ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಕ್ಕಾಯಿತು ಬೇಟೆಯ ಜಾಗ..

-ಡಾ.ರವಿಶಂಕರ್ ಎ.ಕೆ

ಬಳಸು ಬೇಟೆಗಾರ!

ಬಳಸು ಹಾದಿಯಲಿ ಬಂದ
ಒಬ್ಬ ಮರಸು ಬೇಟೆಗಾರ
ತನ್ನೆಲ್ಲಾ ಬೇಟೆಗಳನೂ
ಬಳಸಲ್ಲೇ ಆಡುವನು.

ಎಲ್ಲವನೂ ಕಾಣಿಸುವನು
ಹೆಂಡ ಕುಡಿಸುವನು,
ಭೂಮಿಯಾದರು ಕಳೆದು ಲೆಕ್ಕ ಹೊಂದಿಸುವನು
ರಾತ್ರಿಗಳಲ್ಲೇ ಎದ್ದು, ಹೊಗಳಿ,
ಕೈಕಾಲಿಡಿದು ದಾಸನಾಗುವನು
ಇವನಿಗೆ ಕಾಣುವುದೊಂದೆ ಸುಖದ ಪಂಚಾಗ ಲೆಕ್ಕ.

ಸಿಕ್ಕಾಯಿತು ಬೇಟೆಯ ಜಾಗ
ಅವನೆ ಕಾಡಿಗೆ ಶೂರ ಧೀರ,
ರಾಜ ಗಂಭೀರ..
ಎಲ್ಲರೂ ಅವನ ಕಂಡರೆ ಗೌರವ, ಭಯ
ಅವನೇ ಎಲ್ಲಾ ಪದವಿಗೂ ಅಧಿಪತಿ
ತರಬೇತಿಗಳ ಸಂಚಾಲಕ
ಖಾಲಿ ತಲೆಗೆ ಕೈಕಾಲಡದೆ
ಕಲಿಯುವವರ ಮಾಂತ್ರಿಕ ಮಹಾಶಯ.

ಕೊನೆಯ ಕಂಡು ತಣ್ಣಗಾಗುವನು
ಒಳಿತುಗಳನ್ನೇ ಮಾಡುತ್ತಾ
ಅಭಿಮಾನದ ದೇವರಾಗುವನು
ಈಗ ಅವನಿಗೆ ಸಾವಿನ ಚಿಂತೆ
ಬೇಟೆಗಾರನ ಮನೆಯಲ್ಲಿ ಆಯುಧಗಳಿಲ್ಲ
ಇದ್ದರೂ ತುಕ್ಕಿಡಿದ ಮೊಂಡು ಮೊನೆಯು
ನಾಳೆಯನ್ನೂ ಬರೆಯದ ಬೇಸಾಯಕೆ,

ಇಂದೇ ಸಸಿ ನೆಡುವ
ಮನೋ ವೈದ್ಯರಿಗೆ ಇದು ಕಾಲವಲ್ಲ.

‍ಲೇಖಕರು Admin

26 May, 2026

1 Comment

  1. ಪುಷ್ಪ. ಕೃಷ್ಣಯ್ಯ

    ಇಂದಿನ ಸಮಾಜದ ಸ್ವಾರ್ಥ ಮತ್ತು ಅವಕಾಶವಾದಿ ಸಮಾಜದಲ್ಲಿ ಮನುಷ್ಯ ತನ್ನ ಏಳಿಗೆಗಾಗಿ ಯಾವ ರೀತಿಯ ಕಾರ್ಯಗಳನ್ನು ಮಾಡಲು ಸಿದ್ಧ ಎಂಬುದನ್ನು ಕವಿತೆಯು ಹಿಡಿದಿಟ್ಟಿರುವುದು ಅದ್ಭುತ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading