ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿತ್ರಿ ಶ್ಯಾನುಭಾಗ್ ಓದಿದ ‘ಆಕ್ರಮಣ’

-ಸಾವಿತ್ರಿ ಶ್ಯಾನುಭಾಗ್

ಪುಸ್ತಕ: ಆಕ್ರಮಣ

ಲೇಖಕರು : ಅನಂತ ಕುಣಿಗಲ್

ಬೆಲೆ: ೧೫೦

ಪುಟ: ೧೪೪

ಪ್ರಕಾಶನ: ಅವ್ವ ಪುಸ್ತಕಾಲಯ

ಗುಡ್ ರಾಂಬೊ ಮತ್ತು ಬ್ಯಾಡ್ ರಾಂಬೊ ಎಂಬ ಎರಡು ಕ್ಯಾರಾಕ್ಟರಗಳು ಆಸ್ಮಾ ಎಂಬ ಪತ್ರಕರ್ತೆಗೆ ಸಹಾಯ ಮಾಡುತ್ತಾ ಒಂದೊಂದೇ ಹೊಸ ಹೊಸ ವರದಿಗಳನ್ನು ನೀಡುತ್ತಾ ಆ ವರದಿ‌ ನೈಜವಾಗಿ ಸೆನ್ಸೇಷನ್ ಮಾಡುವುದರೊಂದಿಗೆ,ಶಕ್ತಿ ಮೀಡಿಯಾದ ಜನಪ್ರಿಯತೆಯನ್ನು ಹೆಚ್ಚಿಸುವುದರೊಂದಿಗೆ ಜನರಲ್ಲಿ ಹೊಸ ಜಾಗೃತಿ ಮೂಡಿಸಿ ರಾಜಕೀಯ ಬದುಕಿನಲ್ಲಿ ಸಾಗುವ ಲಂಚಾವತಾರ,ಸರ್ಕಾರಿ‌ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆ ತೆರೆಯುವ ಹೊಸ ವ್ಯವಹಾರಗಳನ್ನು ನಿಲ್ಲಿಸಲು ಹೊಸ ಪ್ರಯತ್ನ ಮಾಡುವ ಜೆಜೆಎಸ್ ತಂಡ ನಮ್ಮನ್ನೂ ಆಕ್ರಮಣ ಮಾಡುವಂತಹ ‘ಆಕ್ರಮಣ’ ಕಾದಂಬರಿಯ ಕುರಿತು ನಾನು ಹೇಳುವಂತವಳಾಗುತ್ತೇನೆ.

ಹಳ್ಳಿಯಿಂದ ಬೆಂಗಳೂರಿಗೆ ಬಂದು ನಾಟಕದ ಅಲ್ಪಸ್ವಲ್ಪ ಜ್ಞಾನ ಹೊಂದಿದ್ದರೂ ರಾಂಬೊ ಎಂಬ ಪಾತ್ರದೊಂದಿಗೆ ಒಂದು ನಾಟಕ ಮಾಡಿ ಬಹು ಪ್ರಸಿದ್ಧಿ ಪಡೆದು,ಶೇಕ್ಸ್‌ಪಿಯರ್‌ ನಾಟಕಗಳನ್ನು ಮಾಡುತ್ತ,ತನ್ನಂತೆ ಇತರ ರಾಂಬೊ‌ರನ್ನು ಸೃಷ್ಟಿ ಮಾಡಿ ಹೊರಗಿನ‌ ಜಗತ್ತಿಗೆ  ನಿಜ ರಾಂಬೊ ಯಾರು ನಕಲಿ ಯಾರು ಎಂದು ತಿಳಿಯದಿರುವಷ್ಟು ಚೆನ್ನಾಗಿ ನಟಿಸಿ,ತನ್ನ ಐಡೆಂಟಿಟಿಯನ್ನು ಅಡಗಿಸುವಂತೆ ವೇಷ ಧರಿಸಿ ನಾಟಕದಿಂದ ಬಂದ‌ಹಣವನ್ನು ಅನಾಥ ಮಕ್ಕಳ, ವೃದ್ಧಾಶ್ರಮಕ್ಕೆ ತಲುಪಿಸುವ ಉದಾರ ಗುಣ ರಾಂಬೊವಿನದ್ದು.

ಕೊನೆಯಲ್ಲಿ ನಾಟಕ ಮಾಡುತ್ತಾ ಗುಂಡಪ್ಪ ತನ್ನಿಬ್ಬರೂ ಸಂಗಡಿಗರಿಗೆ ಅವರು ಹೊಸಬರಾದರೂ ಅವರಿಗೆ ಉತ್ತಮ ತರಬೇತಿ ನೀಡಿ ನಾಟಕ ಮಾಡಿಸುತ್ತಾ ಹಳ್ಳಿಯಲ್ಲಿ ಜನಜಾಗೃತಿ ಮೂಡಿಸುತ್ತಾ ಗೌಡರ ಮಗಳ ಸೀತೆಯ ಕ್ಯಾಮರಾದಲ್ಲಿ ಸೆರೆಯಾಗಿ,ಶಕ್ತಿ ಮೀಡಿಯಾ ದಲ್ಲಿ ವರದಿ ನೀಡುವ ವರದಿಗಾರ್ತಿಗೆ ಅಸಲಿ ರಾಂಬೊ‌ ಸಿಕ್ಕನೇ?ನೀವು ಕಾದಂಬರಿ ಓದಿಯೇ ನೋಡಬೇಕು.ರಾಂಬೋ‌ನೊಂದಿಗೆ ಬರುವ ಮುಗ್ಯಾಂಬೊ ಕೂಡ ನಿಮ್ಮೊಂದಿಗೆ ಖುಶ್ ಹೋಗಯಾ ಎನ್ನದಿರೆ ನನ್ನ ಕೇಳಿ.

ಅಲ್ಲಲ್ಲಿ ಜ್ಞಾನಪೀಠ ವಿಜೇತ ಗಿರೀಶ್ ಕಾರ್ನಾಡ,ಕಂಬಾರರ ಕವಿತೆಗಳನ್ನು ನೆನಪಿಸಿಕೊಂಡಿರುವುದು ಕಾದಂಬರಿಯ ವಿಶೇಷತೆ.ಎರಡೂ ಕಾದಂಬರಿಯ ನಂತರದ ಅಧ್ಯಾಯ ಎಂದು ಹೇಳಿದ್ದರೂ ಮೊದಲೆರಡು ಕಾದಂಬರಿಯನ್ನು ನಾನಿನ್ನೂ ಓದಿಲ್ಲವಲ್ಲ ಎಂಬ ಕೊರತೆಯನ್ನು ನೀಗಿಸುವಂತೆ ಈ ಕಥೆಗಳನ್ನು ಓದಿಸಿಕೊಂಡು ಹೋಯಿತು ಎಂದರೆ ಎರಡು ಮಾತಿಲ್ಲ.ಬೇಗನೇ ನಾನು ಈ ಕಥಾಸರಣಿಗಳ ಮೊದಲೆರಡು ಅಧ್ಯಾಯವನ್ನು ಓದುವುದರಲ್ಲಿ ಆಸಕ್ತನಾಗಿರುವೆ.ನೀವೂ ಇದನ್ನೊಮ್ಮೆ ಓದಿ ಹೇಳಿ.

‍ಲೇಖಕರು avadhi

2 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading