ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ಧರಾಮ ಕೂಡ್ಲಿಗಿ ಹೊಸ ಕವಿತೆ- ನನ್ನದೊಂದು ಆಸೆ…

ಸಿದ್ಧರಾಮ ಕೂಡ್ಲಿಗಿ

ನಾನೊಂದು ಚುಕ್ಕೆಯಾಗಬೇಕು
ಆಗದಿದ್ದರೇನಂತೆ ಕೊನೆಗೆ
ಬೆಳಕ ನೀಡುವ ಪುಟ್ಟ ಹಣತೆಯ ಬತ್ತಿಯಾಗಬೇಕು

ನಾನೊಂದು ಹೆಮ್ಮರವಾಗಬೇಕು
ಆಗದಿದ್ದರೇನಂತೆ ಕೊನೆಗೆ
ಕಾಲಡಿಯಲಿ ನಗುವ ಪುಟ್ಟ ಹೂವಾಗಬೇಕು

ನಾನೊಂದು ತೇಲುವ ಮೋಡವಾಗಬೇಕು
ಆಗದಿದ್ದರೇನಂತೆ ಕೊನೆಗೆ
ಗರಿಕೆಯ ತುದಿಯಲಿ ಮಿನುಗುವ ಇಬ್ಬನಿಯಾಗಬೇಕು

ನಾನೊಂದು ಚಂದಿರನಾಗಬೇಕು
ಆಗದಿದ್ದರೇನಂತೆ ಕೊನೆಗೆ
ಕಾಡಲಿ ಮಿನು ಮಿನುಗುವ ಮಿಂಚು ಹುಳುವಾಗಬೇಕು

ನಾನೊಂದು ಸಾಗರವಾಗಬೇಕು
ಆಗದಿದ್ದರೇನಂತೆ ಕೊನೆಗೆ
ದಾರಿಹೋಕರ ದಾಹ ತಣಿಸುವ ಝರಿಯಾಗಬೇಕು

ನಾನೊಂದು ಕೋಗಿಲೆಯಾಗಬೇಕು
ಆಗದಿದ್ದರೇನಂತೆ ಕೊನೆಗೆ
ಮಗುವಿನ ತುಟಿಯಂಚಿನ ಮುಗ್ಧ ನಗುವಾಗಬೇಕು

‍ಲೇಖಕರು Admin

24 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading