ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕವಿತೆ- ಎದೆಯೊಳಗೆ ಹಣತೆ ಹಚ್ಚಿಟ್ಟ ಗುರುವೆ…

ಸದಾಶಿವ್ ಸೊರಟೂರು

ಎದೆಯೊಳಗೆ ಹಣತೆ ಹಚ್ಚಿಟ್ಟ ಗುರುವೆ
ನನ್ನೊಳಗೆ ಏನಿಂತು ಬೆಳಕೊ
ಅಕ್ಷರದ ಮುಗಿಲೆ ಅನುದಿನದ ಮಳೆಯೇ
ಒಳಗೊಳಗೆ ಏನಿಂತು ಕಡಲೊ

ತಾಯಿಯ ಮಮತೆ ತಂದೆಯ ಘನತೆ
ಎಲ್ಲವೂ ನಿನ್ನಲ್ಲೆ ಪ್ರಭುವೇ
ಇರುಳಲ್ಲಿ ಸೂರ್ಯ ಹಗಲಲ್ಲೂ ಚಂದ್ರ
ಎಂದಿಗೂ ಕೈಬಿಡದ ಬೆಳಕೇ

ಉಳಿ ಹಿಡಿದ ಕೈ ಕಣ್ಣಿಗೆ ಕಲ್ಲು ಚೂರು
ಕಡೆದದ್ದು ಚೆಂದ ಮೂರ್ತಿ
ಪದಕ್ಕೆ ಪದ ತೊಡಿಸಿ ಎದೆಗೆ ಸಿಹಿ ಉಣಿಸಿ
ಕಲಿಸಿದ್ದು ಸ್ವಚ್ಛ ಪ್ರೀತಿ

ಕಿತ್ತದ್ದು ತುಂಡು ಬಿದಿರು ನುಡಿದದ್ದು ಕೊಳಲು
ಉಸಿರೆಲ್ಲವೂ ಈಗ ಹಾಡೇ
ಆತ್ಮಕೆ ಜ್ಞಾನ ತಣಿಸಿ ಜೀವಕೆ ಕರುಣೆ ಕಲಿಸಿ
ಪ್ರೇಮಕ್ಕೂ ಮಿಗಿಲು ಇದೆಯೇ?

ಉಳಿದುವೆ ಹಾಳೆ ಎಷ್ಟೊಂದು ನಾಳೆ
ಕರುಣಿಸು ಶಾಯಿಯ ಕಡಲೇ
ಪ್ರೀತಿಯನು ಬರೆಸು ಎದೆ ಮೇಲೆ ಹೀಗೆ
ಎಲ್ಲುಂಟು ಸಾಟಿ ಗುರುವೆ ನಿನಗೆ..

‍ಲೇಖಕರು Admin

5 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading