ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಾಕವ್ವ' ಎಂಬ ಹೆಸರಿನ ಹಿಂದೆ..

ಸುರೇಶ್ ಮುಗ್ಬಾಳ್

ನೀವು ಸಾಕವ್ವ ಎಂಬ ಹೆಸರನ್ನು ಕೇಳಿರಬೇಕು.

ಈಗಿನವರು ಇಂತಹ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ ಬಿಡಿ!

ಅರ್ಥವೇ ಗೊತ್ತಿಲ್ಲದ ಅನೇಕ ಹೆಸರುಗಳು ನಿಮ್ಮ ಅಕ್ಕ-ಪಕ್ಕದ ಮನೆಯ ಮಕ್ಕಳಿಗೆ ನಾಮಕರಣವಾಗಿರುವುದನ್ನು ಗಮನಿಸಿರುತ್ತೀರಿ.

ನೀವೇನಾದರು ‘ಸಾಕವ್ವ’ ಎಂಬ ಹೆಸರಿನ ಅರ್ಥ “ಸಾಕುವವಳೇ ಸಾಕವ್ವ” ಎಂದು ತಿಳಿದಿದ್ದರೆ ನಿಮ್ಮ ಅಭಿಪ್ರಾಯ ತಪ್ಪು! ನಿಜ ಅರ್ಥ ಬೇರೆಯೇ ಇದೆ.

ಹೆಣ್ಣು ಮಗು ಕುಟುಂಬಕ್ಕೆ ಹೊರೆ ಎಂದು ತಿಳಿಯುತ್ತಿದ್ದ ನಮ್ಮ ಹಿರಿಯರು ಗಂಡು ಸಂತಾನಕ್ಕಾಗಿ ಕಾಯುತ್ತಿದ್ದರು. ಹೆಣ್ಣು ಭ್ರೂಣ ಹತ್ಯೆಗೆ ಕಾಸಿಲ್ಲದವರು ಹೆಣ್ಣು ಮಗು ಹುಟ್ಟಿದ ಮರು ಕ್ಷಣವೇ ಗುಂಡಿ ತೋಡಿ ಜೀವಂತ ಮುಚ್ಚಿಬಿಡುತ್ತಿದ್ದರು‌. ಮತ್ತೊಂದು ಸಂತಾನಕ್ಕಾಗಿ ಕಾಯುತ್ತಿದ್ದರು. ಮತ್ತೆ ಹೆಣ್ಣು ಸಂತಾನವಾದರೆ ಅದಕ್ಕೂ ಗುಂಡಿ ತೋರಿಸುತ್ತಿದ್ದರು. ಪದೇ ಪದೇ ಹೆಣ್ಣು ಸಂತಾನವಾದರೆ ಅನಿವಾರ್ಯ ಕಾರಣಗಳಿಗಾಗಿ ಕೆಲವು ಹೆಣ್ಣು ಮಕ್ಕಳನ್ನು ಉಳಿಸಿಕೊಂಡು ತಮ್ಮ ಸಂತಾನದ ಕೊನೆಯ ಹೆಣ್ಣು ಮಗುವಿಗೆ “ಸಾಕವ್ವ” ಎಂದು ಹೆಸರಿಡುತ್ತಿದ್ದರು‌.

ಈಗ ಗೊತ್ತಾಗಿರಬೇಕಲ್ಲವೇ ಸಾಕವ್ವನ ಹೆಸರಿನ ಅರ್ಥ? “ಹೆಣ್ಣು ಮಗು ಸಾಕವ್ವ” ಎಂಬ ಸಾಂಕೇತಿಕ ನಾಮವೇ ನಿಮ್ಮ ನಡುವೆ ಜೀವಿಸುತ್ತಿರುವ ಸಾಕವ್ವನ ನಿಜವಾದ ಕಥೆ.

‍ಲೇಖಕರು admin

6 May, 2017

3 Comments

  1. Kusumapatel

    ಸಾಲು ಸಾಲು ಹೆಣ್ಣು ಮಕ್ಕಳಾದಾಗ, ಗಂಡು ಮಗು ಬೇಕೆಂದು ಆಸೆ ಪಡುತ್ತಿದ್ದವರು ಮಗುವಿಗೆ ಸಾಕಮ್ಮ ಎಂದು ಹೆಸರಿಡುತ್ತಿದ್ದರೆಂದು ನಾನು ನನ್ನ ಹಿರಿಯ ರಿಂದ ತಿಳಿದಿರುವ ವಿಷಯ. ಇನ್ನು ಹುಟ್ಟಿದ ಹೆಣ್ಣು ಮಗು ವನ್ನು ಹೂತು ಬಿಡುತ್ತಿದ್ದರೆನ್ನುವುದು ನಾ ಕೇಳದೇ ಇಲ್ಲದ ಆಘಾತಕಾರಿ ಸಂಗತಿ. That says we are not progressive, rather retrogressive. Sad.

  2. Hussain pasha

    ಸಾವಿತ್ರಿ ಎಂಬ ಹೆಸರು ಕೂಡ ಇದೇ ಕಾರಣದ್ದು ಅಂತಾರೆ

  3. Sangeeta Kalmane

    ಹೆಣ್ಣು ಸಂತಾನ ಮತ್ತೆ ಹುಟ್ಟದಿರಲೆಂದು ಸಾಕವ್ವ ಎಂದು ಹೆಸರಿಡುತ್ತಿದ್ದರೆಂದು ಕೇಳಿದ್ದೆ
    ಆದರೆ ಹುಟ್ಟಿದ ಹೆಣ್ಣು ಸಂತಾನವನ್ನು ಹೂತು ಹಾಕುತ್ತಿದ್ದರೆಂಬುದು ತಿಳಿದು ಸಿಡಿಲು ಬಡಿದಂತಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading