ಒಹೋ.. ಸೈಟ್ ಕೊಳ್ಳೋದು ಇಷ್ಟೊಂದು ಈಸೀನಾ..

ನಾಗೇಶ್ ಕುಮಾರ್ ಸಿ ಎಸ್/ ಚೆನ್ನೈ​

 

ತಿಂಗಳಿಗೆ 300 ರೂ. ಖರ್ಚು ಮಾಡಿದರೆ ಸಾಕು!

ಬಹಳ ದಿನಗಳಿಂದ ಯೋಚಿಸುತ್ತಿದ್ದೀರೇನೋ..ನನ್ನದೂ ಒಂದು ಸೈಟ್ ಇದ್ದರೆ ಎಂದು?

ಹಾ?

 

ಯೋಚಿಸುವುದು ನಿಲ್ಲಿಸಿ, ಶುರು ಮಾಡಿಯೇ ಬಿಡಿ..!!

ಅದರಲ್ಲಿ ಏನೇನು ಘಟ್ಟಗಳಿವೆ ನೋಡೋಣ ಬನ್ನಿ:

 

. ಮೊದಲು ನೀವೊಂದು ನಿವೇಶನ/ತಾಣ ಹುಡುಕಬೇಕು…

———————————————————————-

ಇದಕ್ಕಾಗಿ ಪ್ರಪಥಮವಾಗಿ ನೀವು ವೆಬ್ ಹೋಸ್ಟಿಂಗ್ ಸರಬರಾಜುದಾರ ಸಂಸ್ಥೆಯ ಪ್ಲಾನ್ ಗಳನ್ನು ಪರೀಕ್ಷಿಸಬೇಕು.

ನಾವು ಪ್ರಪಂಚದ ಈಗಿನ ಅತ್ಯಂತ ಜನಪ್ರಿಯ ಅಂತರ್ಜಾಲ ವೇದಿಕೆಯಾದ ವರ್ಡ್ ಪ್ರೆಸ್ ಆರಿಸಿಕೊಳ್ಳೋಣ..

ಅಂತರ್ಜಾಲದ ಅರ್ಧಕ್ಕೂ ಹೆಚ್ಚಿನ ತಾಣಗಳು ಈ ವ್ಯವಸ್ಥೆಯನ್ನು ಬಳಸುತ್ತಿವೆ ಎಂಬ ದಾಖಲೆಗಳಿವೆ.

ಇದನ್ನು ಸಜ್ಜುಗೊಳಿಸುವುದು, ಕಾರ್ಯಪ್ರವರ್ತಗೊಳಿಸುವುದು ಸುಲಭ ಮತ್ತು ಅತಿ ಶೀಘ್ರ ಕೂಡಾ.

ನಾನು ನಿಮಗೆ ಇಂದು SiteGround  ಎಂಬ ಹೋಸ್ಟ್ ಸಂಸ್ಥೆಯ ವ್ಯವಸ್ಥೆಯನ್ನು ವರ್ಣಿಸುತ್ತೇನೆ, ಉದಾಹರಣೆಗಾಗಿ.

ಇದು ನನ್ನ ಆಯ್ಕೆ ಮತ್ತು ನಿಮಗಾಗಿ ನನ್ನ ಶಿಫಾರಸು ಕೂಡಾ!

 

ಈ ಸಂಸ್ಥೆಯ ಕೊಡುಗೆಯಲ್ಲಿ ಏನು ವಿಶೇಷ ಎನ್ನುತ್ತೀರೇನೋ?

ಇದೆ, ಯಾವುದೇ ಹೋಸ್ಟಿಂಗ್ ಕೊಂಡುಕೊಂಡರೆ, ನಿಮ್ಮ: ಮೊದಲ ಬೇಡಿಕೆ:-”ಅದರ ಡೊಮೈನ್ ಹೆಸರು ಅಲ್ಲವೆ?” ( ಅಂದರೆ ನಿಮ್ಮದೇ ಹೆಸರಿನ ಸೈಟು..ಯಾಹೂ.ಕಾಂ, ಹಾಟ್ ಮೈಲ್.ಕಾಂ ಅಥವಾ ನನ್ನ ಸೈಟಿನಂತೆ..ನಾಗೇಶ್ರೈಟ್ಸ್.ಕಾಂ.). ಅದನ್ನು ಅವರು ಉಚಿತವಾಗಿ ಕೊಡುತ್ತಿದ್ದಾರೆ, ಇಲ್ಲದಿದ್ದರೆ ಅನ್ಯರಿಂದ ಕೊಳ್ಳಬೇಕಾಗಿತ್ತು.

ಇವರ ಸಂಪರ್ಕ/ ಸರ್ವರ್ ವ್ಯವಸ್ಥೆ ಅಮೆರಿಕಾ, ಯೂರೋಪ್ ಅಲ್ಲದೇ ಏಷ್ಯಾದಲ್ಲೂ ಇದೆ..ನೀವಿರುವ ಸ್ಠಳಕ್ಕೆ ಹತ್ತಿರವಾಗುವಂತೆ., ಅದರಿಂದ ನಿಮ್ಮ ವೆಬ್ ಸೈಟ್ ಬಹಳ ಬೇಗನೆ , ತಡವಿಲ್ಲದೇ ಲೋಡ್ ಆಗುವುದು, ಅಂತರ್ಜಾಲ ಬ್ರೌಸರುಗಳಲ್ಲಿ ಕಾಣಿಸಿಕೊಳ್ಳುವುದು.

ಇನ್ನು ನಿಮಗೇನೂ ತೊಂದರೆಯಾಗದಂತೆ ಒಂದೇ ಕ್ಲಿಕ್ ಬಟನ್ ಒತ್ತಿ ವರ್ಡ್ ಪ್ರೆಸ್ ಸೈಟಿನ ವ್ಯವಸ್ಥೆಯನ್ನು ಸ್ಥಾಪಿಸಿ ನಿಮ್ಮ ಕೈಗೆ ರೆಡಿಮೇಡ್ ಆಗಿ ಕೊಡುತ್ತಾರೆ. ನಿಮಗೆ ಐ ಟಿ/ ಕಂಪ್ಯೂಟರಿನ ವಿಶೇಷ ಜ್ಞಾನವೇನೂ ಬೇಡ..ಸಾಮಾನ್ಯ ಜ್ಞಾನವಿದ್ದರೂ ಸಾಕು, ಮೊದಲಿಗೆ,

ನಿಮಗೆ ಮೊದಲೇ ನಿಮ್ಮ ಸೈಟ್ ಕಟ್ಟುವಾಗ ಏನಾದರೂ ತೊಂದರೆಯಾದರೆ ೨೪ ಗಂಟೆ x ೭ ದಿನವೂ ಅವರ ಜತೆ ಚ್ಯಾಟ್ ( ಸಂವಾದ) ಮಾಡಿ ತಕ್ಷಣ ನಿಮ್ಮ ಸಮಸ್ಯೆ/ ಅನುಮಾನ ಪರಿಹಾರ ಮಾಡಿಕೊಳ್ಳಬಹುದು. ನಾನು ಅವರೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ, ನಮ್ಮ ಕಷ್ಟ ಏನೇ ಇದ್ದರೂ ಬೇಗ ಅಲ್ಲಿಂದಲ್ಲೇ ಬಗೆಹರಿಸುತ್ತಾರೆ.

ಇದಕ್ಕಾಗಿಯೆ ಇವರಿಗೆ ಕೊಡುವ ದುಡ್ಡು ವ್ಯರ್ಥವಲ್ಲ ಎಂದು ನನಗನಿಸಿದ್ದು.!

 

ಕೆಲವರು ಕೇಳುತ್ತಾರೆ..

ನಾವು ವೆಬ್ ಸೈಟ್ ಕೊಳ್ಳಬೇಕಾಗಿದ್ದೇಕೆ? ಬರೆಯಲು ವರ್ಡ್ ಪ್ರೆಸ್.ಕಾಂ ಮತ್ತು ಬ್ಲಾಗರ್ ನಲ್ಲಿ ಉಚಿತವಾಗಿ ಎಲ್ಲರಿಗೂ ಬ್ಲಾಗ್ ಕೊಡುತ್ತಾರಲ್ಲ?

ಕಾರಣಗಳು ಹೀಗಿವೆ:

1.       ಅಲ್ಲಿ ನಿಮ್ಮ ಹೆಸರಿನ ಜತೆಗೆ ಅವರ ಸಂಸ್ಥೆಯ ಹೆಸರು ಬ್ಲಾಗ್ ಸ್ಪಾಟ್.ಕಾಂ ಮತ್ತು ವರ್ಡ್ ಪ್ರೆಸ್.ಕಾಂ ಎಂದು ಸೇರಿಸಿಬಿಡುತ್ತಾರೆ. ( ಉದಾ. ”ನಿಮ್ಮ ಹೆಸರು.ಬ್ಲಾಗ್ ಸ್ಪಾಟ್” ಅಥವಾ “ನಿಮ್ಮಹೆಸರು.ವರ್ಡ್ಪ್ರೆಸ್ಸ್” ( yourname.blogspot.com, yourname.wordpress.com ಇತ್ಯಾದಿ).

2.       ಅಲ್ಲದೇ ಸೀಮಿತ ( limited) ಅಧಿಕಾರ, ವಿನ್ಯಾಸ ಮತ್ತು ಅವರ ಜಾಹೀರಾತುಗಳನ್ನು ಮಾತ್ರ ನಿಮಗೆ ನಿಮ್ಮ ಉಚಿತ ಸೈಟಿನಲ್ಲಿ ಕೊಡುತ್ತಾರೆ.

3.       ನೀವು ನೇರವಾಗಿ ಅಂತಾ ಬ್ಲಾಗುಗಳಿಂದ ಹಣ ಸಂಪಾದನೆಯಾಗಲಿ,ಅದರ ವಿನ್ಯಾಸ, ವ್ಯವಸ್ಥೆಯ ಬದಲಾವಣೆಯಾಗಲಿ ಮಾಡುವಂತಿಲ್ಲ…ಅವರ ಜಾಹೀರಾತುಗಳನ್ನು ತೆಗೆಯುವಂತೆಯೂ ಇಲ್ಲ….

ಅದಕ್ಕಾಗಿಯೇ ನಾನು ಹೆಚ್ಚು ಸಂಶೋಧನೆ ಮಾಡಿ ಒಳ್ಳೆಯ ಹೋಸ್ಟ್ ಕಂಪನಿಯಾದ ಸೈಟ್ ಗ್ರೌಂಡ್ ಮೊರೆ ಹೊಕ್ಕಿದ್ದು. ಹಾಗೆಯೇ ಮಾರ್ಕೆಟ್ಟಿನಲ್ಲಿ ಹಲವಾರು ಕಡಿಮೆ ಬೆಲೆಯ ಹೋಸ್ಟ್ ಕಂಪನಿಗಳಿದ್ದಾವೆ, (ಅವುಗಳ ಹೆಸರನ್ನು ಹೇಳುವುದು ಬೇಡ) ಆದರೆ ಅವರ ಕಳಪೆ ಸೇವೆ, ಕೀಳು ಗುಣಮಟ್ಟದಿಂದ ನಾವು ಒಂದೆರಡು ವರ್ಷದ ಫೀಸ್ ಕಟ್ಟಿದ ನಂತರ ದುಡ್ಡು ಕೊಟ್ಟು ಕೈ ಸುಟ್ಟಿ ಕೊಳ್ಳಬಾರದು ಎಂದು ಹಲವು ಅನುಭವಿಗಳ ಸಲಹೆಯನ್ನು ನಾನು ಕೇಳಿದ್ದೇನೆ.

ವರ್ಡ್ ಪ್ರೆಸ್ ನಂತಾ ವಿಶ್ವವಿಖ್ಯಾತ ಜನಪ್ರಿಯ ವ್ಯವಸ್ಥೆಯ ಅಧಿಕೃತ ಹಾಗು ಶಿಫಾರಸು ( recommended) ಮಾಡಲ್ಪಟ್ಟ ಹೋಸ್ಟ್ ಸಂಸ್ಥೆ ಈ ಸೈಟ್ ಗ್ರೌಂಡ್ ಆಗಿದೆ..

ಇರಲಿ, ಮುಂದೆ ಹೋಗುವಾ!

ನೀವು ಹೊಸಬರಾದ್ದರಿಂದ, ನಿಮ್ಮ ಮೊದಲ ಸೈಟ್ ಇದಾಗಿರಬಹುದು..ಆದ್ದರಿಂದ ನೀವು ಚಿಕ್ಕದಾದ startup plan ಇಲ್ಲವೆ ಸ್ವಲ್ಪ ಧೈರ್ಯಮಾಡಿ growbig plan  ಆರಿಸಿಕೊಂಡರೆ ಸಾಕು. ಅದಕ್ಕೆ ತಕ್ಕ ಸೌಲಭ್ಯಗಳು ಮೇಲಿನ ಚಿತ್ರದಲ್ಲಿದೆ.. ಕಾಸಿಗೆ ತಕ್ಕ ಕಜ್ಜಾಯ ಅನ್ನುವಂತೆ, ಸ್ವಲ್ಪ ಹೆಚ್ಚು ಕಡಿಮೆಯಾಗುತ್ತದೆ..ಪರವಾಗಿಲ್ಲ, ಬಿಡಿ.

ಮೊದಲಿಗೆ ಒಂದು ವರ್ಷ ಅವಧಿಗೆ ಟೆಸ್ಟ್ ಮಾಡಿ ನೋಡುವಿರೋ..ಇಲ್ಲವೆ ಎರಡು ವರ್ಷವಾದರೂ ಇದರ ಮೇಲೆ ಕೆಲಸ ಮಾಡುತ್ತೇನೆ ಎನ್ನುವಿರೋ?.. ಅದೂ ನಿಮ್ಮಿಷ್ಟ.. ಒಂದರಿಂದ ಮೂರು ವರ್ಷದವರೆಗೆ ಆಯ್ದುಕೊಳ್ಳಬಹುದು.

ಮೊದಲ ಆಯ್ಕೆಗೆ ತಿಂಗಳಿಗೆ ಸುಮಾರು ನಾಲ್ಕು ಡಾಲರ್ (೩.೯೫) ಅಥವಾ ಎರಡನೆಯದಕ್ಕೆ ಆರು ಡಾಲರ್ (೫.೯೫) ಆಗುತ್ತದೆ.

ಮೊದಲನೆಯದಂತೂ ಮಾರ್ಕೆಟ್ಟಿನಲ್ಲಿ ಅತಿ ಕಡಿಮೆ ಬೆಲೆಯ ಪ್ಲಾನ್.( ತಿಂಗಳಿಗೆ ೪ ಡಾಲರ್, ಅಂದರೆ ೨೭೦/- ರೂ). ಹೊಸಬರಿಗೆ ಒಂದೇ ಬ್ಲಾಗ್ ಸೈಟ್ ಸಾಕಪ್ಪ ಎನ್ನುವವರಿಗೆ…

ಎರಡನೆಯ ಪ್ಲಾನ್ ಸ್ವಲ್ಪ ಹೆಚ್ಚು ಆಶೋತ್ತರಗಳನ್ನು ಇಟ್ಟುಕೊಂಡು ಸ್ವಲ್ಪ ಹಣ ಸಂಪಾದನೆಯನ್ನು ಹೆಚ್ಚು ಕಾಲ ಟ್ರೈ ಮಾಡೋಣ, ಎರಡು ಮೂರು ಸೈಟ್ ಕಟ್ಟೋಣ…ಎಂದಿರುವವರಿಗೆ ( ತಿಂಗಳಿಗೆ ೩೩೦/- ರೂ ಅಷ್ಟೇ)
ನನ್ನ ಸಲಹೆ ಬೇಕಾದರೆ: ಒಂದು ವರುಷದ ಗ್ರೋ ಬಿಗ್ ಪ್ಲಾನ್ ಕೊಳ್ಳಿರಿ..ನಾನು ಅದನ್ನೆ ಇಲ್ಲಿ ಉದಾಹರಣೆಯಾಗಿ ತೆಹೆದುಕೊಂಡಿದ್ದೇನೆ. ಅವರೇ ಬೆಲೆಯಲ್ಲಿ ೬೦% ವಿನಾಯತಿ ಕೊಟ್ಟಿದ್ದಾರೆ!..ಆದರೆ ಮೊದಲ ಬಾರಿಗೆ ಕೊಳ್ಳವಾಗ ಮಾತ್ರ ಈ ವಿನಾಯ್ತಿ..ಹಾಗಾಗಿ ಈಗ ಮೊದಲೇ ಕೊಳ್ಳುವುದು ಉಚಿತ; ನಾವು ಹಣ ಉಳಿಸಬಹುದು!

ನೀವು ನಿಮ್ಮ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಲ್ಲಿ ಕೊಂಡರೆ ಅದೇ ಡಾಲರಿಗೆ ತಕ್ಕ ಭಾರತೀಯ ರೂಪಾಯಿಗೆ ವಿನಿಮಯ ರೇಟಿನಂತೆ ಬದಲಾಯಿಸಿಕೊಳ್ಳುತ್ತದೆ, ನಮಗೇನೂ ತಲೆ ನೋವಿಲ್ಲ.

ನಾನು ಇದರ ಪ್ರಕಾರ ಒಂದು ವರ್ಷದ ಬಾಡಿಗೆ ಮತ್ತು ಐ ಡಿ ಪ್ರೊಟೆಕ್ಷನ್ ಮತ್ತು ಡೊಮೈನ್ ಅಪ್ ಗ್ರೇಡ್ ಎಂಬ ಎರಡು ಮುಖ್ಯ ಅಧಿಕ ವ್ಯವಸ್ಥೆಯೂ ಸೇರಿಸಿ ಮೊತ್ತ ೬೦೦೦ ರೂ. ಕೊಟ್ಟಿದ್ದೇನೆ.

ಇದಕ್ಕೆ ನನಗೆ ದೊರೆತ ಅಮೂಲ್ಯ ಸೌಲಭ್ಯಗಳೆಂದರೆ:

ಮೊದಲನೆ ಪ್ರೊಫೆಶನಲ್ ವೆಬ್ ಸೈಟ್ ಮಾಲೀಕನಿಗೆ ಸಾಕಾಗುವಷ್ಟು ಅವರೇ ಕೊಟ್ಟುಬಿಟ್ಟಿದ್ದಾರೆ. ನಮಗೇ ಬಿಟ್ಟರೆ ಇದೆಲ್ಲಾ ಹೊಳೆಯುತ್ತಲೇ ಇರಲಿಲ್ಲವೇನೋ!

ನಿಮ್ಮ ಇಮೈಲ್ ಮತ್ತು ಪ್ರವೇಶಪದ ಪಾಸ್ವರ್ಡ್ ಮೂಲಕ ನಿಮ್ಮ ಖಾತೆ ತೆರಿಯಿರಿ.

 

ಅಲ್ಲಿ ನಿಮ್ಮ ಖಾತೆ ತೆರೆದು, ಇ ಮೈಲ್ ಮತ್ತು ಪ್ರವೇಶ ಪದ ಕೊಟ್ಟು ಹಣ ಪಾವತಿ ಮಾಡುವ ಪುಟಗಳಿವೆ..ಅಲಿಇ ನಿಮ್ಮ ವಿವರಗಳನ್ನು ದಾಖಲಿಸಿಕೊಳ್ಳಿ.

ಇನ್ನು ನೀವು GrowBig plan ಕೊಳ್ಳಲು ಮುಂದಾಗಿರಿ ಅಂದುಕೊಳ್ಳಿ ಮುಂದೆ. ಕಾರ್ಡ್ ಮೂಲಕ ಹಣ ಸಲ್ಲಿಸಿ, ಅದರಲ್ಲಿ ಏನೆಲ್ಲ ಸೇವೆಗಳು ಸೇರಿವೆ ಎಂದು ವಿವರಗಳಿರುತ್ತವೆ:

ನಿಮ್ಮ ಕ್ರೆಡಿಟ್ ಕಾರ್ಡಿನಲ್ಲಿ ಹಣ ಪಾವತಿ ಮಾಡಿದರೆ ನಿಮ್ಮ ಇ ಮೈಲ್ ಗೆ ಎರಡು ಬಾರಿ ಮೈಲ್ ಕಲಿಸಿ ಖಚಿತಪಡಿಸುತ್ತಾರೆ

ನಿಮ್ಮ ಬಿಲ್ ಮತ್ತು ನಿಮ್ಮ ಡೋಮೈನ್ ನಾಮಕರಣ ಖಚಿತ ಪಡಿಸಲು ಮೈಲ್ ಕಳಿಸುತ್ತಾರೆ: ಅದಕ್ಕೆ ಕ್ಲಿಕ್ ಮಾಡಿ ಒಪ್ಪಿಗೆ ಕೊಡಿ.

 


ಮೇಲಿನ ಇ ಮೈಲ್ ನಲ್ಲಿ “ಲಾಗಿನ್” ಕ್ಲಿಕ್ ಮಾಡಿ. ಅಲ್ಲಿಂದ ನಿಮ್ಮ ವೆಬ್ ಸೈಟ್ ಅನಾವರಣ ಸುಲಭಸಾಧ್ಯ.

ನಿಮ್ಮ ಖಾತೆಯ ಪುಟದಲ್ಲಿ ಕೆಲಕಂಡ ಆಯ್ಕೆಗಳಿರುತ್ತವೆ;

ನೀವು softaculous  ಕ್ಲಿಕ್ ಮಾಡಿ: ಒಂದೊಂದೇ ಮೆಟ್ಟಿಲುಗಳನ್ನು ಆಯ್ದುಕೊಳ್ಳುತ್ತಾ ಸಾಗಿ.

ಆಗ ಸ್ವಯಂಚಾಲಿತವಾಗಿ ವೆಬ್ ಸೈಟ್ ಅನಾವರಣಗೊಂಡು ಅದು ಮುಗಿದ ಮೇಲೊಂದು ಇ ಮೈಲ್ ಬರುತ್ತದೆ ಹೀಗೆ:

ಇಲ್ಲಿಗೆ ನೀವೊಂದು ಹೊಸ ವೆಬ್ ತಾಣದ ಒಡೆಯರಾದಿರಿ..

ಇದೀಗ ನೀವು ಹೊಸ ವರ್ಡ್-ಪ್ರೆಸ್ಸ್ ಸೈಟ್ ಸ್ಥಾಪಿಸುವುದು ಹೇಗೆ ಎಂದು ಕಲಿತಿರಿ..

‍ಲೇಖಕರು admin

May 7, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: