ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಹೊಸ ಕವಿತೆ – ಮುದ್ದತ್ತಿನ ಮಿತಿ ಹೆಚ್ಚಿಸಿ ಬಿಡು…

ಸರೋಜಿನಿ ಪಡಸಲಗಿ

ಓ ನಿಲ್ಲು ನಿಲ್ಲು ಉಸಿರೆಳೆದುಕೋ
ಇಲ್ಲವೇ ಮತ್ತೆ ಬೇರಾವ ಕೆಲಸ
ಎಡೆಬಿಡದೆ ಓಡುತ ಓಡಿಸುವುದ
ಬಿಟ್ಟು ಮತ್ತೆನು ಎತ್ತ ಅಂತ ಗೊತ್ತಿಲ್ವೆ

ಕೊಂಚವಾದರೂ ಸಂಕೋಚ ಹಿಂಜರಿಕೆ
ಭಿಡೆ ಮುರವತ್ತುಗಳ ಬೇಡಿ ಇಲ್ಲವೇ
ಧುತ್ತಂತ ಮುಂದೆ ಬಂದು ಸಿಕ್ಕಿದ್ದನ್ನು ತಂದು
ಸುರಿದು ಬಿಡ್ತಿಯಲ್ಲ ಆ ಎತ್ತರಕ್ಕೆ

ನೀ ಇದಿರಿಗೆ ಬಂದು ನಿಂತಾಗಲೊಮ್ಮೆ
ನನ್ನೆದೆ ತಾಳತಪ್ಪಿ ಬಣ್ಣಗೆಡ್ತದೆ ದಿಕ್ಕು ತಪ್ಪಿ
ಏನುಂಟು ನಿನ್ನ ಮಡಿಲಲಿ ಕಲ್ಲು ಮುಳ್ಳೋ
ಅಚ್ಚ ಕೆಂಬಣ್ಣದ ಗುಲಾಬಿಯೋ ತಿಳಿಯದೆ

ಮೆಚ್ಚಿದೆ ನಿನ್ನ ನಿಯತ್ತು ಅಚ್ಚುಕಟ್ಟು ಓರಣ
ಆದರುಂಟು ನನಗೂ ಆ ನಿಯತ್ತಿನ ಬಂಧ
ನನ್ನದೇ ಆದ ಅಳವಿನೊಳಗೆ ಅರಿವಿನೊಂದಿಗೆ
ನನಗಿದೆ ನಿನಗಿಲ್ಲದ ಹಿಂದುಮುಂದುಗಳ ಹಂಗು

ನಡುನಡುವೆ ಕಾಡುವ ನೆನಪು ಕನಸುಗಳು
ಕೊಡು ಕೊಂಚ ಸ್ವಾತಂತ್ರ್ಯ ಮುಳುಗದೇನೂ
ಚಣ ಮೈಮರೆತರೆ ಬೆಂಬತ್ತಿ ನಿನ್ನ ಏದುಸಿರು
ಆದರೇನು ಅದೆಂದೂ ತುಂಬಲಾರದ ಅಂತರ

ಬಿಡು ಮುಳುಗಿಸ ಬೇಡೆನ್ನ ಭೂಲತಾಪಿಲಿ
ನನಗೂ ಒತ್ತಡ ತಲೆ ಭಾರ ತಲೆ ಬಿಸಿ
ಅಡರ ಬೇಡ ಬಿಡದೆ ಮಾಡು ಒಂದುಪಕಾರ
ನಿನ್ನ ಮುದ್ದತ್ತಿನ ಮಿತಿ ಹೆಚ್ಚಿಸಿ ಬಿಡು ಸಾಕು

‍ಲೇಖಕರು Admin

30 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading