ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸಾವಕಾಶವಾಗಿ ಉರಿಯಿರಿ, ತುಸುವೇ…’ ಎಂ ಎಸ್ ರುದ್ರೇಶ್ವರಸ್ವಾಮಿ ಕವಿತೆ

– ಎಂ ಎಸ್ ರುದ್ರೇಶ್ವರಸ್ವಾಮಿ

(…He looked at her, her heart is filled with love. They were

together and disappeared early in the morning)

ಇರುಳು ಜಾರಿದೆ
ಸೆರಗು ಹಾಸಿ…
ಉರಿಯುತ್ತಿವೆ ಹಚ್ಚಿಟ್ಟ ಜೋಡಿ-
ಹಣತೆ. ಮೆಲ್ಲಗೆ
ಹೇಳುತ್ತಿದೆ ಹೆಣ್ಣು
ಗಂಡು ದೀಪ-
ಕ್ಕೆ, ತುಸು ಹೊತ್ತು ಇರಿ ಸುಮ್ಮನೆ
ಮನೆಯಾಕೆ ಈಗತಾನೆ
ಕಣ್ಣುಮುಚ್ಚಿದ್ದಾಳೆ, ಆವರಿಸಿಲ್ಲ
ಅವಳನ್ನು ಇನ್ನೂ
ನಿದ್ರೆ, ಹೇಳಿಕೊಳ್ಳದ ಮಾತು ಇವೆ
ಅವಳೆದೆಯಲ್ಲಿ
ಒಂಟಿ ನಕ್ಷತ್ರ ಇದ್ದ
ಹಾಗೆ ಆಗಸದಲ್ಲಿ.
ಗೊತ್ತು ನನಗೆ, ಹೇಳಿತು ಗಂಡು
ದೀಪ. ಗಾಳಿ ಮೆಲ್ಲಗೆ
ಬೀಸಿದರೂ ಎಲ್ಲ
ತಿಳಿಯುತ್ತದೆ,
ಅವಳೆದೆ ಒಡೆದು ಹೋಗಿದೆ.
ಅಷ್ಟು ದೂರದ
ಮಾತು ನೆನಪಿಗೆ ಬಂದು
ಹೆಣ್ಣು ಹೇಳಿತು
ಸಾವಕಾಶವಾಗಿ ಉರಿಯಿರಿ, ತುಸುವೇ
ನನ್ನತ್ತ ಬಾಗಿ
ಜೊತೆಗೆ ಉರಿಯೋಣ
ಜೊತೆಗೇ
ಇನ್ನಿಲ್ಲದಂತೆ ಇಲ್ಲವಾಗೋಣ…
 

‍ಲೇಖಕರು G

6 July, 2015

8 Comments

  1. noorullathyamagondlu

    ತುಂಬ ಚೆಂದದ ಅಭಿವ್ಯಕ್ತಿ.

  2. Nagarathna Suresh

    Nice

  3. mmshaik

    tumbaa istavaayitu kavite..nice

  4. Rohini Satya

    Kavana maarmikavaagide. Chennaagide sir!

  5. Narendra

    Beautiful!

  6. mahesh kalal

    sir nice ….

  7. Anil Talikoti

    ತುಂಬಾ ಚೆನ್ನಾಗಿದೆ

  8. ಎಂ.ಎಸ್. ರುದ್ರೇಶ್ವರಸ್ವಾಮಿ

    ಪದ್ಯ ಓದಿ, ಇಷ್ಟಪಟ್ಟ ಮತ್ತು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಜೊತೆಗೆ ಪದ್ಯ ಪ್ರಕಟಿಸಿದ ‘ಅವಧಿ’ ಮತ್ತು ಶ್ರೀಮತಿ ಸಂಧ್ಯಾ ರಾಣಿ ಅವರಿಗೆ ಕೃತಜ್ಞತೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading