ಸಾವ ಗುರುತು ಬರೆಯಲಾಗದು…

ಟಿ ಪಿ ಉಮೇಶ್

ಮಸಣದ ಮುಳ್ಳು ಹಾದಿಯ ನಡಿಗೆ ಬಲು ಕಠಿಣವೆಂದು;
ಒಂದು ದಿನ ಅಲ್ಲಿದ್ದಿರಬಹುದಾದ ಸುಖದ ಮನೆಗೆ
ಇಲ್ಲೇಚೀರುತ್ತ ಸಂಕಟ ಪಡುವುದನ್ನು! ಬರೆಯಲಾಗದು!

ತೋಟ ಮಾಡುವುದು ಬಲು ಕಷ್ಟವೆಂದು;
ಗುಲಾಬಿ ಮೂಸುತ್ತಾ ಮುಳ್ಳಿರಲೇಬೇಕಾದ ಸತ್ಯವನ್ನು
ಮರೆಮಾಚಿ ಕಥೆ ಕಟ್ಟುವುದನ್ನು! ಬರೆಯಲಾಗದು!

ಪಾರಿವಾಳಗಳ ಪಂಜರದಲ್ಲಿ ಸಾಕುವುದು ರೇಜಿಗೆಯೆಂದು!
ಹಸಿದ ಹದ್ದುಗಳಿಗೆ ಮಾಂಸ ಉಣಿಸುತ್ತಾ
ಕಾವಲಿಗಿಟ್ಟಿರುವುದನ್ನು! ಬರೆಯಲಾಗದು!

ಗೂಗಲ್‌ ಅರ್ಥ್ ಲ್ಲಿ ಭೂಮಿ ಕಾಣುವುದು ಖುಷಿಯೆಂದು;
ಫೈರಿಂಗ್ ಬಂದೂಕಿಡಿದ ಸತ್ತ ತೋಳಗಳ ಮುಂದೆ
ಬಿಳಿ ಬಾವುಟ ಹಾರಿಸಿ ಸಂಭ್ರಮಿಸುವುದನ್ನು! ಬರೆಯಲಾಗದು!

ಆಹಾ ಓಹೋ… ಉಸಿರಾಡಿದಷ್ಟು ಸರಾಗವಲ್ಲವೆಂದು;
ಗಡಿಯಿರುವುದು ನನಗಷ್ಟೇ ಅಲ್ಲ
ಮುರಿಯಬೇಕೆಂಬುವರ ಕಾಣದಾ ಎದೆಯೊಳಗೂ
ಇರಬೇಕಾದ ಅಗತ್ಯತೆಯನ್ನು! ಬರೆಯಲಾಗದು!

ನಕ್ಷತ್ರಕಂಡು ನಿಟ್ಟುಸಿರ ಬಿಟ್ಟಷ್ಟು ನಿಸೂರಲ್ಲವೆಂದು;
ಯಾರದ್ದೋ ಬಲದಿಂದಲೇ ಎಲ್ಲರೆಲ್ಲರ ಉಸಿರು
ಹಿತಕರವಾಗಿ ಊಳಿಡುತ್ತಿರುವುದನ್ನು! ಬರೆಯಲಾಗದು!

ಪ್ರಾರ್ಥನೆಗಳ ಉಲ್ಲಂಘಿಸಿದಷ್ಟು ಬದುಕು ಬಿಡಲಾಗದೆಂದು;
ಗೋರಿಗಳ ಅಡಗಿಸಿಡುವ ಭೂಮಿ ಇನ್ನು
ಹುಟ್ಟಲಾರದೆನ್ನುವುದನ್ನು! ಬರೆಯಲಾಗದು!

ಹುಟ್ಟಿನಷ್ಟೇ ಸಿರಿಯಲ್ಲದ ಸಾವ ಗುರುತು ಬರೆಯಲಾಗದೆಂದು;
ಗರ್ಭದೊಳಗೆ ಧರ್ಮ ಮಾರುವ ದೇವರೆಂದೂ
ಸಾಯಲಾರದೆನ್ನುವುದನ್ನು! ಬರೆಯಲಾಗದು!

‍ಲೇಖಕರು Admin

September 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕೊಟ್ರೇಶ್ ಅರಸೀಕೆರೆ

    ತುಂಬಾ ಚೆಂದದ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: