’ಸಾ ದೆವ್ವ ಇರೋದು ದಿಟುವಾ ಸಾ?’

ನಿಮ್ಮ ಜೊತೆ ಯವಾಗ್ ಮಾತಾಡಿದ್ರು ಒಳ್ಳೆ ವಿಚಾರ ಮೂಡ್ತಾವೆ

– ವಿಜಯ್ ಕುಮಾರ್ ನಂದಿ


 
ಏನೋ ರಮೇಶ ನಿಮ್ಮ ಊರಿನ ಮಾರಮ್ಮನ ಉತ್ಸವದಲ್ಲಿ ಕಿತ್ತಾಡಿಕೊಂಡು ಕೋಳೀ ಸಾರು ಎಲ್ಲಾ ಚೆಲ್ಲಿಬಿಟ್ಟರಂತೆ. ಹಹಹಹ!
ನಿಮಿಗ್ಯಾರು ಸಾ ಹೇಳಿದ್ದು?!
ನೆನ್ನೆ ಧರಣಿ ಮಾರಮ್ಮನ ಉತ್ಸವ ಇದೆ ಸಾ ಅಂತ ಬಂದು ಕೇಳಿಕೊಂಡು ಹೋಗಿದ್ದ. ಹೇಗಾಯ್ತೋ ಹಬ್ಬ ಅಂತ ಬೆಳಗ್ಗೆ ಕೇಳಿದಾಗ ಸಾ ಊಟನೇ ಸಿಕ್ಕಲಿಲ್ಲ ಸಾ ಜಗಳ ಮಾಡಕಂಡು ಕೋಳೀ ಸಾರು ಎಲ್ಲಾ ಚೆಲ್ಲಿಬಿಟ್ಟ್ರು ಸಾ ಅಂದ.
ಸಾ ನಮ್ಮೂರಗೆ ಮಟ್ಟನ್ ಗೂ ಕಿತ್ತಾಡಲ್ಲ ಸಾ. ಮಟ್ಟನ್ ಇರ್ಲಿ ಹಂದಿಗೂ ಕಿತ್ತಾಡಕುಲ್ಲ ಕಳ್ಳಾ. ಮಟ್ಟನ್ ನೀವೆಲ್ಲಿ ಮಾಡ್ತೀರ ಗೊತುಲ್ವ ನಮಗೆ. ನಿಮ್ದು ಏನುದ್ರುವೆಯಾ ಕೋಳಿನೆಯಾ.
ಸಾ ತೆಕ್ಕಂಡಿರ್ತಾರೆ ಅದಕ್ಕ ಇದೆಲ್ಲ ಆಗ್ತೈವೆ ಸಾ.
ಸಾ ಇವ್ರೂರಗೆ ಚಿಕ್ ಚಿಕ್ ಇಸಿಯಿಕ್ಕೆ ಕಿತ್ತಾಡ್ ಸಾಯ್ತವೆ ಸಾ.
ವೂ ಸಾ ಅವ್ನ್ಯಾರವ ದುಡ್ಡ ಎತ್ಕಂಡಿ ಬಂದವ್ನೆ ಅದಕ್ಕೆ ರೌಡಿಗಳೆಲ್ಲ ಬಂದು ಅವ್ನ ಮನೇರ್ಗೆಲ್ಲ ಹೊಡ್ದು ಓಗೌರೆ ಸಾ. ಅವ್ನು ಇಲ್ಲಕೆ ಇಲ್ಲ.
ಏನು ರೌಡಿಗಳಾ ! ದುಡ್ಡು !….
ಏ ಸಾ ಅವ್ನಾರವ ಕುರಿ ಕಾಯಕ್ಕೆ ಅಂತವಾ ಓಗೌವ್ನೆ ಇಂಗೆಯಾ ಕುರಿ ಬಿಟ್ಕಂಡಿ ಕುಂತವ್ನೆ ಸೇತ್ವೆ ಕೆಳ್ಗೆ ಚೀಲ ಕಂಡೈತೆ ಏನಿಬೈ೯ದು ಅಂತ ನೋಡೌವ್ನೆ ದುಡ್ಡು! ಆಮೇಕೆ ಯಾರ್ಗೂನುವೆಯಾ ಗೊತ್ತಾಗ್ದಂಗೆ ಮಂಗೆ ತಂದಿಕ್ಕ್ಯಂಡವ್ನೆ. ಕುಡಿಯಾಕೆ ಓದಾಗ ಏನ್ಲಾ ೫ ರೂಪಯಿ ೧೦ ರೂಪಾಯಿ ತತ್ತಿದವ ಈ ನಾಡಿ ಐನೂರವೆ ತಂದಿಯಾ ಅಂದವ್ನೆ ಕುಡ್ದು ನಸೇಲಿ ಇಂತವೇಸಿಲ್ಲ ನಂತವಾ ಅಂದವ್ನೆ. ಅದಕ್ಕುಯಾ ಇನ್ನೊಬ್ಬ ಇವ್ರ ಮನೇಲಿ ಬಾಗ್ಲ ಅಕ್ಕೆಂಡಿ ನೋಟಾ ಎಣಿಸಾದ ನಾನೆ ನೋಡಿವ್ನಿ ಅಂದವ್ನೆ ಕುಡ್ದು ತಡ್ಕಳಕಾಗ್ದೆಯಾ ಊ ಕಳ ಏನ್ಲ ಈಗ ಅಂದವ್ನೆ. ದುಡ್ಡಿರೋ ಇಸಿಯಾ ರೌಡಿಗಳ್ಗೂ ತಲ್ಪಯ್ತೆ ಅವರು ಬಂದವ್ರೆ ಇವ್ನಾಟತ್ಕೆಯಾ ಇಲ್ಲ ಮನೇರ್ಗೆ ಒಡ್ದು ತಿಪ್ಪೆನೆಲ್ಲವಾ ಬಗ್ದು ನೋಡ್ಬೇಂಕಾಯಿತ್ತು ಸಾ.
ದುಡ್ಡು ಸಿಗಲಿಲ್ವ? ಇಲ್ಲ ಸಾ. ಎದ್ರಿಸಿ ಓಯಿದ್ರು ಅಟೊತ್ಕಯಾ ಊರೇ ಬಿಟ್ಟೊಯಿದ್ರು. ಎಲ್ಡು ಲಾಂಗು ಇಲ್ಲೆಯಾ ಬಿಟ್ಟೋಗೌವ್ರೆ. ಸಾ ಫಿಲ್ಮನಾಗೆ ಇತಾ೯ವಲ್ಲ ಸಾ ಈಟೂದ್ದ ಅವೆ.
ದುಡ್ಡಿಗೋಸ್ಕರ ಊರೇ ಬಿಟ್ಟೋದ್ರು.
ನಮ್ಮ ಮಾಮ್ನೂವೆ ಒಂದ ಲಾಂಗ್ ತಂದವ್ನೆ ಬೆಂಗ್ಳೂರಿಂದ.
ಏನುಕ್ಕಪ!
ಹುಷಾರು ಕಳಾ ನೀನೂವೆಯಾ ಇಡ್ಗಿಡ್ಕಂಡು ಓಗೀಗಿಯಾ!
ನಮ್ಮೂರಗೆ ಅಂಗೆಲ್ಲ ಇಲ್ಲ ಸಾ. ಏನುದ್ರುವೆ ಬರಿ ದೆವ್ವ ಬಿಡಿಸೋದು.
ಊಃ ಮೈನ್ಸು ಅತ್ರ ಐತಲ್ಲ ಸಾ. ಅಲ್ಲಿಂದ ಬತ್ತವೆ ಸಾ ದೆವ್ವ ಈಇಹಿಹಿಹಿ….
ಸಾ ದೆವ್ವ ಇರೋದು ದಿಟುವಾ ಸಾ?
ನೀವ್ ನಂಬತೀರಾ ಸಾ?
…………………….
…………………….
ಮೈನ್ಸ್ ತಾವಾ ಯಾರೂ ಒಬ್ಬೊಬ್ಬರೆ ಓಡಾಡಕಿಲ್ಲ ಸಾ. ನೀವ್ ನಂಬಾಕಿಲ್ವ ಸಾ?
ನಾನೂ ನಿಮ್ಮ ವಯಸ್ಸಿನೋವ ಇದ್ದಾಗ ರಜೆ ಬಿಟ್ಟಾಗ ಊರಿಗೆ ಹೋಗ್ತಿದ್ದೆ. ನಮ್ಮ ಮುತ್ತಜ್ಜಿ ಊರು ಅದು. ಆಕಡೆ ಎಲ್ಲಾ ಬೇಸಿಗೇಲಿ ಹೊರಗಡೆ ಮಲ್ಗ್ತಾರೆ. ಮನೆ ಊರ ಹೊರಗಿದೆ. ಅಲ್ಲಿ ಹತ್ರನೇ ಅಂದ್ರೆ ಒಂದು ೧೫೦ ಮೀಟರಿನ ದೂರದಲ್ಲಿ ಒಂದು ಬಿದ್ದೋಗಿರೋ ಒಂದು ರೂಂಮ್ ಇತ್ತು. ಬಿದ್ದೋಗಿರೋದು ಅಂದ್ರೆ ಸಂಪೂರ್ಣ ಅಲ್ಲ. ಛಾವಣಿ ಸುಸ್ಥಿತಿಯಲ್ಲೇ ಇತ್ತು. ಎಲ್ಲ ದೆವ್ವ ಇದೆ ಅಂತಿದ್ರು ಅಲ್ಲಿ. ಯಾರು ಏನೆ ಅಂದ್ರು ಇವತ್ತು ನಾವು ಹೊರಗೆ ಮಲಗೋದೆ ಬತ್ರಿರ್ ಯೋ ಇಲ್ವಪ್ಪ ಇವತ್ತು ಎಂದಿದ್ರು ನಮ್ಮ ಮುತ್ತಜ್ಜಿ. ದೆವ್ವದ ಕತೆ  ಗಿತೆ ಸಂಪೂರ್ಣ ಗೊತ್ತಿರದ ನಾನು ನಮ್ಮ ಮುತ್ತಜ್ಜಿ ಇಬ್ಬರೂ ಹೊರಗೆ ಮಲಗಿದ್ವಿ. ಸುಮಾರು ಎರಡು ಘಂಟೆ ಹೊತ್ತು ನಮ್ಮ ಮನೇ ನಾಯಿ ಬೊಗುಳೋಕೆ ಶುರು ಮಾಡಿತ್ತು. ಗಲಾಟೆಗೆ ಎಚ್ಚರವಾಗಿ ಎದ್ದೆ. ನನ್ನ ಮುತ್ತಜ್ಜಿಗೆ ಅಮ್ಮ ಅಂತಲೇ ಕರೀತ ಇದ್ದ ನಾನು ಅಮ್ಮ ನಾಯಿ ಯಾಕೋ ಆ ಹಳೇ ಮನೆಕಡೆ ನೋಡಿಕೊಂಡು ಬೊಗುಳ್ತಾ ಇದೆ ಅಂದೆ. ಯಾರಾದ್ರು ಇಟ್ಕಂಡಿರೋರು ಪಟ್ಕೊಂಡಿರೋರು ಹೋಗಿರ್ತಾರೆ ನೋಡಿರುತ್ತೆ ಬೊಗುಳ್ತಾ ಇರುತ್ತೆ ಮಲ್ಕೋ ಸುಮ್ನೇಅಂತ ಹೇಳಿ ಮಲಗಿ ಬಿಟ್ರು.

ನನಗೆ ಮತ್ತೆ ನಿದ್ದೆ ಹತ್ತಲಿಲ್ಲ. ಬೆಳಿಗ್ಗೆ ಸುಮಾರು ೪ ಘಂಟೆ ಹೊತ್ತು ಹುಚ್ಚೆ ಉಯ್ಯೋದಿಕ್ಕೆ ಎದ್ದೆ. ಉಯ್ಯುತಾ ನಿಂತಾಗ ಒಂದು ಹೆಂಗಸು ಆ ಮನೆ ಕಡೆಯಿಂದ ಊರ ಕಡೆಗೆ ಹೊರಟಳು. ಸೀರೆ ಸೆರಗು ತಲೀ ಮುಚ್ಚಿ ಹೊದ್ದಿದ್ಲು. ಹಾಗೆ ಆಕೆನ ನೋಡ್ತ ಒಂದು ನಿಮಿಷ ಆಗಿರ ಬಹುದು ಅದೇ ಮನೆ ಕಡೆಯಿಂದ ಒಬ್ಬ ಗಂಡಸು ಕೂಡ ಹೊರಟ. ಅವರಿಬ್ಬರೂ ಮರೆ ಆಗೋತನಕ ನೋಡ್ತಾ ಇದ್ದನಾದ್ರು ದೆವ್ವದ ಕಥೆ. ಅಜ್ಜಿ ಹೇಳಿದ ಮಾತುಗಳೂ ಎಲ್ಲವನ್ನೂ ತಾಳೆ ಹಾಕಿ ಸತ್ಯ ಹುಡುಕ್ತಾ ಇತ್ತು.
ಓ. ಅಂಗಾರೆ ಇಂಗೂ ಇರ್ಬೈದು…..
ಏಯ್ ಹೆಚ್ ಎಮ್ ಕೇಳ್ಕಂಡು ಮನೆಗೆ ಹೋಗ್ರಲೇ. ಇಲ್ಲೇನು ಮಾತಾಡಿರಾ. ಮನಿಗೆ ಹೋಗಿ ಓದ್ಕಾಳಿ.
ಜೊತೆಗೆ ನಿಂತು ಮಾತಾಡೋದ್ನ ಸಹಿಸೋಕ್ಕಾಗ್ದೆ ಇನ್ನೊಬ್ಬ ಶಿಕ್ಷಕರು ಬಂದು ಸಿಟ್ಟು ಪ್ರದಶಿ೯ಸಿ ಹೋದ್ರು. ಒಳ್ಳೇ ಚಾಟ್ ಆಯಿತು ಸಾ. ನಿಮ್ಮ ಜೊತೆ ಯವಾಗ್ ಮಾತಾಡಿದ್ರು ಒಳ್ಳೆ ವಿಚಾರ ಮೂಡ್ತಾವೆ.          ಬತ್ತಿವಿ ಸಾ.
ಬಾಯ್ ಸಾ.
 

‍ಲೇಖಕರು avadhi

April 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: