ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಾದಿ ಮೇಲೆ ಶೋಕಗಾನ..

shashikanth yadahalliಶಶಿಕಾಂತ ಯಡಹಳ್ಳಿ 

ಗುಂಡಿಗೆ ಗುಂಡು
ರಕ್ತಕೆ ರಕ್ತ
ಮನುಕುಲ ಚರಿತ್ರೆ
ರಕ್ತಸಿಕ್ತ…

ಬರೀ ಸೇಡಿಗೆ ಸೇಡು
ಕೊಲ್ಲಲು ಸಕಾರಣ ಬೇಕಿಲ್ಲ..
cost-of-warಯುದ್ದವೆಂಬುದು ಸುಡುಗಾಡು
ಕದನಕೆ ದ್ವೇಷವೇ ಸಾಕಲ್ಲ…

ಗಡಿಗಳ ಆಚೆ ಈಚೆ
ರಣಹದ್ದುಗಳ ಹಾರಾಟ..
ಸಮರವೆಂಬುದೇನಲ್ಲ
ಸಾವಿಗಾಗಿ ಕಾದಾಟ…

ಆಳುವವರಿಗದು
ಯುದ್ದೋನ್ಮಾದ ಭಾವ..
ಯೋಧರ ಮನೆಯಲಿ
ಮಿಡಿಯುತಿವೆ ಜೀವ…

ಮಿತ್ರರೋ ಶತ್ರುವೋ
ಎಲ್ಲರದೊಂದೆ ಪ್ರಾಣ
ಸೋಲೋ ಗೆಲುವೊ
ಸಮಾದಿ ಮೇಲೆ ಶೋಕಗಾನ…

ಅವರೂ ಕೊಂದರು
ಇವರೂ ಕೊಂದರು
ಕೊಂದವರೆಲ್ಲಾ ಕೊಂದಿದ್ದು
ಬೇರೇನಲ್ಲಾ ಮಾನವೀಯತೆ…

‍ಲೇಖಕರು Admin

30 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading