ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಂಪ್ಲಿ ಎಂಜಾಯ್ ಮಾಡಿ: ಸ್ಮಶಾನದಲ್ಲೂ ಜಿಪಿಎಸ್

ಇಲ್ಲಿ ಗೋರಿಗಳಿಲ್ಲ: ಹೆಣ ಹೂತ ಜಾಗ ಹುಡುಕೋದು ಜಿಪಿಎಸ್ ನೆರವಿನಿಂದ!

gravestones

ಸತ್ತ ಮೇಲೆ, ಹೆಣವನ್ನು ಹೂಳಿ, ಅದರ ಮೇಲೊಂದು ಗೋರಿ ಕಟ್ಟಿ, ಅದಕ್ಕೆ ಗ್ರಾನೈಟ್ ಶಿಲೆ ಹೊದಿಸುವುದು ತುಂಬಾ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ.  ಆದರೆ, ತಂತ್ರಜ್ಞಾನ ಸತ್ತವರನ್ನೂ ಬಿಡಲಿಕ್ಕಿಲ್ಲ ಅನ್ನಿಸುತ್ತದೆ.

ಅಕೇಶಿಯ ರಿಮೆಂಬರನ್ಸ್ ಸ್ಯಾಂಕ್ಚುರಿ ಎನ್ನುವ ಸಿಡ್ನಿಯ ಪ್ರದೇಶವೊಂದು ಇನ್ನು ಗೋರಿಗಳಿಂದ ಮುಕ್ತವಾಗುವತ್ತ ಚಿಂತನೆ ನಡೆಸಿದೆ. ಇಲ್ಲಿ ಇನ್ನು ಹೆಣವನ್ನು ಹೂಳಲು  ಜಾಗವನ್ನು ನೀಡಲಾಗುತ್ತದೆ ಅಷ್ಟೇ.

ಗೋರಿ ಕಟ್ಟುವ ಹಾಗಿಲ್ಲ.  ನಿಮ್ಮ  ಪ್ರೀತಿ ಪಾತ್ರರನ್ನು ಎಲ್ಲಿ ಹೂಳಿದ್ದೀರಾ ಅಂತ ಜಿಪಿಎಸ್ ನೆರವಿನಿಂದ ತಿಳಿದುಕೊಳ್ಳಬಹುದು. ಸಿಡ್ನಿಯ ಹೊರವಲಯದ ೨೫ ಎಕರೆ ಜಾಗದಲ್ಲಿ ಈ ರೀತಿ  ಮಾಡಿ ನೋಡಲು ಯೋಚನೆ ನಡೆಸಿದೆ.

‍ಲೇಖಕರು avadhi

15 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading