊಟ್ಟದ್ದು ಸಾಮಾಜಿಕ ವಿಜ್ಜಾನಗಳೆ ಹೊರತು ವಿಜ್ಜಾನಕ್ಕಿಂತ ಹೆಚ್ಚೆಂದು ತಿಳಿದ ಕನ್ನಡ ಸಾಹಿತ್ಯವಲ್ಲ ಮತ್ತು ಚಳುವಳಿಕಾರರಲ್ಲ ಎಂಬುದನ್ನು ಮರೆಯಬಾರದು. ಜೊತೆಗೆ ಈಗ ನೀವೇನು ಮಾತಾನಾಡುತಿರಲ್ಲ ಅಸ್ಪೃಶ್ಯತೆ ಎಂಬ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದೇ ಆಗಿನ ಕಾಲದ ಸಂಶೋಧನೆಗಳೇ ಎಂಬುದನ್ನು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ. ಸಂಶೋಧನೆಗಳಿಂದ ಹುಟ್ಟಿಕೊಂಡ ಸಿದ್ಧಾಂತಗಳಿಂದ ಚಳುವಳಿಗಳು ಹುಟ್ಟಿಕೊಂಡವೇ ಹೊರತು ಚಳುವಳಿಗಳಿಂದ ಸಿದ್ಧಾಂತಗಳು ಹುಟ್ಟಿಕೊಳ್ಳಲಿಲ್ಲ ಎಂಬ ಸಂಗತಿಯನ್ನು ಮರೆಯಬಾರದು. ಜೊತೆಗೆ ಇಂದಿನ ಕನ್ನಡ ಸಾಹಿತ್ಯವನ್ನು ಇಟ್ಟುಕೊಂಡು ವಿದ್ವತ್ ಜಗತ್ತನ್ನು ಮತ್ತು ಸಂಶೋಧನೆಗಳನ್ನು ಜರಿಯಬಾರದು. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ಸಾಮಾಜಿಕ ವಿಜ್ಜಾನಗಳಲ್ಲಿ ನೂರಾರು ವರ್ಷಗಳಿಂದ ನಡೆದ ಸಂಶೋಧನೆಗಳನ್ನು ಅವಲೋಕಿಸಿ ಸಂಶೋಧನೆಗಳ ಬಗ್ಗೆ ಮಾತಾನಾಡಿದರೆ ನಿಮ್ಮ ಮಾತಿಗೂ ಅರ್ಥಬರುತದೆ.

      ಇನ್ನು ದಲಿತರ ಕುರಿತು ನಾನು ಮಾಡುತ್ತಿರುವ ಸಂಶೋಧನೆಯ ಬಗ್ಗೆ ಮಾತಾನಾಡೋಣ: ದಲಿತ ಚಿಂತಕರು ಮತ್ತು ಚಳುವಳಿಕಾರು ಆಡುವ ಮಾತುಗಳಿಗೂ ಮತ್ತು ಸಾಮಾನ್ಯ ದಲಿತರ ಅರ್ಥಪ್ರಪಂಚಕ್ಕೂ ಇರುವ ಅಂತರವನ್ನು ನೋಡಿದರೆ ನನ್ನ ಸಂಶೋಧನೆಯ ಅವಶ್ಯಕತೆಯ ಬಗ್ಗೆ ತಿಳಿಯುತ್ತದೆ. “ಜಾತಿ ಇರಬೇಕು, ಜಾತಿ ಇದ್ರೆ ಒಳ್ಳೆಯದು, ಜಾತಿ ಇದ್ರೆ ಗೌರವ, ಎಲ್ಲರಿಗೂ- ನಿನಗೆ ಅಂತ ಅಲ್ಲ, ನನಗೆ ಅಂತ ಅಲ್ಲ. ಒಂದು ಹೋಗೋದು ಬರೋದ್ರಿಂದ, ಕಷ್ಟ-ಸುಖದಿಂದ, ನಡವಳಿಕೆಯಿಂದಲೂ ಅನುಕೂಲ ಆಗಬೇಕೆಂದ್ರೆ, ಅದು (ಜಾತಿ) ಇರಬೇಕು. ಇಲ್ಲಂದ್ರೆ ಒಂದು ತಿಂಗಳು ಮಳೆ ಬಂದು (ಮತ್ತೊಂದು ತಿಂಗಳು) ಮಳೆ ಬಿಟ್ಟಂಗೆ, ಉಪಯೋಗ ಇಲ್ಲ. (ಹಳ್ಳಿ) ಮುಗುದಾರ ಇಲ್ಲದ ಎತ್ತಾಂಗೆ ಆಗಿ ಬಿಡುತ್ತದೆ. ಹುಡುದಾರ ಇಲ್ಲದ ಊರಾಗುತ್ತೆ. ಲಕ್ಷಣ ಬರೋಲ್ಲ. ಯಾರು ಬೆಲೆ ಕೊಡೊಲ್ಲ. ಅವಾಗ ನಿನ್ನ ಮನೆಗೆ ನಾಲ್ಕು ಜನ ನುಗ್ಗಿದರು. ಯಾರು ಬಂದು ಯಾಕೆ ನುಗ್ಗಿದೆ ಅಂತ ಕೇಳೋಕೆ ಬರೋಲ್ಲ, ಬಂದು-ಬಸ್ತು ಇರೋದಿಲ್ಲ”. ಜಾತಿಯ ಬಗ್ಗೆ ಈ ರೀತಿ ಹೇಳಿರುವುದು ಶಿವಮೊಗ್ಗ ಜಿಲ್ಲೆಯ ಮಲ್ಲೆಕಾವು ಎಂಬ ಹಳ್ಳಿಯ ಒಬ್ಬ ಸಾಮಾನ್ಯ ದಲಿತ. ಜಾತಿಯು ದಲಿತನಿಗೆ ಇಷ್ಟೊಂದೆಲ್ಲ ಅನುಕೂಲ ಮಾಡಿಕೊಡುತದೆ ಎಂದು ಸಾಮಾನ್ಯ ದಲಿತರೆ ಹೇಳಿದರು, ಆ ಸಾಮಾನ್ಯ ದಲಿತ ಮಾತಿಗೆ ಬೆಲೆ ಕೊಡದ ಇಂದಿನ ಚಿಂತನೆಗಳು ಮತ್ತು ಚಳುವಳಿಕಾರು, ಅಂತಹ ದಲಿತ ಮುಗ್ದ, ಜಾತಿವ್ಯವಸ್ಥೆಪರ ಎಂದು ಹೇಳಿದ ನೀವೆ, ಇನ್ನೊಂದು ಕಡೆ, ದಲಿತರ ಪರ ಇದ್ದೇವೆ ಎಂದು ಹೇಳುವುದರ ಅರ್ಥವೇನು ಎಂಬುದು ನನಗೆ ತಿಳಿಯುವುದಿಲ್ಲ.

      ಸಾಮಾನ್ಯ ದಲಿತ ಮೇಲಿನ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಾತ್ರಕ್ಕೆ ಭಾರತದಲ್ಲಿ ಇದೆ ಎಂದು ತಿಳಿದ “ಜಾತಿ ವ್ಯವಸ್ಥೆ” ಯನ್ನು ಪ್ರೋತ್ಸಾಹಿಸುತ್ತೇನೆಂದು ತಪ್ಪು ತಿಳಿಯಬೇಡಿ. ಏಕೆಂದರೆ ಇಲ್ಲಿಯವರೆ “ಜಾತಿ” ಮತ್ತು ಅದು ಭಾರತದಲ್ಲಿ ಒಂದು “ವ್ಯವಸ್ಥೆ”ಯಾಗಿದೆ ಎಂದರೇನೆಂಬುದನ್ನು ಇಲ್ಲಿಯವರೆಗೆ ಚಳುವಳಿಕಾರರಾಗಲಿ, ಚಿಂತಕರಾಗಲಿ, “ಕನ್ನಡ ಸಾಹಿತಿ”ಗಳಾಗಲಿ ತೋರಿಸಿಕೊಟ್ಟಿಲ್ಲ. ಇನ್ನೊಂದು ವಿಷಯ ಅಸ್ಪೃಶ್ಯತೆ ಎಂದರೇನು, ದಲಿತರೆಂದರೆ ಯಾರು, ಎಂಬಿತ್ಯಾದಿ ಸಂಗತಿಗಳ ಬಗ್ಗೆ ಯಾವುದೆ ಸಿದ್ಧಾಂತಗಳು ಸರಿಯಾಗಿ ತಿಳಿಸಿಕೊಟ್ಟಿಲ್ಲ. ಇಂತಹ ಹಲವು ಸಮಸ್ಯೆಗಳಿಗೆ ಸಂಶೋಧನೆಗಳೆ ಪರಿಹಾರಗಳನ್ನು ಸೂಚಿಸುವುದು ಸಂಶೋಧನೆಗಳೇ ಹೊರತು, ಕನ್ನಡ ಸಾಹಿತಿಗಳಲ್ಲ, ಚಳುವಳಿಕಾರಲ್ಲ. ಇನ್ನೊಂದು ವಿಷಯ ಚಳುವಳಿಗಳ ಮುಂದುವರಿಕೆಗೆ ಹೊಸ ಸಿದ್ಧಾಂತಗಳ ಅವಶ್ಯಕತೆಯನ್ನು ಮರೆಯಬಾರದು.

      ಇನ್ನು ಕೆಲವು ವಿಚಾರಗಳು:

      ೧. “ನೀವು ಕೊಡುತ್ತಿರುವ ಎಲ್ಲಾ ಉದಾಹರಣೆಗಳೂ ನಿಮ್ಮ ಪ್ರಶ್ನೆಗಳೊಳಗೆ ಸಿಕ್ಕಿಹಾಕಿಕೊಂಡು ಒಂದೇ ಉತ್ತರವನ್ನು ಹೊರಡಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ” ಎಲ್ಲಾ ಸಂಶೋಧಕರು ಮಾಡುವುದು ಇದನ್ನೆ, ಅಸ್ಪೃಶ್ಯರ ಬಗ್ಗೆ “ಸಿದ್ಧಾಂತ ಕಟ್ಟುವಾಗ ಅಂಬೇಡ್ಕರ್ ರವರು ಮಾಡಿದ್ದು ಇದನ್ನೆ, ಇದರಿಂದ ಹೊಸದೇನನ್ನು ಹೇಳಿತ್ತೀರಿ.

      ೨. “ರಾಮಯ್ಯನವರ ಸಿಟ್ಟಿನಲ್ಲಿ ನಮ್ಮ ಭವಿಷ್ಯವೇ ಅಡಗಿದೆ. ಅವರ ಸಿಟ್ಟು ನಮ್ಮಂಥವರಿಗೆ ರೂಪಕ. ಅವರೊಂದಿಗೆ ಒಡನಾಡಿ ಅವರ ಕಣ್ಣ ಬೆಂಕಿಯನ್ನು ನಾನೂ ಹಚ್ಚಿಕೊಂಡು ಲೋಕದೆದುರು ಎಲ್ಲರಂತೆ ಬದುಕಲು ಹವಣಿಸುತ್ತಿರುವ ನನ್ನಂಥವನೊಬ್ಬ ನಿಮ್ಮ ಹಾಗೆ ಹಗುರವಾಗಿ ಮಾತನಾಡಲಾರೆ ಹಾಗೂ ನಿಮ್ಮಂಥವರು ಹೀಗೆ ಹಗುರವಾಗಿ ಮಾತನಾಡಿದಾಗ ಸಹಿಸಲಾರ”. ನಿಮ್ಮಂತೆ ನಾನು ಸಹ ರಾಮಯ್ಯನವರನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಮಾತಿನಲ್ಲಿರುವ ಸಮಸ್ಯೆಗಳನ್ನು ತೋರಿಸಿಕೊಟ್ಟರೆ, ಅವರನ್ನು ಹಗುರವಾಗಿ ಕಾಣುತ್ತಿದ್ದೇನೆಂದು ತಪ್ಪಾಗಿ ಭಾವಿಸಬಾರದು.

      ೩. “ಖಂಡಿತಾ ನಮ್ಮ ನಡುವಿನ ಅಸ್ಪೃಶ್ಯತೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಹಾಗೆ ಪುಸ್ತಕಗಳ ರಾಶಿಯ ನಡುವೆ ಕುಳಿತುಕೊಳ್ಳುವ ಪುರುಸೊತ್ತಿಲ್ಲ ನನಗೆ”. ಸಂಶೋಧನೆಯ ಪ್ರಾಮುಖ್ಯತೆ ತಿಳಿದಿದ್ದರೆ ಖಂಡಿತ ತಾವು ಈ ರೀತಿ ಮಾತಾನಾಡುತಿರಲಿಲ್ಲ.

      ೪. “ದಲಿತರ ಬಗ್ಗೆ ಸಂಶೋಧನೆ ಮಾಡಿ ನಮಗೆ ಅಪಮಾನ ಮಾಡುವುದನ್ನು ದಯಮಾಡಿ ನಿಲ್ಲಿಸಿ ಎಂದಷ್ಟೇ ಕೇಳಿಕೊಳ್ಳುತ್ತೇನೆ”. ನಾನು ನನ್ನ ಸಂಶೋಧನೆಯು ಒಂದು ಕಡೆ ಸಾಮಾನ್ಯ ದಲಿತರ ಆಶೋತ್ತರಗಳಿಗೆ ಒತ್ತುಕೊಡುವ ಮತ್ತೊಂದು ಕಡೆ ಇಂದಿನ ದಲಿತ ಚಳುವಳಿಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಪ್ರಯತ್ನ ವಿಫಲವಾದರೆ ಕೇವಲ ಒಂದು ಸಂಶೋಧನೆಗೆ ಅಪಾಯವೇ ಹೊರತು ದಲಿತರಿಗಲ್ಲ. ಜೊತೆಗೆ ನಾನು ಮಾಡುವ ಸಂಶೋಧನೆಯಿಂದ ಸಾಮಾನ್ಯ ದಲಿತರಿಗೆ ಅಪಾಯವಾಗುತದೆ ಎಂದು ತಿಳಿದ ತಕ್ಷಣ ನನ್ನ ಸಂಶೋಧನೆಯನ್ನು ನಿಲ್ಲಿಸುತ್ತೇನೆ.

      ಧನ್ಯವಾದಗಳೊಂದಿಗೆ…

      ಶಂಕರಪ್ಪ

      ಪ್ರತಿಕ್ರಿಯೆ
      • ಹುಲಿಕುಂಟೆ ಮೂರ್ತಿ

        ಸ್ವಾಮಿ ಶಂಕರಪ್ಪನವರೇ..
        ‘ಸಿದ್ಧಾಂತಗಳ ಹೇಳಿಕೆಗಳನ್ನು ಐಡಿಯಲಜಿಯಾಗಿ ಮಾಡಿಕೊಂಡು ಆ ಹೇಳಿಕೆಗಳೇ ಪರಮ ಸತ್ಯವೆಂದು ನಂಬಿ ಚಳುವಳಿ ಮಾಡುತ್ತಿರುವವರು ನೀವು.’ ಈ ಮಾತನ್ನು ತಾವು ನಮಗೆ ಹೇಳಬೇಕಿರಲಿಲ್ಲ. ಯಾಕೆಂದರೆ, ಕೇವಲ ಸಿದ್ಧಾಂಥಗಳನ್ನು ನಂಬಿ ಚಳವಳಿ ಮಾಡುತ್ತಿರುವವರಲ್ಲ ನಾವು. ಇಲ್ಲಿನ ಅಸ್ಪೃಶ್ಯೆತೆಯಿಂದ ಹೃದಯದಲ್ಲಿ ಗಾಯಗಳನ್ನು ಮಾಡಿಕೊಂಡು, ಆ ಗಾಯಗಳನ್ನು ವಾಸಿ ಮಾಡಿಕೊಳ್ಳುವ ದಾರಿಯಾಗಿ ಚಳವಳಿಯನ್ನು ಕಾಣುತ್ತಿರುವವರು ನಾವು. ನಿಮ್ಮ ಸಂಶೋಧನೆ, ಸಿದ್ಧಾಂತಗಳು, ವಿತಂಡ ವಾದಗಳ್ಯಾವುವೂ ಅದ್ಯಾಕೆ ಇಂದಿಗೂ ನಡೆಯುತ್ತಿರುವ ಸಾಮಾಜಿಕ ಬಹಿಷ್ಕಾರಗಳನ್ನು ತಡೆಯುತ್ತಿಲ್ಲ..? ನಮ್ಮದು ನಿಮ್ಮ ಹಾಗೆ ವ್ಯಾಮೋಹದ ಚರ್ಚೆಯಲ್ಲ; ಇಂದಿಗೂ ಜೀವಂತವಿರುವ ಜಾತಿ ವ್ಯವಸ್ಥೆಯ ವಿರುದ್ಧದ ಸಿಟ್ಟಿನಿಂದ ಹುಟ್ಟಿದ್ದು. ಜಾತಿ ವ್ಯವಸ್ಥೆ ಬಗ್ಗೆ ‘ಇದೆ ಎಂದು ತಿಳಿದ..’ ಎಂದು ಬರೆಯುತ್ತೀರಿ ಅಂದ ಮೇಲೆ ನಿಮಗೆ ಅಸ್ಪೃಶ್ಯರ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ. ತಾವು ‘ಸಾಮಾನ್ಯ’ ದಲಿತರಿಗಾಗಲಿ, ದಲಿತ ಚಳವಳಿಕಾರರಿಗಾಗಲಿ ಏನನ್ನೂ ಮಾಡಬೇಕಿಲ್ಲ. ಐದು ಸಾವಿರ ವರ್ಷಗಳಿಂದ ತಮ್ಮಂಥವರನ್ನು ಕಂಡು ಸಾಕಾಗಿದೆ ನಮಗೆ. ಸಂಶೋಧನೆಯ ಪ್ರಾಮುಖ್ಯತೆ ತಿಳಿದೇ ಈ ಮಾತು ಹೇಳುತ್ತಿದ್ದೇನೆ. ಚಳವಳಿಯ ಹುಟ್ಟು ಸಿದ್ಧಾಂಥಗಳಿಂದ ಎಂದು ತಿಳಿದಿರುವ ತಮಗೆ ‘ಕಣ್ಣ ಗಾಯಗಳಿಂದ’ ಎಂಬ ನಮ್ಮ ನಿಲುವು ಅರ್ಥವಾಗುವುದಿಲ್ಲ. ನಿಮ್ಮ ಎಲ್ಲಾ ಮಾತುಗಳಿಂದ ‘ಈಗ ನಮ್ಮ ನಡುವೆ ಜಾತಿ, ದೌರ್ಜನ್ಯಗಳೇ ಇಲ್ಲ; ಮೇಲ್ಜಾತಿಯವರನ್ನು ಬೈಯುವ ಮೂಲಕ ಅದನ್ನು ನಾವೇ ಸೃಷ್ಟಿಸುತ್ತಿದ್ದೇವೆ..’ ಎಂಬ ‘ಸಂಶೋಧನೆ’ ಹೊರಹೊಮ್ಮುತ್ತಿರುವುದೂ, ಇಲ್ಲಿನ ಯಾವುದೇ ಕ್ರೌರ್ಯಕ್ಕೆ ಬ್ರಾಹ್ಮಣರು ಕಾರಣವೇ ಅಲ್ಲ.. ಎಂಬ ಕ್ಲೀನ್ ಚಿಟ್ ನೀಡುತ್ತಿರುವುದೂ ನಮಗೆ ನಗು ತರಿಸುತ್ತಿದೆ. ನಿಮ್ಮ ವಿಚಿತ್ರ ವಾದಕ್ಕೆ ಅಂಬೇಡ್ಕರರನ್ನೂ ಬಳಸಿಕೊಳ್ಳುವ ಜಾಣ್ಮೆ ತೋರಿದ್ದೀರಿ..
        ನಿಮಗೆ ಒಳ್ಳೆಯದಾಗಲಿ.. ಸಂಶೋಧನೆ ಮುಂದುವರಿಯಲಿ.. ಕಾಲದ ಪ್ರಶ್ನೆಗಳಿಗೆ ನೀವೂ ಉತ್ತರ ಕೊಡಲೇಬೇಕಾಗುವುದು ಎಂಬ ನಂಬಿಕೆ ನನ್ನದು..

        ಧನ್ಯವಾದಗಳೊಂದಿಗೆ
        ಹುಲಿಕುಂಟೆ ಮೂರ್ತಿ

        ಪ್ರತಿಕ್ರಿಯೆ
        • ಷಣ್ಮುಖ

          ಮಾನ್ಯ ಹುಲಿಕುಂಟೆ ಮೂರ್ತಿಯವರೇ,

          ನಿಮ್ಮೆಲ್ಲಾ ಸಿಟ್ಟು ಸೆಡುವುಗಳೂ ನಮಗೆ ಅರ್ಥವಾಗುವಂತವೇ, ಅನುಭವ ಪೂರ್ವಕವಾಗಿಯೇ!!. ನಾವೂ ನಿಮ್ಮಷ್ಟೇ ಸಿಟ್ಟು-ಆಕ್ರೋಶಗಳೊಂದಿಗೆ ನಮ್ಮ ಜಾತಿ ಜನರ ಸಂಕಷ್ಟಗಳಿಗೆ ಜಾತಿವ್ಯವಸ್ಥೆ ಮತ್ತು ಪುರೋಹಿತಶಾಹಿಗಳ ಕುರಿತು ರಕ್ತ ಕಣ್ಣೀರು ಹರಿಸಿಕೊಂಡೇ ಸಂಶೋದನಾ ಜಗತ್ತನ್ನು ಪ್ರವೇಶಿಸಿದವರೇ! ಒಂದು ಹಂತದಲ್ಲಿ ದಲಿತ ಸಮಸ್ಯೆಗಳ ಮುಖ್ಯವಾಗಿ ಅಸ್ಪೃಶ್ಯತೆಯ ಸಮಸ್ಯೆಯ ಆಳಹರವುಗಳನ್ನು ಸ್ಪಷ್ಟಪಡಿಸಿಕೊಳ್ಳದೇ ಈ ಸಮಸ್ಯೆಯ ಮೂಲವನ್ನು ಕಂಡುಕೊಳ್ಳವುದಾಗಲೀ ಅದನ್ನು ಕಿತ್ತೊಗೆಯುವುದಾಗಲೀ ದೂರದ ಮಾತೆಂದು ಸ್ಪಷ್ಟವಾಯಿತು. ಆಗ ಈ ಒಂದು ಕಡೆ ಕ್ಷೇತ್ರಾಧ್ಯಯನ ಮಾಡುತ್ತಾ ಮತ್ತೊಂದೆಡೆ ಇದುವರೆಗೂ ಈ ಸಮಸ್ಯೆಯ ಬಗ್ಗೆ ಬಂದಿರುವ ಬರವಣಿಗೆಗೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಲು ತೊಡಗಿದಾಗ ಮೇಲೆ ಶಂಕರಪ್ಪನವರು ಕಂಡುಕೊಂಡಿರುವ ಗೊಂದಲಗಳು ಸಮಸ್ಯೆಗಳು ಎದ್ದು ಕಾಣುತ್ತವೆ. ನಿಜವಾಗಿಯೂ ಸಮಸ್ಯೆಯ ಬಗ್ಗೆ ಕಾಳಜಿ ಇದ್ದಲ್ಲಿ ಅದರ ಸಮಸ್ಯೆಯನ್ನು ಬೇರುಸಹಿತ ಅರ್ಥಮಾಡಿಕೊಂಡು ಮುಂದುವರಿಯುವುದು ಅನಿವಾರ್ಯ ಅಗತ್ಯ. ಇದುವರೆಗೂ ಈ ಸಮಸ್ಯೆಯ ಬಗ್ಗೆ ನಾವು ಏನೆಲ್ಲಾ ತಿಳಿದುಕೊಂಡುಬಿಟ್ಟಿದ್ದೇವೆ ಎಂದು ನಂಬಿರವೆವೋ ಅದೆಲ್ಲವನ್ನೂ ಎರವಲು ಪಡೆದುಕೊಂಡ ತಿಳುವಳಿಕೆಯೇ ವಿನಃ ವಾಸ್ತವ ತಿಳುವಳಿಕೆಗಳಲ್ಲಾ ಎನ್ನುವುದು ಶಂಕರಪ್ಪನವರು ಹೇಳುತ್ತಿರುವುದರ ಬಗ್ಗೆ ಸ್ವಲ್ಪ ಯೋಚಿಸಿದರೆನೇ ವೇದ್ಯವಾಗುತ್ತದೆ. ಇಷ್ಟೆಲ್ಲಾ ಗೊಂದಲಗಳಿದ್ದಾಗ್ಯೂ ಅಸ್ಪೃಶ್ಯತೆಯ ಬಗ್ಗೆ ನಮ್ಮ (ಎರವಲು) ತಿಳುವಳಿಕೆಯೇ ಅಂತಿಮಸತ್ಯವೆಂದು ನಂಬಿಕೊಂಡರೆ, ಇರುವ ಈ ಗೊಂದಲಗಳನ್ನು ಮುಂದಿಟ್ಟರೆ ಆ ಕುರಿತು ಯೋಚಿಬೇಕಾಗುತ್ತದೆ. ಏಕೆಂದರೆ ಇಲ್ಲಿಯ ಕಾಳಜಿ ಒಂದು ಜ್ವಲಂತ ಸಾಮಾಜಿಕ ಪಿಡುಗಿನ ಪರಿಹಾರವೇ ವಿನಃ ವೈಯುಕ್ತಿ ನಂಬಿಕೆ ಮತ್ತು ಪಾಂಡಿತ್ಯದ ಬದ್ದತೆಯ ಪ್ರದರ್ಶನವಲ್ಲ. ಹೀಗಾಗಿ, ಈ ರೀತಿಯ ಪರ್ಯಾಯ ತಿಳುವಳಿಕೆಗಳ ಕುರಿತು ಯೋಚಿಸುವುದು ದಲಿತರ ವಿಮೋಚನೆಯ ಧೃಷ್ಟಿಯಿಂದ ಮುಖ್ಯವಾದುದೆಂದು ನನ್ನ ಭಾವನೆ. ಅದನ್ನು ಬಿಟ್ಟು ಅವನ್ನು ಹುನ್ನಾರಗಳೆಂದೋ, ಸಂಚುಗಳೆಂದು ತಿಳಿದುಕೊಂಡರೆ, ದಲಿತರ ಸಮಸ್ಯೆ ನನಗಲ್ಲದೆ ಇನ್ನಾರಿಗೂ ಗೊತ್ತೂ ಇಲ್ಲ, ಕಾಳಜಿಯೂ ಇಲ್ಲ ಎಂಬ ಉದ್ಘೋಷಣೆಗಳಿಗಷ್ಟೇ ಅದು ಸಹಾಯಕವಾಗಬಹದು, ದಲಿತರ ಸಮಸ್ಯೆಯ ಪರಿಹಾರಕ್ಕಲ್ಲ.

          ಷಣ್ಮುಖ

          ಪ್ರತಿಕ್ರಿಯೆ
          • ಹುಲಿಕುಂಟೆ ಮೂರ್ತಿ

            ಶಂಕರಪ್ಪನವರ ರೀತಿಯ ಯೋಚಿಸುವ ಷಣ್ಮುಖ ಎಂಬವರೇ..
            ಹಾಗೂ ಶಂಕರಪ್ಪರೇ….
            ದಯಮಾಡಿ ನನ್ನ ಪ್ರತಿಕ್ರಿಯೆಯಲ್ಲಿ ಒಂದು ಪ್ರಶ್ನೆ ಇದೆ.. ಉತ್ತರ ಕೊಡಿ… ಆಮೇಲೆ ಹೊಟ್ಟೆ ತುಂಬಾ ಉಂಡು ನಿದಾನಕ್ಕೆ ಚರ್ಚಿಸುತ್ತಾ ಕೂರೋಣ..
            ‘ನಿಮ್ಮ ಸಂಶೋಧನೆ, ಸಿದ್ಧಾಂತಗಳು, ವಿತಂಡ ವಾದಗಳ್ಯಾವುವೂ ಅದ್ಯಾಕೆ ಇಂದಿಗೂ ನಡೆಯುತ್ತಿರುವ ಸಾಮಾಜಿಕ ಬಹಿಷ್ಕಾರಗಳನ್ನು ತಡೆಯುತ್ತಿಲ್ಲ..?’

            ಹಾಗೇ ಇಲ್ಲಿ ಇನ್ನೊಂದು ಪ್ರಶ್ನೆಯಿದೆ. ನನ್ನ ಗೆಳತಿಯೊಬ್ಬರು (ಕರ್ನಾಟಕ ಕಂಡ ಉತ್ತಮ ದಲಿತ ರಾಜಕಾರಣಿಯೊಬ್ಬರ ಮೊಮ್ಮಗಳು) ಕಳೆದ ವರ್ಷ ಪಿಯುಸಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದರು. ಅವರ ಬ್ರಾಹ್ಮಣ ಪ್ರಾಂಶುಪಾಲೆ ಅವರನ್ನು ಕಂಡರೆ ಹಾವು ಕಂಡ ಹಾಗೆ ಆಡುವುದು ಆ ಹುಡುಗಿಗೆ ಇನ್ನೂ ಅರ್ಥವಾಗೇ ಇಲ್ಲ.. ಪಾಪ ಆಕೆ ನಮ್ಮಂಥವರ ಹಾಗೆ ಅಸ್ಪೃಶ್ಯತೆಯ ನೋವುಗಳನ್ನು ಅನುಭವಿಸದಿರುವವರು. ಸುಖಾಸುಮ್ಮನೆ ಯಾವ್ಯಾವುದೋ ಕುಂಟುನೆಪಗಳಿಂದ ಆಕೆಯನ್ನು ಆ ಪ್ರಾಂಶುಪಾಲೆ ಹಿಂಸಿಸುತ್ತಿದ್ದಾರೆ. ಇದೇ ರೀತಿ ಬೆಂಗಳೂರು ಉತ್ತರ ತಾಲೂಕಿನ ದಲಿತ ಶಿಕ್ಷಕಿಯೊಬ್ಬರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡರು. ಕಾರಣವೇನು ಗೊತ್ತೇ..? ಆಕೆಯ ಸಹೋದ್ಯೋಗಿಗಳು ಆವರನ್ನು ನಾಯಿಗಿಂತ ಕಡೆಯಾಗಿ ಕಾಣುತ್ತಿದ್ದರು.. ಕುಡಿಯಲು ನೀರು ಕೇಳಿದರೆ ‘ಈ ನೀರು ನೀನು ಕುಡಿಯಲು ಅಲ್ಲ’ ಎನ್ನುತ್ತಿದ್ದರು.. ಆಕೆ ಅವರೆಲ್ಲರ ಮುಖ್ಯೋಪಾಧ್ಯಾಯಿನಿ. ಆಕೆಯ ಒಬ್ಬನೇ ತಮ್ಮ ವಿಚಾರಣೆಗೆ ಹೆದರಿ ಕೈಚೆಲ್ಲಿದ.. ಇಂಥವನ್ನು ನೂರು ಹೇಳುತ್ತೇನೆ ನಾನು… ಇದನ್ನು ದಯಮಾಡಿ ಸಂಶೋಧನೆ,, ಕ್ಷೇತ್ರಾಧ್ಯಯನ ಎನ್ನಬೇಡಿ.. ನನಗೆ ಇಂಥಾದ್ದದಕ್ಕೆಲ್ಲಾ ಕಾರಣಗಳನ್ನು ಹೇಳಿ…

        • Shankarappa

          ಹುಲಿಕುಂಟೆ ಮೂರ್ತಿಯವರೆ,

          “’ಸಿದ್ಧಾಂತಗಳ ಹೇಳಿಕೆಗಳನ್ನು ಐಡಿಯಲಜಿಯಾಗಿ ಮಾಡಿಕೊಂಡು ಆ ಹೇಳಿಕೆಗಳೇ ಪರಮ ಸತ್ಯವೆಂದು ನಂಬಿ ಚಳುವಳಿ ಮಾಡುತ್ತಿರುವವರು ನೀವು’. ಈ ಮಾತನ್ನು ತಾವು ನಮಗೆ ಹೇಳಬೇಕಿರಲಿಲ್ಲ”. ನಿಜ, ಈ ಮಾತು ದಲಿತ ಚಳುವಳಿಕಾರರಿಗೆ ಮಾತ್ರ ಅನ್ವಯಿಸುವುದಿಲ್ಲ. “ಸಾಂಪ್ರದಾಯವಾದಿಗಳೆನಿಸಿಕೊಂಡ ಆರ್. ಎಸ್. ಎಸ್. ಹಾಗೂ ಸಂಘಪರಿವಾರದವರಿಗೂ (ಎಂ. ಕೆ. ಗಾಂಧೀ) ಅನ್ವಯಿಸುತ್ತದೆ. ಸೆಕ್ಯುಲರ್ ಜಗತ್ತು (ಪ್ರಗತಿಪರ ವಾದಿಗಳು) ಮತ್ತು ಆರ್. ಎಸ್. ಎಸ್., ಸಂಘಪರಿವಾರದವರು (ಎಂ. ಕೆ. ಗಾಂಧೀ) ಇವರಿಬ್ಬರು ಸಹ ಭಾರತದಲ್ಲಿದೆ ಎಂದು ತಿಳಿದ ಜಾತಿವ್ಯವಸ್ಥೆಯ ಬಗ್ಗೆ ಮಾತಾನಾಡುತ್ತಾರೆ, ವ್ಯತ್ಯಾಸವೆಂದರೆ ಒಂದು ಕಡೆಯ ಚಿಂತಕರು (“ಪ್ರಗತಿಪರ ವಾದಿಗಳು”)ಈ ಜಾತಿವ್ಯವಸ್ಥೆಯನ್ನು ನಿಂದಿಸತೊಡಗಿದರೆ, ಮತ್ತೊಂದು ಕಡೆಯ ಜನ (“ಸಂಪ್ರದಾಯಿವಾದಿಗಳು”) ಪ್ರೋತ್ಸಾಹಿಸ ತೊಡಗಿದರಷ್ಟೆ. ಅಂದರೆ ಇವರಿಬ್ಬರು ಒಂದೆ ತಾಯಿಯ ಮಕ್ಕಳು ಮತ್ತು ದಾಯದಿಗಳು. ಒಬ್ಬರು ಒಂದು ಹೇಳಿಕೆಯನ್ನು ನೀಡಿದರೆ ಇನ್ನೊಬ್ಬರು ಅದನ್ನು ವಿರೋಧಿಸುವ ಕೆಲಸವನ್ನಷ್ಟೆ ಮಾಡಿದರು.

          “ಇಂದಿಗೂ ಜೀವಂತವಿರುವ ಜಾತಿ ವ್ಯವಸ್ಥೆಯ ವಿರುದ್ಧದ ಸಿಟ್ಟಿನಿಂದ ಹುಟ್ಟಿದ್ದು” ಎಂದು ಹೇಳಿದ್ದಿರಲ್ಲಾ ಕಣ್ಣಿಗೆ ಕಾಣದಿದ್ದರು, ಕಡೆ ಪಕ್ಷ ಈ ಜಾತಿ ವ್ಯವಸ್ಥೆಯ ಬಗ್ಗೆ ಅಮೂರ್ತವಾಗಿಯಾದರು ಹೇಳಿ. ಒಂದು ವೇಳೆ, ದಲಿತರಿಗೆ ಬಾವಿ ನೀರನ್ನು ಸೇದಲು ಅವಕಾಶವಿಲ್ಲದ್ದು, ಸವರ್ಣೀಯರು ತಮ್ಮ ಮನೆ ಮತ್ತು ದೇವಸ್ಥಾನಗಳಿಗೆ ಬಿಟ್ಟುಕೊಳ್ಳದಿರುವುದು, ದಲಿತರ ಬೊಗಸೆಗೆ ನೀರು ಸುರಿಯುವುದು, ದಲಿತರ ಹೆಣ್ಣು ಮಕ್ಕಳ ಮಾನಭಂಗವಾಗುವ, ಅಂತರ್ಜಾತಿ ವಿವಾಹಗಳು ಆಗದಿರುವಂತಹ ಘಟನೆಗಳೆ ಜಾತಿವ್ಯವಸ್ಥೆ ಎಂದು ನೀವು ಹೇಳುತ್ತಿರಾ? (ನೀವು ಹಾಗೆ ಅಂದುಕೊಂಡಿಲ್ಲವೆಂದು ಭಾವಿಸಿದ್ದೇನೆ) ಒಂದು ವೇಳೆ ಹಾಗೆ ಅಂದುಕೊಂಡಿದರೆ ಸಿದ್ಧಾಂತಗಳಡಿಯಲ್ಲಿ ಚರ್ಚೆಯಾಗುತ್ತಿರುವ “ಜಾತಿವ್ಯವಸ್ಥೆ”ಗೂ ಮತ್ತು ಈ ಮೇಲೆ ಸೂಚಿಸಿದ ಘಟನೆಗಳಿಗೂ ಇರುವ ನಿಖರ ಸಂಬಂಧವನ್ನು ತಿಳಿಸಿಕೊಡಿ.

          ಒಂದು ಕಡೆ “ಅಸ್ಪೃಶ್ಯರ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ” ಎಂದು ಹೇಳುತ್ತೀರಿ ಮತ್ತೊಂದು ಕಡೆ “ನಿಮಗೆ ಒಳ್ಳೆಯದಾಗಲಿ.. ಸಂಶೋಧನೆ ಮುಂದುವರಿಯಲಿ” ಎಂದು ಹೇಳುತ್ತೀರಿ. ಈ ಹೇಳಿಕೆಗಳು ಏನೆಂದು ಅರ್ಥವಾಗಲಿಲ್ಲ.

          “ಚಳವಳಿಯ ಹುಟ್ಟು ಸಿದ್ಧಾಂಥಗಳಿಂದ ಎಂದು ತಿಳಿದಿರುವ ತಮಗೆ ‘ಕಣ್ಣ ಗಾಯಗಳಿಂದ’ ಎಂಬ ನಮ್ಮ ನಿಲುವು ಅರ್ಥವಾಗುವುದಿಲ್ಲ” ಎಂದು ಹೇಳಿದ್ದೀರಿ. ಒಂದು ವೇಳೆ “ಅಸ್ಪೃಶ್ಯತಾಚರಣೆ” ಎಂಬ ಚೌಕಟ್ಟು ದಲಿತರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದಾದರೆ, ಅಸ್ಪೃಶ್ಯ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಾಗ ರಾಜಸ್ಥಾನ ಉಚ್ಚನ್ಯಾಯಾಲಯ “ಮುಟ್ಟಿಸಿಕೊಳ್ಳದವರು ಅಸ್ಪೃಶ್ಯರೆಂದ ಮೇಲೆ ಅಂತವರನ್ನು ಸವರ್ಣೀಯರು ಮುಟ್ಟಲು ಹೇಗೆ ಸಾಧ್ಯವೆಂದು ತಿಳಿದು, “ಸವರ್ಣೀಯರು ಆ ಅಸ್ಪೃಶ್ಯ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿರಲು ಸಾಧ್ಯವಿಲ್ಲ ಎಂಬ ತೀರ್ಪು ನೀಡಿತು”. (ಇದು ಒಂದು ನ್ಯಾಯಾಲಯದ ಸಮಸ್ಯೆ ಎಂದು ಉದಸೀನ ಮಾಡುವುದು ತರವಲ್ಲ).

          “‘ಈಗ ನಮ್ಮ ನಡುವೆ ಜಾತಿ, ದೌರ್ಜನ್ಯಗಳೇ ಇಲ್ಲ;” ಈ ಹೇಳಿಕೆಯನ್ನು ನಾನು ಹೇಳಿಲ್ಲ. ಅಂದರೆ ಭಾರತದಲ್ಲಿ ಜಾತಿಗಳು ಮತ್ತು ದೌರ್ಜನ್ಯಗಳು ಇಲ್ಲವೆಂದು ಹೇಳುತ್ತಿಲ್ಲ.

          ಜಾತಿಗಳಿವೆ. ಆದರೆ ಆ ಜಾತಿಗಳು ಒಂದು ವ್ಯವಸ್ಥೆಗೆ ಒಳಪಟ್ಟು, ಒಂದು ವರ್ಗದ ನಿಯಂತ್ರಣದಲ್ಲಿವೆ (ಇಂದಿನ ಪ್ರಜಾಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯಂತೆ) ಎಂದು ಹೇಳುವುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಆದರೆ, ಜಾತಿವ್ಯಸ್ಥೆ ಕುರಿತ ಸಿದ್ಧಾಂತಗಳನ್ನು ನೋಡಿದರೆ ಇಂದಿನ ಆಡಳಿತ ವ್ಯವಸ್ಥೆಯಂತೆ ಜಾತಿವ್ಯವಸ್ಥೆಯು ಶತಮಾನಗಳ ಕಾಲದಿಂದ ಉಳಿದುಕೊಂಡು ಬಂದಿದೆ ಎಂದು ಹೇಳುವ ವಾದಗಳೆ ಹೆಚ್ಚಿಗೆ ಇವೆ.

          ದೌರ್ಜನ್ಯಗಳಿವೆ. ಆದರೆ ಅವು ಜಾತಿ ಹೆಸರಿನ ದೌರ್ಜನ್ಯಗಳೆಂದು ಸಾಬೀತುಪಡಿಸಬೇಕು. ಖೈರ್ಲಂಜಿಯ ದಲಿತರ ಕೊಲೆಪ್ರಕರಣವನ್ನು ಇಟ್ಟುಕೊಂಡು ದಲಿತ ದೌರ್ಜನ್ಯವಾಗಿ ಸಾಬೀತುಪಡಿಸಲು ಹೋಗಿ ದಲಿತ ಚಿಂತಕರು ಏನು ಹೇಳುತ್ತಿದ್ದಾರೆಂದು ಸ್ವಲ್ಪ ನೋಡೋಣ:

          “ನಾವು ಖೈರ್ಲಾಂಜಿಯನ್ನು ಒಂದು ದುರದೃಷ್ಟಕರ ಘಟನೆಯೆಂದೋ, ಒಂದು ಅಪವಾದವೆಂದೋ ಆಥವಾ ಯಾವುದೋ ವಿಳಾಸವಿಲ್ಲದ ಕೋರ್ಟೊಂದರಲ್ಲಿ ಕೇಳುವವರಿಲ್ಲದ ಪ್ರಕರಣವಾಗಿಯೋ ಮರೆತುಹೋಗಲು ಬಿಟ್ಟುಬಿಡಾಬಾರದು. ಈ ದೇಶದ ಜಾತಿ ವೃಕ್ಷವು ಎಂಥ ವಿಚಿತ್ರ ಹಣ್ಣುಗಳನ್ನು ಬಿಟ್ಟಿದೆಯೆಂದು ಅರ್ಥ ಮಾಡಿಕೊಳ್ಳುವ ಅಗತ್ಯ ಪ್ರಪಂಚಕ್ಕಿದೆ. ಈ ಜಾತಿ ವೃಕ್ಷದ ಬೇರಿನಲ್ಲೂ ರಕ್ತವಿದೆ. ಎಲೆಗಳಲ್ಲೂ ರಕ್ತವಿದೆ. ಈ ಪುಸ್ತಕವು ಇದ್ದಕಿದ್ದಂತೆ ಹಬ್ಬುತ್ತಿರುವ ಸುಡುತಿರುವ ಮಾಂಸದ ವಾಸನೆಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಈ ಪುಸ್ತಕವು ಜಾತಿ ಬೀಜವು ಹುಟ್ಟಿ ಹಾಕಿರುವ ವಿಚಿತ್ರ ಹಾಗೂ ವಿಷಪೂರಿತ ಬೆಳೆಯ ಮಧ್ಯ ನಿಮ್ಮನ್ನು ಕರೆದೊಯ್ಯುತ್ತದೆ” (ಈ ಹೇಳಿಕೆಯನ್ನು ತೇಲ್ ತುಂಬ್ಡೆಯವರು ಖೈರ್ಲಾಂಜಿ ಎಂಬ ಪುಸ್ತಕ ಮುನ್ನುಡಿಯಲ್ಲಿ ಹೇಳುತ್ತಾರೆ.).

          ಈ ಪ್ರಕರಣವನ್ನು ಜಾತಿವ್ಯವಸ್ಥೆ ಚೌಕಟ್ಟಿನಲ್ಲಿ ವಿವರಿಸುವ ತೇಲ್ತುಂಬ್ಡೆಯವರು ಇದೇ ಪುಸ್ತಕದಲ್ಲಿ ದಲಿತರ ಕೊಲೆಗೆ ಕಾರಣವೆಂದು ಸೂಚಿಸುವ “ಪರಪುರುಷನೊಂದಿಗೆ ಅನೈತಿಕ ಸಂಬಂಧ” ಎಂಬ ಪತ್ರಿಕೆಗಳ ಹೇಳಿಕೆಗಳನ್ನು (ಪುಟ ೪೮) ಮತ್ತು ಜಮೀನಿನ ವಿಷಯಕ್ಕೆ ಕೆಳೆದ ಕೆಲವು ವರ್ಷಗಳಿಂದ ಭೋತ್ ಮಾಂಗೆಯ ಕುಟುಂಬಕ್ಕೂ ಮತ್ತು ಅವರ ಜಮೀನಿನ ಸುತ್ತ ಇದ್ದ ಜಮೀನುಗಳ ಮಾಲೀಕರಿಗೂ ನಡೆಯುತ್ತಿದ್ದ ಗಲಾಟೆಗಳ (ಪುಟ ೩೦) ಬಗ್ಗೆ ಮೌನ ತಾಳುತ್ತಾರೆ. ಜೊತೆಗೆ ಈ ಸಂಭವನೀಯ ಕಾರಣಗಳನ್ನು ಸಹ ಜಾತಿವ್ಯವಸ್ಥೆಯ ಚೌಕಟ್ಟಿಗೆ ಇಳಿಸಿ ನೋಡುತ್ತಾರೆ. ದಲಿತರ ಮೇಲೆ ನಡೆದ ಈ ದೌರ್ಜನ್ಯಕ್ಕೆ ಬೇರೆ ಕಾರಣಗಳಿದ್ದರು ಸಹ ಅವುಗಳ ಬಗ್ಗೆ ಉದಾಸೀನ ಮಾಡಿ ಜಾತಿವ್ಯವಸ್ಥೆಯ ಚೌಕಟ್ಟಿಗೆ ಇಳಿಸಿನೋಡುವ ಒತ್ತಡ ಇಂದು ದಲಿತ ಚಿಂತಕ ಮೇಲಿದೆ ಎಂಬ ಸಂಗತಿಯನ್ನು ತೇಲ್ ತುಂಬ್ಡೆಯವರ ಹೇಳಿಕೆಯಲ್ಲಿ ನೋಡಬಹುದು. ಈ ಸಂಗತಿಯು ನಾನು ಈಗಾಗಲೇ ಹೇಳಿದ “ಈ ಸಿದ್ಧಾಂತಗಳು ಭಾರತದಲ್ಲಿದ್ದ ಹಲವು ಐಡೆಂಟಿಗಳನ್ನು (ದಲಿತ ದೌರ್ಜನ್ಯಕ್ಕೆ ಇರುವ ಹಲವು ಕಾರಣಗಳನ್ನು) ಅಳಸಿಹಾಕಿ ಕೇವಲ ಜಾತಿ ಐಡೆಂಟಿಟಿಗೆ (ಜಾತಿ ವಿಷಯಕ್ಕೆ) ಹೆಚ್ಚು ಒತ್ತು ಕೊಟ್ಟು ಭಾರತದ ಜನರು (ಮೇಲ್ಜಾತಿಗಳಿರಬಹುದು/ಕೆಳಜಾತಿಗಳಿರಬಹುದು) ಏನೆ ಮಾಡಿದರು ಅವರ ಜಾತಿ ಹಿನ್ನಲೆಯಲ್ಲಿಯೇ ಅರ್ಥೈಸಲು ಕಾರಣವಾದವು” ಎಂಬ ಹೇಳಿಕೆಯನ್ನು ಸಾಬೀತು ಮಾಡುತದೆ.

          ’ಮೇಲ್ಜಾತಿಯವರನ್ನು ಬೈಯುವ ಮೂಲಕ ಅದನ್ನು ನಾವೇ ಸೃಷ್ಟಿಸುತ್ತಿದ್ದೇವೆ..’ ಇದು ಸಂಶೋಧಿಸಬೇಕಾದ ವಿಷಯ.

          “ಇಲ್ಲಿನ ಯಾವುದೇ ಕ್ರೌರ್ಯಕ್ಕೆ ಬ್ರಾಹ್ಮಣರು ಕಾರಣವೇ ಅಲ್ಲ.. ಎಂಬ ಕ್ಲೀನ್ ಚಿಟ್ ನೀಡುತ್ತಿರುವುದೂ ನಮಗೆ ನಗು ತರಿಸುತ್ತಿದೆ” ಭಾರತದಲ್ಲಿ ನಡೆಯುವ ಯಾವುದೇ ಕ್ರೌರ್ಯಕ್ಕೆ ಬ್ರಾಹ್ಮಣರು ಕಾರಣವಲ್ಲವೆಂದು ನಾನು ಹೇಳುತ್ತಿಲ್ಲ. ಬದಲಿಗೆ ದಲಿತರನ್ನು ಶೋಷಿಸುತ್ತಿದ್ದವರು ಮತ್ತು ಶೋಷಿಸುತ್ತಿರುವವರು ಯಾರು ಎಂದು ಖಚಿತ ಪಡಿಸಿ ಎಂದು ಕೇಳುತ್ತಿದ್ದೇನೆ. (ಇದರ ಬಗ್ಗೆ ಜಿ.ಎನ್. ನಾಗರಾಜ್ ರವರಿಗೆ ಬರೆದ ಪ್ರತಿಕ್ರಿಯೆಯಲ್ಲಿದೆ)

          ಧನ್ಯವಾದಗಳೊಂದಿಗೆ…

          ಶಂಕರಪ್ಪ

          ಪ್ರತಿಕ್ರಿಯೆ
  7. gn nagaraj

    brahmanaru dalitha kerigalalli hodagina acharane asprushyathe endu vakhyanisuvavarige asprushyatheyannu artha madikolluva manassilla,adannu ulisi belasuva duruddeshavide embudu thanthane sabithaguththade.sadya avaru muttada hengasaru thave horahogi nanu horagagiddine,nannannu muttabedi endu bere ellarannoo asprushyarannagi maduththare endu vadisilla.adu mahileyara adrusta.rapistanobba rapige olagada hennu thannannu kacchiddale endu dooridanthide ivara vada.

    sittu beda adhyana madona embudu ondu arogyakara niluvu.adare anyayada viruddhasittu innoo hacchu arogyakara.adu aa vyakthiyannu hecchu manaveeyagolisutthade,idee samajada manaveekaranakke dariyagutthade.adare sittu munde yava parinamakke karanavagabeku? adaralli anyayada moola berugalannu hudukuvudaralli, adara nivaraneyalli adhyayanada patra, idu ellroo athyantha jarooragi gamanakodabekada vishaya.ee charchege nanu needida prathikriyeya jothege moola sandarshanakke nanu needida eradu prathikriyegalannu dayavittu gamanisi.adare situu adhyayanakke mundina kriyege
    nandi.hageye sittige vishleshane adhyayanada bembalavilladiddre anyayagalu ulbanisalu karanavagutthave embudu satya.

    innu illi bandiruva ‘kamyunistarada’emba comment bagge:jathi vyavastheya bagge anekaru dhvaniyetthiddare.vishleshisiddare.adannu arthamadikollalu marxvadi ithihasakararu ,chinthakara kodige ananya. kosambi,rs sharma, romila thapar,ems namboodaripad, bt ranadive,karat, yecchury heege halavaru jana.jothege jathi vyavasheya viruddha ,asprushyatheya viruddha horadida saviraru janarannu neneyabeku. ade samayadalli kamyunistarinda innu bahala aagabekagittu amba teekeyalli satyavide.

    ಪ್ರತಿಕ್ರಿಯೆ
  8. Shankarappa

    ಜಿ.ಎನ್. ನಾಗರಾಜ್ ರವರೆ,

    “brahmanaru dalitha kerigalalli hodagina acharane asprushyathe endu vakhyanisuvavarige asprushyatheyannu artha madikolluva manassilla,adannu ulisi belasuva duruddeshavide embudu thanthane sabithaguththade.sadya avaru muttada hengasaru thave horahogi nanu horagagiddine,nannannu muttabedi endu bere ellarannoo asprushyarannagi maduththare endu vadisilla. adu mahileyara adrusta.rapistanobba rapige olagada hennu thannannu kacchiddale endu dooridanthide ivara vada”.

    ಈ ನಿಮ್ಮ ಹೇಳಿಕೆಯಲ್ಲಿರುವ ಒಂದು ವಾದಕ್ಕೆ ಆಧಾರವಾದ ಪೂರ್ವಪರವಾದದ ಮತ್ತು ಇನ್ನೊಂದು ಸತ್ಯದ ಮಾತಿಗೆ ಸ್ಪಷ್ಟತೆಯನ್ನು ಕೊಡುವ ಬಗ್ಗೆ ಮಾತಾನಾಡೋಣ:

    “sadya avaru muttada hengasaru thave horahogi nanu horagagiddine,nannannu muttabedi endu bere ellarannoo asprushyarannagi maduththare endu vadisilla” ಎಂಬ ಹೇಳಿಕೆಯನ್ನು ರೂಪಕವಾಗಿ ನೋಡಿದರೆ, “ಮೇಲ್ಜಾತಿಗಳು ಅಥವಾ ಬ್ರಾಹ್ಮಣರು ಮಾತ್ರ ಅಸ್ಪೃಶ್ಯತೆಯನ್ನು ಆಚರಿಸುತ್ತಾರೆ, ಈ ಆಚರಣೆಯಿಂದ ಅನ್ಯಾಯಕ್ಕೆ ಒಳಾಗದ ದಲಿತರು ಬ್ರಾಹ್ಮಾಣರನ್ನು ದೂರ ಇರಿ ಎಂದು ದಲಿತರೆ ಹೇಳುತ್ತಾರೆ” ಎಂಬ ನಿಲುವು ನಿಮ್ಮಲಿದೆ ಎಂದು ಗ್ರಹಿಸಬಹುದು.

    ಇಲ್ಲಿರುವ ಪೂರ್ವಪರವಾದವೆಂದರೆ, ಈ ಅಸ್ಪೃಶ್ಯತಾಚಾರಣೆಯ ಬಗ್ಗೆ ಮಾತಾಡುವವರು ಮೇಲ್ಜಾತಿಗಳು ಅಥವಾ ಬ್ರಾಹ್ಮಣರನ್ನು ಮಾತ್ರ “ಕರ್ತೃ” ಸ್ಥಾನದಲ್ಲಿಟ್ಟು ನೋಡುತ್ತಿರುವುದು. ಇದರಿಂದ ಅಸ್ಪೃಶ್ಯತಾಚಾರಣೆಯ ಬಗ್ಗೆ ಮಾತಾಡುವವರು ಬ್ರಾಹ್ಮಣರನ್ನು ಏಕೆ “ಕರ್ತೃ” ಸ್ಥಾನದಲ್ಲಿಟ್ಟು ನೋಡುತ್ತಾರೆ? ಎಂಬುದು ಅರ್ಥವಾಗುವುದಿಲ್ಲ. ಒಂದು ವೇಳೆ ಬ್ರಾಹ್ಮಣರು ಪುರೋಹಿತಶಾಹಿ ವರ್ಗವಾಗಿದೆ ಎಂದು ಹೇಳಿದರೆ, ಎಲ್ಲಾ ಜಾತಿಗಳಲ್ಲಿರುವ ಪೂಜಾರಿಗಳ ಬಗ್ಗೆ ಮತ್ತು ಜಾತಿ ಬೇಧವಿಲ್ಲದೆ ಎಲ್ಲಾ ಜಾತಿಗಳಲ್ಲಿರುವ ಮಾಟ ಮಂತ್ರ ಮಾಡುವವರ ಬಗ್ಗೆ ಏನು ಹೇಳುತ್ತೀರಿ? ಜಾತಿ ಆಧಾರ ಬಿಟ್ಟು ಇವರನ್ನೂ ಸಹ “ಕರ್ತೃ” ಸ್ಥಾನದಲ್ಲಿಟ್ಟು ಏಕೆ ನೋಡುವುದಿಲ್ಲ? ನಿಜವಾಗಿ ಚಿಂತಕರು ಹೇಳುವ ರೀತಿ “ಬ್ರಾಹ್ಮಣಶಾಹಿ ವರ್ಗ” ಎಂಬ ವರ್ಗವಿದ್ದು ಆ “ಬ್ರಾಹ್ಮಣಶಾಹಿ ವರ್ಗ” ಸಮಾಜವನ್ನು ನಿಯಂತ್ರಿಸುತ್ತಿತ್ತೇ?

    ಇನ್ನು “rapistanobba rapige olagada hennu thannannu kacchiddale endu dooridanthide ivara vada” ಎಂಬ ಸತ್ಯ ಮಾತಿನ ಬಗ್ಗೆ ಮಾತಾನಾಡೋಣ:
    ಮಾನಭಂಗದ ವಿಷದಲ್ಲಿ ಮಹಿಳೆಗೆ ಅನ್ಯಾಯವಾಗಿದೆ ಎಂದು ಆ ಮಹಿಳೆಯು ದೂರು ನೀಡಿದಾಗ ಮತ್ತು ಇಂತಹವನೆ ಮಾನಭಂಗ ಮಾಡಿದ್ದು ಎಂದು ಸಾಬೀತಾದಾಗ ಆ ಘಟನೆಯು ಅನ್ಯಾಯವಾಗುತ್ತದೆ. ಆಗ ಅನ್ಯಾಯಕ್ಕೆ ಒಳಗಾದವರ ಪರ ನಿಂತು ಎಲ್ಲರು ಮಾತಾಡುವುದರಲ್ಲಿ ಒಂದು ಅರ್ಥವಿದೆ. ಆದರೆ ಒಂದು ಘಟನೆ ಅಥವಾ ಸಂಗತಿಯು ಒಬ್ಬ ವ್ಯಕ್ತಿಗೆ/ಸಮೂಹಕ್ಕೆ ಅನ್ಯಾಯ ಮಾಡುತಿದೆ ಎಂದು ಸ್ಪಷ್ಟಡಿಸದೆ ಆ ಅನ್ಯಾಯ ಮಾಡುತ್ತಿರುವವರು ಯಾರು ಎಂದು ಸಾಬೀತುಪಡಿಸದೆ, ಅನ್ಯಾಯವಾಗುತ್ತದೆ ಎಂದು ತಿಳಿದು ಮಾತಾಡುವುದರಿಂದ ಏನು ಪ್ರಯೋಜನವಿಲ್ಲ. ಅಂದರೆ ಒಂದು ಆಚರಣೆ ಮಾಡುವುದರಿಂದ ಸಾಮಾನ್ಯ ದಲಿತರಿಗೆ ತೊಂದರೆಯಾಗುತ್ತದೆ ಎಂದು ಸಾಬೀತು ಪಡಿಸಬೇಕು: “ಮೇಲ್ಜಾತಿಗಳು” ತಮ್ಮ ಮನೆಗಳಿಗೆ, ದೇವಸ್ಥಾನಕ್ಕೆ ದಲಿತರನ್ನು ಬಿಟ್ಟುಕೊಳ್ಳದಿರುವುದರಿಂದ, ದಲಿತ ಜಾತಿಗಳ ಹೆಸರುಗಳಿಂದ, ದಲಿತರು ಮಾಡುವ ವೃತ್ತಿಗಳಿಂದ, ಗೋಮಾಂಸ ಸೇವನೆಯಿಂದ ಏನಾದರೂ ದಲಿತರಿಗೆ ತೊಂದರೆಯಾಗಿದೆಯೇ? ಈ ಆಚರಣೆಗಳಿಂದ ಮತ್ತು ಸಂಗತಿಗಳಿಂದ ತಮಗೆ ತೊಂದರೆಯಾಗಿದೆ ಎಂದು ಏನಾದರು ಸಾಮಾನ್ಯ ದಲಿತರು ಹೇಳಿದ್ದಾರೆಯೇ? ಒಂದು ವೇಳೆ ಸಾಮಾನ್ಯ ದಲಿತರು ಬಹಳ ಮುಗ್ಧರು, ಅನ್ಯಾಯಗಳ ಅರಿವಿಲ್ಲದವರು ಎಂದು ವಾದಿಸುವುವುದಾದರೆ, ಇಂತಹ ಆಚರಣೆಗಳು ಮತ್ತು ಸಂಗತಿಗಳನ್ನು ಅನ್ಯಾಯವೆಂದು ತಿಳಿದವರ ಹಿನ್ನಲೆ ಏನು? ಆಚರಣೆಗಳು ಮತ್ತು ಸಂಗತಿಗಳನ್ನು ಅನ್ಯಾಯವೆಂದು ತಿಳಿದುಕೊಳ್ಳಲು ಪಶ್ಚಿಮದವರು ಬರುವರಿಗೆ ಏಕೆ ಕಾಯಬೇಕು? (ಜಾತಿ ಹೆಸರಿನ ಅನ್ಯಾಯದ ಬಗ್ಗೆ ಬುದ್ಧ, ಬಸವ ಮಾತಾನಾಡಿದ್ದಾರೆಂಬ ವಾದಗಳು ಆಧಾರವಿಲ್ಲ ವಾದಗಳಾಗಿವೆ ಎಂದು ತೋರಿಸುವ ಸಿದ್ಧಾಂತಗಳು ಇಂದು ಹೊರಬಿದ್ದಿವೆ.)

    ಅನ್ಯಾಯಕ್ಕೆ ಒಳಗಾದವರು ಅನ್ಯಾಯ ಮಾಡಿದವರ ವಿರುದ್ಧ ಸಿಟ್ಟು ಮಾಡಿಕೊಳ್ಳುವುದರಲ್ಲಿ ಒಂದು ಅರ್ಥವಿದೆ. ಆದರೆ ಆ ಅನ್ಯಾಯ ಮಾಡಿದವರು ಯಾರು ಎಂದು ನಿರ್ದಿಷ್ಟಪಡಿಸಿಕೊಂಡು ಸಿಟ್ಟಿಗೆದ್ದರೆ ಸೂಕ್ತವೆನಿಸುತ್ತದೆ. ಜಾತಿ ಹೆಸರಿನಲ್ಲಿ ಅನ್ಯಾಯ ಮಾಡುತಿರುವವರು ಒಂದು ವೇಳೆ ಪುರೋಹಿತಶಾಹಿ ವರ್ಗವೆಂಬುದು ನಿಮ್ಮ ಉತ್ತರವಾಗಿದ್ದರೆ, ಇಡೀ ಭಾರತೀಯ ಸಮಾಜವನ್ನು ಅಂಕೆಯಲ್ಲಿಟ್ಟುಕೊಂಡು ನಿಯಂತ್ರಣ ಮಾಡುತಿದೆ ಎಂದು ತಿಳಿದ ಪುರೋಹಿತಶಾಹಿ ವರ್ಗ ಯಾವುದು ನಿರ್ದಿಷ್ಟಗೊಳಿಸಿ ಹೇಳಿ? ಈ ಪ್ರಶ್ನೆಗೂ “ಆಯ್ದ ಬ್ರಾಹ್ಮಣರು” ಎಂಬ ಉತ್ತರ ನೀವು ಕೊಟ್ಟರೆ, ಅಸ್ಪೃಶ್ಯರ ವಿಷಯದಲ್ಲಿ ಬ್ರಾಹ್ಮಣರ ಪಾತ್ರವೇನು ಇಲ್ಲವೆಂಬುದು ಅಸ್ಪೃಶ್ಯರನ್ನು ಗುರುತಿಸಲು ೧೯೧೧ರ ಜನಗಣತಿಯ ಮಾನದಂಡಗಳಲ್ಲಿ ಕೆಲವನ್ನು ಸರಿಯಾಗಿ ಅವಲೋಕಿಸಿ ಅರ್ಥೈಸಿದರೆ ತಿಳಿಯುತ್ತದೆ:

    1. ಬ್ರಾಹ್ಮಣರ ಶ್ರೇಷ್ಟತೆಯನ್ನು ನಿರಾಕರಿಸುವವರು.
    2. ಬ್ರಾಹ್ಮಣ ಅಥವಾ ಇತರೆ ಹಿಂದೂ ಗುರುಗಳಿಂದ ಮಂತ್ರವನ್ನು ಸ್ವೀಕರಿಸದವರು.
    3. ಬ್ರಾಹ್ಮಣರಿಂದ ಸೇವೆ ಪಡೆಯದವರು.
    4. ಬ್ರಾಹ್ಮಣ ಪೂಜಾರಿಗಳನ್ನೆ ಹೊಂದದವರು
    (ರಾಜಶೇಖರಯ್ಯ ಎ. ಎಂ. (ಸಂ.) ೧೯೯೬. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು. ಸಂಪುಟ ೫. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ. ಪುಟ ೮).

    ಮೇಲಿನ ಮಾನದಂಡಗಳು ದಲಿತರಿಗೂ ಮತ್ತು ಬ್ರಾಹ್ಮಣರಿಗೂ ಸಂಬಂಧ ಇಲ್ಲ ಎಂದು ಸಾರಿ ಹೇಳುತ್ತವೆ. ಆದರೆ ಇಂತಹ ಸಂಗತಿಯನ್ನು “ಪ್ರತ್ಯೇಕತೆ” ಎಂಬ ಪರಿಕಲ್ಪನೆಯಡಿಯಲ್ಲಿಟ್ಟು ಬ್ರಾಹ್ಮಣರೆ ದಲಿತರನ್ನು ದೂರ ಇಟ್ಟಿದ್ದಾರೆಂದು ವಾದಿಸುತ್ತಾರೆ (ಇಲ್ಲಿಯು ಸಹ ಬ್ರಾಹ್ಮಣರನ್ನು .”ಕರ್ತೃ”
    ಸ್ಥಾನದಲ್ಲಿಟ್ಟುಕೊಂಡಿರುವುದನ್ನು ಮರೆಯಬಾರದು).

    ಇನ್ನು ಕೆಲವು ಚಿಂತಕರು ಅಸ್ಪೃಶ್ಯರ ನಿಜವಾದ ಶತೃಗಳು ಬ್ರಾಹ್ಮಣಶಾಹಿಗಳಲ್ಲವೆಂದು ಹೇಳುತ್ತಾ ಮುಂದಿನಂತೆ ಹೇಳುತ್ತಾರೆ:

    “ಹಳ್ಳಿಗಳಲ್ಲಿ ದಲಿತರಿಗೆ ನೇರವಾಗಿ ಎದುರಾಗುವುದು ಜಮೀನಿನ ಸಂಬಂಧ. ಇಲ್ಲಿ ಎದುರಾಗುವವರು ಭೂಮಾಲೀಕರು. ಆದರೆ ದಲಿತ ಚಳುವಳಿ ಕಳೆದ ೨೫ ವರ್ಷಗಳಿಂದ ಪುರೋಹಿತಶಾಹಿ, ಬ್ರಾಹ್ಮಣಶಾಹಿ ನಮ್ಮ (ದಲಿತರ) ಶತ್ರು ಎಂದು ಹೇಳುತ್ತ ಬಂತು. ಜಮೀನ್ದಾರಿ ವರ್ಗಗಳಿಂದ ಬಂದ ಅಥವಾ ಆ ವರ್ಗವನ್ನು ಪ್ರತಿನಿಧಿಸುವ ಬುದ್ಧಿಜೀವಿಗಳು ದಲಿತರ ಆಲೋಚನೆಯನ್ನು ದುರುಪಯೋಗಪಡಿಸಿಕೊಂಡರು. ಅವರೂ (ಜಮೀನ್ದಾರಿ) ಇವರೊಂದಿಗೆ (ವಸಾಹತುಶಾಹಿ ತತ್ವಗಳೊಂದಿಗೆ) ಕೈ ಜೋಡಿಸಿ-ಧ್ವನಿಗೂಡಿಸಿ “ಹೌದು ನಿಮ್ಮ (ದಲಿತರ) ಶತ್ರುಗಳು ಪುರೋಹಿತಶಾಹಿಗಳು, ಬ್ರಾಹ್ಮಣಶಾಹಿಗಳು” ಎಂಬುದಾಗಿ ಕಂಠಪಾಠ ಮಾಡಿಸಿದರು. ದಲಿತರು ಇದನ್ನು ಬಲವಾಗಿ ನಂಬಿದರು. ಇದರಿಂದ ಜಮೀನ್ದಾರಿ ವರ್ಗ ತನ್ನ ಶತ್ರುತ್ವವನ್ನು ನಯವಾಗಿ ಕಲ್ಪಿತ ಬ್ರಾಹ್ಮಣಶಾಹಿಗೆ ವರ್ಗಾಯಿಸಿತು. ಪರಿಣಾಮವಾಗಿ ಜಮೀನ್ದಾರಿ ಶೋಷಣೆ ನಿರಂತರವಾಗಿ ಮುಂದುವರಿಯಲು ಅನುವಾಯಿತು” (ಲಕ್ಷ್ಮಣ್ ತೆಲಗಾವಿ, ಬಿ. ಎಂ. ಪುಟ್ಟಯ್ಯ, ಟಿ. ಆರ್. ಚಂದ್ರಶೇಖರ್. ೨೦೦೫. “ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಇತರೆ ಚಳುವಳಿಗಳು”. ದಲಿತ ಅಧ್ಯಯನ ದಲ್ಲಿ. ಹಂಪಿ: ಪ್ರಸರಾಂಗ, ಕನ್ನಡ ವಿಶ್ವವಿದ್ಯಾಲಯ. ಪುಟ ೩೯೧).

    ದಲಿತರ ನಿಜವಾದ ಶೋಷಕರು ಜಮೀನ್ದಾರಿ ವರ್ಗವೆಂದಾದರೆ ಕರ್ನಾಟಕದಲ್ಲಿರುವ ಆ ಶೋಷಕ ಜಮೀನ್ದಾರಿ ವರ್ಗ ಯಾವುದು? ಜಮೀನಿರುವ ಬ್ರಾಹ್ಮಣರೆ? ಲಿಂಗಾಯಿತರೆ? ಗೌಡರೆ? ಒಂದುವೇಳೆ “ಹೌದು” ಎಂದು ಉತ್ತರ ಕೊಟ್ಟರೆ, ಈ ಜಾತಿಗಳ ಎಲ್ಲಾ ಜನರಿಗೂ ಜಮೀನು ಇಲ್ಲದಿದ್ದರು ಸಹ ಈ ಜಾತಿಯ ಎಲ್ಲರನ್ನು ದಲಿತ ಚಳಿವಳಿಕಾರರು ಏಕೆ ಶತೃಗಳಾಗಿ ಕಾಣುತ್ತಾರೆ? [ಬ್ರಿಟಿಷರು ಹೋದ ಮೇಲೆ ಸ್ಥೂಲವಾಗಿ ಬ್ರಾಹ್ಮಣ, ಲಿಂಗಾಯಿತ, ಗೌಡ ಇಂಥ ಜಾತಿಗಳು ಸಾಧಾರಣವಾಗಿ ಸುಲಿಗೆ ಮಾಡುವಂತ ಜಾತಿಗಳು ಆಗಿವೆ (ದೇವನೂರು ಮಹಾದೇವ. ೧೯೮೮. “ಕರ್ನಾಟಕ ದಲಿತ ಸಂಘರ್ಷ ಸಮಿತಿ: ದಕ್ಷಿಣ ಕನ್ನಡ ಜಿಲ್ಲೆ”. ಪಂಚಮ ದಲ್ಲಿ. ಪುಟ ೧೯)].

    ದಲಿತರಿಗೆ ಅನ್ಯಾಯ ಮಾಡುವವರು ಯಾರು ಎಂದು ತಿಳಿದುಕೊಳ್ಳಲು ಇಷ್ಟೊಂದು ಗೊಂದಲಗಳಿದ್ದರು ಸಹ ಯಾವಾ ಯಾವೋದು ಸಂದರ್ಭಗಳಲ್ಲಿ ಯಾರಾ ಯಾರನ್ನೋ ಶತೃಗಳ ಸ್ಥಾನದಲ್ಲಿಟ್ಟು ನೋಡುವುದರಿಂದ ಒಂದು ಸಮುದಾಯಕ್ಕೆ ಅನುಕೂಲವಾಗುವುದರ ಬದಲು ಅಪಾಯಗಳೇ ಹೆಚ್ಚು.

    ಧನ್ಯವಾದಗಳೊಂದಿಗೆ

    ಶಂಕರಪ್ಪ

    ಪ್ರತಿಕ್ರಿಯೆ
  9. Shankarappa

    ಹುಲಿಕುಂಟೆ ಮೂರ್ತಿಯವರೆ,

    ಮಾತಿಗೆ ಮುಂಚೆ ಎರಡು ಸ್ಪಷ್ಟನೆಗಳನ್ನು ಕೊಡುತ್ತೇನೆ.

    ೧. ದಲಿತರ ಬಗ್ಗೆ ನನ್ನಿಂದಾಗಲಿ ಅಥವಾ ನಮ್ಮ ತಂಡದಿಂದಾಗಲಿ (ಸಿ ಎಸ್ ಎಲ್ ಸಿ) ಇಲ್ಲಿಯವರೆಗೆ ಯಾವುದೇ ಸಿದ್ಧಾಂತವನ್ನು ರೂಪಿಸಿಲ್ಲ. ಆದರೆ ದಲಿತರ ಕುರಿತ ಸಂಶೋಧನೆ ನಡೆಸುವ ಪ್ರಯತ್ನದಲ್ಲಿದ್ದೇವೆ (ಸಿದ್ಧಾಂತವೆಂದರೆ ಒಂದು ವಿದ್ಯಮಾನದ ಬಗ್ಗೆ ಈಗಿವ ಪರ ಮತ್ತು ವಿರೋಧ- ವಾದಗಳು, ಘಟನೆಗಳು, ಚಿಂತಕರ ಅಭಿಪ್ರಾಯಗಳನ್ನು ಒಳಗೊಂಡು ವಿರೋಧಿ ನೆಲೆಗಳಿಗೂ ಕನ್ವಿನ್ಸ್ ಆಗುವ ಆಗಿರಬೇಕು ಮತ್ತು ಲಾಜಿಕಾಗಿ ಮತ್ತು ಎಂಪರಿಕಲಾಗಿ ಸಾಬೀತು ಪಡಿಸಬೇಕು). ಈ ಪ್ರಯತ್ನದ ಫಲವೇ ದಲಿತರ ಬಗ್ಗೆ ಇಲ್ಲಿಯವರಿಗೆ ಇದ್ದ ಸಿದ್ಧಾಂತಗಳಿಗೆ ಮತ್ತು ನನ್ನಲ್ಲಿ ಹುಟ್ಟಿಕೊಂಡ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಸಂಶೋಧನೆ ಮಾಡುತ್ತಿದ್ದೇನೆ ಮತ್ತು ದಲಿತ ಮತ್ತು ದಲಿತೇತರ ಚಿಂತಕರಿಂದ ದಲಿತರ ಬಗ್ಗೆ ರೂಪಿಸಿದ (ಈಗಿರುವ) “ಸಿದ್ಧಾಂತಗಳಿಂದ” ದಲಿತರಿಗಾಗುತ್ತಿರುವ ಕೆಲವು ದುಷ್ಪರಿಣಾಮಗಳನ್ನು ಸೂಚಿಸಿದ್ದೇನೆ ಅಷ್ಟೆ. (ಆಗೆಂದ ಮಾತ್ರಕ್ಕೆ ಸಿದ್ಧಾಂತದ ಮಹತ್ವವನ್ನು ಅಲ್ಲಗೆಳೆಯುತ್ತಿಲ್ಲ.)

    ೨. ದಲಿತರು ಶೋಷಿತರಲ್ಲ, “ಮೇಲ್ಜಾತಿಗಳು” ಶೋಷಕರಲ್ಲವೆಂಬ ಹೇಳಿಕೆಯನ್ನು ನಾನು ಎಲ್ಲೂ ನೀಡಿಲ್ಲ. ಬದಲಿಗೆ ದಲಿತರು ಜಾತಿ ಹೆಸರಿನಲ್ಲಿ ಶೋಷಣೆಯನ್ನು ಅನುಭವಿಸುತ್ತಾರೆ ಮತ್ತು “ಮೇಲ್ಜಾತಿಗಳು” ಶೋಷಕರಾಗಿದ್ದಾರೆ ಎಂಬ ನಿಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ಕೊಡಿ ಎಂದು ಕೇಳುವ ನಾಲ್ಕಾರು ಪ್ರಶ್ನೆಗಳನ್ನು ಕೇಳಿದ್ದೇನೆ ಅಷ್ಟೆ.

    ಈಗ ವಿಚಾರಕ್ಕೆ ಬರೋಣ:

    ಸಿದ್ಧಾಂತಗಳು (ಚಿಂತಕರು) V/S ಅವುಗಳ ಪ್ರಾಯೋಗಿಕತೆ (ಚಳುವಳಿಕಾರರು) ಎಂಬ ದಾಟಿಯ ನಿಮ್ಮ ಪ್ರಶ್ನೆ ತುಂಬ ಸೂಕ್ತವಾದುದು. ಆದರೆ, “ನಿಮ್ಮ ಸಂಶೋಧನೆ, ಸಿದ್ಧಾಂತಗಳು, ವಿತಂಡ ವಾದಗಳು…” ಎಂಬ ಹೇಳಿಕೆಗೆ ಸ್ಪಷ್ಟನೆ ಕೊಡಿ ಎಂದು ಕೇಳುತ್ತೇನೆ. ಏಕೆಂದರೆ, “ನಿಮ್ಮ ಸಂಶೋಧನೆ ಸಿದ್ಧಾಂತಗಳು” ಎಂದರೆ ಯಾರ ಸಂಶೋಧನೆ, ಸಿದ್ಧಾಂತಗಳು? ಈಗಾತಾನೆ ಸಂಶೋಧನೆಗೆ ತೊಡಗಿರುವ ನಾನೇ? (ನಮ್ಮ ಸಂಶೋಧನಾ ತಂಡವಾದ ಸಿ ಎಸ್ ಎಲ್ ಸಿಯೇ?) ಅಥವಾ ಈಗಾಲೇ ಇರುವ ಅಸ್ಪೃಶ್ಯರ ಬಗ್ಗೆ ಕೊಟ್ಟಿರುವ ಡಾ. ಬಿ. ಆರ್. ಅಂಬೇಡ್ಕರ್ ರವರ ಸಂಶೋಧನೆ/ಸಿದ್ಧಾಂತಗಳೇ? ಮತ್ತು ಈಗಾಲೇ ಇರುವ “ಜಾತಿವ್ಯವಸ್ಥೆ” ಕುರಿತು ಇರುವ ಸಿದ್ಧಾಂತಗಳೇ? ಇಲ್ಲಿರುವ ವ್ಯಂಗ್ಯವನ್ನು ಗಮನಿಸಿ ಈಗಾಗಲೇ ಇರುವ ಸಂಶೋಧನೆ, ಸಿದ್ಧಾಂತಗಳಿಗೆ ಪ್ರಶ್ನೆ ಮಾಡದೆ, ಈಗಾತಾನೆ ಸಂಶೋಧನೆಯಲ್ಲಿ ತೊಡಗಿರುವ ನಾನು ಮತ್ತು ನಮ್ಮ ಸಂಶೋಧನಾ ತಂಡಕ್ಕೆ ಪ್ರಶ್ನೆ ಮಾಡುತ್ತಿರುವುದು. ಈ ನಿಮ್ಮ (ಮೂರ್ತಿಯವರ) ಪ್ರಶ್ನೆಯನ್ನು ಈಗಾಗಲೇ ಇರುವ ಸಿದ್ಧಾಂತಗಳಿಗೆ ಮತ್ತು ಸಿದ್ಧಾಂತಿಗಳಿಗೆ ಕೇಳಿದ್ದರೆ ಅಥವಾ ಇವರಿಂದ ಉತ್ತರ ಸಿಗದಿದ್ದಾಗ ನಿಮ್ಮಂಥವರೆ ಉತ್ತರ ಕಂಡುಕೊಳ್ಳುವ ಪಯತ್ನ ಮಾಡಿದ್ದರೆ ಇಷ್ಟೊತ್ತಿಗೆ ದಲಿತರವು ಎಂದು ತಿಳಿದ ಎಷ್ಟೋ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಉತ್ತರ ಮತ್ತು ಪರಿಹಾರಗಳು ದೊರೆಯುತ್ತಿದ್ದವು ಅಲ್ಲಾವೇ?

    ಇನ್ನು “ಸಾಮಾಜಿಕ ಬಹಿಷ್ಕಾರ” ಎಂದು ಹೇಳಿದ ವಿಷಯಕ್ಕೆ ಬರೋಣ: “ಸಾಮಾಜಿಕ ಬಹಿಷ್ಕಾರ” ಎಂಬ ವಿದ್ಯಮಾನವನ್ನು ಸಮರ್ಥಿಸಿಕೊಳ್ಳಲು ಕೆಲವು ಘಟನೆಗಳನ್ನು ಕೊಡುತ್ತೀರಿ. ಆದರೆ “ಸಾಮಾಜಿಕ ಬಹಿಷ್ಕಾರ” ಎಂಬ ವಿದ್ಯಮಾನವನ್ನು ಸುಳ್ಳು ಎಂದು ತೋರಿಸುವ ಮೇಲ್ಜಾತಿಗಳ ಜನರು ದಲಿತರಿಗೆ ಸಹಾಯ ಮಾಡಿದ ಬೇರೆ ಹತ್ತು-ಹಲವು ಘಟನೆಗಳನ್ನು ನಾನು ಸಹ ಕೊಡಬಹುದು. ಆದರೆ ಆ ಕೆಲಸವನ್ನು ಮತ್ತೆ ನಾನು ಮಾಡುವುದಿಲ್ಲ. ಬದಲಿಗೆ ದಲಿತರನ್ನು ಮತ್ತು ಅವರ ಸಮಸ್ಯೆಗಳನ್ನು ಗುರುತಿಸಲು, ಇಲ್ಲಿಯವರಿಗೆ ಬಳಸಿದ “ಸಾಮಾಜಿಕ ಬಹಿಷ್ಕಾರ”, “ಅಸ್ಪೃಶ್ಯತಾಚರಣೆ”, “ದಮನಿತ”, “ಪಂಚಮ”, “ದಲಿತರ ದೌರ್ಜನ್ಯಗಳು” ಎಂಬಿತ್ಯಾದಿ ಪರಿಕಲ್ಪನೆಗಳು ಮತ್ತು ಈ ಪರಿಕಲ್ಪಗಳ ರೂಪಣೆಗೆ ಸಹಾಯಕವಾಗುವ ಘಟನೆಗಳನ್ನು ಪರಿಶೀಲಿಸುತ್ತೇನೆ. ಇದರಿಂದ ದಲಿತ ನಿಜವಾದ ಜಾತಿ ಸಮಸ್ಯೆಗಳಾವುವು? ಆರ್ಥಿಕ ಸಮಸ್ಯೆಗಳಾವುವು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಈಗಿರುವ ಹಲವು ಸಮಸ್ಯೆಗಳಿಗೆ ಕೆಲವಾದರು ಪರಿಹಾರಗಳು ಸಿಗುತ್ತವೆ ಎಂಬುದು ನನ್ನ ಆಶಯ. ಆದರೆ ಕೇವಲ ಸಿಟ್ಟಾಗುವುದು, ಹತಾಶಯದ ಮಾತುಗಳನ್ನು ಆಡುವುದರಿಂದ ಯಾವುದೇ ಪ್ರಯೋಜನಕ್ಕಿಂತ ಅಪಾಯಗಳೆ ಜಾಸ್ತಿ.

    ಧನ್ಯವಾದಗಳೊಂದಿಗೆ

    ಶಂಕರಪ್ಪ

    ಪ್ರತಿಕ್ರಿಯೆ
  10. ಸಿ ಪಿ ನಾಗರಾಜ

    ” ದಲಿತರು ಜಾತಿ ಹೆಸರಿನಲ್ಲಿ ಶೋಷಣೆಯನ್ನು ಅನುಭವಿಸುತ್ತಾರೆ ಮತ್ತು “ಮೇಲ್ಜಾತಿಗಳು” ಶೋಷಕರಾಗಿದ್ದಾರೆ ಎಂಬ ನಿಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ಕೊಡಿ ಎಂದು ಕೇಳುವ ನಾಲ್ಕಾರು ಪ್ರಶ್ನೆಗಳನ್ನು ಕೇಳಿದ್ದೇನೆ ಅಷ್ಟೆ.”

    ” ದಲಿತರನ್ನು ಶೋಷಿಸುತ್ತಿದ್ದವರು ಮತ್ತು ಶೋಷಿಸುತ್ತಿರುವವರು ಯಾರು ಎಂದು ಖಚಿತ ಪಡಿಸಿ ಎಂದು ಕೇಳುತ್ತಿದ್ದೇನೆ.”
    — ಶಂಕರಪ್ಪನವರ ಈ ಬಗೆಯ ಪ್ರಶ್ನೆಗಳಿಗೆ , ಅವರಿಗೆ ಮನದಟ್ಟಾಗುವಂತೆ ಯಾರು ತಾನೇ ಉತ್ತರ ನೀಡಲು ಸಾಧ್ಯ ? ಶಂಕರಪ್ಪನವರೇ , ನಿಮ್ಮೊಡನೆ ಸಂವಾದ ನಡೆಸಲು ನನಗೆ ಹೆದರಿಕೆಯಾಗುತ್ತಿದೆ , ಆದರೂ ಧ್ಯೆರ್ಯಮಾಡಿ ಒಂದು ಮಾತನ್ನು ಮಾತ್ರ ಹೇಳುತ್ತಿದ್ದೇನೆ . ನಮಗೆ ದೊಡ್ಡ ಪೆಟ್ಟು ಬಿದ್ದು ದೇಹದಿಂದ ರಕ್ತ ಹರಿಯತೊಡಗಿದಾಗ , ನೋಡುವವರಿಗೆ ರಕ್ತ ಕಾಣಿಸುತ್ತದೆಯೇ ಹೊರತು ನಾವು ಅನುಭವಿಸುತ್ತಿರುವ ನೋವು ಕಾಣಿಸುತ್ತದೆಯೇ? ಹಿಂದು ಸಮಾಜದ ಜಾತಿ ವ್ಯವಸ್ಥೆಯ ನಡೆನುಡಿ ಮತ್ತು ಕಟ್ಟುಪಾಡುಗಳೇ ದಲಿತರ ಹಸಿವು , ಅಪಮಾನ ಮತ್ತು ಎಲ್ಲ ಬಗೆಯ ನೋವುಗಳಿಗೆ ಕಾರಣವಾಗಿದೆ ಎಂಬ ಸಾಮಾಜಿಕ ವಾಸ್ತವದ ಅರಿವಿಗೆ ಇತರರು ಕೊಡುವ ಸ್ಪಷ್ಟನೆ ಅಥವಾ ಸಂಶೋಧನೆಯ ಅಗತ್ಯವಿಲ್ಲ . ನಮ್ಮ ಕಣ್ಣಮುಂದಿನ ಸಮಾಜದ ಆಗುಹೋಗುಗಳನ್ನು ಸುಮ್ಮನೆ ನೋಡುತ್ತಿದ್ದರೆ ಸಾಕು ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ .

    ಪ್ರತಿಕ್ರಿಯೆ
  11. Shankarappa

    ಸಿ ಪಿ ನಾಗರಾಜ್ ರವರೆ,

    “ನಮಗೆ ದೊಡ್ಡ ಪೆಟ್ಟು ಬಿದ್ದು ದೇಹದಿಂದ ರಕ್ತ ಹರಿಯತೊಡಗಿದಾಗ, ನೋಡುವವರಿಗೆ ರಕ್ತ ಕಾಣಿಸುತ್ತದೆಯೇ ಹೊರತು ನಾವು ಅನುಭವಿಸುತ್ತಿರುವ ನೋವು ಕಾಣಿಸುತ್ತದೆಯೇ?” ಈ ನಿಮ್ಮ ಹೇಳಿಕೆ ನೂರಕ್ಕೆ ನೂರಷ್ಟು ಸತ್ಯ. ನೋವನ್ನು ಅನುಭವಿಸುವವನ ಅನುಭವಕ್ಕೂ ಮತ್ತು ನೋಡುವವನು ಅನುಭವಕ್ಕೂ ವ್ಯತ್ಯಾಸವಿದೆ. ನೋವಾದವನಿಗೆ ನೋವೇ ಆಗಿಲ್ಲವೆಂದು ನಾನು ವಾದಿಸುತ್ತಿಲ್ಲ. ಆದರೆ ಆ ನೋವಿಗೆ ಸ್ಪಷ್ಟ ಕಾರಣವನ್ನು ಕೊಡಿ ಎಂದು ಕೇಳುತ್ತಿದ್ದೇನೆ. ನನ್ನ ಈ ವಿಚಾರವನ್ನು ಒಂದು ಉದಾಹರಣೆಯ ಮೂಲಕ ಇನ್ನು ಹೆಚ್ಚಿಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ: ಒಬ್ಬ ವೈದ್ಯನು ತನಗೆ ಕ್ಯಾನ್ಸರ್ ಇಲ್ಲವೆಂದು ಹಾಗೂ ಆ ಕ್ಯಾನ್ಸರ್ ನೋವಿನ ಅನುಭವ ತನ್ನದಲ್ಲವೆಂದು ಚಿಕಿತ್ಸೆ ಕೊಡದೆ ಹಾಗೂ ಒಬ್ಬ ವಿಜ್ಜಾನಿಯು ಈ ಕ್ಯಾನ್ಸರ್ ರೋಗದ ಲಕ್ಷಣಗಳಾವುವು ಮತ್ತು ಈ ರೋಗಕ್ಕೆ ಕಾರಣವಾದ ಕ್ರಿಮಿ ಯಾವುದು ಹಾಗೂ ಈ ರೋಗದ ನಿವಾರಣೆಗೆ ಔಷದಿಯನ್ನು ಕಂಡುಹಿಡಿಯದೆ ಸುಮ್ಮನ್ನಿದ್ದರೆ ಆ ಕ್ಯಾನ್ಸರ್ ರೋಗವನ್ನು ಗುಣಪಡಿಸಿದಂತಾಗುತ್ತದೆಯೇ? ಇನ್ನೊಂದು ವಿಷಯ ಆ ಕ್ಯಾನ್ಸರ್ ರೋಗಿಯ ರೋಗವನ್ನು ಸರಿಯಾಗಿ ಖಾತರಿ ಪಡಿಸಿಕೊಳದೇ ಯಾವ್ಯಾವುದೋ (ಟಿಬಿ ರೋಗಕ್ಕೆ ಕೊಡುವ) ಔಷದಿಯನ್ನು ಕೊಟ್ಟರೆ ಆ ಕ್ಯಾನ್ಸರ್ ರೋಗಿಗೆ ಆಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು.

    “ಹಿಂದು ಸಮಾಜದ ಜಾತಿ ವ್ಯವಸ್ಥೆಯ ನಡೆನುಡಿ ಮತ್ತು ಕಟ್ಟುಪಾಡುಗಳೇ ದಲಿತರ ಹಸಿವು , ಅಪಮಾನ ಮತ್ತು ಎಲ್ಲ ಬಗೆಯ ನೋವುಗಳಿಗೆ ಕಾರಣವಾಗಿದೆ ಎಂಬ ಸಾಮಾಜಿಕ ವಾಸ್ತವದ ಅರಿವಿಗೆ ಇತರರು ಕೊಡುವ ಸ್ಪಷ್ಟನೆ ಅಥವಾ ಸಂಶೋಧನೆಯ ಅಗತ್ಯವಿಲ್ಲ” ಈ ನಿಮ್ಮ ಮಾತು ಸತ್ಯವೇ ಆಗಿದ್ದಲ್ಲಿ ಗುಜರಾತಿನಲ್ಲಿರುವ ಭಂಗಿಯ ವೃತ್ತಿಗೂ ಮತ್ತು ಕಂಬಾಲಪಲ್ಲಿಯಲ್ಲಿ ನಡೆದ “ದಲಿತರ” ಕೊಲೆಗಳಿಗೂ ಜಾತಿವ್ಯವಸ್ಥೆಯೇ ಕಾರಣವೆಂದು ಹೇಗೆ ಹೇಳುತ್ತೀರಿ. (ಕಂಬಾಲಪಲ್ಲಿಯ ಕೊಲೆಗಳಿಗೆ ನಿಜವಾದ ಕಾರಣಗಳೇನು ಮತ್ತು ದಲಿತ ಚಿಂತಕರು ಮತ್ತು ಚಳುವಳಿಕಾರರು ಈ ಕೊಲೆಗಳನ್ನು ಜಾತಿ ಕಾರಣಕ್ಕಾಗಿಯೇ ನಡೆದವು ಎಂದು ನಿರೂಪಿಸಲು ಹೆಣಗುತ್ತಿರುವ ಪ್ರಯತ್ನಗಳು ಮತ್ತು ಜಾತಿವ್ಯವಸ್ಥೆಯೇ ಕಾರಣವೆಂದು ತಿಳಿದಿದ್ದರಿಂದ ಈ ಕೊಲೆಗಳ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಇನ್ನು ಆಗಿಲ್ಲವೆಂಬುದರ ಬಗ್ಗೆ ನನ್ನ ಕ್ಷೇತ್ರಾಧ್ಯಯನದಲ್ಲಿ ತಿಳಿದುಕೊಂಡಿದ್ದೇನೆ, ಇದು ಬೇರೆ ವಿಷಯ.)
    ಭಂಗಿಯ ವೃತ್ತಿಗೂ ಮತ್ತು ಕಂಬಾಲಪಲ್ಲಿಯ “ದಲಿತರ” ಕೊಲೆಗಳಿಗೂ ಜಾತಿವ್ಯವಸ್ಥೆಯೇ ಕಾರಣವೆಂದು ಹೇಳುತ್ತಿರುವ (ಈಗಾಗಲೇ ಇರುವ) ಸಿದ್ಧಾಂತಗಳ ಮತ್ತು ನಿಮ್ಮ ವಿವರಣೆ ಹೇಗಿದೆ ಎಂದರೆ: ಕ್ಯಾನ್ಸರ್ ರೋಗಕ್ಕೂ, ಟಿಬಿ ರೋಗಕ್ಕೂ ಒಂದೇ ಕ್ರಿಮಿ ಕಾರಣವೆಂದಂತಿದೆ. ಏಕೆಂದರೆ ಈ ರೋಗಗಳನ್ನು ಹೊಂದಿರುವ ಇಬ್ಬರು ರೋಗಿಗಳಲ್ಲೂ ಜ್ವರ ಇದೆಯಲ್ಲಾ ಎಂಬುದೇ ಹೀಗೆ ವಾದಿಸುವುದಕ್ಕೆ ಸಾಕ್ಷಿ. ಅಂದರೆ ಗುಜರಾತಿನಲ್ಲಿರುವ ಭಂಗಿಯು ಮತ್ತು ಕಂಬಾಲಪಲ್ಲಿಯಲ್ಲಿ ಕೊಲೆಯದವರು (ಈ ಎರಡು ರೀತಿಯ ಜನರು) “ದಲಿತರು” ಎಂದು ಹೇಳಿದಂತೆ. ಒಂದು ವೇಳೆ ನಿಮ್ಮ ಕಾರಣವೇ ನಿಜವಾಗಿದ್ದಲ್ಲಿ, ಭಾರತದಲ್ಲಿರುವ ಎಲ್ಲಾ ದಲಿತರಿಗಲ್ಲದಿದ್ದರು, ಗುಜರಾತಿನ ಭಂಗಿಗಳಿಗೆ ಮತ್ತು ಕಂಬಾಲಪಲ್ಲಿಯ ದಲಿತರಿಗಾದರು ಶೋಷಣೆಯ ಮುಕ್ತಿ ಸಿಗಬೇಕಾಗಿತ್ತಲ್ಲವೆ.

    “ನಮ್ಮ ಕಣ್ಣಮುಂದಿನ ಸಮಾಜದ ಆಗುಹೋಗುಗಳನ್ನು ಸುಮ್ಮನೆ ನೋಡುತ್ತಿದ್ದರೆ ಸಾಕು ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ ” ಎಂದು ಹೇಳುತ್ತೀರಲ್ಲಾ, ಒಮ್ಮೆ ಈಗಾಗಲೆ ಇರುವ ಡಾ. ಬಿ. ಆರ್. ಅಂಬೇಡ್ಕರ್ ರವರ ಮತ್ತು ದಲಿತ ಚಿಂತಕರ ಮತ್ತು ಪಶ್ಚಿಮದ ಚಿಂತಕರ “ಜಾತಿವ್ಯವಸ್ಥೆ” ಮತ್ತು ದಲಿತರ ಕುರಿತ ಸಿದ್ಧಾಂತಗಳನ್ನು ಬಿಟ್ಟು ದಲಿತರ ಮತ್ತು ಅವರ ನೋವಿನ ಬಗ್ಗೆ ಯೋಚಿಸಿ ನೋಡೋಣ? ಅಂದರೆ ಒಂದು ಬೆಟ್ಟವಿದೆ, ಆ ಬೆಟ್ಟದ ಮಧ್ಯ ಒಬ್ಬ ವ್ಯಕ್ತಿ ಇದ್ದಾನೆಂದು ಭಾವಿಸಿಕೊಳ್ಳಿ ಮತ್ತು ಯಾವುದೇ ವಿವರಣೆಯ ಸಹಾಯವಿಲ್ಲ ಆ ವ್ಯಕ್ತಿಯು ಬೆಟ್ಟವನ್ನು ಹತ್ತುತಿದ್ದಾನೆಯೇ? ಅಥವಾ ಇಳಿಯುತ್ತಿದ್ದಾನೆಯೇ? ಎಂದು ಹೇಳಿ ನೋಡೋಣ. ಅಂದರೆ ಕೇವಲ ಘಟನೆಗಳು ಏನನ್ನು ಹೇಳುವುದಿಲ್ಲ. ಬದಲಿಗೆ ಆ ಘಟನೆಗಳಿಗೆ ಈಗಾಗಲಿ ರೂಪಿಸಿದ ಸಿದ್ಧಾಂತಗಳ/ವಿವರಣೆ ಚೌಕಟ್ಟು ನಮ್ಮನ್ನು ಆ ರೀತಿ ಗುರುತಿಸುವಂತೆ ಮಾಡುತ್ತದೆ.

    ಧನ್ಯವಾದಗಳೊಂದಿಗೆ…
    ಶಂಕರಪ್ಪ

    ಪ್ರತಿಕ್ರಿಯೆ
  12. ಸಿ ಪಿ ನಾಗರಾಜ

    ” ನೋವನ್ನು ಅನುಭವಿಸುವವನ ಅನುಭವಕ್ಕೂ ಮತ್ತು ನೋಡುವವನು ಅನುಭವಕ್ಕೂ ವ್ಯತ್ಯಾಸವಿದೆ. ನೋವಾದವನಿಗೆ ನೋವೇ ಆಗಿಲ್ಲವೆಂದು ನಾನು ವಾದಿಸುತ್ತಿಲ್ಲ. ಆದರೆ ಆ ನೋವಿಗೆ ಸ್ಪಷ್ಟ ಕಾರಣವನ್ನು ಕೊಡಿ ಎಂದು ಕೇಳುತ್ತಿದ್ದೇನೆ. ” – ಶಂಕರಪ್ಪನವರೇ , ನೋವಿಗೆ ದೊಡ್ಡ ಪೆಟ್ಟು ಬಿದ್ದಿರುವುದೇ ಕಾರಣ .
    “ನಮ್ಮ ಕಣ್ಣಮುಂದಿನ ಸಮಾಜದ ಆಗುಹೋಗುಗಳನ್ನು ಸುಮ್ಮನೆ ನೋಡುತ್ತಿದ್ದರೆ ಸಾಕು ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ ” ಎಂದು ಹೇಳುತ್ತೀರಲ್ಲಾ, ಒಮ್ಮೆ ಈಗಾಗಲೆ ಇರುವ ಡಾ. ಬಿ. ಆರ್. ಅಂಬೇಡ್ಕರ್ ರವರ ಮತ್ತು ದಲಿತ ಚಿಂತಕರ ಮತ್ತು ಪಶ್ಚಿಮದ ಚಿಂತಕರ “ಜಾತಿವ್ಯವಸ್ಥೆ” ಮತ್ತು ದಲಿತರ ಕುರಿತ ಸಿದ್ಧಾಂತಗಳನ್ನು ಬಿಟ್ಟು ದಲಿತರ ಮತ್ತು ಅವರ ನೋವಿನ ಬಗ್ಗೆ ಯೋಚಿಸಿ ನೋಡೋಣ?”
    ನಿಮ್ಮ ಈ ಮೇಲ್ಲಂಡ ಪ್ರಶ್ನೆಗೆ ಉತ್ತರವನ್ನು ಡಾ.ಎಂ.ಚಿದಾನಂದ ಮೂರ್ತಿಯವರು ಬರೆದಿರುವ ” ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ ” ಎಂಬ ಪುಸ್ತಕದಿಂದ ಪಡೆಯಬಹುದೆಂದು ಭಾವಿಸಿದ್ದೇನೆ.
    ನಮ್ಮ ಮನದಲ್ಲಿ ಏಳುವ ಎಲ್ಲಾ ಪ್ರಶ್ನೆಗಳಿಗೂ ಇತರರಿಂದ ಸ್ಪಷ್ಟೀಕರಣ ಅಥವಾ ಉತ್ತರಗಳನ್ನು ಬಯಸುವ ಬದಲು , ನಮ್ಮ ಲೋಕಾನುಭವ ಮತ್ತು ಓದಿನಿಂದ ಪಡೆಯುವ ಅರಿವಿನಿಂದ ನಮ್ಮದೇ ಆದ ನಿಲುವುಗಳನ್ನು ಹೊಂದುವುದು ಸರಿಯಾದ ದಾರಿಯೆಂದು ತಿಳಿದಿದ್ದೇನೆ.

    ಪ್ರತಿಕ್ರಿಯೆ
  13. ಷಣ್ಮುಖ

    ನಾಗರಾಜರವರೇ,

    ಈ ರೀತಿಯ ಚರ್ಚೆ ಜಿಜ್ಞಾಸೆಯ ಮತ್ತು ಅರಿವಿನಿಂದ ನಿಲುವುಗಳನ್ನು ಹೊಂದುವುದಕ್ಕಾಗಿ ಮಾತ್ರವೇ ಅಲ್ಲ ಬದಲಿಗೆ ನಮ್ಮ ಕಣ್ಣಮುಂದೆ ಇರುವ ಒಂದು ಜ್ವಲಂತ ಸಾಮಾಜಿಕ ಪಿಡುಗಿಗೆ ಸರಿಯಾದ ಕಾರಣ ಮತ್ತು ಪರಿಹಾರವನ್ನು ಹುಡುಕುವ ತುಡಿತ ಮತ್ತು ಹುಡುಕಾಟ. ಇದುವರೆಗಿನ ಜಾತಿವ್ಯವಸ್ಥೆ ಮತ್ತು ಹಿಂದೂಧರ್ಮ, ಪುರೋಹಿತಶಾಹಿ ಮುಂತಾದ ತಥಾಕಥಿತ ಸಿದ್ದಾಂತಗಳ ವಿವರಣೆಗಳು ಮತ್ತು ಅವು ನೀಡಿರುವ ಪರಿಹಾರಗಳು ದಶಕಗಳೇ ಸಂದರೂ ಈ ಸಮಸ್ಯೆಯನ್ನು ಕಿಂಚಿತ್ತೂ ಪರಿಹರಿಸಲು (ಬೆರಳೆಣಿಕೆಯಷ್ಟು ಜನರಿಗೆ ಇದರಿಂದ ರಾಜಕೀಯ ಲಾಭದ ಉದಾ. ಬಿಟ್ಟು)ಸಾಧ್ಯವಾಗಿಲ್ಲ ಎನ್ನುವುದು ಸರ್ವವೇದ್ಯ. ಶಂಕರಪ್ಪನವರು ಉದಾ. ಸಹಿತ ತಥಾಕತಿತ ಸಿದ್ದಾಂತಗಳ ವಿವರಣೆಗಳಿಂದ ಪ್ರಭಾವಿಸಿಕೊಂಡು ನಮ್ಮ ಸಮಾಜವನ್ನು ನೋಡುತ್ತಿರುವವರಲ್ಲಿನ (ಹುಲಿಕುಂಟೆಯವರು ಈ ಸಿದ್ದಾಂತಗಳನ್ನು ವಾಸ್ತವವನ್ನು ಅರಿಯಲು ಉಪಯೋಗಹೀನವೆಂದು ಜರೆದರೂ ಅವರ ವಿವರಣೆಗಳೆಲ್ಲವೂ ಇದುವರಗಿನ ಇದೇ ಸಿದ್ದಾಂತಗಳ ಚೌಕಟ್ಟಿನಡಿಯಲ್ಲಿಯೇ ಇವೆ.) ಗೊಂದಲಗಳೇನು ಎಂಬುದನ್ನು ಬಿಡಿಸಿಡುತ್ತಿದ್ದಾರೆ. ಒಂದು ಸಮಸ್ಯೆಗೆ ಇದುವರೆಗೂ ನೀಡಿರುವ ವಿವರಣೆ ಮತ್ತು ಅದರಿಂದ ಹುಟ್ಟಿದ ಪರಿಹಾರಗಳು ಅದನ್ನು ಗುಣಪಡಿಸಿಲ್ಲ ಎಂದಾದರೆ ಆ ವಿವರಣೆಯಲ್ಲಿನ ದೋಷಗಳನ್ನು ಹುಡುಕುವುದು ಇಲ್ಲವೇ ಇರುವ ವಾಸ್ತವ ಸ್ಥಿತಿಗೆ ಇರುವ ಈ ವಿವರಣೆ ಸರಿಯಾದ ವಿವರಣೆಯೇ ಅಲ್ಲ ಎಂದು ತೋರಿಸುವುದು ಆ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇರುವ ಮೊದಲ ದಾರಿ. ಇದನ್ನೇ ಇಲ್ಲಿ ಶಂಕರಪ್ಪ ಮಾಡುತ್ತಿದ್ದಾರೆ ಎನ್ನುವುದು ನನ್ನ ಭಾವನೆ.

    ಹುಲಿಕುಂಟೆಯವರು ಕೆಲವೊಂದು ಅಸ್ಪೃಶ್ಯತೆಯ ಸಮಸ್ಯೆಯ ಘಟನೆಗಳನ್ನು ಮುಂದಿಟ್ಟು ಇದಕ್ಕೆ ಕಾರಣಗಳೇನು ಹೇಳಿ ನೋಡುವ ಎಂಬ ಪ್ರಶ್ನೆ ಇಡುತ್ತಾರೆ. ಇದು ಒಂದು ರೀತಿಯಲ್ಲಿ ‘ಇಲ್ಲಿ ನೋಡಿ ಅಜ್ಜಿ ಕೋಳಿ ಕೂಗುತ್ತಿದೆ ಅಲ್ಲಿ ನೋಡಿ ಬೆಳಕಾಗುತ್ತಿದೆ’ ಎಂಬ ಸೂರ್ಯೋದಯದ ವಿವರಣೆ ನೀಡಿದಂತೆ ಆ ರೀತಿಯ ಘಟನೆಗಳೇ ಜಾತಿವ್ಯವಸ್ಥೆಗೆ ಆಧಾರ ಎನ್ನುತ್ತಿದ್ದಾರೆ. ಈ ವಿವರಣೆಯನ್ನು ಅಲ್ಲಗಳೆಯಲು ನಾನು ಆ ಅಸ್ಪೃಶ್ಯತೆಯ ಸಮಸ್ಯೆಗೆ ಸರಿಯಾದ ಕಾರಣಗಳನ್ನು ಹೇಳಿಯೇ ಅಲ್ಲಗಳಯಬೇಕು ಎನ್ನುವುದು ಅವರ ನಿಲುವು. ಆದರೆ ಇದು ಲಾಜಿಕ್ಕಾಗಿ ಸರಿಯಾದುದಲ್ಲ. ಶಂಕರಪ್ಪನವರದರ ರೀತಿಯ ಉದಾಹರಣೆಗೆ ಬರುವುದಾದರೆ; ಈಗ ನಿಮಗೆ ಬಂದಿರುವ ರೋಗ ಕ್ಯಾನ್ಸರ್ ಅಲ್ಲ, ಬೇರೇನೋ ಇರಬೇಕು. ಹಾಗಾಗಿ, ನೀವು ರೋಗವನ್ನು ತಪ್ಪಾಗಿ ಗ್ರಹಿಸಿ ತೆಗೆದುಕೊಳ್ಳುತ್ತಿರುವ ಔಷಧಿ ನಿಮ್ಮ ರೋಗವನ್ನು ಗುಣಪಡಿಸುವ ಬದಲು ನಿಮ್ಮ ಜೀವಕ್ಕೆ ಹಾನಿ ಎಂದು ಓರ್ವ ಡಾ.ಹೇಳಿದರೆ ಆಗ ಇಲ್ಲಇಲ್ಲ ಸರಿಯಾದ ರೋಗವೇನೆಂದು ನೀವು ಹೇಳಿ, ಇಲ್ಲದಿದ್ದರೆ ನಾನೇನಂದುಕೊಂಡಿರುವೆನೋ ಅದೇ ಸರಿ ಅದೇ ಔಷಧಿಯನ್ನೇ ತೆಗೆದುಕೊಳ್ಳುತ್ತೇನೆ ಎನ್ನುವುದು ಸರಿಯೇ? ಹಾಗಾಗಿ ಹುಲಿಕುಂಟೆಯವರು ನೀಡಿದಂತ ನೂರಾರು ಅಮಾನವೀಯ ಘಟನೆಗಳು ನಮ್ಮ ನಡುವೆ ನಡೆಯುತ್ತಿದೆ, ನಿಜ. ಆದರೆ ಅದಕ್ಕೆ ನಾವು ನೀಡುತ್ತಿವ ವಿರವರಣೆ ಮತ್ತು ಗ್ರಹಿಕೆ ಸರಿಯಾಗಿಲ್ಲ, ಮಾತ್ರವೇ ಅಲ್ಲ, ರೀತಿಯ ನಿಲುವುಗಳು ದಲಿತರ ಬದುಕನ್ನು ಇನ್ನೂ ಅಮಾನವೀಯ ಗೊಳಿಸುವ ಪ್ರಕ್ರಿಯಲ್ಲಿ ತೊಡಗಿವೆ ಮತ್ತು ವಿಪರೀತ ಜಾತಿದ್ವೇಷಗಳನ್ನು ಹರಡಿ ಸಮುದಾಯಕ್ಕೆ ಸಮುದಾಯಗಳನ್ನೇ ಅಪರಾಧಿಗಳನ್ನಾಗಿಸಲಷ್ಟೇ ಶಕ್ತವಾಗಿದೆ.
    ನನ್ನ ಅನುಭವದಲ್ಲಿ ಮೇಲ್ಜಾತಿಗಳೆನಿಸಿಕೊಂಡವುಗಳ ಬಗ್ಗೆ ಮುಖ್ಯವಾಗಿ ಬ್ರಾಹ್ಮಣರ ಬಗ್ಗೆ ವಿಪರೀರತ ದ್ವೇಷ ಸಿಟ್ಟನ್ನು ಈ ಸಿದ್ದಾಂತಗಳು ಬಿತ್ತಿದ್ದವು, ಇಂದಿಗೂ ಇದು ನನ್ನ ಮನಸ್ಸಿನ ಮೂಲೆಯಲ್ಲಿ ಕೂತಿರುವುದು ನನ್ನ ಅನುಭವಕ್ಕೆ ಈಗಲೂ ಬಂದಿದೆ. ಪ್ರಾಥಮಿಕ-ಪ್ರೌಡ ಶಿಕ್ಷಣದ ಸಂಧರ್ಭದಲ್ಲಿ ಹಲವಾರು ಬ್ರಾಹ್ಮಣ ಮತ್ತು ಇತರ ಮೇಲ್ಜಾಜಿ ಶಿಕ್ಷಕರು, ಸ್ನೇಹಿತರು, ಮತ್ತು ಹಿರಿಯರು ನನ್ನ ನೆರವಿಗೆ ನಿಂತಾಗ ಅವರ ಬಗ್ಗೆ ವಿಪರೀತ ಗೌರವಭಾವನೆ ಇತ್ತು. ಆದರೆ ಯಾವಾಗ ಕಾಲೇಜು ಶಿಕ್ಷಣದ ಹಂತದಲ್ಲಿ ಪ್ರಗತಿಪರವೆನಿಸವ ಮತ್ತು ದಲಿತ ಚಿಂತನೆಗಳೆನೆಂದೆನಿಸುವ ಬರವಣಿಗೆಗಳನ್ನು ಓದಲು ತೊಡಗಿದನೋ ಮೇಲ್ಜಾತಿಯವರು ಮುಖ್ಯವಾಗಿ ಬ್ರಾಹ್ಮಣರನ್ನು ದ್ವೇಷಿಸುವುದು ನನಗರಿವಿಲ್ಲದಂತೆಯೆ ನನ್ನಲ್ಲಿ ಬೆಳೆಯತೊಡಗಿತ್ತು. ಕಳೆದ ಆರೇಳು ವರ್ಷಗಳಿಂದ ನಮ್ಮ ಸಮಾಜದ ಕುರಿತ ಪರ್ಯಾಯ ಸೈದ್ದಾಂತೀಕರಣದ ಸಂಶೋಧನೆಯಲ್ಲಿ ನಾನು ತೊಡಗಿದ ನಂತರ ಇಲ್ಲಿಯ ಓದು ಮತ್ತು ಚರ್ಚೆಗಳು ನನ್ನ ತಿಳುವಳಿಕೆಯನ್ನು ಪುನರಚಿಸಿಕೊಳ್ಳಲು ಸಹಾಯಕವಾಗುತ್ತಿದೆ. ಹಾಗಾಗಿ, ನನ್ನ ಮಟ್ಟಿಗೆ ಅಸ್ಪೃಶ್ಯತೆ, ಜಾತಿವ್ಯವಸ್ಥೆಗಳ ಕುರಿತ ಇದುವರೆಗಿನ ಸಿದ್ದಾಂತಗಳು ನಮ್ಮೆಲ್ಲರನ್ನು ದೇಷಾಸೂಯೆಯಕಡೆಗಲ್ಲದೆ ಸ್ವಾಸ್ತ್ಯ ಮತ್ತು ಸಮಾನ ಸಮಾಜದ ಕಡೆಗೆ ಮಾರ್ಗದರ್ಶನ ಮಾಡುತ್ತಿಲ್ಲ.

    ಪ್ರತಿಕ್ರಿಯೆ
    • ಹುಲಿಕುಂಟೆ ಮೂರ್ತಿ

      ರೀ ಸ್ವಾಮಿ ಷಟ್+ಮುಖಗಳವರೇ…., ನೋವನ್ನು ಅರ್ಥಮಾಡಿಕೊಳ್ಳಲು ಸಿದ್ಧಾಂಥ, ಸಂಶೋಧನೆಗಳ ಮೊರೆ ಹೋಗುವವರು ನನ್ನ ಪ್ರಕಾರ ನೋವು ನೀಡಿದವರಿಗಿಂತ ಕ್ರೂರಿಗಳು. ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟಾಗ, ವಣೇನೂರಿನಲ್ಲಿ ಹೆಣ್ಣೊಬ್ಬಳ ಬಟ್ಟೆ ಬಿಚ್ಚಿದಾಗ, ಬೆಂಡಿಗೇರಿಯಲ್ಲಿ ದಲಿತರಿಗೆ ಹೇಲು ತಿನ್ನಿಸಿದಾಗ ಅನ್ನ ತಿಂದು ಜೀವಿಸುವ ಯಾರಿಗಾದರೂ ಅದಕ್ಕೆ ಕಾರಣರಾದವರ ಮೇಲೆ ಕೋಪ ಬರಬೇಕು. ಅದು ಬಿಟ್ಟು ಹಾಗೆ ತುಳಿತಕ್ಕೊಳಗಾದವರ ಮುಂದೆ ನಿಂತು ‘ನಿಮ್ಮ ನೋವಿಗೆ ಯಾವ ಸಿದ್ಧಾಂಥ ಕಾರಣ..’ ಎಂದು ಕೇಳಿದರೆ ಅವರು ಕೈಗೆ ಚಪ್ಪಲಿ ತೆಗೆದುಕೊಳ್ಳದೆ ಬೇರೇನು ಮಾಡುತ್ತಾರೆ..? ಕಣ್ಣೆದುರು ನಡೆಯುತ್ತಿರುವ ಅಮಾನವೀಯತೆಯನ್ನು ಅರ್ಥಮಾಡಿಕೊಳ್ಳಲು, ಎದುರಿಸಲು, ಮಿಡಿಯಲು ಸಿದ್ಧಾಂತಗಳ ವಿವರಣೆ ಬೇಕೆ..? ನೀವು ಮತ್ತು ಶಂಕರಪ್ಪರಂಥವರಿಗೆ ಇಂಥಾದ್ದಕ್ಕೆ ಸಿದ್ಧಾಂತಗಳ ಅಗತ್ಯವಿರಬಹದು; ಆದರೆ, ನಮ್ಮ ನೋವನ್ನು ನಿಮ್ಮಿಂದ ಅರಿಯಲಾದೀತೆ..? ನಿಮ್ಮ ಮಾನವ ಸಹಜ ಪ್ರತಿಭಟನಾ ವರ್ತನೆಯಿಂದ ಮಾತ್ರ ಜಗತ್ತಿನೆಲ್ಲೆಡೆ ಜನಾಂದೋಲನಗಳು ನಡೆದಿವೆ, ಅವು ಹುಟ್ಟಿದ ನಂತರ ಅದಕ್ಕೊಂದು ಸಿದ್ದಾಂತದ ಹೊದಿಕೆ ಹೊದಿಸಲಾಗಿದೆ ಅಷ್ಟೆ. ನಾನು ನೀಡಿದ ಉದಾಹರಣೆಗಳಿಂದ ಕರಗದ ನಿಮ್ಮ ಹೃದಯ ‘ಇಲ್ಲಿ ನೋಡಿ ಅಜ್ಜಿ ಕೋಳಿ ಕೂಗುತ್ತಿದೆ ಅಲ್ಲಿ ನೋಡಿ ಬೆಳಕಾಗುತ್ತಿದೆ’ ಎಂದು ಉಡಾಫೆಯಿಂದ ಪ್ರತಿಕ್ರಿಯಿಸಿರುವ ಮಾತು ಅದ್ಯಾವ ಸಿದ್ದಾಂತದ್ದು ಎಂದು ಸ್ವಲ್ಪ ತೋರಿಸಿ. ನನಗೆ ತಿಳಿದ ಹಾಗೆ ಜಗತ್ತಿನ ಯಾವ ಸಿದ್ಧಾಂತವೂ ಮಾನವರ ನೋವನ್ನು ನಿಮ್ಮಷ್ಟು ಅಗ್ಗವಾಗಿ ಕಂಡಿಲ್ಲ. ನಿಮ್ಮೊಂದಿಗೆ ಮಾತನಾಡಿ ನನ್ನ ಕಾಲ ವ್ಯರ್ಥ ಮಾಡಿಕೊಂಡಿದ್ದು ನನಗೂ ಒಂದು ಸಿದ್ಧಾಂತವಿದೆ ಎಂಬ ಕಾರಣಕ್ಕೆ.. ಧಿಕ್ಕಾರವಿರಲಿ ಆ ಸಿದ್ಧಾಂತಕ್ಕೆ.

      ಪ್ರತಿಕ್ರಿಯೆ
      • ಷಣ್ಮುಖ

        ತಮ್ಮ ವ್ಯಂಗ ಮತ್ತು ಮಾನವೀಯತೆಯ ಪಾಠಕ್ಕೆ ಧನ್ಯವಾದಗಳು. ದಲಿತರಗಲ್ಲದೆ ಬೇರೆಯವರಿಗೆ ದಲಿತರ ನೋವುಗಳು ಅರ್ಥವಾಗುವುದಿಲ್ಲ ಎನ್ನುವ insider-outsider ಎಂಬ post-modern jorgan ಅನ್ನು ನೀವು ಚೆನ್ನಾಗಿಯೇ ಬಳಸುತ್ತಿದ್ದೀರಿ. ಹಾಗಿದ್ದರೆ ಇಲ್ಲಿ ನಾನೂ(ಮತ್ತು ಶಂಕರಪ್ಪ) ದಲಿತನೆಂದು ಗೋಗರೆದುಕೊಂಡೇ ಚರ್ಚೆಗೆ ಇಳಿಯಬೇಕಿತ್ತೇ? ಕನ್ನಡ ಉಪನ್ಯಾಸಕರೆಂದು ಪೀಠಿಕೆಯಲ್ಲಿ ಹೇಳಲಾಗಿದೆ. ಹಾಗಾಗಿ ತಮ್ಮ ತರ್ಕಜ್ಞಾನವನ್ನೂ ಸ್ವಲ್ಪ ಬಳಸಿ. ಸಿದ್ದಾಂತದ ಮಟ್ಟದಲ್ಲಿ ಮಾತ್ರವೇ ಅಲ್ಲ ಯಾವುದೇ ತರ್ಕದ ಮಟ್ಟದಲ್ಲಿಯೂ ಒಂದು ಘಟನೆ ಅಥವಾ ವಿದ್ಯಾಮಾನಕ್ಕೂ(ಉದಾ:ಕಂಬಾಲಪಲ್ಲಿಯದ್ದು) ಮತ್ತು ಇದೆ ಭಾವಿಸಲಾದ ಒಂದು ಸಂಗತಿಗೂ (ಜಾತಿವ್ಯವಸ್ಥೆ) ಸಂಬಂದವಿದೆ ಎನ್ನುವಾಗ ಅದಕ್ಕೆ ಆಧಾರ ಮತ್ತು ಸಂಬಂದವನ್ನು ತೋರಿಸಲೇಬೇಕು. ಇದು ನೈಸರ್ಗಿಕ ಅಥವಾ ಸಾಮಾಜಿಕ ಜಗತ್ತಿನ ಬಗ್ಗೆ ತಿಳಿಯಲು ಇಚ್ಚಿಸುವವನಿಗಿರಬೇಕಾದ ಪ್ರಾಥಮಿಕ ಜ್ಞಾನ.

        ಸರಿ ದಲಿತರ ನೋವುಗಳ ಬಗ್ಗೆ ತಾವು ತುಡಿಯಲು ನೀವು ಏಕೆ ಕಂಬಾಲಪಲ್ಲಿ, ವಣೆನೂರು, ಬೆಂಡಗೇರಿಗೆ ಹೂಗುತ್ತೀರಿ? ಏಕೆ ತಮ್ಮ ಊರಿನಲ್ಲಿ ಜಾತಿವ್ಯವಸ್ಥೆ ಇಲ್ಲವೇ? ಅಥವಾ ತಮ್ಮ ಊರು ಭಾರತದಲ್ಲಿಲ್ಲವೇ? (ಗುರುತ್ವಾಕರ್ಷಣೆ ಇರುವೆಡೆಯಲ್ಲಾ ಘನವಸ್ತುಗಳನ್ನು ಮೇಲೆ ಎಸೆದರೆ ಕೆಳಗೆ ಬೀಳುತ್ತದೆ ಮತ್ತು ಬೀಳಲೇಬೇಕು ಹಾಗೆಯೇ ಜಾತಿವ್ಯವಸ್ಥೆ ಇರುವೆಡೆಯಲ್ಲೆಲ್ಲಾ ಈ ರೀತಿಯ ಘಟನೆಗಳು ನಡೆಯಲೇ ಬೇಕೆಲ್ಲಾ!!!) ವ್ಯಂಗ್ಯ ಮತ್ತು ಕುಹಕಗಳು ಬೌದ್ದಿಕ ದೌರ್ಬಲ್ಯವನ್ನಲ್ಲದೆ ಮಾನವೀಯತೆನ್ನು ತೋರಿಸುವುದಿಲ್ಲ. ತಾವು ಕನ್ನಡ ಉಪನ್ಯಾಸಕರೆಂಬುದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಜ್ಞಾನವನ್ನು ಚರ್ಚೆಗಿಡಿ ಅದನ್ನು ಚಪ್ಪಲಿಯ ಮಟ್ಟಕ್ಕೆ ಇಳಿಸಬೇಡೆ ಅದು ತಮ್ಮ ಮಾನವೀಯತೆಗೆ ಮತ್ತು ಜ್ಞಾನಕ್ಕೆ ನೀವೇ ಮಾಡಿಕೊಳ್ಳುವ ಅಪಮಾನ
        ಷಟ್-ಮುಖ

        ಪ್ರತಿಕ್ರಿಯೆ
        • ಹುಲಿಕುಂಟೆ ಮೂರ್ತಿ

          ಸಿದ್ಧಾಂಥವಾದಿಗಳಿಗೂ ನೋವಾಗುತ್ತದೆ ಎನ್ನುವುದು ಗೊತ್ತಾಯಿತು. ನಾನು ಕನ್ನಡ ಉಪನ್ಯಾಸಕನಾದರೂ ಇಲ್ಲಿ ತಮ್ಮ ಹಾಗೆ ‘ತರ್ಕ’ಕ್ಕಾಗಿ ಮಾತಿಗಿಳಿಯಲಿಲ್ಲ. ನನ್ನ ‘ಚಪ್ಪಲಿ ಜ್ಞಾನ’ವನ್ನು ಸಂಶೋಧಿಸಿದ ತಮಗೆ ಅದು ಅರ್ಥವಾಗದಿದ್ದ ಕುರಿತು ನನಗೆ ವಿಷಾದವಿದೆ. ತಮ್ಮಲ್ಲೊಂದು ತಪ್ಪು ತಿಳಿವಳಿಕೆ ಇದೆ ಅದು, ‘ಕಂಬಾಲಪಲ್ಲಿ, ವಣೆನೂರು, ಬೆಂಡಗೇರಿ…’ಗಳು ನನ್ನ ಊರುಗಳಲ್ಲ ಎಂಬುದು; ತಾವು ಕ್ಷಮಿಸಬೇಕು ಅವೂ ನನ್ನ ಊರುಗಳೇ. ನೀವು ಮತ್ತು ಶಂಕರಪ್ಪ ‘ಇದೆ ಎಂದು ಭಾವಿಸಲಾದ ಜಾತಿವ್ಯವಸ್ಥೆ’ ಹಾಗೆ ಭಾವಿಸಿರುವುದಲ್ಲ; ನಿಜಕ್ಕೂ ಇರುವುದು ಎಂದು ನಾವು ತೋರಿಸಿಕೊಟ್ಟರೆ ಅದ್ಯಾಕೋ ತಮಗೆ ಕೆಂಡದಂತ ಕ್ವಾಪ..? ವ್ಯಂಗ್ಯ ಮತ್ತು ಕುಹಕಗಳು ಸಹ ಮಾನವ ವರ್ತನೆಯ ಭಾಗಗಳೇ ಎಂಬುದನ್ನು ನಾನು ಚಾಪ್ಲಿನ್, ನೆರೂಡ, ತೇಜಸ್ವಿ ಮೊದಲಾದ ಮಾನವರಿಂದ ಕಲಿತ್ದು ಎಂದು ನಿಮಗೆ ಹೇಳಲು ಪ್ರಯತ್ನಿಸಿದರೆ ಅದು ನನ್ನ ದಡ್ಡತನವಾದೀತು. ‘ಗುರುತ್ವಾಕರ್ಷಣೆ ಇರುವೆಡೆಯಲ್ಲಾ ಘನವಸ್ತುಗಳನ್ನು ಮೇಲೆ ಎಸೆದರೆ ಕೆಳಗೆ ಬೀಳುತ್ತದೆ ಮತ್ತು ಬೀಳಲೇಬೇಕು ಹಾಗೆಯೇ ಜಾತಿವ್ಯವಸ್ಥೆ ಇರುವೆಡೆಯಲ್ಲೆಲ್ಲಾ ಈ ರೀತಿಯ ಘಟನೆಗಳು ನಡೆಯಲೇ ಬೇಕೆಲ್ಲಾ..’ ಅಯ್ಯಯ್ಯಪ್ಪಾ.. ಜಾತಿ ವ್ಯವಸ್ಥೆಯನ್ನು ಹೀಗೆ ಸಮರ್ಥಿಸುವ ತಮ್ಮ ಸಂಶೋಧನಾ ಪ್ರಜ್ಞೆಗೆ ಇಡೀ ದಲಿತ ವರ್ಗವೇ ತಲೆದೂಗಬೇಕು..

          ಕೊನೆಯದಾಗಿ ನನ್ನ ಜ್ಞಾನವನ್ನು ‘ಚಪ್ಪಲಿ’ಗೆ ಹೋಲಿಸಿದ್ದಕ್ಕೆ ತುಂಬುಹೃದಯದ ಧನ್ಯವಾದಗಳು.. ಬಸವಣ್ಣನ ತಲೆಯ ಮೇಲೆ ಮೆರೆಯುವ ಚಾನ್ಸು ಕೊಟ್ಟಿದ್ದೀರಿ.. ನಿಮ್ಮ ಹತಾಶೆಗೆ ನನ್ನ ವ್ಯಂಗ್ಯ ಮತ್ತು ಕುಹಕ ಕಾರಣವಾಗಿದ್ದರೆ ನೀವು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದೀರಿ..

          ಧನ್ಯವಾದಗಳು

          ಪ್ರತಿಕ್ರಿಯೆ
  14. Shankarappa

    ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರಿಗೂ,

    ಈ ಚರ್ಚೆಯನ್ನು ಇಲ್ಲಿಗೆ ಮುಗಿಸುವುದು ಸೂಕ್ತವೆನಿಸುತ್ತದೆ. ಏಕೆಂದರೆ, ಚರ್ಚಯು ಚರ್ಚಿತ ವಿಷಯನ್ನು ಬಿಟ್ಟು ವ್ಯಕ್ತಿಗತವಾಗುತ್ತಿರುವುದು. ಅಂದರೆ ಒಂದು ಘಟನೆಯ ಬಗ್ಗೆ ಈಗಾಗಲೆ ಕೊಟ್ಟ ವಿವರಣೆಗಳಲ್ಲಿಂದಾಗುತ್ತಿರುವ ಒಳ್ಳೆಯ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತಾಡುತಿದನ್ನು ಮತ್ತು ಚರ್ಚೆಯ ಸರಿ-ತಪ್ಪುಗಳನ್ನು ಗುರುತಿಸುತ್ತಿವುದನ್ನು ಬಿಟ್ಟು, ಹೀಗೆ ವಿಚಾರ ಮಾಡುವವರನ್ನೇ ತರಾಟೆಗೆ ತೆಗೆದುಕೊಳ್ಳುವುದು ಚರ್ಚಿಸುವವರ ಸೂಕ್ತ ಮಾರ್ಗವಲ್ಲ.

    ಧನ್ಯವಾದಗಳೊಂದಿಗೆ…

    ಶಂಕರಪ್ಪ

    ಪ್ರತಿಕ್ರಿಯೆ
  15. ಸಿ ಪಿ ನಾಗರಾಜ

    ಶ್ರೀ ಷಣ್ಮುಖ ಅವರಿಗೆ ,
    ” ಯಾವಾಗ ಕಾಲೇಜು ಶಿಕ್ಷಣದ ಹಂತದಲ್ಲಿ ಪ್ರಗತಿಪರವೆನಿಸುವ ಮತ್ತು ದಲಿತ ಚಿಂತನೆಗಳೆಂದೆನಿಸುವ ಬರವಣಿಗೆಗಳನ್ನು ಓದಲು ತೊಡಗಿದನೋ ಮೇಲ್ಜಾತಿಯವರು ಮುಖ್ಯವಾಗಿ ಬ್ರಾಹ್ಮಣರನ್ನು ದ್ವೇಷಿಸುವುದು ನನಗರಿವಿಲ್ಲದಂತೆಯೆ ನನ್ನಲ್ಲಿ ಬೆಳೆಯತೊಡಗಿತ್ತು.” — ನೀವು ಓದಿದ್ದನ್ನು ಸರಿಯಾಗಿ ತಿಳಿದುಕೊಂಡಿದ್ದರೆ , ಬ್ರಾಹ್ಮಣರನ್ನು ದ್ವೇಷಿಸುವುದಕ್ಕೆ ಬದಲಾಗಿ , ನನ್ನನ್ನು , ನಿಮ್ಮನ್ನು ಮತ್ತು ಹಿಂದು ಸಮಾಜದ ಎಲ್ಲರನ್ನೂ ಒಳಗೊಂಡಂತೆ ಮೇಲು-ಕೀಳಿನ ಹಂತದಲ್ಲಿ ಜೋಡಿಸಿರುವ ಜಾತಿ ವ್ಯವಸ್ಥೆಯ ಬಗ್ಗೆ ನಿಮ್ಮ ಆಕ್ರೋಶ ವ್ಯಕ್ತವಾಗುತ್ತಿತ್ತು . ಹುಟ್ಟಿನಿಂದ ಮೈಗೆ ಅಂಟಿಕೊಂಡಿರುವ ಜಾತಿಯೊಂದರ ಕಾರಣದಿಂದಲೇ ಸಾವಿರಾರು ವರ್ಷಗಳಿಂದ
    ದಲಿತರು ವಿದ್ಯೆ , ಅಧಿಕಾರ ಮತ್ತು ಸಂಪತ್ತಿನಿಂದ ವಂಚಿತರಾಗಿದ್ದರು ಎಂಬ ” ಹಿಂದು ಸಮುದಾಯದ ಸಾಮಾಜಿಕ ಇತಿಹಾಸ ” ನಿಮ್ಮ ಮನಕ್ಕೆ ತಟ್ಟದಿದ್ದರೆ , ನೀವು ಹೇಗೆ ತಾನೆ ಇಂದು ದಲಿತರು ಅನುಭವಿಸುತ್ತಿರುವ ಯಾವುದೇ ಬಗೆಯ ನೋವನ್ನು ಅರಿತುಕೊಳ್ಳಲು ಮತ್ತು ದಲಿತರ ಬಗ್ಗೆ ಸಂಶೋಧನೆ ಮಾಡಲು ಸಾಧ್ಯ ?

    ” ಈ ರೀತಿಯ ಚರ್ಚೆ ಜಿಜ್ಞಾಸೆಯ ಮತ್ತು ಅರಿವಿನಿಂದ ನಿಲುವುಗಳನ್ನು ಹೊಂದುವುದಕ್ಕಾಗಿ ಮಾತ್ರವೇ ಅಲ್ಲ ಬದಲಿಗೆ ನಮ್ಮ ಕಣ್ಣಮುಂದೆ ಇರುವ ಒಂದು ಜ್ವಲಂತ ಸಾಮಾಜಿಕ ಪಿಡುಗಿಗೆ ಸರಿಯಾದ ಕಾರಣ ಮತ್ತು ಪರಿಹಾರವನ್ನು ಹುಡುಕುವ ತುಡಿತ ಮತ್ತು ಹುಡುಕಾಟ.” – ನಿಮ್ಮದೆಂದು ಹೇಳಿಕೊಂಡಿದ್ದೀರಿ . ನನ್ನ ನಿಲುವು ಮತ್ತು ನಾನು ಸೂಚಿಸುವ ಪರಿಹಾರಗಳೇ , ನಿಮ್ಮ ನಿಲುವು ಮತ್ತು ಪರಿಹಾರಗಳಾಗಬೇಕಿಲ್ಲ . ಏಕೆಂದರೆ ನಾವು ಹುಟ್ಟಿಬೆಳೆದ ಸಾಮಾಜಿಕ ಪರಿಸರ ಮತ್ತು ಈಗ ನಾವು ನಿಂತಿರುವ ಸಾಮಾಜಿಕ ನೆಲೆ ನಮ್ಮ ನಡೆನುಡಿಗಳನ್ನು ನಿರ್ದೇಶಿಸುತ್ತಿವೆ ಹಾಗೂ ನಿಯಂತ್ರಿಸುತ್ತಿವೆ .ಆದ್ದರಿಂದ ಇತರರ ವಿಚಾರಗಳನ್ನು ಒಪ್ಪುವ ಅಥವಾ ನಿರಾಕರಿಸುವ ಹಕ್ಕು ನಮಗಿರುತ್ತದೆ . ಆದುದರಿಂದಲೇ ನಿಮಗೆ ” ನನ್ನ ಮಟ್ಟಿಗೆ ಅಸ್ಪೃಶ್ಯತೆ, ಜಾತಿವ್ಯವಸ್ಥೆಗಳ ಕುರಿತ ಇದುವರೆಗಿನ ಸಿದ್ದಾಂತಗಳು ನಮ್ಮೆಲ್ಲರನ್ನು ದೇಷಾಸೂಯೆಯಕಡೆಗಲ್ಲದೆ ಸ್ವಾಸ್ತ್ಯ ಮತ್ತು ಸಮಾನ ಸಮಾಜದ ಕಡೆಗೆ ಮಾರ್ಗದರ್ಶನ ಮಾಡುತ್ತಿಲ್ಲ. ” ಎಂದೆನಿಸದರೆ ” ನನಗೆ ನಮ್ಮ ಕಣ್ಣಮುಂದಿನ ಸಮಾಜದ ಆಗುಹೋಗುಗಳನ್ನು ಸುಮ್ಮನೆ ನೋಡುತ್ತಿದ್ದರೆ ಸಾಕು ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ .” ಎಂದೆನಿಸುತ್ತದೆ .

    ಪ್ರತಿಕ್ರಿಯೆ
  16. ಷಣ್ಮುಖ

    <>
    <>
    <>
    <>

    ಉಲ್ಲೇಖಿತ ಈ ನಿಮ್ಮ ನಿಲುವುಗಳೂ ಮತ್ತು ಮೇಲಿನ ಚರ್ಚೆಯಲ್ಲಿನ ಎಲ್ಲಾ ನಿಲುವುಗಳಿಗೆ ಅಂಬೇಡ್ಕರಾದಿಯಾಗಿ ಇಂದಿನವರೆಗೆ ನೀಡಿದ ದಲಿತ “ಸಿದ್ದಾಂತ”ಗಳನ್ನೇ ಆದರಿಸಿರುವುದು ಎದ್ದು ಕಾಣುತ್ತದೆಯೇ ಹೊರತು “ಕಣ್ಣುಮುಂದಿನ ಸಮಾಜದ ಆಗುಹೋಗುಗಳನ್ನು ಸುಮ್ಮನೆ ನೋಡಿ”ದ್ದರಿಂದಲ್ಲ. ಈ ನಿಮ್ಮ ನೋಟಗಳು ಇರುವ ಸಿದ್ದಾಂತದ ಕಣ್ಕಟ್ಟಲ್ಲಿ ಮುಳುಗಿರುವಾಗ ಈ ಸಿದ್ದಾಂತಗಳನ್ನು ಪುನರಚಿಸುವ ಮತ್ತು ಬೆಳೆಸುವ ನಮ್ಮ ಪ್ತಯತ್ನ ಏಕೋ ನಿಮಗೆ ಅಜೀರ್ಣವಾಗುತ್ತಿದೆ. (ಇದೊಂದು ರೀತಿಯಲ್ಲಿ ಇರುವ ಸಿದ್ದಾಂತಗಳು ಮತ್ತು ಅದರಿಂದ ಬಂದಿರುವ ಪರಿಹಾರಗಳು ದಲಿತರ ಸಮಸ್ಯೆಗಳನ್ನು ಪರಿಹರಸದೆ ಹೆಚ್ಚಿಸುತ್ತಿದ್ದರೂ ಅದೇ ವಿವರಣೆಗಳೇ ಸರಿ ಎಂದು ಅಪ್ಪಿಕೊಂಡು ಅದನ್ನು ಪುನರ್ ವಿಮರ್ಶಿಸುವ ಯಾವುದೇ ಪ್ರಯತ್ನ ಇವರಿಗೆ ಮಗ್ಗಲ ಮುಳ್ಳಾಗುತ್ತಿದೆ) ಇದನ್ನು ನೋಡಿದರೆ ನನಗೆ “ಅಟ್ಟ ಹತ್ತಿದ ಮೇಲೆ ಏಣಿ ಒದ್ದಂತೆ” ಎಂಬ ಗಾದೆ ನೆನಪಾಗುತ್ತಿದೆ. ಇನ್ನು ಮುಂದೆ ಇಲ್ಲಿ ಈ ಚರ್ಚೆಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ನನ್ನ ಚರ್ಚೆಯನ್ನು ಇಲ್ಲಿಗೇ ಮುಗಿಸುತ್ತಿದ್ದೇನೆ.

    ಧನ್ಯವಾದಗಳು

    ಪ್ರತಿಕ್ರಿಯೆ
  17. ಸಿ ಪಿ ನಾಗರಾಜ

    ಶ್ರೀ ಷಣ್ಮುಖ ಅವರಿಗೆ ,
    ನೀವು ಚರ್ಚೆಯಲ್ಲಿ ಭಾಗವಹಿಸದಿದ್ದರೂ , ನಾನು ನಿಮ್ಮೊಡನೆ ಚರ್ಚೆಯನ್ನು ಮುಂದುವರಿಸುತ್ತಿದ್ಧೇನೆ . ಚರ್ಚೆಯ ಮುಕ್ತಾಯದ ಹಂತದಲ್ಲಿ ನೀವು ಹೇಳಿರುವ ” ಈ ಸಿದ್ದಾಂತಗಳನ್ನು ಪುನರಚಿಸುವ ಮತ್ತು ಬೆಳೆಸುವ ನಮ್ಮ ಪ್ತಯತ್ನ ಏಕೋ ನಿಮಗೆ ಅಜೀರ್ಣವಾಗುತ್ತಿದೆ. ಅದನ್ನು ಪುನರ್ ವಿಮರ್ಶಿಸುವ ಯಾವುದೇ ಪ್ರಯತ್ನ ಇವರಿಗೆ ಮಗ್ಗಲ ಮುಳ್ಳಾಗುತ್ತಿದೆ ” ಎಂಬ ಬರಹವನ್ನು ಓದಿ ತುಂಬಾ ಬೇಸರವಾಯಿತು . ನನ್ನಂತವರು ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂತಹ ಮತ್ತು ಮಗ್ಗುಲಿಗೆ ಹೂವಾಗುವಂತಹ ಸಿದ್ಧಾಂತಗಳನ್ನು ಇನ್ನು ಮುಂದೆ ನೀವು ಮಂಡಿಸುವಂತಾಗಲಿ ಎಂದು ಹಾರೈಸುತ್ತೇನೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: