ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಹೊಸ ಕವಿತೆ-ನೆರೆಮನೆಯವನ ದುಃಖ

ಸವಿತಾ ನಾಗಭೂಷಣ

—–

ಯುಕ್ರೇನವೇ? ಫೆಲಸ್ತಿನವೇ?
ಯುದ್ಧವೇ? ಸಂಘರ್ಷವೇ?
ಇಲ್ಲ ಗೊತ್ತಿಲ್ಲ!
ಜಗತ್ತಿನ ಸಂಪರ್ಕ ಕಡಿದು
ವರುಷಗಳಾದವು ಗೊತ್ತಿಲ್ಲ!

ಇದ್ದನೊಬ್ಬ ಮಗ
ಎಲ್ಲಿರುವನೋ ಹೇಗಿರುವನೋ
ಇರುವನೋ…? ಇಲ್ಲವೋ…?
ಬರೀ ದುಃಖ ದುಃಖ

ರಾಜನಿಗೆ ನೂರ ಐವತ್ತು ಕೋಟಿ
ಮಕ್ಕಳು….
ಒಬ್ಬಿಬ್ಬ ಹತನಾದರೆ ಗತನಾದರೆ
ತಡೆದುಕೊಳ್ಳಬಲ್ಲ, ಉಳಿದುಕೊಳ್ಳಬಲ್ಲ

ನಾನೊಬ್ಬ ಸಾಮಾನ್ಯ ಪ್ರಜೆ
ಒಬ್ಬನೇ ಮಗ ಎಲ್ಲಿರುವನೋ
ಹೇಗಿರುವನೋ, ಇರುವನೋ?
ದುಃಖ ದುಃಖ

‍ಲೇಖಕರು avadhi

5 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading