ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ಧ ಮಾದರಿ ತುಂಡರಿಸಿದ 'ರಾಮಾ ರಾಮಾ ರೇ'

shivakumar-mavali

ಶಿವಕುಮಾರ ಮಾವಲಿ 

ಇತ್ತೀಚಿಗೆ ಯಾವುದೋ ಚಿತ್ರ ಬಿಡುಗಡೆಯಾದ ಮರು ದಿನ ‘ಜೋಗಿ’ಯವರು ಒಂದು ಮಾತು ಬರೆದಿದ್ದರು. ‘ ನಿರ್ದೇಶಕ ಕೇಳಿದಷ್ಟು ದುಡ್ಡು ನಿರ್ಮಾಪಕರು ಕೊಟ್ಟು, ಅವರು ಒಂದು ಹಾಡಿಗಾಗಿ ನಾಲ್ಕಾರು ದೇಶಗಳನ್ನು ಸುತ್ತಿ ಕೋಟಿ ಹಣ ಖರ್ಚು ಮಾಡಿ, ಮೂರು ರೂಪಾಯಿಯ ಪೆನ್ನು ಮತ್ತು ಹಾಳೆಯ ಬೆಲೆಯನ್ನೇ ಮರೆಯುತ್ತಿದ್ದಾರೆ ” ಎಂದು.

ಇತ್ತೀಚಿನ ಕೆಲ ಸಿನಿಮಾಗಳನ್ನು ನೋಡಿದಾಗ ಅದು ನೂರಕ್ಕೆ ನೂರು ಸತ್ಯವೂ ಹೌದು ಎನ್ನಿಸದಿರದು. ಆದರೆ ಪೆನ್ನು ಮತ್ತು ಹಾಳೆಯ ಮೌಲ್ಯವನ್ನು ಕಡೆಗಣಿಸದಿರದವರು ಕತೆಗೆ, ಹೊಸ ಕ್ಯಾನ್ ವಾಸ್ ಗೆ ಬೆಲೆ ಕೊಟ್ಟವರು ಚಿತ್ರಗಳು ಗೆಲ್ಲುತ್ತಿವೆ.

a-rama-re1ಹೀರೋಯಿನ್, ಹೀರೋಯಿಸಂ, ರೌಡಸಂ, ಐಟಮ್ ಸಾಂಗ್ ಗಳಿಲ್ಲದ ಸಿನಿಮಾಗಳನ್ನು ಈಗ ಯಾರ್ರೀ ನೋಡ್ತಾರೆ ಅನ್ನುವವರು ಅಜ್ಞಾನಿಗಳಷ್ಟೇ.

ಇತ್ತೀಚಿನ ಹೊಸಬರ ಚಿತ್ರಗಳನ್ನು ನೋಡಿದಾಗ ಕತೆ, ಚಿತ್ರಕತೆ ಮತ್ತು ನಿರೂಪಣಾ ಶೈಲಿಯಿಂದಲೇ ಚಿತ್ರಗಳು ಗಮನ ಸೆಳೆಯುತ್ತಿವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಎಂದರೆ ಸತ್ಯಪ್ರಕಾಶ್ ಅವರ ” ರಾಮಾ ರಾಮಾ ರೇ”.

ಇದು ಜರ್ನಿಯೊಂದರಲ್ಲಿ ವಿವಿಧ ಪಾತ್ರಗಳೊಂದಿಗೆ ನಡೆಯುವ ಕೆಲ ನಾಟಕೀಯ ಬೆಳವಣಿಗೆಗಳ ಕತೆ ಎಂದುಕೊಂಡರೆ ಅದರಲ್ಲಿಯೂ ಶ್ರೇಷ್ಠತೆಯಿದೆ. ಕತೆಯನ್ನು ಹೆಣೆದಿರುವ ರೀತಿಯೇ ವಿಭಿನ್ನವಾಗಿದೆ. ಮರಣದಂಡನೆಗೆ ಗುರಿಯಾದ ವ್ಯಕ್ತಿಯೊಬ್ಬ ತಪ್ಪಿಸಿಕೊಂಡು ಗುರಿಯಿಲ್ಲದೆ ಸುತ್ತುವಾಗ ಓರ್ವ ‘ಫಾಸಿ’ ಯ ಜೊತೆಯಲ್ಲೇ ಪ್ರಯಾಣ ಆರಂಭಿಸುತ್ತಾನೆ. ಈ ನಡುವೆ ಮಾರ್ಗದಲ್ಲಿ ಅವರಿಗೆ ಎದುರಾಗುವ ಅನೇಕರು ಕತೆಗಳೂ ಮುಖ್ಯ ಕತೆಗೆ ಚೆನ್ನಾಗಿ ಜೋಡಿಸಲ್ಪಟ್ಟಿವೆ.

“ಟಾಲ್ಸ್ಟಾಯ್ ” ನ ಕತೆಯೊಂದರಲ್ಲಿ ಮರಣದಂಡನೆ ವಿಧಿಸಿದ ಖೈದಿಯೋರ್ವನಿಗೆ ಅದನ್ನು ಜಾರಿಗೆ ತರಲು ಸರ್ಕಾರದಿಂದ ಸಾಧ್ಯವಾಗದ ಕಾರಣ ಅವನನ್ನು ಹಾಗೆಯೇ ಜೈಲಿನಿಂದ ಹೊರಕಳಿಸಿ,ಜೊತೆಗೆ ಪಿಂಚಣಿ ಸವಲತ್ತನ್ನು ಆತನಿಗೆ ನೀಡಲಾಗುತ್ತದೆ. ಆ ಕತೆ ಮರಣದಂಡನೆಗೆ ಗುರಿಯಾದ ವ್ಯಕ್ತಿಯೋರ್ವನ ಮಾನಸಿಕ ಸ್ಥಿತಿಯನ್ನು ಮಾತ್ರವಲ್ಲದೆ ,ನಮ್ಮ ನ್ಯಾಯದಾನ ಪದ್ಧತಿಯ ಬಗ್ಗೆ ಕೂಡ ವಿಮರ್ಶೆ ಮಾಡುವ ಕತೆ.

ಅದೇ ರೀತಿ ಈ ಸಿನಿಮಾದ ಕತೆ ಕೂಡ ಇಂತಹ ಖೈದಿಯೊಬ್ಬನೆಡೆ ಸಾಗುತ್ತದೆ. ನಾನು ಕತೆ ಹೇಳಾರೆ ದಯಮಾಡಿ ಸಿನಿಮಾ ನೋಡಲಾರೆ. ಒಂದು ವಿಶಿಷ್ಟ ಅನುಭವ ನಿಮ್ಮದಾಗುತ್ತದೆ. ಕೆಲವು ಅನೂಹ್ಯ ಮತ್ತು ಅವ್ಯಕ್ತವಾದ ಅನುಭವಗಳನ್ನು ಪಡೆಯಬಹುದು. ಸಿನಿಮಾ ನಿರ್ಮಾಣದ ಸಿದ್ಧ ಮಾದರಿಗಳನ್ನು ತುಂಡರಿಸಿ, ಸರಳ ಆದರೆ ಶಕ್ತಿಯುತ ಕತೆಗಳನ್ನು ಜನ ನಿಧಾನಕ್ಕಾದರೂ ಕೈ ಹಿಡಿದೇ ಹಿಡಿಯುತ್ತಾರೆ ಎಂಬುದಕ್ಕೆ ಹೊಸ ಸೇರ್ಪಡೆ ” ‘ರಾಮಾ ರಾಮಾ ರೇ’

Music is soothing … second half nodlebekagiddu ಹಾಗಾಗಿ ಫಸ್ಟ್ ಹಾಫ್ ನು ನೋಡಲೇಬೇಕು. Watch and then write .

Congrats to the team .. Let your creativity unleash many more potentials ..

rama-rama-re3

‍ಲೇಖಕರು Admin

28 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading