ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕೇನು ಪುಟಗಳಲಿ ಮುದ್ರಿಸಿದರೆ?

ಕವಿತ್ವ ಆವುದು???

ಚೈತ್ರ ಶಿವಯೋಗಿಮಠ 

ಸಾಕೇನು ನಾಲ್ಕಕ್ಷರಗಳ
ಪೇರಿಸಿದರೆ?
ಕವಿತ್ವವೆನಿಸುವುದದು ಮನದಾಳದಿಂದ
ಪ್ರೇರಣೆ ಇದ್ದರೆ!!

ಸಾಕೇನು ಪುಟಗಳಲಿ
ಮುದ್ರಿಸಿದರೆ?
ಕವಿತ್ವವೆನಿಸುವುದದು ಓದುಗೋದುತಲಿ
ನಿದ್ರಿಸದೆ ಇದ್ದರೆ!!!

ಸಾಕೇನು ರೂಪಕಗಳ
ಬಳಸಿದರೆ?
ಕವಿತ್ವವೆನಿಸುವುದದು ಬಳಸಿದೋದುಗನ
ಮನ ಮುಟ್ಟಿದರೆ!!

ಸಾಕೇನು ಪ್ರಾಸ
ಬದ್ಧವಿದ್ದರೆ?
ಕವಿತ್ವವೆನಿಸುವುದದು ಪದಪುಂಜರ್ಥ
ಬದ್ಧವಾಗಿ ಇದ್ದರೆ!!

ನಾಲ್ಕೊ…ಐದೋ…
ಸಾಲಿದ್ದರೂ ಸಾಕು
ಕವಿತ್ವವೆನಿಸುವುದದು ಜೀವನದ-ಭಾವದ
ಸಾರವಿದ್ದರೆ

 

‍ಲೇಖಕರು avadhi

19 April, 2019

5 Comments

  1. Doddabadappa p

    ಕವಿತೆ ಅರ್ಥಪೂರ್ಣವಾಗಿದೆ.

    • Chaitra Shivayogimath

      ಧನ್ಯವಾದಗಳು ಸರ್

    • Chaitra Shivayogimath

      ಧನ್ಯವಾದಗಳು ಸರ್,

  2. Anand

    ಬಹಳ ಸೊಗೋಸಾಗಿ ಮೂಡಿದೆ

    • Chaitra Shivayogimath

      ಧನ್ಯವಾದಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading